Vijay Hazare Trophy: ಕ್ವಾರ್ಟರ್ ಫೈನಲ್‌ನಲ್ಲಿ ಕರ್ನಾಟಕದ ಎದುರಾಳಿ ಯಾರು? ಪಂದ್ಯದ ಮಾಹಿತಿ
ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಕರ್ನಾಟಕ ಕ್ವಾರ್ಟರ್ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ, ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗ ಬಲಿಷ್ಠವಾಗಿದ್ದು ಕ್ವಾರ್ಟರ್ ಫೈನಲ್‌ನಲ್ಲಿ ಗೆಲುವು ಸಾಧಿಸಿ ಸೆಮಿಫೈನಲ್ ತಲುಪುವ ವಿಶ್ವಾಸದಲ್ಲಿದೆ. ನಾಯಕ ಮಯಾಂಕ್ ಅಗರ್ವಾಲ್ ಭರ್ಜರಿ ಫಾರ್ಮ್‌ನಲ್ಲಿದ್ದು ತಂಡವನ್ನು ಚಾಂಪಿಯನ್ ಮಾಡುವ ಉತ್ಸಾಹದಲ್ಲಿದ್ದಾರೆ.
ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ನಾಗಾಲ್ಯಾಂಡ್ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ ಕರ್ನಾಟಕ ಕ್ವಾರ್ಟರ್ ಫೈನಲ್‌ಗೆ ಪ್ರವೇಶ ಪಡೆದುಕೊಂಡಿತು. ನಾಯಕ ಮಯಾಂಕ್ ಅಗರ್ವಾಲ್ ಪಂದ್ಯಾವಳಿಯ ನಾಲ್ಕನೇ ಶತಕ ಸಿಡಿಸುವ ಮೂಲಕ ರಾಜ್ಯಕ್ಕೆ ಸುಲಭ ಗೆಲುವು ತಂದುಕೊಟ್ಟರು. ಸಿ ಗುಂಪಿನಲ್ಲಿ ಕರ್ನಾಟಕ ಮತ್ತು ಪಂಜಾಬ್ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿವೆ.

ರಾಜ್ಯಕ್ಕೆ ಬರೋಡಾ ಎದುರಾಳಿ
ಕ್ವಾರ್ಟರ್ ಫೈನಲ್ ತಲುಪಿರುವ ಕರ್ನಾಟಕ ತಂಡಕ್ಕೆ ಬರೋಡಾ ಸವಾಲಾಕಲು ಸಜ್ಜಾಗಿದೆ. ಜನವರಿ 11 ರಂದು ಶನಿವಾರ ನಡೆಯಲಿರುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ಮತ್ತು ಬರೋಡಾ ಮುಖಾಮುಖಿಯಾಗಲಿವೆ. ಇ ಗುಂಪಿನಲ್ಲಿದ್ದ ಬರೋಡಾ ಆಡಿರುವ 6 ಪಂದ್ಯಗಳಲ್ಲಿ 5ರಲ್ಲಿ ಗೆದ್ದು ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದೆ.
ಕೃನಾಲ್ ಪಾಂಡ್ಯ ಬರೋಡಾ ತಂಡದ ನಾಯಕತ್ವ ವಹಿಸಿಕೊಂಡಿದ್ದು ಹಾರ್ದಿಕ್ ಪಾಂಡ್ಯ ಕೂಡ ಕ್ವಾರ್ಟರ್ ಫೈನಲ್‌ನಲ್ಲಿ ಕಣಕ್ಕಿಳಿಯಲಿದ್ದಾರೆ. ಬರೋಡಾ ಕೂಡ ಬಲಿಷ್ಠವಾಗಿದ್ದು ಕರ್ನಾಟಕ ತಂಡಕ್ಕೆ ಸವಾಲಾಕಾಲು ಸಜ್ಜಾಗಿದೆ.
ಪಂದ್ಯದ ದಿನಾಂಕ, ಸಮಯ, ಸ್ಥಳ
ಶನಿವಾರ ಜನವರಿ 11ರಂದು ಕರ್ನಾಟಕ ಬರೋಡಾ ನಡುವಿನ ಸೆಮಿಫೈನಲ್ ನಡೆಯಲಿದೆ. ಬೆಳಗ್ಗೆ 9 ಗಂಟೆಗೆ ಪಂದ್ಯ ಆರಂಭವಾಗಲಿದೆ. ವಡೋದರದ ಮೋತಿಭಾಗ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ.
