IPL vs PSL: ಚಾಂಪಿಯನ್ಸ್ ಟ್ರೋಫಿ ಆಯ್ತು ಈಗ ಪಾಕಿಸ್ತಾನ್ ಸೂಪರ್ ಲೀಗ್‌ಗೂ ಶಾಕ್‌!

ಚಾಂಪಿಯನ್ಸ್ ಟ್ರೋಫಿ ವಿಚಾರದಲ್ಲಿ ಪಾಕಿಸ್ತಾನಕ್ಕೆ ಭಾರಿ ಹಿನ್ನಡೆಯಾಗುತ್ತಿದೆ. ಚಾಂಪಿಯನ್ಸ್ ಟ್ರೋಫಿ ಆಡಲು ಪಾಕಿಸ್ತಾನಕ್ಕೆ ಯಾವುದೇ ಕಾರಣಕ್ಕೂ ಪ್ರಯಾಣಿಸುವುದಿಲ್ಲ ಎಂದು ಭಾರತ ಸರ್ಕಾರ ಸ್ಪಷ್ಟಪಡಿಸಿದ ಬಳಿಕ, ಪಾಕಿಸ್ತಾನ ಸಂಕಷ್ಟಕ್ಕೆ ಸಿಲುಕಿದೆ. ಜೊತೆಗೆ ದೇಶದಲ್ಲಿ ನಡೆಯುತ್ತಿರುವ ಗಲಭೆಗಳು ಪಾಕಿಸ್ತಾನಕ್ಕೆ ಮತ್ತಷ್ಟು ಹಿನ್ನಡೆಯಾಗುವಂತೆ ಮಾಡಿದೆ. ಇದೀಗ ಪಾಕಿಸ್ತಾನ ಸೂಪರ್ ಲೀಗ್‌ಗೂ ಆಘಾತ ಎದುರಾಗಿದೆ.

ಪಾಕಿಸ್ತಾನ ಸೂಪರ್ ಲೀಗ್‌ (ಪಿಎಸ್‌ಎಲ್)ಗೆ ಇಂಗ್ಲೆಂಡ್‌ ಆಘಾತ ನೀಡಿದ್ದು, ಐಪಿಎಲ್ ಎಷ್ಟು ಮುಖ್ಯ ಎನ್ನುವುದನ್ನು ಮತ್ತೆ ಸಾಬೀತುಪಡಿಸಿದೆ. ವರ್ಷದಿಂದ ವರ್ಷಕ್ಕೆ ಹಲವು ದೇಶಗಳು ಟಿ20 ಲೀಗ್‌ಗಳನ್ನು ಪರಿಚಯಿಸುತ್ತಿವೆ. ಭಾರತ ಹೊರತುಪಡಿಸಿ ಉಳಿದ ಎಲ್ಲಾ ದೇಶಗಳ ಆಟಗಾರರು ವಿವಿಧ ಲೀಗ್‌ಗಳಲ್ಲಿ ಆಡುತ್ತಿದ್ದಾರೆ. ಆದರೆ ಈಗ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ನೀಡಿರುವ ಹೇಳಿಕೆ ಪಾಕಿಸ್ತಾನಕ್ಕೆ ಆಘಾತ ನೀಡಿದೆ.

ipl grows bigger than ps ecb bans english player

ಇತರ ಲೀಗ್‌ಗಳು ಹಣಕಾಸಿಗಾಗಿ ಹೆಣಗಾಡುತ್ತಿರುವಾಗ ಐಪಿಎಲ್‌ ಆಟಗಾರರಿಗೆ ಹಣದ ಹೊಳೆಯನ್ನೇ ಹರಿಸುತ್ತಿದೆ. ವಿಶ್ವದ ಎಲ್ಲಾ ದೇಶಗಳ ಆಟಗಾರರು ಐಪಿಎಲ್‌ನಲ್ಲಿ ಆಡಲು ಉತ್ಸುಕರಾಗಿದ್ದಾರೆ.

ಪಿಎಸ್‌ಎಲ್‌ನಲ್ಲಿ ಆಡದಂತೆ ಸೂಚನೆ!

ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಥಮ ದರ್ಜೆ ಕ್ರಿಕೆಟ್ ಒಪ್ಪಂದಗಳನ್ನು ಹೊಂದಿರುವ ಆಟಗಾರರು ಪಾಕಿಸ್ತಾನ್ ಸೂಪರ್ ಲೀಗ್ ಮತ್ತು ಶ್ರೀಲಂಕಾ ಪ್ರೀಮಿಯರ್ ಲೀಗ್‌ನಂತಹ ಲೀಗ್‌ಗಳಲ್ಲಿ ಭಾಗವಹಿಸುವುದನ್ನು ನಿರ್ಬಂಧಿಸಲಾಗಿದೆ. ಆದರೆ ಐಪಿಎಲ್‌ ವಿಚಾರದಲ್ಲಿ ಮಾತ್ರ ಬೇರೆಯದೇ ನಿಲುವು ತೆಗೆದುಕೊಂಡಿದೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡಲು ತನ್ನ ಆಟಗಾರರಿಗೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಅನುಮತಿ ನೀಡಿದೆ. 2025ರ ಐಪಿಎಲ್‌ನಲ್ಲಿ 12 ಇಂಗ್ಲಿಷ್ ಆಟಗಾರರು ಆಡಲಿದ್ದಾರೆ. ಕಳೆದ ಋತುವಿನಲ್ಲಿ 74 ಇಂಗ್ಲೆಂಡ್ ಆಟಗಾರರು ವಿವಿಧ ಫ್ರಾಂಚೈಸಿಗಳಲ್ಲಿ ಆಡಿದ್ದಾರೆ.

ಇಸಿಬಿಯ ಮುಖ್ಯ ಕಾರ್ಯನಿರ್ವಾಹಕ ರಿಚರ್ಡ್ ಗೌಲ್ಡ್ ಹೊಸ ನಿಯಮದ ಬಗ್ಗೆ ವಿವರಣೆ ನೀಡಿದರು, "ನಮ್ಮ ನೀತಿಯು ಆಟಗಾರರು ಮತ್ತು ಕೌಂಟಿಗಳಿಗೆ ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಿದ್ದು. ನಾವು ಆಟಗಾರರ ಅವಕಾಶಗಳ ನಡುವೆ ಸಮತೋಲನವನ್ನು ಸಾಧಿಸುತ್ತಿದ್ದೇವೆ ಮತ್ತು ದೇಶೀಯ ಕ್ರಿಕೆಟ್‌ನ ಸಮಗ್ರತೆಯನ್ನು ರಕ್ಷಿಸುತ್ತಿದ್ದೇವೆ." ಎಂದು ಹೇಳಿದ್ದಾರೆ.

ಇಂಗ್ಲೆಂಡ್ ಕ್ರಿಕೆಟ್‌ನ ಹೊಸ ಮಾರ್ಗಸೂಚಿಗಳು ದೇಶದ ಆಟಗಾರರು ಹೊರಗಿನ ಲೀಗ್‌ಗಳಲ್ಲಿ ಆಡುವ ಅವಕಾಶಕ್ಕೆ ಮಿತಿ ಹೇರಲಿದ್ದು, ದೇಶೀಯ ಲೀಗ್‌ನಲ್ಲಿ ಆಡಲು ಪ್ರಾಮುಖ್ಯತೆ ನೀಡುವಂತೆ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+