Nagesh Trophy: ಆಂಧ್ರ ಪ್ರದೇಶ ಸೋಲಿಸಿ ನಾಗೇಶ್ ಟ್ರೋಫಿ ಗೆದ್ದ ಕರ್ನಾಟಕ
ನಾಗ್ಪುರದಲ್ಲಿ 2023-24 ನೇ ಸಾಲಿನ ಪುರುಷರ ರಾಷ್ಟ್ರೀಯ ಅಂಧರ ಟಿ20 ಕ್ರಿಕೆಟ್ ಪಂದ್ಯಾವಳಿಯ ಫೈನಲ್‌ನಲ್ಲಿ ಆಂಧ್ರ ಪ್ರದೇಶವನ್ನು 9 ವಿಕೆಟ್‌ಗಳಿಂದ ಸೋಲಿಸಿದ ಕರ್ನಾಟಕ ಇಂಡಸ್‌ಇಂಡ್ ಬ್ಯಾಂಕ್ ನಾಗೇಶ್ ಟ್ರೋಫಿಯನ್ನು ಎತ್ತಿ ಹಿಡಿದಿದೆ. 20 ವರ್ಷಗಳ ನಂತರ ರಾಜ್ಯಕ್ಕೆ ರಾಷ್ಟ್ರಮಟ್ಟದಲ್ಲಿ ಈ ಗೆಲುವು ಸಿಕ್ಕಿದೆ.
ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಂಧ್ರಪ್ರದೇಶ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 237 ರನ್‌ಗಳನ್ನು ಕಲೆಹಾಕಿತು. ಅಮೋಘ ಬ್ಯಾಟಿಂಗ್ ಪ್ರದಶಶ್ಲಾಘನೀಯ ಪ್ರದರ್ಶನವನ್ನು ಪ್ರದರ್ಶಿಸಿತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಕರ್ನಾಟಕ ಇನ್ನೂ ಮೂರು ಎಸೆತ ಬಾಕಿ ಇರುವಂತೆಯೇ 1 ವಿಕೆಟ್ ಕಳೆದುಕೊಂಡು 241 ರನ್ ಗಳಿಸುವ ಮೂಲಕ 9 ವಿಕೆಟ್‌ಗಳ ಗೆಲುವು ಸಾಧಿಸಿದತು.

16ನೇ ಓವರ್‌ನಲ್ಲಿ ಆಂಧ್ರಪ್ರದೇಶ ತಂಡ 185 ರನ್ ಕಲೆಹಾಕಿತು. 17ನೇ ಓವರ್‌ನಲ್ಲಿ 200 ರನ್‌ಗಳ ಗಡಿಯನ್ನು ದಾಟಿತು ಮತ್ತು ನಾಗೇಶ್ ಟ್ರೋಫಿ ಫೈನಲ್‌ನಲ್ಲಿ ನಿಗದಿತ 20 ಓವರ್‌ಗಳಲ್ಲಿ 237 ರನ್ ಕಲೆಹಾಕಿತು. ನಾಯಕ ಟಿ.ದುರ್ಗಾರಾವ್ 72 ಎಸೆತಗಳಲ್ಲಿ 128 ರನ್ ಸಿಡಿಸಿದ್ದರು.
ಕರ್ನಾಟಕ ಆರಂಭದಲ್ಲೇ ಮೊದಲ ವಿಕೆಟ್ ಕಳೆದುಕೊಂಡು ಆರಂಭಿಕ ಹಿನ್ನಡೆ ಎದುರಿಸಿತು. ಗುಡದಪ್ಪ ನಿವೃತ್ತರಾಗುವ ಮೊದಲು ಸುನಿಲ್ ರಮೇಶ್ ಮತ್ತು ಗುಡದಪ್ಪ ಅದ್ಭುತ 186 ರನ್ ಜೊತೆಯಾಟವನ್ನು ನಡೆಸಿದರು. ಸುನಿಲ್ ರಮೇಶ್ ಅವರ ಸ್ಫೋಟಕ ಇನ್ನಿಂಗ್ಸ್ 67 ಎಸೆತಗಳಲ್ಲಿ 149 ರನ್ ಗಳಿಸಿ ಕರ್ನಾಟಕವನ್ನು ಗೆಲುವಿನತ್ತ ಮುನ್ನಡೆಸಿತು ಮತ್ತು ಪಂದ್ಯದ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.