ಬಲಷ್ಠವಾಗಿದೆ ಕರ್ನಾಟಕ
7 ಪಂದ್ಯಗಳಲ್ಲಿ ಆರು ಪಂದ್ಯ ಗೆದ್ದಿರುವ ಕರ್ನಾಟಕ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದು, ಉತ್ತಮ ಪ್ರದರ್ಶನವನ್ನೇ ನೀಡುತ್ತಿದೆ. ಮಯಾಂಕ್ ಅಗರ್ವಾಲ್, ಅನೀಶ್ ಕೆವಿ, ಸ್ಮರಣ್ ರವಿಚಂದ್ರನ್, ಅಭಿನವ್ ಮನೋಹರ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಶ್ರೇಯಸ್ ಗೋಪಾಲ್ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಕೂಡ ಉತ್ತಮ ಪ್ರದರ್ಶನ ನೀಡುತ್ತಿದ್ದು, ವೇಗಿಗಳಾದ ವಾಸುಕಿ ಕೌಶಿಕ್, ವಿದ್ಯಾಧರ್ ಪಾಟೀಲ್ ಕೂಡ ಉತ್ತಮ ಫಾರ್ಮ್‌ನಲ್ಲಿದ್ದು ಬರೋಡಾಗೆ ಸವಾಲಾಕಲು ಸಜ್ಜಾಗಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ತಂಡದಲ್ಲಿದ್ದ ದೇವದತ್ ಪಡಿಕ್ಕಲ್ ಮತ್ತು ಪ್ರಸಿದ್ಧ್ ಕೃಷ್ಣ ಕರ್ನಾಟಕ ತಂಡವನ್ನು ಸೇರಿಕೊಂಡಿದ್ದು ತಂಡಕ್ಕೆ ಮತ್ತಷ್ಟು ಬಲ ತಂದಿದ್ದಾರೆ.
ಕರ್ನಾಟಕ ತಂಡ: ನಿಕಿನ್ ಜೋಸ್, ಮಯಾಂಕ್ ಅಗರ್ವಾಲ್ (ನಾಯಕ), ಅನೀಶ್ ಕೆವಿ, ಸ್ಮರಣ್ ರವಿಚಂದ್ರನ್, ಕೆ ಶ್ರೀಜಿತ್, ಅಭಿನವ್ ಮನೋಹರ್, ಹಾರ್ದಿಕ್ ರಾಜ್, ಶ್ರೇಯಸ್ ಗೋಪಾಲ್, ಅಭಿಲಾಶ್ ಶೆಟ್ಟಿ, ವಿದ್ಯಾಧರ್ ಪಾಟೀಲ್, ವಾಸುಕಿ ಕೌಶಿಕ್, ಪ್ರವೀಣ್ ದುಬೆ, ಮನೋಜ್ ಭಾಂಡಗೆ, ಲವ್ನಿತ್ ಸಿಸೋಡಿಯಾ, ಕಿಶನ್ ಬೆದರೆ, ವಿಜಯ್ ಕುಮಾರ್ ವೈಶಾಖ್, ಪ್ರಸಿದ್ಧ್ ಕೃಷ್ಣ, ದೇವದತ್ ಪಡಿಕ್ಕಲ್.
ಬರೋಡಾ ತಂಡ: ಶಾಶ್ವತ್ ರಾವತ್, ನಿನಾದ್ ಅಶ್ವಿನ್‌ಕುಮಾರ್ ರಥ್ವಾ, ಅತಿತ್ ಶೇಠ್, ಕೃನಾಲ್ ಪಾಂಡ್ಯ (ನಾಯಕ), ಹಾರ್ದಿಕ್ ಪಾಂಡ್ಯ, ವಿಷ್ಣು ಸೋಲಂಕಿ (ವಿಕೆಟ್ ಕೀಪರ್), ಶಿವಾಲಿಕ್ ಶರ್ಮಾ, ಮಹೇಶ್ ಪಿಥಿಯಾ, ಭಾರ್ಗವ್ ಭಟ್, ರಾಜ್ ಲಿಂಬಾನಿ, ಲುಕ್ಮಾನ್ ಮೇರಿವಾಲಾ, ಬಾಬಾಶಾಫಿ ಪಠಾಣ್, ಆಕಾಶ್ ಕೋಹ್ಲಿ, ಪಠಾಣ್, ಆಕಾಶ್ ಮಹಾರಾಜ್ ಸಿಂಗ್, ಪಾರ್ಥ್ ಕೊಹ್ಲಿ, ಜ್ಯೋತ್‌ಸ್ನಿಲ್ ಸಿಂಗ್, ಅಮಿತ್ ಪಾಸ್ಸಿ, ಲಕ್ಷಿತ್ ಟೋಕ್ಸಿಯಾ.












Click it and Unblock the Notifications