IPL 2025: ಐಪಿಎಲ್ 2025ರಲ್ಲಿ ಮತ್ತೆ ಮ್ಯಾಚ್ ಫಿಕ್ಸಿಂಗ್: ಬಿಸಿಸಿಐ ಹೇಳಿದ್ದೇನು ?

ಐಪಿಎಲ್ 2025ರ ಮೇಲೆ "ಮ್ಯಾಚ್ ಫಿಕ್ಸಿಂಗ್" ಕರಿನೆರಳು ಶುರುವಾಗಿದೆ. ಈ ಸಂಬಂಧ ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಮತ್ತು ಭದ್ರತಾ ಘಟಕ (ACSU) ಖಡಕ್‌ ಎಚ್ಚರಿಕೆ ಕೊಟ್ಟಿದೆ. ಐಪಿಎಲ್‌ನಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿ ಬರುತ್ತಿರುವುದು ಇದೇ ಮೊದಲೇನು ಅಲ್ಲ. ಸಿಎಸ್‌ಕೆ ಬರೋಬ್ಬರಿ 2 ವರ್ಷಗಳ ಕಾಲ ಬ್ಯಾನ್ ಆಗಿತ್ತು. ಇದೀಗ ಈ ಸರಣಿಯಲ್ಲಿ ಸಿಎಸ್‌ಕೆ ಸರಣಿ ಮ್ಯಾಚ್‌ಗಳಲ್ಲಿ ಸೋಲುತ್ತಿರುವಾಗಲೇ ಮತ್ತೊಂದು ಪ್ರಮುಖ ವಿಷಯ ಚರ್ಚೆಯ ಮುನ್ನೆಲೆಗೆ ಬಂದಿದೆ. ಈ ಬಾರಿ ಐಪಿಎಲ್‌ನಲ್ಲಿ ಆರ್‌ಸಿಬಿ ಉತ್ತಮ ಫಾರ್ಮ್‌ನಲ್ಲಿದೆ. ಈ ರೀತಿ ಇರುವಾಗಲೇ ಶಾಕಿಂಗ್‌ ಅಂಶವೊಂದು ಬೆಳಕಿಗೆ ಬಂದಿದೆ.

ಐಪಿಎಲ್ 2025ರಲ್ಲಿ ಮ್ಯಾಚ್‌ ಫಿಕ್ಸಿಂಗ್ ಪ್ರಯತ್ನಗಳು ನಡೆದಿವೆ ಎನ್ನುವ ಆರೋಪಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಬಿಸಿಸಿಐ ಅಲರ್ಟ್‌ ಆಗಿದೆ. ಐಪಿಎಲ್‌ನಲ್ಲಿ ಮ್ಯಾಚ್‌ ಫಿಕ್ಸಿಂಗ್‌ ಪ್ರಯತ್ನಗಳು ನಡೆದಿತ್ತು ಎನ್ನುವ ಆರೋಪಗಳು ಕೇಳಿ ಬರುತ್ತಿರುವುದು ಇದೇ ಮೊದಲೇನು ಅಲ್ಲ. ಆದರೆ, ಈ ಬಾರಿ ಭಾರೀ ಆಕ್ರೋಶಕ್ಕೆ ಕಾರಣವಾಗಿರುವುದು ಟೂರ್ನಿಯಲ್ಲಿ ಈ ಹಿಂದೆ ಅಷ್ಟೇನು ಸಾಧನೆ ಮಾಡದೆ ತಂಡಗಳು ಅತ್ಯುತ್ತಮ ಪ್ರದರ್ಶನ ನೀಡುವಾಗಲೇ ಈ ಆರೋಪ ಕೇಳಿ ಬಂದಿರುವುದು. ಅದರಲ್ಲೂ ಕೆಲವೊಂದು ಪ್ರಮುಖ ಟೀಮ್‌ಗಳು ರ್ಯಾಂಕ್‌ ಟೇಬಲ್‌ನಲ್ಲಿ ಕೆಳಗಿವೆ. ಈ ರೀತಿ ಇರುವಾಗಲೇ ಪ್ರಮುಖ ಆರೋಪವೊಂದು ಕೇಳಿ ಬಂದಿದೆ. ಈ ವಿಷಯ ಆರ್‌ಸಿಬಿ ಸೇರಿದಂತೆ ವಿವಿಧ ತಂಡಗಳ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ.

