RCB Vijay Mallya: ಕೆಕೆಆರ್ ವಿರುದ್ಧ ಆರ್‌ಸಿಬಿ ಗೆಲುವಿನ ಬಗ್ಗೆ ವಿಜಯ್ ಮಲ್ಯ ಹೀಗಂದ್ಬಿಟ್ರು
Vijay Mallya: ಐಪಿಎಲ್ 2025ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೆಕೆಆರ್ ವಿರುದ್ಧ ಆರ್‌ಸಿಬಿ 7 ವಿಕೆಟ್‌ಗಳ ಜಯ ಕಂಡಿದೆ. ಈ ಗೆಲುವಿನ ಬೆನ್ನಲ್ಲೇ ಬಹುತೇಕ ಮಂದಿ ಆರ್ಸಿಬಿ ತಂಡ ಹೊಸ ಅಧ್ಯಾಯ ಈಗ ಆರಂಭವಾಗಿದೆ ಅಂತೆಲ್ಲಾ ಹೇಳಿದ್ದಾರೆ. ಹಾಗೆಯೇ ವಿಜಯ್ ಮಲ್ಯ ಕೂಡ ಟ್ವೀಟ್ ಮಾಡಿದ್ದು, ಇದು ಭಾರೀ ವೈರಲ್ ಆಗುತ್ತಿದೆ. ಹಾಗಾದ್ರೆ ಅವರು ಏನು ಬರೆದುಕೊಂಡಿದ್ದಾರೆ ಎಂದು ಇಲ್ಲಿ ತಿಳಿಯಿರಿ.
ಉದ್ಘಾಟನಾ ಪಂದ್ಯ ಆರ್‌ಸಿಬಿ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ನಡುವೆ ನಡೆದಿದ್ದು, ಆರ್‌ಸಿಬಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಅಭಿಮಾನಿಗಳನ್ನು ಮತ್ತಷ್ಟು ಅಭಿಮಾನವನ್ನು ಹೆಚ್ಚಿಸಿಕೊಂಡಿದೆ. ಇನ್ನೂ ಆರ್‌ಸಿಬಿ ಒಂದೇ ಒಂದು ಪಂದ್ಯ ಗೆದ್ದಿದ್ದಕ್ಕೆ ಅಭಿನಂದನೆಗಳ ಸುರಿಮಳೆಯೇ ಹರಿದುಬರುತ್ತಿದೆ. ಹಾಗೆಯೇ ವಿಜಯ್ ಮಲ್ಯ ಕೂಡ ಟ್ವೀಟ್‌ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಇದು ಭಾರೀ ವೈರಲ್ ಆಗುತ್ತಿದೆ.

ಆರ್ಥಿಕ ವಂಚನೆ ಆರೋದ ಮೇಲೆ ವಿದೇಶಕ್ಕೆ ಹೋಗಿರುವ ವಿಜಯ್ ಮಲ್ಯ ಸಾಮಾಜಿಕ ಜಾಲತಾಣದ ಭಾಗವಾದ ಟ್ವಿಟ್ಟರ್‌ನಲ್ಲಿ ಅಭಿನಂದನೆ ಸಂದೇಶದ ಪೋಸ್ಟ್‌ವೊಂದನ್ನು ಮಾಡಿದ್ದಾರೆ. "ಕೆಕೆಆರ್ ವಿರುದ್ಧದ ಭರ್ಜರಿಯಾಗಿ ಜನ ಸಾಧಿಸಿದ ಆರ್‌ಸಿಬಿಗೆ ಅಭಿನಂದನೆಗಳು. ಕೊನೆಗೂ ಆರ್‌ಸಿಬಿ ಉತ್ತಮವಾಗಿ ಬೌಲಿಂಗ್ ಮಾಡಿದೆ ಎಂದು ವೀಕ್ಷಕ ವಿವರಣೆಗಾರರು ಹೇಳುವುದನ್ನು ಕೇಳಿ ತುಂಬಾ ಸಂತೋಷ ಆಯಿತು. ಬ್ಯಾಟಿಂಗ್ ಲೈನ್ ಅಪ್ ಸ್ವತಃ ಮಾತನಾಡುತ್ತದೆ," ಎಂದು ಮಲ್ಯ ತಮ್ಮ ಟ್ವಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ವಿಜಯ್ ಮಲ್ಯ ಅವರು 2008ರಲ್ಲಿ ಉದ್ಘಾಟನಾ ಆವೃತ್ತಿಯಿಂದ 8 ಸೀಸನ್‌ಗಳಲ್ಲಿ ಫ್ರಾಂಚೈಸಿಯ ಮಾಲೀಕ್ವವನ್ನು ಹೊಂದಿದವರಾಗಿದ್ದಾರೆ. ಇದೀಗ ಅವರು ಆರ್ಥಿಕ ವಂಚನೆ ಆರೋದ ಮೇಲೆ ಯುಕೆನಲ್ಲಿ ವಾಸ ಮಾಡುತ್ತಿದ್ದಾರೆ. ಆರ್ಥಿಕ ಅಪರಾಧಗಳಲ್ಲಿ ಭಾಗಿ ಆಗಿರುವ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರ ಮಾಡುವಂತೆ ಭಾರತ ಸರ್ಕಾರವು ತುಂಬಾ ವರ್ಷಗಳಿಂದ ಪ್ರಯತ್ನ ಮಾಡುತ್ತಲೇ ಇದೆ. ಆದರೆ, ಇದು ಸಾಧ್ಯವಾಗುತ್ತಿಲ್ಲ.
