IND vs ENG Test: 1463 ದಿನದ ಬಳಿಕ ಟೆಸ್ಟ್ ತಂಡಕ್ಕೆ ಆಯ್ಕೆಯಾದ ಸ್ಟಾರ್ ವೇಗಿ
ಭಾರತ ಹಾಗೂ ಇಂಗ್ಲೆಂಡ್ ನಡುವಣ ಆಂಡರ್ಸನ್-ತೆಂಡುಲ್ಕರ್ ಸರಣಿಯ ಎರಡನೇ ಪಂದ್ಯ ಜುಲೈ 2ರಿಂದ ಎಡ್ಜ್‌ಬಸ್ಟನ್‌ನಲ್ಲಿ ನಡೆಯಲಿದೆ. ಈ ಪಂದ್ಯಕ್ಕಾಗಿ ಇಂಗ್ಲೆಂಡ್ ಭರ್ಜರಿ ತಯಾರಿ ನಡೆಸಿದೆ. ಈ ವೇಳೆ ಇಂಗ್ಲೆಂಡ್ ತಂಡಕ್ಕೆ ಸ್ಟಾರ್ ವೇಗದ ಬೌಲರ್ ಎಂಟ್ರಿ ಪಡೆದಿದ್ದು, ತಂಡಕ್ಕೆ ಬೂಸ್ಟ್ ನೀಡಿದೆ. ಸ್ಟಾರ್ ವೇಗದ ಬೌಲರ್ ರಾಷ್ಟ್ರೀಯ ತಂಡದ ಪರ ನಾಲ್ಕು ವರ್ಷಗಳ ಬಳಿಕ ಕಂ ಬ್ಯಾಕ್ ಮಾಡಲು ಸಿದ್ಧರಾಗಿದ್ದಾರೆ.
ಇಂಗ್ಲೆಂಡ್ ತಂಡದ ಸ್ಟಾರ್ ವೇಗದ ಬೌಲರ್ ಜೋಫ್ರಾ ಆರ್ಚರ್ ಟೆಸ್ಟ್ ತಂಡಕ್ಕೆ ಕಂ ಬ್ಯಾಕ್ ಮಾಡಲು ಸಿದ್ಧರಾಗಿದ್ದಾರೆ. ಇವರು ಇತ್ತೀಚಿಗೆ ಕೌಂಟಿ ಕ್ರಿಕೆಟ್ ಆಡಿ ಗಮನ ಸೆಳೆದಿದ್ದರು. ಅಲ್ಲದೆ 1501 ದಿನಗಳ ಬಳಿಕ ಜೋಫ್ರಾ ಆರ್ಚರ್ ಪ್ರಥಮ ದರ್ಜೆ ವಿಕೆಟ್ ಪಡೆದು ಸಂಭ್ರಮಿಸಿದ್ದರು. ಈಗ ಇವರು ಟೀಮ್ ಇಂಡಿಯಾ ಬೌಲರ್‌ಗಳನ್ನು ಕಾಡಲು ಸಿದ್ಧರಾಗಿದ್ದಾರೆ. ಇವರ ಆಗಮನದಿಂದ ಇಂಗ್ಲೆಂಡ್ ತಂಡದ ಬೌಲಿಂಗ್ ಬಲಾಢ್ಯವಾದಂತೆ ಕಾಣುತ್ತಿದೆ.