ರಾಜ್ಯಕ್ಕೆ ಅಮೋಘ ಗೆಲುವು
71 ದಿನಗಳ ಪಂದ್ಯಾವಳಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನಗಳನ್ನು ನೀಡಿದ ಕರ್ನಾಟಕವು ನಾಗೇಶ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಸುನಿಲ್ ರಮೇಶ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಗಮನಾರ್ಹ ಅವಧಿಯವರೆಗೆ ಪಂದ್ಯಾವಳಿಯಲ್ಲಿ ಪ್ರಾಬಲ್ಯ ಸಾಧಿಸಿದ ಅಸಾಧಾರಣ ತಂಡವಾದ ಆಂಧ್ರಪ್ರದೇಶವು ಎರಡನೇ ಅತ್ಯುತ್ತಮ ತಂಡವಾಗಿ ಹೊರಹೊಮ್ಮಿತು.
ಬಿ3ಯಲ್ಲಿ ಕರ್ನಾಟಕದ ಸುನೀಲ್ ರಮೇಶ್ ಸರಣಿಶ್ರೇಷ್ಠ ಪ್ರಶಸ್ತಿ ಪಡೆದರು. ವಿಜೇತ ತಂಡವು ₹1,04,000 ನಗದು ಬಹುಮಾನವನ್ನು ಪಡೆದರೆ, ರನ್ನರ್ಸ್ ಅಪ್ ₹80,000 ಪಡೆದರು. ಸರಣಿಯ ಆಟಗಾರನಿಗೆ ತಲಾ ₹10,000 ಪಂದ್ಯದ ಆಟಗಾರ ₹3000 ಬಹುಮಾನ ಪಡೆದರು.
ಕ್ರಿಕೆಟ್ ಅಸೋಸಿಯೇಷನ್ ಫಾರ್ ದಿ ಬ್ಲೈಂಡ್ ಇನ್ ಇಂಡಿಯಾ (CABI), ಕ್ರಿಕೆಟ್ ಅಸೋಸಿಯೇಷನ್ ಫಾರ್ ದಿ ಬ್ಲೈಂಡ್ ಇನ್ ವಿದರ್ಭ ಮತ್ತು ಸಮರ್ಥನಂ ಟ್ರಸ್ಟ್ ಫಾರ್ ದಿ ಡಿಸೇಬಲ್ಡ್ ನಾಕೌಟ್ ಪಂದ್ಯಗಳನ್ನು ನಾಗ್ಪುರದಲ್ಲಿ ಆಯೋಜಿಸಿದ್ದವು.
ನಾಗೇಶ್ ಟ್ರೋಫಿಯನ್ನು ದಿವಂಗತ ಎಸ್.ಪಿ.ನಾಗೇಶ್ ಸ್ಮರಣಾರ್ಥವಾಗಿ ಪ್ರಾರಂಭಿಸಲಾಯಿತು, ಕ್ರಿಕೆಟ್ ಅಸೋಸಿಯೇಷನ್ ಫಾರ್ ದಿ ಬ್ಲೈಂಡ್ ಇನ್ ಇಂಡಿಯಾ ಮತ್ತು ಸ್ಥಾಪಕ ಟ್ರಸ್ಟಿ, ಸಮರ್ಥನಂ ಟ್ರಸ್ಟ್ ಫಾರ್ ದಿ ಡಿಸೇಬಲ್ ಇದನ್ನು ಆಯೋಜಿಸುತ್ತವೆ.












Click it and Unblock the Notifications