Congratulations to RCB for the emphatic win over KKR. Glad to hear the commentators finally say that RCB bowled well. The batting line up speaks for itself.
— Vijay Mallya (@TheVijayMallya) March 22, 2025
ಆರ್‌ಸಿಬಿ ಮೂರು ಬಾರಿ ಫೈನಲ್ ತಲುಪಿದೆ. ಆದರೂ ಐಪಿಎಲ್ ಟ್ರೋಫಿಯನ್ನು ಗೆದ್ದಿಲ್ಲ. ಇದೀಗ 18ನೇ ಆವೃತ್ತಿಯಲ್ಲಾದರೂ ಟ್ರೋಫಿ ಗೆಲ್ಲುತ್ತದೆ ಎಂಬ ತವಕದಲ್ಲಿ ಅಭಿಮಾನಿಗಳಿದ್ದಾರೆ. ಒಟ್ಟಿನಲ್ಲಿ ಆರಂಭದ ಪಂದ್ಯದಲ್ಲೇ ಆರ್‌ಸಿಬಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಅತ್ಯದ್ಭತವಾಗಿ ಪ್ರದರ್ಶನ್ ತೋರುವ ಮೂಲಕ ಕೆಕೆಆರ್ ವಿರುದ್ಧ ಗೆದ್ದು ಬೀಗಿದೆ. ಈ ಮೂಲಕ ಮುಂದಿನ ಪಂದ್ಯಗಳಲ್ಲೂ ಇನ್ನೂ ಚೆನ್ನಾಗಿ ಪ್ರದರ್ಶನ್ ತೋರಿ ಟ್ರೋಫಿ ಎತ್ತುವ ಭರವಸೆಯಲ್ಲಿ ಅಭಿಮಾನಿಗಳಿದ್ದಾರೆ.
ವಿಶ್ವದಲ್ಲೇ ಅತ್ಯಂತ ದೊಡ್ಡ ಲೀಗ್ ಐಪಿಎಲ್ ಆಗಿದೆ. ಮತ್ತೊಂದೆಡೆ ಐಪಿಎಲ್‌ನಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಗಿದೆ. ಇಲ್ಲಿಗೆ ಹೊಸದಾಗಿ ಆಡಲು ಬಂದವರು ಬರೀ ಆಟಕ್ಕೆಂದು ಬಂದಿರುತ್ತಾರೆ. ಆದ್ರೆ ದಿನ ಕಳೆದಂತೆ ಇಲ್ಲಿ ಅಭಿಮಾನಿಗಳು ತೋರುವ ಪ್ರೀತಿಗೆ ಎಂಥವರೂ ಮನಸೋತಿರುವ ಉದಾಹರಣೆಗಳಿವೆ. ಅಷ್ಟರ ಮಟ್ಟಿಗೆ ಇಲ್ಲಿನ ಅಭಿಮಾನಿಗಳು ಬೆಂಬಲ ನೀಡುತ್ತಾರೆ.












Click it and Unblock the Notifications