IPL 2025 Match Fixing Shock What Did BCCI Say

ಈ ಟೂರ್ನಿಯಲ್ಲಿ ಸಿಎಸ್‌ಕೆ ಸರಣಿ ಸೋಲು ಕಂಡಿದೆ. ಐಪಿಎಲ್‌ ಟೂರ್ನಿಯಲ್ಲಿ ಒಮ್ಮೆಯಾದರೂ ಗೆಲ್ಲಬೇಕು ಎಂದು ಆರ್‌ಸಿಬಿ ಪುರುಷರ ತಂಡವು ಪ್ರಯತ್ನಿಸುತ್ತಿದೆ. ಈ ತಪಸ್ಸು ಇಂದು ನೆನ್ನೆಯದಲ್ಲ ಬರೋಬ್ಬರಿ 17 ವರ್ಷಗಳದ್ದು. ಆದರೆ, ಮ್ಯಾಚ್‌ಫಿಕ್ಸಿಂಗ್‌ ಭೂತ ಭೀತಿಯನ್ನುಂಟು ಮಾಡಿದೆ. ಈ ಹಿಂದೆ ಟೂರ್ನಿಯಲ್ಲಿ 4 ನಾಲ್ವರು ಆಟಗಾರರು ಫಿಕ್ಸಿಂಗ್‌ನಲ್ಲಿ ಶಾಮೀಲಾಗಿರುವ ಆರೋಪ ಕೇಳಿ ಬಂದಿತ್ತು. ಇದಾದ ಮೇಲೆ ರಾಜಸ್ಥಾನ್‌ ರಾಯಲ್ಸ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳನ್ನು ಎರಡು ವರ್ಷಗಳ ಮಟ್ಟಿಗೆ ಬ್ಯಾನ್ ಮಾಡಲಾಗಿತ್ತು. ಇದೀಗ ಮತ್ತೆ ಐಪಿಎಲ್‌ ಟೂರ್ನಿಯಲ್ಲಿ ಮ್ಯಾಚ್‌ ಫಿಕ್ಸಿಂಗ್‌ ವಾಸನೆ ಬರುವುದಕ್ಕೆ ಶುರುವಾಗಿದ್ದು, ಲೀಗ್‌ನ ಎಲ್ಲಾ 10 ತಂಡಗಳಿಗೂ ವಾರ್ನಿಂಗ್ ಕೊಡಲಾಗಿದೆ.

Take a Poll

ಈಗ ಕೇಳಿ ಬಂದಿರುವ ಆರೋಪವೇನು: ಇನ್ನು ಐಪಿಎಲ್ 2025ರಲ್ಲಿ 31 ಪಂದ್ಯಗಳು ಪೂರ್ಣಗೊಂಡು ಟೂರ್ನಿ ಮಧ್ಯಂತರದ ಸಮಯದಲ್ಲಿ ಗಂಭೀರ ವಿಷಯವೊಂದು ಚರ್ಚೆಯ ಮುನ್ನೆಲೆಗೆ ಬಂದಿದ್ದು. ಈ ವಿಷಯವನ್ನು ಬಿಸಿಸಿಐ ಗಂಭೀರವಾಗಿ ಪರಿಗಣಿಸಿದೆ. ಇನ್ನು ಈ ಬಾರಿ ಟೂರ್ನಿಯಲ್ಲಿ ಭ್ರಷ್ಟಾಚಾರ ಹಾಗೂ ಫಿಕ್ಸಿಂಗ್ ಪ್ರಯತ್ನಗಳ ಬಗ್ಗೆ ಮಾಹಿತಿ ಸಿಕ್ಕಿರುವುದಾಗಿ ACSU ಹೇಳಿದೆ. ಅಲ್ಲದೇ 10 ತಂಡಗಳ ಎಲ್ಲಾ ಆಟಗಾರರಿಗೂ ಯಾರಾದರೂ ಸಂಪರ್ಕ ಮಾಡಿದರೆ ಏನು ಮಾಡಬೇಕು ಎಂದು ಸೂಚನೆಗಳನ್ನು ನೀಡಲಾಗಿದೆ ಎಂದು ಹೇಳಲಾಗಿದೆ.

ಐಪಿಎಲ್‌ನ ಆಟಗಾರರು, ತರಬೇತಿದಾರರು, ಸಹಾಯಕ ಸಿಬ್ಬಂದಿ ಹಾಗೂ ತಂಡಗಳ ಮಾಲೀಕರು ಸೇರಿದಂತೆ ಐಪಿಎಲ್‌ನ ಭಾಗವಾಗಿರುವವರೊಂದಿಗೆ ಅಭಿಮಾನಿಗಳಂತೆ ನಟಿಸಿ ಕಾಸ್ಲಿ ಗಿಫ್ಟ್‌ ಕೊಟ್ಟು ಫಿಕ್ಸಿಂಗ್‌ಗಳ ಪ್ರಯತ್ನ ನಡೆದಿದೆ ಎಂದು ಹೇಳಲಾಗಿದೆ. ಹೀಗಾಗಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಹೈದರಾಬಾದ್ ಮೂಲದ ಉದ್ಯಮಿಯೊಬ್ಬರು ಮ್ಯಾಚ್ ಫಿಕ್ಸಿಂಗ್‌ಗೆ ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+