James Anderson: ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ 700 ವಿಕೆಟ್‌ಗಳ ಸರದಾರ
ಇಂಗ್ಲೆಂಡ್ ತಂಡದ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ತಮ್ಮ 41ನೇ ವಯಸ್ಸಿನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಲಾರ್ಡ್ಸ್‌ನಲ್ಲಿ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಆಡುವುದಾಗಿ ಘೋಷಿಸಿದ್ದಾರೆ. ಈ ಮೂಲಕ 21 ವರ್ಷಗಳ ಸುದೀರ್ಘ ಕ್ರಿಕೆಟ್ ವೃತ್ತಿ ಜೀವನದಿಂದ ಜೇಮ್ಸ್ ಆಂಡರ್ಸನ್ ಫುಲ್ ಸ್ಟಾಪ್ ಹಾಕಲು ಸಿದ್ಧರಾಗಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಹಲವು ಮಹತ್ವದ ಪಂದ್ಯಗಳನ್ನು ಆಡಿರುವ ಜೇಮ್ಸ್ ಆಂಡರ್ಸನ್, ಇಂಗ್ಲೆಂಡ್ ತಂಡದ ಬೌಲಿಂಗ್ ಬೆನ್ನೆಲುಬು. ಇವರ ಬೆಂಕಿಯಂತಹ ಚೆಂಡುಗಳನ್ನು ಎದುರಿಸಲು ಬ್ಯಾಟರ್‌ಗಳು ಹೈರಾಣಾಗುತ್ತಿದ್ದರು. ಮೂರು ತಲೆ ಮಾರುಗಳ ಬ್ಯಾಟರ್‌ಗಳಿಗೆ ಇವರು ಕಾಟ ನೀಡಿದ್ದಾರೆ ಎಂದರೆ ಸುಳ್ಳಲ್ಲ. ಹೀಗಾಗಿಯೇ ಇವರು ವಿಶ್ವದ ಯಶಸ್ವಿ ವೇಗದ ಬೌಲರ್.

ಟೆಸ್ಟ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ನಿವೃತ್ತಿಯಿಂದ ಅವರ ಅಭಿಮಾನಿಗಳಿಗೆ ಬೇಸರವಾಗಿದ್ದಂತೂ ಸುಳ್ಳಲ್ಲ. ಇತ್ತೀಚಿಗೆ ಭಾರತದ ಪ್ರವಾಸದಲ್ಲಿ ಜೇಂಮ್ಸ್ ಆಂಡರ್ಸನ್ ಭರ್ಜರಿ ಪ್ರದರ್ಶನ ನೀಡಿದ್ದರು. ಭಾರತದಲ್ಲಿ ನಡೆದಿದ್ದ ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಜೇಮ್ಸ್ ಮೊದಲ ಟೆಸ್ಟ್‌ನಲ್ಲಿ ಆಡದೇ ಇದ್ದರೂ, ಉಳಿದ ಎಲ್ಲ ಪಂದ್ಯಗಳಲ್ಲಿ ತಂಡಕ್ಕೆ ಮಹತ್ವದ ಕಾಣಿಕೆ ನೀಡಿದ್ದಾರೆ.
ಎಲ್ಲರಿಗೂ ಧನ್ಯವಾದ
"ಲಾರ್ಡ್ಸ್‌ನಲ್ಲಿ ಬೇಸಿಗೆಯ ಮೊದಲ ಟೆಸ್ಟ್ ನನ್ನ ಕೊನೆಯ ಟೆಸ್ಟ್ ಆಗಿರಲಿದೆ" ಎಂದು ಜೇಮ್ಸ್ ಆಂಡರ್ಸನ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ನನ್ನ ದೇಶಕ್ಕಾಗಿ 20 ವರ್ಷ ಆಡಿದ್ದು ಅದ್ಭುತವಾಗಿದೆ. ಬಾಲ್ಯದಿಂದಲೂ ನಾನು ಇಷ್ಟಪಡುವ ಆಟವನ್ನು ಆಡುವ ಉತ್ತಮ ಕ್ಷಣಗಳನ್ನು ನಾನು ಹೊಂದಿದ್ದೇನೆ. ನಾನು ಇಂಗ್ಲೆಂಡ್‌ಗೆ ಡ್ರೆಸ್ಸಿಂಗ್ ಕೊಠಡಿಯಿಂದ ಹೊರನಡೆಯುವುದನ್ನು ತಪ್ಪಿಸಿಕೊಳ್ಳುತ್ತೇನೆ ಎಂದು ಬರೆದು ಕೊಂಡಿದ್ದಾರೆ.
ನನ್ನ ಕುಟುಂಬ ಮತ್ತು ಪೋಷಕರ ಪ್ರೀತಿ ಮತ್ತು ಬೆಂಬಲವಿಲ್ಲದೆ ನಾನು ಈ ಸಾಧನೆ ಮಾಡಲು ಸಾಧ್ಯವಿಲ್ಲ ಎಂದು ಆಂಡರ್ಸನ್ ಹೇಳಿದರು. ನನ್ನ ವೃತ್ತಿ ಜೀವನವನ್ನು ಅತ್ಯುತ್ತಮವನ್ನಾಗಿಸಿದ ಆಟಗಾರರು ಮತ್ತು ತರಬೇತುದಾರರಿಗೂ ಧನ್ಯವಾದಗಳು. ಮುಂಬರುವ ಹೊಸ ಸವಾಲುಗಳಿಗೆ ನಾನು ಉತ್ಸುಕನಾಗಿದ್ದೇನೆ ಎಂದು ಬರೆದಿದ್ದಾರೆ.

