Vijay Hazare Trophy: ಮಯಾಂಕ್ ಅಗರ್ವಾಲ್ ಶತಕ ವ್ಯರ್ಥ; ರಾಜ್ಯಕ್ಕೆ ಮೊದಲ ಸೋಲು
ವಿಜಯ್ ಹಜಾರೆ ಟ್ರೋಫಿ 2024-25ರ ಆವೃತ್ತಿಯಲ್ಲಿ ಕರ್ನಾಟಕ ಮೊದಲ ಸೋಲು ಅನುಭವಿಸಿದೆ. ಮಂಗಳವಾರ ನಡೆದ ಪಂದ್ಯದಲ್ಲಿ ಹೈದರಾಬಾದ್ ಕರ್ನಾಟಕದ ವಿರುದ್ಧ 3 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿದೆ. ಹೈದರಾಬಾದ್ ಪರ ಅಜೇಯ ಶತಕ ಸಿಡಿಸಿದ ವರುಣ್ ತಂಡಕ್ಕೆ ಗೆಲುವು ತಂದುಕೊಟ್ಟರು.
ಅಹಮದಾಬಾದ್‌ನ ಅಡ್ಸಾ ರೈಲ್ವೆ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ನಾಯಕ ಮಯಾಂಕ್ ಅಗರ್ವಾಲ್ ತಮ್ಮ ಅದ್ಭುತ ಫಾರ್ಮ್ ಅನ್ನು ಮುಂದುವರೆಸಿದರು. ಕಳೆದ ಎರಡು ಪಂದ್ಯಗಳಲ್ಲಿ ಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು ಹೈದರಾಬಾದ್ ವಿರುದ್ಧ ಕೂಡ ಅತ್ಯುತ್ತಮ ಬ್ಯಾಟಿಂಗ್ ಮಾಡಿದರು.

112 ಎಸೆತಗಳಲ್ಲಿ 15 ಬೌಂಡರಿ 2 ಸಿಕ್ಸರ್ ನೆರವಿನಿಂದ 124 ರನ್ ಗಳಿಸಿದ ಅವರು ಹ್ಯಾಟ್ರಿಕ್ ಶತಕ ಗಳಿಸಿದ ಸಾಧನೆ ಮಾಡಿದರು. ಇವರ ಜೊತೆ ಸ್ಮರಣ್ ರವಿಚಂದ್ರನ್ 75 ಎಸೆತಗಳಲ್ಲಿ 3 ಬೌಂಡರಿ 5 ಸಿಕ್ಸರ್ ಸಹಿತ 83 ರನ್ ಗಳಿಸಿ ಕರ್ನಾಟಕ 300 ರನ್ ಗಡಿ ದಾಟುವಲ್ಲಿ ಮಹತ್ವದ ಪಾತ್ರ ವಹಿಸಿದರು.
ನಿಕಿನ್ ಜೋಸ್ 37 ರನ್ ಗಳಿಸಿದರೆ, ಪ್ರವೀಣ್ ದುಬೆ 24 ರನ್ ಗಳಿಸಿದರು ಶ್ರೇಯಸ್ ಗೋಪಾಲ್ 9 ಎಸೆತಗಳಲ್ಲಿ ಅಜೇಯ 19 ರನ್ ಗಳಿಸಿದರು. ಕರ್ನಾಟಕ 50 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 320 ರನ್ ಕಲೆ ಹಾಕಿತು.
ತಿಲಕ್ ವರ್ಮಾ, ವರುಣ್ ಹೋರಾಟ
ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಹೈದರಾಬಾದ್ ಆರಂಭದಲ್ಲೇ ಆಘಾತ ಅನುಭವಿಸಿತು. ರೋಹಿತ್ ರಾಯುಡ್ ಮೊದಲ ಎಸೆತದಲ್ಲೇ ಅಭಿಲಾಶ್ ಶೆಟ್ಟಿ ಬೌಲಿಂಗ್‌ನಲ್ಲಿ ಬೌಲ್ಡ್ ಆದರು. ತನ್ಮಯ್ ಅಗರ್ವಾಲ್ 35 ರನ್ ಗಳಿಸಿದರು. ನಾಯಕ ತಿಲಕ್ ವರ್ಮಾ 99 ರನ್ ಗಳಿಸಿ ಔಟಾಗುವ ಮೂಲಕ ಶತಕ ವಂಚಿತರಾದರು. ವರುಣ್ ಅಜೇಯ 109 ರನ್ ಗಳಿಸುವ ಮೂಲಕ ಹೈದರಾಬಾದ್‌ಗೆ ಗೆಲುವು ತಂದುಕೊಟ್ಟರು.












Click it and Unblock the Notifications