Get Updates
Get notified of breaking news, exclusive insights, and must-see stories!

ಐಪಿಎಲ್ 2026: ಆರ್‌ಸಿಬಿ ಉಳಿಸಿಕೊಂಡಿರುವ ಆಟಗಾರರ ಪಟ್ಟಿ

IPL 2026 RCB: ಐಪಿಎಲ್ 2025 ಫೈನಲ್‌ ಪಂದ್ಯದಲ್ಲಿ ಆರ್‌ಸಿಬಿ ಪಂಜಾಬ್ ಕಿಂಗ್ಸ್‌ ವಿರುದ್ಧ ಗೆದ್ದು ಚೊಚ್ಚಲ ಟ್ರೋಫಿ ಗೆದ್ದುಕೊಂಡಿತು. ಇದೀಗ ಎಲ್ಲರ ಕಣ್ಣು 2026ರ ಸೀಸನ್‌ನತ್ತ ನೆಟ್ಟಿದ್ದು, ಮಿನಿ ಹರಾಜಿಗೂ ಮುನ್ನ ಬೆಂಗಳೂರು ರಿಟೈನ್‌ ಆಟಗಾರರ ಪಟ್ಟಿಯನ್ನು ಪ್ರಟಕ ಮಾಡಿದೆ. ಹಾಗಾದ್ರೆ, ಯಾವೆಲ್ಲಾ ಆಟಗಾರರನ್ನು ಉಳಿಸಿಕೊಂಡಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಹಾಲಿ ಐಪಿಎಲ್‌ ಚಾಂಪಿಯನ್‌ ಆರ್‌ಸಿಬಿ ಮಿನಿ ಹರಾಜಿಗೆ ಮುನ್ನ ರಿಟೈನ್‌ ಪಟ್ಟಿ ಪ್ರಕಟ ಮಾಡಿದೆ. ತಂಡವು ಎಷ್ಟು ಆಟಗಾರರನ್ನು ಉಳಿಸಿಕೊಂಡಿದೆ ಎನ್ನುವ ಪ್ರಶ್ನೆ ಬಹುತೇಕ ಮಂದಿ ತಲೆಯಲ್ಲಿ ಕಾಡುತ್ತಿರುತ್ತದೆ. ಹಾಗಾದ್ರೆ, ಅದಕ್ಕೆಲ್ಲಾ ಉತ್ತರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

IPL 2026 RCB Retained Players List Full Squad Remaining Purse amp amp Mini Auction Update

ಬೇರೆ ತಂಡಗಳಿಗೆ ಹೋಲಿಕೆ ಮಾಡಿದರೆ, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದಲ್ಲಿ ಅಷ್ಟೊಂದು ಬದಲಾವಣೆಗಳು ಆಗಿಲ್ಲ. ಯಾಕಂದರೆ, ಅಷ್ಟರ ಮಟ್ಟಿಗೆ ಬಲಿಷ್ಠ ತಂಡವನ್ನು ಹೊಂದಿದ್ದು, ಬಹುತೇಕ ಅದೇ ಆಟಗಾರರನ್ನು ಉಳಿಸಿಕೊಂಡಿದೆ. ಕೆಲವರನ್ನು ಮಾತ್ರ ಕೈಬಿಟ್ಟಿದೆ. ಅಂದ್ರೆ, ಕಳೆದ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ತೋರಿದ, ಬದಲಿ ಆಟಗಾರರು ಹಾಗೂ ಒಂದು ಪಂದ್ಯದಲ್ಲೂ ಆಡಿರದ ಆಟಗಾರರನ್ನು ತಂಡದಿಂದ ಕೈಬಿಟ್ಟಿದೆ.

ಉಳಿದಂತೆ ಮಿಕ್ಕಿದ ಎಲ್ಲಾ ಆಟಗಾರರನ್ನು ಉಳಿಸಿಕೊಂಡಿ. ಒಟ್ಟು 17 ಮಂದಿ ಆಟಗಾರರನ್ನು ಉಳಿಸಿಕೊಂಡಿದೆ. ಇನ್ನೂ ಮಿನಿ ಹರಾಜಿನ ವೇಳೆ ಯಾರಾದರೂ ಒಬ್ಬರು ಅಥವಾ ಇಬ್ಬರು ಆಲ್‌ರೌಂಡರ್ ಆಟಗಾರರನ್ನು ಕೊಂಡುಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಇದೀಗ ಸದ್ಯ ಆರ್‌ಸಿಬಿ 16.4 ಕೋಟಿ ರೂಪಾಯಿ ಉಳಿಸಿಕೊಂಡಿದೆ. ಹಾಗಾದ್ರೆ ತಂಡ ಉಳಿಸಿಕೊಂಡಿರುವ ಆಟಗಾರರ ಪಟ್ಟಿ ಕೆಳಗೆ ನೀಡಲಾಗಿದೆ ಕಣ್ಣಾಡಿಸಿ.

