Get Updates
Get notified of breaking news, exclusive insights, and must-see stories!

RCB Win: ಪಿಂಕ್‌ ಸಿಟಿಯಲ್ಲಿ ಆರ್‌ಆರ್ ವಿರುದ್ಧ 'ಗ್ರೀನ್‌ ಜೆರ್ಸಿ' ಆರ್‌ಸಿಬಿ ಭರ್ಜರಿ ಗೆಲುವು

RCB Vs vs RR: ಐಪಿಎಲ್‌ 2025ನೇ ಆವೃತ್ತಿಯ 28ನೇ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ 9 ವಿಕೆಟ್‌ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಗ್ರೀನ್‌ ಜೆರ್ಸಿಯಲ್ಲಿ ಆರ್‌ಸಿಬಿ ಸೋಲುತ್ತದೆ ಎಂಬ ಭವಿಷ್ಯವನ್ನು ಸುಳ್ಳು ಮಾಡಿದಂತಾಗಿದೆ.

ಇಂದಿನ ಪಂದ್ಯ ಆರ್‌ಆರ್ ತವರು ಜೈಪುರದ ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆಯಿತು. ಟಾಸ್‌ ಗೆದ್ದ ಆರ್‌ಸಿಬಿ ತಂಡ ಬೌಲಿಂಗ್‌ ಆಯ್ಕೆ ಮಾಡಿಕೊಂಡಿತು. ಅದರಂತೆಯೇ ಮೊದಲು ಬ್ಯಾಟ್‌ ಮಾಡಿದ ರಾಜಸ್ಥಾನ್‌ ರಾಯಲ್ಸ್‌ ನಿಗದಿತ 20 ಓವರ್‌ಗಳ್ಲಿ 4 ವಿಕೆಟ್‌ಗಳ ಕಳೆದುಕೊಂಡು 173 ರನ್‌ಗಳನ್ನು ಕಲೆಹಾಕಿ 174 ರನ್‌ಗಳ ಗುರಿ ನೀಡಿತು. ಈ ಗುರಿ ಬೆನ್ನತ್ತಿದ್ದ ಆರ್‌ಸಿಬಿ ಕೇವಲ 17.3 ಓವರ್‌ಗಳಿಗೆ 1 ವಿಕೆಟ್‌ ಕಳೆದುಕೊಂಡು 175 ರನ್‌ ಕಲೆಹಾಕುವ ಮೂಲಕ ಗೆದ್ದು ಬೀಗಿತು.

IPL 2025 RCB Won by 9 Wickets against RR

ಆರ್‌ಆರ್‌ ವಿರುದ್ಧ ಆರ್‌ಸಿಬಿ ಆಟಗಾರರು ಗ್ರೀನ್‌ ಜೆರ್ಸಿ ಧರಿಸಿ ಕಳಕ್ಕಿಳಿದಿದ್ದರು. ಪ್ರತಿ ಆವೃತ್ತಿಯಲ್ಲೂ ಒಂದು ಪಂದ್ಯದಲ್ಲಿ ಆರ್‌ಸಿಬಿ ಈ ಜೆರ್ಸಿ ಧರಿಸುತ್ತಾರೆ. ಈ ಪ್ರಕ್ರಿಯೆಯನ್ನು 2011ರಿಂದ ಮುಂದುವರೆಸಿಕೊಂಡು ಬಂದಿದೆ. ಇನ್ನೂ ಈ ಜೆರ್ಸಿ ಧರಿಸಿದ ಬಹುತೇಕ ಪಂದ್ಯಗಳಲ್ಲಿ ಆರ್‌ಸಿಬಿ ಸೋಲು ಕಂಡಿದೆ. ಆದರೆ, ಇಂದು ಆರ್‌ಆರ್‌ ವಿರುದ್ಧ ಇದೇ ಜೆರ್ಸಿಯಲ್ಲಿ ಕಣಕ್ಕಿಳಿದು ಆರ್‌ಸಿಬಿ ಭರ್ಜರಿ ಜಯ ಸಾಧಿಸಿತು. ಈ ಹಿಂದೆ ಅಂದರೆ 2023ರಲ್ಲಿಯೂ ಗ್ರೀನ್‌ ಜೆರ್ಸಿಯಲ್ಲಿ ಇದೇ ತಂಡದ ವಿರುದ್ಧ ವಿರುದ್ಧ ಗೆಲುವು ಸಾಧಿಸಿತ್ತು.

ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಅವರ ಅರ್ಧಶತಕಗಳ ಸಹಾಯದಿಂದ ಆರ್‌ಸಿಬಿ ತಂಡವು ರಾಜಸ್ಥಾನ್ ರಾಯಲ್ಸ್ ತಂಡವನ್ನು ಒಂಬತ್ತು ವಿಕೆಟ್‌ಗಳಿಂದ ಸೋಲಿಸಿತು. ಆರ್‌ಸಿಬಿ ಪರ ಸಾಲ್ಟ್ 33 ಎಸೆತಗಳಲ್ಲಿ 5 ಬೌಂಡರಿ ಮತ್ತು 6 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ 65 ರನ್‌ ಕಲೆಹಾಕಿದರು.

ವಿರಾಟ್‌ ಕೊಹ್ಲಿ 45 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್‌ಗಳೊಂದಿಗೆ 62 ರನ್‌ಗಳಿಸಿ ಅಜೇಯರಾಗಿ ಉಳಿದರು. ಅಷ್ಟೇ ಅಲ್ಲದೆ, ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದ ದೇವದತ್ ಪಡಿಕ್ಕಲ್ 28 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಿತ ಅಜೇಯ 40 ರನ್ ಗಳಿಸಿದರು.

ಆರ್‌ಆರ್‌ನಲ್ಲಿ ಯಾರೆಲ್ಲಾ ಎಷ್ಟು ರನ್‌ ಬಾರಿಸಿದರು?: ಆರ್‌ಆರ್ ಪರ ಯಶಸ್ವಿ ಜೈಸ್ವಾಲ್‌ 47 ಬಾಲ್‌ಗಳಿಗೆ 75 ರನ್‌ಗಳನ್ನು ಬಾರಿಸಿದರು. ಸಂಜು ಸ್ಯಾಮ್ಸನ್‌ 15 (15), ರಿಯಾನ್‌ ಪರಾಗ್‌ 30 (22), ದೃವ್‌ ಜುರೇಲ್‌ 35 (23), ಹಿಟ್ಮೇಯರ್ 9 (8), ನಿತೀಶ್ ರಾಣ ಕೊನೆ ಎಸೆತದಲ್ಲಿ ಒಂದು ಬೌಂಡರಿ ಸಿಡಿಸುವ ಮೂಲಕ ತಂಡದ ಮೊತ್ತವನ್ನು 170ರ ಗಡಿ ದಾಟಿಸಿದರು. ಇಲ್ಲಿವೆಗೂ ಬರಲು ಯಶಸ್ವಿ ಜೈಸ್ವಾಲ್‌ ಕಲೆಹಾಕಿದ ಬೃಹತ್ ರನ್‌ಗಳೇ ಕಾರಣ.

ಆರ್‌ಸಿಬಿಯಲ್ಲಿ ಯಾರಿಗೆ ಎಷ್ಟು ವಿಕೆಟ್?: ಮತ್ತೊಂದೆಡೆ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಪರ ಬೌಲಿಂಗ್‌ ಮಾಡಿದ ಭುವನೇಶ್ವರ್ ಕುಮಾರ್‌, ಯಶ್‌ ದಯಾಳ್‌, ಜೋಶ್ ಹಜಲ್‌ವುಡ್‌, ಕೃನಾಲ್‌ ಪಾಂಡೆ ತಲಾ ಒಂದು ವಿಕೆಟ್‌ ಕಬಳಿಸಿದರು. ಈ ಮೂಲಕ ಆರ್‌ಆರ್‌ ತಂಡದ ನಾಲ್ಕು ವಿಕೆಟ್ ಕಿತ್ತು 173 ರನ್‌ಗಳಿಗೆ ಕಟ್ಟಿಹಾಕಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+