IPL 2025: ಐಪಿಎಲ್ 2025 ಟೂರ್ನಿ ರದ್ದು ಬಗ್ಗೆ ಮಹತ್ವದ ಮಾಹಿತಿ
IPL 2025: ಭಾರತ-ಪಾಕಿಸ್ತಾನದ ನಡುವೆ ಪರಿಸ್ಥಿತಿ ಕ್ಷಣ ಕ್ಷಣಕ್ಕೂ ಉದ್ವಿಗ್ನಗೊಳ್ಳುತ್ತಿದೆ. ಈ ಹಿನ್ನೆಲೆ ಈಗಾಗಲೇ ಮುಂಜಾಗ್ರತಾ ಕ್ರಮವಾಗಿ ಐಪಿಎಲ್ 2025 ಟೂರ್ನಿಯ ಹಲವು ಪಂದ್ಯಗಳನ್ನು ಸ್ಥಳಾಂತರ ಮಾಡಲಾಗಿದೆ. ಒಂದು ವೇಳೆ ಇದೇ ಪರಿಸ್ಥಿತಿ ಮುಂದುವರೆದರೆ, ಈ ಬಾರಿಯ ಪಂದ್ಯಾವಳಿಯೇ ಮುಂದೂಡಿಕೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಐಪಿಎಲ್ ಮುಖ್ಯಸ್ಥ ಹೇಳಿದ್ದೇನು ಹಾಗೂ ಬಿಸಿಸಿಐ ನಿಲುವೇನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ವಿಶ್ವದಲ್ಲೇ ಅತ್ಯಂತ ದೊಟ್ಟ ಲೀಗ್ ಅಂದರೆ ಅದು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆಗಿದೆ. ಇದೀಗ ಈ ಬಾರಿಯ ಅಂದರೆ 18ನೇ ಸೀಸನ್ ಮುಗಿಯುವ ಹಂತದಲ್ಲೇ ಟೂರ್ನಿ ರದ್ದಾಗಿ ಮುಂದೂಡಿಕೆಯಾಗುವ ಆತಂಕ ಎದುರಾಗಿದೆ. ಇದಕ್ಕೆಲ್ಲ ಪ್ರಮುಖ ಕಾರಣ ನರಿ ಬುದ್ಧಿ ಪಾಪಿ ಪಾಕಿಸ್ತಾನ. ಇದೀಗ ಭಾರತೀಯ ಸೇನೆಯು ಕೂಡ ಇನ್ನೂ ಬುದ್ಧಿ ಕಲಿಯದೇ ಪಾಪಿ ಪಾಕ್‌ಗೆ ತಕ್ಕ ತಿರುಗೇಟು ಕೊಡುತ್ತಲೇ ಇದೆ. ಆದರೂ ಐಪಿಎಲ್‌ನಲ್ಲಿ ಬರೀ ದೇಶೀಯ ಆಟಗಾರರು ಅಷ್ಟೇ ಅಲ್ಲದೆ, ವಿದೇಶಿ ಆಟಗಾರರು ಆಡುತ್ತಿದ್ದಾರೆ.

ಆದ್ದರಿಂದ ಅವರ ರಕ್ಷಣೆ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಟೂರ್ನಿ ಮುಂದೂಡಿಕೆ ಮಾಡುವ ಕ್ರಮವನ್ನು ತೆಗೆದುಕೊಂಡರೂ ಆಶ್ಚರ್ಯವಿಲ್ಲ. ಈಗಾಗಲೇ ಗುರುವಾರ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯವನ್ನು ಕೂಡ ತುರ್ತು ಸಭೆ ನಡೆಸಿ ಮುಂಜಾಗ್ರತಾ ಕ್ರಮವಾಗಿ ರದ್ದು ಮಾಡಲಾಗಿದೆ. ಹಾಗೆಯೇ ಇಂದು ಬಿಸಿಸಿಐ ನಡೆಸುವ ಮಹತ್ವದ ಸಭೆಯಲ್ಲಿ ಪಂದ್ಯ ಮುಂದೂಡಿಕೆ ಅಥವಾ ಪಂದ್ಯಗಳ ಸ್ಥಳಾಂತರ ಮಾಡುವ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಇದೀಗ ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿರುವ ಹಿನ್ನೆಲೆ ಸದ್ಯದ ಮಟ್ಟಿಗೆ ಎಲ್ಲಾ ವಿದೇಶಿ ಆಟಗಾರರನ್ನು ವಾಪಸ್ ಕಳುಹಿಸುವ ಸಾಧ್ಯತೆ ಹೆಚ್ಚಾಗಿದೆ. ಈ ಕುರಿತು ಇಂದು ಬಿಸಿಸಿಐ ತುರ್ತು ಸಭೆ ಕರೆದಿದೆ. ಈಹಾಹಲೇ ಗುರುವಾರ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವನ್ನು ಮುಂದೂಡಿಕೆ ಮಾಡಲಾಗಿದೆ.
