Mayank Yadav: ಟಿ20 ವಿಶ್ವಕಪ್‌ ಭಾರತ ತಂಡದಲ್ಲಿ ಮಯಾಂಕ್ ಯಾದವ್?

ಮಯಾಂಕ್ ಯಾದವ್, ಐಪಿಎಲ್ 2024ರ ಸಾಕಷ್ಟು ಸದ್ದು ಮಾಡಿದ ಬೌಲರ್. ತಮ್ಮ ಚೊಚ್ಚಲ ಪಂದ್ಯದಲ್ಲೇ ಗಂಟೆಗೆ 155 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ಎದುರಾಳಿಗಳಿಗೆ ಭಯ ಬೀಳಿಸಿದ್ದರು. ಮೊದಲ ಪಂದ್ಯದಲ್ಲೇ ಮೂರು ವಿಕೆಟ್ ಪಡೆದು ಲಕ್ನೋ ಸೂಪರ್ ಜೈಂಟ್ಸ್ ಗೆಲುವಿಗೆ ಕಾರಣವಾಗಿದ್ದರು.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೂಡ ಆರ್ ಸಿಬಿ ವಿರುದ್ಧ ಕೂಡ ಗಂಟೆಗೆ 155.8 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡಿದ್ದರು. ಎರಡನೇ ಪಂದ್ಯದಲ್ಲಿ ಕೂಡ ಮೂರು ವಿಕೆಟ್ ಪಡೆದುಕೊಂಡರು.

Is Mayank Yadav Confirmed for Team India s T20 World Cup Radar by Chief Selector Ajit Agarkar

ಮಯಾಂಕ್ ಯಾದವ್ ಬೌಲಿಂಗ್ ನೋಡಿದ ಮಾಜಿ ಕ್ರಿಕೆಟಿಗರು, ಹಾಲಿ ಕ್ರಿಕೆಟಿಗರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಪ್ರತಿಭೆ ಶೀಘ್ರದಲ್ಲೇ ಭಾರತ ತಂಡಕ್ಕಾಗಿ ಆಡಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಟಿ20 ವಿಶ್ವಕಪ್‌ ಆಡೋದು ಪಕ್ಕಾ?

ಐಪಿಎಲ್ ಮುಗಿಯುತ್ತಿದ್ದಂತೆ ಟಿ20 ವಿಶ್ವಕಪ್ ಪಂದ್ಯಾವಳಿ ಆರಂಭವಾಗಲಿದೆ. ಐಪಿಎಲ್ ತಂಡದಲ್ಲಿ ಆಟಗಾರರ ಪ್ರದರ್ಶನ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಅರ್ಹತೆಯಾಗಿದೆ. ಮಯಾಂಕ್ ಯಾದವ್ ಅವರು ಟಿ20 ವಿಶ್ವಕಪ್‌ಗೆ ಭಾರತ ತಂಡಕ್ಕೆ ಆಯ್ಕೆಯಾಗುತ್ತಾರಾ ಎನ್ನುವ ಪ್ರಶ್ನೆ ಇದೆ.

ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿಯೇ ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಯಶಸ್ವಿ ಜೈಸ್ವಾಲ್ ಮತ್ತು ರಿಂಕು ಸಿಂಗ್ ಅವರಂತಹ ಆಟಗಾರರು ಭಾರತ ತಂಡಕ್ಕೆ ಆಯ್ಕೆಯಾಗಿದ್ದು.

ಮಯಾಂಕ್ ಯಾದವ್ ಕೂಡ ಬಿಸಿಸಿಐ ಆಯ್ಕೆದಾರರ ಗಮನ ಸೆಳೆದಿದ್ದಾರೆ ಎಂದು ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಹೇಳಿದ್ದಾರೆ. ಅಲ್ಲದೆ ಅವರು ಭಾರತ ತಂಡಕ್ಕಾಗಿ ಆಡುವುದು ಬಹುತೇಕ ಖಚಿತ ಎನ್ನುವ ಸೂಚನೆ ಕೂಡ ಕೊಟ್ಟರಾ ಎನ್ನುವ ಪ್ರಶ್ನೆ ಕೂಡ ಮೂಡಿದೆ.

ಮಯಾಂಕ್ ಯಾದವ್ ಅವರನ್ನು ಟಿ20 ವಿಶ್ವಕಪ್‌ಗೆ ಪರಿಗಣಿಸುವ ಸಾಧ್ಯತೆಯ ಬಗ್ಗೆ ಅಗರ್ಕರ್ ಸುಳಿವು ಕೊಟ್ಟಿದ್ದಾರೆ. ಐಪಿಎಲ್‌ನ ಚೊಚ್ಚಲ ಋತುವಿನಲ್ಲಿ, ಯಾದವ್ ಅವರ ವೇಗದ ಬಗ್ಗೆ ವ್ಯಾಪಕ ಮೆಚ್ಚುಗೆಯನ್ನು ಗಳಿಸಿದ್ದಾರೆ. ಅವರ ಪ್ರಭಾವಶಾಲಿ ಪ್ರದರ್ಶನಗಳು ಅಭಿಮಾನಿಗಳು ಮತ್ತು ಪರಿಣತರ ಮೆಚ್ಚುಗೆಯನ್ನು ಗಳಿಸಿವೆ, ಭಾರತದ ಮಾಜಿ ವೇಗದ ಬೌಲರ್ ಮತ್ತು ಬೌಲಿಂಗ್ ಕೋಚ್ ಟಿ.ಎ. ಸೇಕರ್, ಇಯಾನ್ ಬಿಷಪ್ ಮತ್ತು ಮಾಜಿ ರಾಷ್ಟ್ರೀಯ ಆಯ್ಕೆಗಾರ ಜತಿನ್ ಪರಂಜ್ಪೆ ಟಿ20 ವಿಶ್ವಕಪ್ ತಂಡದಲ್ಲಿ ಮಯಾಂಕ್ ಇರಬೇಕು ಎಂದು ಒತ್ತಾಯಿಸಿದ್ದಾರೆ.

ಹೆಚ್ಚಿನ ಆಟಗಾರರು ಕ್ಯೂನಲ್ಲಿ ಇರುವ ಕಾರಣ ಇದು ದೊಡ್ಡ ವೇದಿಕೆಯಾಗಿದೆ. ನೀವು ವಿಶ್ವದ ಅಗ್ರ ಬ್ಯಾಟರ್‌ಗಳಿಗೆ ಬೌಲಿಂಗ್ ಮಾಡುತ್ತಿದ್ದೀರಿ ಅಥವಾ ಅಗ್ರ ಬೌಲರ್‌ಗಳಲ್ಲಿ ಒಬ್ಬರನ್ನು ಎದುರಿಸುತ್ತಿರಬಹುದು, ಇಲ್ಲಿ ನೀವು ಆಟಗಾರನ ಮನೋಧರ್ಮವನ್ನು ನಿರ್ಣಯಿಸಬಹುದು ಮತ್ತು ಅವನು ಅದನ್ನು ಎಷ್ಟು ಸ್ಥಿರವಾಗಿ ಮಾಡಬಹುದು ಅಷ್ಟು ಉತ್ತಮ ಎಂದು ಅಗರ್ಕರ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+