Get Updates
Get notified of breaking news, exclusive insights, and must-see stories!

IPL 2026 RCB Squad: ಐಪಿಎಲ್‌ 2026ಕ್ಕೆ ಆರ್‌ಸಿಬಿ ಪ್ಲೇಯಿಂಗ್ 11..

IPL 2026 RCB Playing 11: ಐಪಿಎಲ್‌ 2025 ಫೈನಲ್‌ ಪಂದ್ಯದಲ್ಲಿ ಆರ್‌ಸಿಬಿ ಗೆಲುವು ಸಾಧಿಸಿ ಚೊಚ್ಚಲ ಟ್ರೋಫಿಗೆ ಮುತ್ತಿಟ್ಟಿತು. ಆದರೆ, ಇದೀಗ ಎಲ್ಲರ ಚಿತ್ತ 19ನೇ ಸೀಸನ್‌ನತ್ತ ನೆಟ್ಟಿದೆ. ಹಾಗಾದ್ರೆ, ಮುಂದಿನ ಬಾರಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಪ್ಲೇಯಿಂಗ್‌ 11 ಹೇಗಿರಲಿದೆ? ಯಾರೆಲ್ಲಾ ಇರಲಿದ್ದಾರೆ ಎನ್ನುವ ಪ್ರಶ್ನೆ ಬಹುತೇಕ ಮಂದಿಯ ತಲೆಯಲ್ಲಿರುತ್ತದೆ. ಅದೆಲ್ಲ ಉತ್ತರ ಇಲ್ಲಿದೆ ನೋಡಿ.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಆಡಿದ 17 ಸೀಸನ್‌ಗಳಿಂದಲೂ ಒಂದೇ ಒಂದು ಟ್ರೋಫಿ ಗೆದ್ದಿರಲಿಲ್ಲ. ಆದರೆ, 18ನೇ ಆವೃತ್ತಿಯ ಫೈನಲ್‌ನಲ್ಲಿ ಗೆಲ್ಲುವ ಮೂಲಕ ಈ ಕೊರಗನ್ನು ಮರೆಸಿದೆ. ಅಷ್ಟರ ಮಟ್ಟಿಗೆ ಆರ್‌ಸಿಬಿ ಪಡೆ ಆರಂಭದಿಂದಲೂ ಬ್ಯಾಟಿಂಗ್‌, ಬೌಲಿಂಗ್‌, ಫೀಲ್ಡಿಂಗ್‌ ಎಲ್ಲಾ ವಿಭಾಗದಲ್ಲೂ ಉತ್ತಮ ಪ್ರದರ್ಶ ತೋರುವ ಮೂಲಕ ಬಲಿಷ್ಠ ತಂಡಗಳನ್ನು ಬಗ್ಗುಬಡಿಯುವ ಮೂಲಕ ಟ್ರೋಫಿ ಮುಡಿಗೇರಿಸಿಕೊಂಡಿತು.

IPL 2026 Predicted RCB Playing XI for Next Season

ಸೋತ ಆವೃತ್ತಿಗಳಲ್ಲಿ ಬೆಂಗಳೂರು ತಂಡದಲ್ಲಿ ದೊಡ್ಡ ಗೊಂದಲವೊಂದಿತ್ತು. ಅದುವೇ, ಯಾರನ್ನು ಯಾವ ಸ್ಥಾನದಲ್ಲಿ ಬ್ಯಾಟಿಂಗ್‌ ಆಡಿಸಬೇಕು ಹಾಗೂ ಬೌಲಿಂಗೆ ಇಳಿಸಬೇಕು ಎನ್ನುವ ಗೊಂದಲ. ಆದರೆ ಇದೆಲ್ಲದಕ್ಕೂ ತಕ್ಕ ಉತ್ತರ 2025ರ ಆವೃತ್ತಿಯಲ್ಲಿ ಸಿಕ್ಕಂತಾಗಿದೆ. ಆದ್ದರಿಂದ ಮುಂದಿನ ಬಾರಿಯೂ ಕೆಲವರನ್ನು ಬಿಟ್ಟು ಇವರೇ ಈ ಸ್ಥಾನದಲ್ಲಿ ಆಡಬೇಕು ಎನ್ನುವುದು ಫಿಕ್ಸ್ ಆದಂತಾಗಿದೆ. ದೊಡ್ಡ ಮಟ್ಟದ ಬದಲಾವಣೆ ಆಗುವ ಸಾಧ್ಯತೆ ಕಡಿಮೆಯಿದೆ. ಇದೀಗ ಬಲಿಷ್ಠ ತಂಡ ಹಿಂದಿರುವ ಆರ್‌ಸಿಬಿ ಮುಂದಿನ ಬಾರಿಯೂ ಟ್ರೋಫಿ ಎತ್ತಲಿದೆ ಎನ್ನುವ ಮಾತುಗಳು ಜೋರಾಗಿ ಕೇಳಿಬರುತ್ತಿವೆ.

