ಕಾಲ್ತುಳಿತ 11 ಸಾವು: ಬಿಸಿಸಿಐ ಶನಿವಾರ ಮಹತ್ವದ ಸಭೆ, ಮಾರ್ಗ ಸೂಚಿ ಚರ್ಚೆ
18ನೇ ಆವೃತ್ತಿಯ ಐಪಿಎಲ್‌ನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆದ್ದುಕೊಂಡಿದೆ. ಆರ್‌ಸಿಬಿ ಪ್ರಶಸ್ತಿ ಬರವನ್ನು ಕೊನೆಗಳಿಸಿದ ಬಳಿಕ ಅಭಿಮಾನಿಗಳ ಜೊತೆಗೆ ಮ್ಯಾನೇಜ್ಮೆಂಟ್ ಸಂಭ್ರಮಾಚರಣೆಗೆ ಮುಂದಾಯಿತು. ಈ ವೇಳೆ ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರಿಂದ ಕಾಲ್ತುಳಿತ ಸಂಭವಿಸಿದ್ದು, 11 ಜನರು ಸಾವನ್ನಪ್ಪಿದ್ದಾರೆ. ಈ ದುರ್ಘಟನೆ ನಡೆದು ದಿನಗಳೇ ಕಳೆದಿವೆ. ಈಗ ಬಿಸಿಸಿಐ ಈ ಬಗ್ಗೆ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ.
ಬಿಸಿಸಿಐ, ಐಪಿಎಲ್ ವಿಜೇತ ತಂಡ ವಿಕ್ಟರಿ ಪೆರೇಡ್ ನಡೆಸಿದರೆ, ಯಾವೆಲ್ಲಾ ಮಾನದಂಡಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಶೀಘ್ರದಲ್ಲೇ ಸಭೆಯನ್ನು ಕರೆದು ನಿರ್ಧಾರವನ್ನು ಕೈಗೊಳ್ಳಲಿದೆ. ಇದೇ ವೇಳೆ ಬಿಸಿಸಿಐ ಸಭೆಯಲ್ಲಿ ಇನ್ನು ಹತ್ತು ಹಲವು ವಿಷಯಗಳ ಬಗ್ಗೆ ಚರ್ಚೆಗಳನ್ನು ಸಭೆಯಲ್ಲಿ ನಡೆಸುವ ಸಾಧ್ಯತೆ ಇದೆ.

ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಬಿಸಿಸಿಐ, ಕಟ್ಟು ನಿಟ್ಟಿನ ನಿರ್ಧಾರವನ್ನು ಕೈಗೊಳ್ಳಲಿದೆ ಎಂದು ಈ ಮೊದಲೇ ತಿಳಿಸಿತ್ತು. ಈಗ ಬಿಸಿಸಿಐ ಸಭೆಯಲ್ಲಿ ವಿಕ್ಟರಿ ಪೆರೆಡ್ ನಡೆಸುವ ಬಗ್ಗೆ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ಈ ಸಭೆಯನ್ನು ಬಿಸಿಸಿಐ ಶನಿವಾರ ನಡೆಸುವ ಸಂಭವವಿದೆ. ಈ ಸಭೆಯಲ್ಲಿ ಬಿಸಿಸಿಐ ಐಪಿಎಲ್ ಗೆದ್ದ ಬಳಿಕ ತಂಡಗಳು ನಡೆಸಬಹುದಾದ ವಿಕ್ಟರ್ ಪೆರೆಡ್ (ಸಂಭ್ರಮಾಚರಣೆ) ಬಗ್ಗೆ ಕಟ್ಟು ನಿಟ್ಟಿನ ನಿರ್ದೇಶನವನ್ನು ಜಾರಿ ಮಾಡಲಿದೆ. ಇಷ್ಟೇ ಅಲ್ಲದೆ ಭಾರತ ಹಾಗೂ ನ್ಯೂಜಿಲೆಂಡ್ ನಡವುಣ ಸರಣಿಯ ಸ್ಥಳಗಳನ್ನು ಸ್ಥಳ ಈ ಸಭೆಯಲ್ಲಿ ಫೈನಲ್ ಮಾಡಲಾಗುತ್ತದೆ.
ಸಭೆಯಲ್ಲಿ ಈ ವಿಷಯಗಳ ಬಗ್ಗೆ ಚರ್ಚೆ
ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಮೀಟಿಂಗ್‌ನಲ್ಲಿ ಐಪಿಎಲ್‌ನ ಸಂಭ್ರಮಾಚರಣೆಯ ಮಾರ್ಗಸೂಚಿಗಳ ಬಗ್ಗೆ ಚರ್ಚಿಸಲಾಗುತ್ತದೆ. ಇನ್ನು ಭಾರತದಲ್ಲಿ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಇದೇ ಸಭೆಯಲ್ಲಿ ಸ್ಥಳವನ್ನು ನಿರ್ಧರಿಸುವ ಸಾಧ್ಯತೆ ಇದೆ. ದೇಶೀಯ ಋತುವಿನ ವೇಳಾಪಟ್ಟಿಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ. ದೇಶೀಯ ಋತುವಿಗಾಗಿ ನೀತಿ ಸಂಹಿತಿ ಹಾಗೂ ಆಟಗಾರರಿಗೆ ನೀಡುವ ಭತ್ಯೆಯ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ತಿಳಿದು ಬಂದಿದೆ.

ಜೂನ್ 3 ರಂದು ಅಹಮದಾಬಾದ್‌ನಲ್ಲಿ ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6 ರನ್‌ಗಳಿಂದ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಈ ಸಂಭ್ರಮಾಚರಣೆಯನ್ನು ಆಚರಿಸಲು ಅಭಿಮಾನಿಗಳಿಗೆ ಆರ್‌ಸಿಬಿ ಕರೆ ನೀಡಿತ್ತು. ಚಿನ್ನಸ್ವಾಮಿ ಮೈದಾನದಲ್ಲಿ ಲಭ್ಯ ಇರುವ ಸ್ಥಳಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಜಮ ಜಮಾವಣೆ ಆಗಿದ್ದರಿಂದ ಕಾಲ್ತುಳಿತ ಸಂಭವಿಸಿ ದುರಂತ ನಡೆದಿದೆ.












Click it and Unblock the Notifications