KL Rahul: 'ಕನ್ನಡ್ ಅಲ್ಲ ಕನ್ನಡ' ; ಹಿಂದಿ ಹುಡುಗನಿಗೆ ಕೆಎಲ್ ರಾಹುಲ್ ಕನ್ನಡದ ಪಾಠ
ಕ್ರಿಕೆಟಿಗ ಕೆಎಲ್ ರಾಹುಲ್ ತಮ್ಮ ಕನ್ನಡ ಪ್ರೇಮವನ್ನು ತೋರಿಸುವ ಮೂಲಕ ಸುದ್ದಿಯಾಗಿದ್ದಾರೆ. ಗಾಯದ ಕಾರಣ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮೂರು ಪಂದ್ಯಗಳನ್ನು ಕಳೆದುಕೊಂಡಿರುವ ಅವರು, ಐಪಿಎಲ್ ಪ್ರೋಮೊ ಶೂಟ್‌ನಲ್ಲಿ ಭಾಗವಹಿಸಿದ್ದು ಈ ಸಂದರ್ಭದಲ್ಲಿ ಡೈಲಾಗ್ ಹೇಳಿಕೊಡಲು ಬಂದ ಹುಡುಗನಿಗೆ ಕನ್ನಡದ ಪಾಠ ಮಾಡಿದ್ದಾರೆ.
ಸ್ಟಾರ್ ಸ್ಪೋರ್ಟ್‌ಗಾಗಿ ಐಪಿಎಲ್ ಪ್ರೋಮೊ ಶೂಟ್ ಮಾಡುವ ಸಂದರ್ಭದಲ್ಲಿ ಅವರು ಕನ್ನಡದ ಬಗ್ಗೆ ಮಾತನಾಡಿದ್ದಾರೆ. ವಿಡಿಯೋದಲ್ಲಿ ಹುಡುಗನೊಬ್ಬ ಡೈಲಾಗ್ ಹಾಳೆಯನ್ನು ಕೆಎಲ್ ರಾಹುಲ್‌ಗೆ ಕೊಡುತ್ತಾರೆ. ಅದನ್ನು ನೋಡಿದ ಕೆಎಲ್ ರಾಹುಲ್ ಇಷ್ಟೊಂದು ಡೈಲಾಗ್‌ಗಳನ್ನು ಹೇಗೆ ನೆನಪಿಟ್ಟುಕೊಳ್ಳಲಿ ಎಂದು ಕೇಳುತ್ತಾರೆ.

ಉರು ಹೊಡೆಯಲು ಬಂದಿದ್ದರೆ ಇನ್ನೂ ಹೆಚ್ಚಾಗಿ ಓದಿರುತ್ತಿದ್ದೆ, ಮ್ಯಾಚ್ ಡೇ ಪ್ರೋಮೋ ಇಂಗ್ಲಿಷ್, ಮ್ಯಾಚ್ ಡೇ ಪ್ರೋಮೋ ಹಿಂದಿ, ಮ್ಯಾಚ್ ಡೇ ಪ್ರೋಮೋ ಕನ್ನಡ ಎನ್ನುವಾಗ ಡೈಲಾಗ್ ಶೀಟ್ ಕೊಟ್ಟ ಹುಡುಗ, ಕನ್ನಡ್ ಎನ್ನುತ್ತಾನೆ. ಅದು ಕನ್ನಡ್ ಅಲ್ಲ ಕನ್ನಡ ನಿಮಗೆ ಎಷ್ಟು ಬಾರಿ ಹೇಳಬೇಕು ಎಂದು ರೇಗುತ್ತಾರೆ. ಕನ್ನಡ್ ಅಲ್ಲ ಕನ್ನಡ ಹೇಳು ಎಂದು ಆ ಹುಡುಗನ ಬಳಿ ಹೇಳಿಸುತ್ತಾರೆ.
ವಿಡಿಯೋ ವ್ಯಾಪಕ ವೈರಲ್
ಇನ್ನು ಕೆಎಲ್ ರಾಹುಲ್ ಅವರ ಈ ವಿಡಿಯೋ ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ. ಇರೋ ಒಂದು ಹೃದಯಾನ ಎಷ್ಟು ಸಾರಿ ಗೆಲ್ತೀಯ ಗುರು ಎಂದು ಕನ್ನಡಿಗರು ರಾಹುಲ್‌ರನ್ನು ಹೊಗಳಿದ್ದಾರೆ. ಇನ್ನೂ ಕೆಲವರು ಈ ವಿಡಿಯೋ ನೋಡಿದ ಬಳಿಕ ಕೆಎಲ್ ರಾಹುಲ್ ಅವರ ಮೇಲಿನ ಅಭಿಮಾನ ಮತ್ತಷ್ಟು ಹೆಚ್ಚಾಯಿತು ಎಂದಿದ್ದಾರೆ.
ಅದು Kannad ಅಲ್ಲ Kannada 🔥 ಬೆಂಕಿ ಗುರು ನೀನು @klrahul
— ಕಿರಿಕ್ಗೆ ಕಾರ್ತಿಕ್ l KIRIKge K@rTH!K 🟨🟥 (@VKkarthik169) February 23, 2024
That's #Kannada not Kannad.#Kannada#KLRahul pic.twitter.com/vE5NKjTti9
ಗಾಯದಿಂದ ಚೇತರಿಸಿಕೊಳ್ಳುತ್ತಿರವ ಕೆಎಲ್
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯದಲ್ಲಿ ಆಡಿದ್ದ ಕೆಎಲ್ ರಾಹುಲ್, ಬಳಿಕ ಗಾಯದ ಕಾರಣದಿಂದ ಉಳಿದ ಮೂರು ಟೆಸ್ಟ್‌ಗಳಿಂದ ಹೊರಗುಳಿದಿದ್ದಾರೆ. ಮಾರ್ಚ್ 5ರಿಂದ ಧರ್ಮಶಾಲಾದಲ್ಲಿ ಆರಂಭವಾಗಲಿರುವ ಸರಣಿಯ ಕೊನೆಯ ಪಂದ್ಯದಲ್ಲಿ ಅವರು ಮತ್ತೆ ತಂಡಕ್ಕೆ ಮರಳುವ ಸಾಧ್ಯತೆ ಇದೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಬಳಿಕ ಮಾರ್ಚ್ 22ರಿಂದ ಐಪಿಎಲ್ ಪಂದ್ಯಾವಳಿ ಆರಂಭವಾಗಲಿದೆ. ಟೆಸ್ಟ್ ಸರಣಿಯನ್ನು ತಪ್ಪಿಸಿಕೊಂಡರು, ಐಪಿಎಲ್ ವೇಳೆಗೆ ಕೆಎಲ್ ರಾಹುಲ್ ಫಿಟ್ ಆಗಲಿದ್ದು, ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.












Click it and Unblock the Notifications