ಐಪಿಎಲ್‌ನಲ್ಲೇ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ ಅಂತಾ ಇದ್ರೆ ಅದು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮಾತ್ರ. ಅಲ್ಲದೆ, ಮಾರ್ಕೆಟಿಂಗ್ ವ್ಯಾಲ್ಯೂನಲ್ಲೂ ಕೂಡ ನಂಬರ್ 1 ಸ್ಥಾನಕ್ಕೇರಿದೆ. ಇದೀಗ ಪ್ರಾಂಚೈಸಿ ಮಾರಾಟದ ಗದ್ದಲದ ನಡುವೆಯೇ ಮುಂದಿನ ಬಾರಿ ಅಂದರೆ 2026ರ ಪ್ಲೇಯಿಂಗ್ 11 ಹೇಗಿರಲಿದೆ ಎನ್ನುವ ಮಾಹಿತಿಯೊಂದು ಭಾರೀ ಸದ್ದು ಮಾಡುತ್ತಿದೆ.

ತಂಡದಲ್ಲಿ ಕಳೆದ ಬಾರಿ ಯಾರು ಯಾವ ಸ್ಥಾನದಲ್ಲಿ ಆಡಿದ್ದರೋ ಅವರು ಅದೇ ಸ್ಥಾನದಲ್ಲಿ ಮುಂದುವರೆಯಲಿದ್ದಾರೆ. ಇದರಲ್ಲಿ ಕೆಲವರನ್ನು ಕೈಬಿಡುವ ಸಾಧ್ಯತೆ ಇದ್ದು, ಈ ಸ್ಥಾನಕ್ಕೆ ಸೂಕ್ತ ಆಟಗಾರರನ್ನು ಇಳಿಸುವ ಆಲೋಚನೆಯಲ್ಲಿ ಆರ್‌ಸಿಬಿ ಇದೆ ಎನ್ನಲಾಗುತ್ತಿದೆ. ಹಾಗಾದ್ರೆ, ಮುಂದಿಮ ಬಾರಿ ಯಾರೆಲ್ಲಾ ಆಡುವ 11ರ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಆರ್‌ಸಿಬಿಯು 2026 ಐಪಿಎಲ್‌ ಮಿನಿ ಹರಾಜಿಗೂ ಮುನ್ನ ಲಿಯಾಮ್ ಲಿವಿಂಗ್‌ಸ್ಟೋನ್, ರಾಸಿಖ್ ಸಲಾಮ್ ದಾರ್, ಮಾಯಾಂಕ್ ಅಗರ್ವಾಲ್, ಟೀಮ್ ಸೀಫರ್ಟ್ ಇವರನ್ನು ಕೈಬಿಡುವ ಸಾಧ್ಯತೆಯಿದೆ. ಉಳಿದಂತೆ ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿ.ಕೀ.), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಜೋಶ್ ಹೇಜಲ್ವುಡ್,ಯಶ್ ದಯಾಲ್, ಸುಯೇಶ್ ಶರ್ಮಾ, ರೊಮಾರಿಯೋ ಶೆಫರ್ಡ್ ಅವರು ಇರಲಿದ್ದಾರೆ ಎನ್ನಲಾಗುತ್ತಿದೆ. ಮತ್ತೊಂದೆಡೆ ಭುವನೇಶ್ವರ್ ಕುಮಾರ್ ಅವರನ್ನು ಕೈಬಿಡುವ ಸಾಧ್ಯತೆಯಿದ್ದು, ಬೇರೆ ಆಟಗಾರರನ್ನು ಕೊಂಡುಕೊಳ್ಳುವ ಸಾಧ್ಯತೆಯಿದೆ.

ಆರ್‌ಸಿಬಿ ಪ್ಲೇಯಿಂಗ್ 11: ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿ.ಕೀ.), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಜೋಶ್ ಹೇಜಲ್ವುಡ್, ಯಶ್ ದಯಾಲ್, ಸುಯೇಶ್ ಶರ್ಮಾ, ರೊಮಾರಿಯೋ ಶೆಫರ್ಡ್.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+