ಮೊದಲ ಟೆಸ್ಟ್‌ಗೂ ಮುನ್ನ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಟೆಸ್ಟ್‌ಗೆ ತಂಡವನ್ನು ಪ್ರಕಟಿಸಿತ್ತು. ಆದರೆ ಅದು ಕೇವಲ ಒಂದು ಟೆಸ್ಟ್ ಪಂದ್ಯಕ್ಕೆ ಪ್ರಕಟಿಸಲಾಗಿತ್ತು. ಈಗ ಮಂಡಳಿ 2ನೇ ಟೆಸ್ಟ್ ಪಂದ್ಯಕ್ಕೆ ತಂಡವನ್ನು ಪ್ರಕಟಿಸಿದೆ. ಎರಡನೇ ಟೆಸ್ಟ್ ಪಂದ್ಯಕ್ಕೆ ಜೋಫ್ರಾ ಆರ್ಚರ್ ತಂಡಕ್ಕೆ ಮರಳಿದ್ದಾರೆ. ಕೌಂಟಿ ಕ್ರಿಕೆಟ್ ಆಡಿದ ಬಳಿಕ ಇವರು ಟೆಸ್ಟ್‌ಗೆ ಕಂ ಬ್ಯಾಕ್ ಮಾಡುವ ಸೂಚನೆ ನೀಡಲಾಗಿತ್ತು. ಈಗ ಈ ಆಸೆ ಫಲಿಸಿದೆ. ಇವರು ತಂಡಕ್ಕೆ ಬಂದಿದ್ದರಿಂದ ಯಾರನ್ನು ಮಂಡಳಿ ಕೈಬಿಟ್ಟಿಲ್ಲ.
ಜೋಫ್ರಾ ಆರ್ಚರ್ ಅವರ ಆಗಮನದಿಂದ ಇಂಗ್ಲೆಂಡ್ ಬೌಲಿಂಗ್ ಲೈನ್ ಅಪ್ ಮತ್ತಷ್ಟು ಬಲಿಷ್ಠವಾಗಿದೆ. ಇತ್ತೀಚಿಗೆ ಜೋಫ್ರಾ ಆರ್ಚರ್ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಬಿಗುವಿನ ದಾಳಿ ಸಂಘಟಿಸಿದ್ದರು. ಇವರು ರಾಜಸ್ಥಾನ ರಾಯಲ್ಸ್ ವಿರುದ್ಧ ಪಂದ್ಯಗಳನ್ನು ಆಡಿ ಸೈ ಎನಿಸಿಕೊಂಡಿದ್ದರು. ಈಗ ಇವರು ತಂಡಕ್ಕೆ ಕಂ ಬ್ಯಾಕ್ ಮಾಡಿರುವುದು ತಂಡಕ್ಕೆ ಬೂಸ್ಟ್ ನೀಡಿದಂತೆ ಆಗಿದೆ.

ಇಂಗ್ಲೆಂಡ್ ತಂಡ ಈಗಾಗಲೇ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಭಾರತ ಹಾಗೂ ಇಂಗ್ಲೆಂಡ್ ನಡುವಣ ಎರಡನೇ ಟೆಸ್ಟ್ ಪಂದ್ಯ ಜುಲೈ 2 ರಂದು ಎಡ್ಜ್ ಬಸ್ಟನ್‌ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿ ಸರಣಿಯಲ್ಲಿ ಭರ್ಜರಿ ಕಂ ಬ್ಯಾಕ್ ಮಾಡುವ ಯೋಜನೆ ಭಾರತ ತಂಡದ್ದಾಗಿದೆ.
ಜೋಫ್ರಾ ಸಾಧನೆ
30 ವರ್ಷದ ಜೋಫ್ರಾ ಆರ್ಚರ್ ಈಗಾಗಲೇ ಇಂಗ್ಲೆಂಡ್ ಪರ ಟೆಸ್ಟ್ ಕ್ರಿಕೆಟ್ ಆಡಿದ್ದಾರೆ. ಅಲ್ಲದೆ ಇತ್ತೀಚಿಗೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ವಿಕೆಟ್ ಪಡೆದು ಸಂಭ್ರಮಿಸಿದ್ದರು. ಆರ್ಚರ್ ಈಗಾಗಲೇ 13 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 42 ವಿಕೆಟ್ ಪಡೆದು ಬೀಗಿದ್ದಾರೆ. ಇವರು ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಭಾರತದ ವಿರುದ್ಧ ಅಹಮದಾಬಾದ್‌ನಲ್ಲಿ ಫೆಬ್ರವರಿ 25 ರಂದು ಆಡಿದ್ದರು.
ಎರಡನೇ ಟೆಸ್ಟ್‌ಗೆ ಇಂಗ್ಲೆಂಡ್ ತಂಡ: ಬೆನ್ ಸ್ಟೋಕ್ಸ್ (ನಾಯಕ), ಜೋಫ್ರಾ ಆರ್ಚರ್, ಶೋಯೆಬ್ ಬಶೀರ್, ಜಾಕೋಬ್ ಬೆಥೆಲ್, ಹ್ಯಾರಿ ಬ್ರೂಕ್, ಬ್ರೈಡನ್ ಕಾರ್ಸೆ, ಸ್ಯಾಮ್ ಕುಕ್, ಜ್ಯಾಕ್ ಕ್ರಾಲಿ, ಬೆನ್ ಡಕೆಟ್, ಜೇಮೀ ಓವರ್ಟನ್, ಓಲಿ ಪೋಪ್, ಜೋ ರೂಟ್, ಜೇಮೀ ಸ್ಮಿತ್, ಜೋಶ್ ಟಂಗ್, ಕ್ರಿಸ್ ವೋಕ್ಸ್.












Click it and Unblock the Notifications