RCB: ಕೆಎಲ್ ರಾಹುಲ್, ರಿಷಬ್ ಪಂತ್ ಆರ್‌ಸಿಬಿಗೆ ಬರೋದು ಫಿಕ್ಸ್!
ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಮೆಗಾ ಹರಾಜಿಗೆ ಇನ್ನು ಮೂರು ದಿನ ಮಾತ್ರ ಬಾಕಿ ಇದೆ. ನವೆಂಬರ್ 24, 25ರಂದು ಜೆಡ್ಡಾದಲ್ಲಿ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಎಲ್ಲಾ 10 ಫ್ರಾಂಚೈಸಿಗಳು ಬಲಿಷ್ಠ ತಂಡವನ್ನು ಕಟ್ಟಲು ತಮ್ಮದೇ ಲೆಕ್ಕಾಚಾರ ಹಾಕಿಕೊಂಡಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಮೂವರು ಆಟಗಾರರನ್ನು ಉಳಿಸಿಕೊಂಡಿದ್ದು ಉಳಿದ ಆಟಗಾರರನ್ನು ಬಿಡುಗಡೆ ಮಾಡಿದ್ದು ಬಲಿಷ್ಠ ತಂಡ ಕಟ್ಟಲು ಸಿದ್ಧತೆ ಮಾಡಿಕೊಂಡಿದೆ.
ವಿರಾಟ್ ಕೊಹ್ಲಿ, ರಜತ್ ಪಟಿದಾರ್ ಮತ್ತು ಯಶ್ ದಯಾಳ್ ಮಾತ್ರ ಆರ್ ಸಿಬಿ ತಂಡದಲ್ಲಿದ್ದಾರೆ. ಫಾಫ್ ಡುಪ್ಲೆಸಿಸ್ ಅವರನ್ನೇ ಬಿಡುಗಡೆ ಮಾಡಿದ ಬಳಿಕ ತಂಡದ ನಾಯಕ ಯಾರು ಎನ್ನುವ ಪ್ರಶ್ನೆ ಎದುರಾಗಿದೆ. ವಿರಾಟ್ ಕೊಹ್ಲಿ ತಂಡದ ನಾಯಕತ್ವ ವಹಿಸಿಕೊಳ್ಳಬಹುದು ಎನ್ನುವ ವರದಿಗಳಿತ್ತಾದರೂ ಮೋ ಬೊಬಾಟ್ ಅದನ್ನು ತಳ್ಳಿಹಾಕಿದ್ದಾರೆ.

ಐಪಿಎಲ್ ಮೆಗಾ ಹರಾಜಿನಲ್ಲಿ ಆರ್ ಸಿಬಿ ನಾಯಕನ ಹುಡುಕಾಟ ನಡೆಸುವುದು ಖಚಿತವಾಗಿದೆ. ರಿಷಬ್ ಪಂತ್ ಮತ್ತು ಕೆಎಲ್ ರಾಹುಲ್ ಮೆಗಾ ಹರಾಜಿನಲ್ಲಿದ್ದು ನಾಯಕನ ಸ್ಥಾನಕ್ಕೆ ಸೂಕ್ತವಾಗಿದ್ದಾರೆ. ಆರ್ ಸಿಬಿ ವಿಕೆಟ್ ಕೀಪರ್ ಬ್ಯಾಟರ್ ಮತ್ತು ನಾಯಕನಾಗಲು ಇಬ್ಬರು ಸೂಕ್ತವಾಗಿದ್ದಾರೆ. ಇಬ್ಬರನ್ನು ಖರೀದಿಸಲು ಕೂಡ ಆರ್ ಸಿಬಿಗೆ ಅವಕಾಶವಿದೆ.