ಆರ್‌ಸಿಬಿ ಉಳಿಸಿಕೊಂಡ ಆಟಗಾರರು: ರಜತ್‌ ಪಾಟಿದಾರ್‌, ವಿರಾಟ್‌ ಕೊಹ್ಲಿ, ದೇವದತ್‌ ಪಡಿಕ್ಕಲ್‌, ಫಿಲ್‌ ಸಾಲ್ಟ್‌, ಜಿತೇಶ್‌ ಶರ್ಮಾ, ಕೃನಾಲ್‌ ಪಾಂಡ್ಯ, ಟಿಮ್‌ ಡೇವಿಡ್‌, ರೊಮಾರಿಯೋ ಶೆಫರ್ಡ್‌, ಜಾಕೋಬ್‌ ಬೆಥೆಲ್‌, ಜೋಶ್‌ ಹೇಝಲ್‌ವುಡ್‌, ಯಶ್‌ ದಯಾಲ್‌, ಭುವನೇಶ್ವರ್‌ ಕುಮಾರ್‌, ಸುಯಾಶ್‌ ಶರ್ಮ,ಸ್ವಪ್ನಿಲ್‌ ಸಿಂಗ್‌, ನುವಾನ್‌ ತುಷಾರ, ರಸಿಖ್‌ ದಾರ್ ಸಲಾಮ್‌, ಅಭಿನಂದನ್‌ ಸಿಂಗ್‌ ಅವರನ್ನ ಉಳಿಸಿಕೊಂಡಿದೆ.

ಆರ್‌ಸಿಬಿ ಉಳಿಸಿಕೊಂಡ ಆಟಗಾರರು

* ರಜತ್‌ ಪಾಟಿದಾರ್‌ (ನಾಯಕ)
* ವಿರಾಟ್‌ ಕೊಹ್ಲಿ
* ದೇವದತ್‌ ಪಡಿಕ್ಕಲ್‌
* ಫಿಲ್‌ ಸಾಲ್ಟ್‌
* ಜಿತೇಶ್‌ ಶರ್ಮಾ (ವಿಕೆಟ್‌ ಕೀಪರ್)
* ಕೃನಾಲ್‌ ಪಾಂಡ್ಯ
* ಟಿಮ್‌ ಡೇವಿಡ್‌
* ರೊಮಾರಿಯೋ ಶೆಫರ್ಡ್‌
* ಜಾಕೋಬ್‌ ಬೆಥೆಲ್‌
* ಜೋಶ್‌ ಹೇಝಲ್‌ವುಡ್‌
* ಯಶ್‌ ದಯಾಲ್‌
* ಭುವನೇಶ್ವರ್‌ ಕುಮಾರ್‌
* ಸುಯಾಶ್‌ ಶರ್ಮ
* ಸ್ವಪ್ನಿಲ್‌ ಸಿಂಗ್‌
* ನುವಾನ್‌ ತುಷಾರ
* ರಸಿಖ್‌ ದಾರ್ ಸಲಾಮ್‌
* ಅಭಿನಂದನ್‌ ಸಿಂಗ್‌

ಹೀಗೆ ಆರ್‌ಸಿಬಿ 17 ಆಟಗಾರರನ್ನು ಉಳಿಸಿಕೊಂಡು, ಉಳಿದ 8 ಆಟಗಾರರನ್ನು ಕೈಬಿಟ್ಟಿದೆ. ಉಳಿಸಿಕೊಂಡಿರುವವಲ್ಲಿ ಬಹುತೇಕ ಆಟಗಾರರು ಕಳೆದ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಬ್ಯಾಟಿಂಗ್‌, ಬೌಲಿಂಗ್‌, ಫೀಲ್ಡಿಂಗ್‌ ಎಲ್ಲಾ ವಿಭಾಗದಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಬಲಿಷ್ಠ ತಂಡಗಳನ್ನು ಬಗ್ಗುಬಡಿದು ಟ್ರೋಫಿ ಮುಡಿಗೇರಿಸಿಕೊಂಡಿತು. ಇಂತಹ ಬಲಿಷ್ಠ ತಂಡ ಹೊಂದಿರುವ ಆರ್‌ಸಿಬಿ ಮುಂದಿನ ಬಾರಿಯೂ ಕಪ್‌ ಗೆಲ್ಲುವ ಸಾಧ್ಯತೆಯಿದೆ ಎನ್ನುವ ಕೂಗುಗಳು ಕೇಳಿಬರುತ್ತಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+