ಗಾಲ್ಫ್‌ಗೆ ಹೆಚ್ಚಿನ ಸಮಯ
ವಿದೇಶದ ಅನೇಕ ಕ್ರಿಕೆಟಿಗರು ತಮ್ಮ ಬಿಡುವಿನ ವೇಳೆಯಲ್ಲಿ ಗಾಲ್ಫ್ ಆಡುತ್ತಾರೆ. ಅದರಲ್ಲಿ ಜೇಮ್ಸ್ ಆಂಡರ್ಸನ್ ಹೆಸರೂ ಸೇರಿದೆ. ಧರ್ಮಶಾಲಾದಲ್ಲಿ ಭಾರತದ ವಿರುದ್ಧ 700 ಟೆಸ್ಟ್ ವಿಕೆಟ್‌ಗಳನ್ನು ಪಡೆದ ಜೇಮ್ಸ್ ಮುಂದಿನ ದಿನಗಳಲ್ಲಿ ಗಾಲ್ಫ್ ಅಂಗಳದಲ್ಲಿ ನನ್ನನ್ನು ಕಾಣಬಹುದಾಗಿ ಹಿಂಟ್ ನೀಡಿದ್ದಾರೆ.
ಟೆಸ್ಟ್‌ನಲ್ಲಿ ಜೇಮ್ಸ್ ಸಾಧನೆ
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ 700 ವಿಕೆಟ್ ಪಡೆದ ಮೊದಲ ವೇಗದ ಬೌಲರ್ ಎಂಬ ಹೆಗ್ಗಳಿಕೆ ಜೇಮ್ಸ್ ಆಂಡರ್ಸನ್ ಅವರದ್ದಾಗಿದೆ. ಇವರು 187 ಟೆಸ್ಟ್ ಪಂದ್ಯಗಳ 348 ಇನ್ನಿಂಗ್ಸ್‌ಗಲ್ಲಿ 700 ವಿಕೆಟ್ ಪಡೆದಿದ್ದಾರೆ. ಇನ್ನಿಂಗ್ಸ್ ಒಂದರಲ್ಲಿ 32 ಬಾರಿ ಐದು ವಿಕೆಟ್ ಪಡೆದ ಸಾಧನೆ ಮಾಡಿರುವ ಇವರು ಒಂದೇ ಟೆಸ್ಟ್‌ನಲ್ಲಿ 3 ಬಾರಿ 10 ವಿಕೆಟ್ ಪಡೆದಿದ್ದಾರೆ.












Click it and Unblock the Notifications