ಗಮನ ಸೆಳೆದ ಆರ್ ಸಿಬಿ ಟ್ವೀಟ್
ನವೆಂಬರ್ 22ರಿಂದ ಪರ್ತ್‌ನಲ್ಲಿ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಮೊದಲ ಟೆಸ್ಟ್ ಆರಂಭವಾಗಲಿದೆ. ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಸೆಣೆಸಲು ಭಾರತ ಸಜ್ಜಾಗಿದೆ. ಬಾರ್ಡರ್ ಗವಾಸ್ಕರ್ ಟ್ರೋಫಿ ಮೊದಲ ಪಂದ್ಯದ ಬಗ್ಗೆ ಆರ್ ಸಿಬಿ ಟ್ವೀಟ್‌ನಲ್ಲಿ ವಿರಾಟ್ ಕೊಹ್ಲಿ ಜೊತೆ ರಿಷಬ್ ಪಂತ್ ಮತ್ತು ಕೆಎಲ್ ರಾಹುಲ್ ಇರುವ ಪೋಟೋವನ್ನು ಹಂಚಿಕೊಂಡಿದೆ.
The war trumpet blares in the Optus Stadium as the iconic clash between 🇮🇳 and 🇦🇺 kicks off! 🔥
— Royal Challengers Bengaluru (@RCBTweets) November 21, 2024
Weekend plans are sorted! Sit back and get ready to witness some high-octane Test cricket! 🙌#PlayBold #AUSvIND #BGT2025 pic.twitter.com/InxnMBNTdX
ಈ ಪೋಸ್ಟ್ ನೋಡಿದ ಅಭಿಮಾನಿಗಳು ಬಗೆ ಬಗೆಯ ಕಾಮೆಂಟ್ ಮಾಡಿದ್ದಾರೆ. ಇಬ್ಬರನ್ನೂ ಖರೀದಿಸಲು ಆರ್ ಸಿಬಿ ಪ್ಲಾನ್ ಮಾಡಿಕೊಂಡಿದ್ದು ಅದಕ್ಕೆ ಕೊಹ್ಲಿ ಇವರಿಬ್ಬರ ಫೋಟೊ ಪೋಸ್ಟ್ ಮಾಡಿದೆ ಎಂದು ಅಂದಾಜಿಸಿದ್ದಾರೆ.
ಆರ್ ಸಿಬಿ ಬಳಿ 83 ಕೋಟಿ ರೂಪಾಯಿ ಪರ್ಸ್ ಹೊಂದಿದ್ದು ಇವರಿಬ್ಬರನ್ನು ಖರೀದಿ ಮಾಡಲು ಕನಿಷ್ಠ 35 ಕೋಟಿ ರೂಪಾಯಿ ಬೇಕಾಗುತ್ತದೆ ಎನ್ನುವ ಅಂದಾಜಿದೆ. ರಿಷಬ್ ಪಂತ್ ದಾಖಲೆಯ ಮೊತ್ತಕ್ಕೆ ಮಾರಾಟವಾಗಬಹುದು ಎಂದು ಕೂಡ ಹೇಳಲಾಗಿದೆ. 25 ಕೋಟಿ ರೂಪಾಯಿಗಿಂತ ಹೆಚ್ಚಿನ ಮೊತ್ತಕ್ಕೆ ಮಾರಾಟವಾಗಬಹುದು ಎಂದು ಹಲವರು ಭವಿಷ್ಯ ನುಡಿದಿದ್ದು, ಇನ್ನೂ ಕೆಲವರು ಪಂತ್ ಪಂಜಾಬ್ ಕಿಂಗ್ಸ್ ತಂಡಕ್ಕೆ ಹೋಗುತ್ತಾರೆ ಎಂದು ಕೂಡ ಹೇಳಿದ್ದಾರೆ.
ಬೆಂಗಳೂರಿನ ಮೂಲದ ಆಟಗಾರ ಕೆಎಲ್ ರಾಹುಲ್‌ರನ್ನು ತಂಡಕ್ಕೆ ವಾಪಸ್ ಕರೆತರುವಂತೆ ಅಭಿಮಾನಿಗಳು ಒತ್ತಾಯಿಸಿದ್ದಾರೆ. ನಾಯಕತ್ವ ಮತ್ತು ವಿಕೆಟ್ ಕೀಪರ್ ಸ್ಥಾನಕ್ಕೆ ಅವರು ಸೂಕ್ತವಾಗಿ ಹೊಂದುತ್ತಾರೆ ಎನ್ನುವುದು ಅಭಿಮಾನಿಗಳ ಲೆಕ್ಕಾಚಾರವಾಗಿದೆ.












Click it and Unblock the Notifications