ಪಂದ್ಯ ರದ್ದಾಗಿದ್ದರಿಂದ ಈ ಬಾರಿಯ ಟೂರ್ನಿಯೂ ರದ್ದಾಗುವ ಸಾಧ್ಯತೆಯಿದೆ. ಗುರುವಾರ ಧರ್ಮಶಾಲಾದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವನ್ನು ರಾತ್ರಿ 9:35ಕ್ಕೆ ನಿಲ್ಲಿಸಲಾಯಿತು. ಈ ಸ್ಥಳವು ಪಠಾಣ್‌ಕೋಟ್‌ನಿಂದ ಸುಮಾರು 90 ಕಿಲೋಮೀಟರ್ ದೂರದಲ್ಲಿದೆ.
ಪಠಾಣ್‌ಕೋಟ್‌ನಲ್ಲಿ ಗಡಿ ಆಚೆಯಿಂದ ವಾಯು ದಾಳಿಗಳು ನಡೆದವು. ಈ ಹಿನ್ನೆಲೆ 10.1 ಓವರ್‌ಗಳ ನಂತರ ಪಂದ್ಯವನ್ನು ರದ್ದು ಮಾಡಲಾಯಿತು. ಬಳಿಕ ಐಪಿಎಲ್ 2025 ಟೂರ್ನಿ ಬಗ್ಗೆ ಪರಿಗಣಿಸಲು ಬಿಸಿಸಿಐ ಮಂಡಳಿ ತುರ್ತು ಸಭೆ ನಡೆಸಿತು. ಇನ್ನು ಇಂದು ಕೂಡ ಸಭೆ ನಡೆಸಲಿದ್ದು, ಈ ವೇಳೆ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಐಪಿಎಲ್ ಪಂದ್ಯವಾಳಿ ನಿಂತಿದೆ.
ಇಂದು (ಮೇ 9) ಬಿಸಿಸಿಐ ಮಹತ್ವದ ಸಭೆ ನಡೆಸಲಿದ್ದು, ಐಪಿಎಲ್ ಪಂದ್ಯಾವಳಿಗಳನ್ನು ನಡೆಸಬೇಕಾ ಅಥವಾ ಮುಂದೂಡಿಕೆ ಮಾಡಬೇಕಾ ಎನ್ನುವ ಬಗ್ಗೆ ನಿರ್ಧಾರ ಆಗಲಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಐಪಿಎಲ್ ಮುಖ್ಯಸ್ಥ ಅರುಣ್ ಧಮಾಲ್, ಪರಿಸ್ಥಿತಿಯನ್ನು ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ನಮಗೆ ಕೇಂದ್ರ ಸರ್ಕಾರದಿಂದ ಯಾವುದೇ ನಿರ್ದೇಶನ ಬಂದಿಲ್ಲ. ಸದ್ಯದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಆಟಗಾರರ ಸುರಕ್ಷತೆ ದೃಷ್ಟಿಯಿಂದ ಧರ್ಮಶಾಲಾದಲ್ಲಿನ ಪಂದ್ಯವನ್ನು ಅರ್ಧಕ್ಕೆ ರದ್ದುಪಡಿಸಲಾಯಿತು. ಬಳಿಕ ಅವರನ್ನು ತಕ್ಷಣ ಹೋಟೆಲ್‌ಗೆ ಕಳುಹಿಸಲಾಯಿತು. ಈ ಪ್ರದೇಶದಲ್ಲಿ ವಿಮಾನ ನಿಲ್ದಾಣಗಳನ್ನ ಬಂದ್ ಮಾಡಿರುವ ಕಾರಣ ಬಿಸಿಸಿಐ ಎರಡು ತಂಡಗಳ ಆಟಗಾರರನ್ನು ರೈಲಿನ ಮೂಲಕ ದೆಹಲಿಗೆ ತಲುಪಿಸುವ ಪ್ರಯತ್ನವನ್ನು ಬಿಸಿಸಿಐ ಮಾಡಿದೆ ಎಂದು ಹೇಳಿದರು.
ಅಲ್ಲದದೆ, ನಾವು ಈ ಪರಿಸ್ಥಿತಿ ಬಗ್ಗೆ ವಿಚಾರಣೆ ಮಾಡುತ್ತಿದ್ದೇವೆ. ಸರ್ಕಾರದೊಂದಿಗೆ ಸಮಾಲೋಚಿಸುತ್ತಿದ್ದು, ಐಪಿಎಲ್ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಮಾಹಿತಿ ನೀಡಿದ್ದಾರೆ. ಈ ವೇಳೆ ಎಲ್ಲಾ ಎಲ್ಲಾ ಆಟಗಾರರು, ಅಭಿಮಾನಿಗಳು ಮತ್ತು ಫ್ರಾಂಚೈಸಿಯ ಸುರಕ್ಷತೆ ನಮ್ಮ ಆದ್ಯತೆಯಾಗಿದೆ ಅಂತಲೂ ತಿಳಿಸಿದ್ದಾರೆ.
ಈ ಬಾರಿ ಅಂದರೆ 18ನೇ ಆವೃತ್ತಿಯ ಐಪಿಎಲ್ ಟೂರ್ನಿ ಮುಗಿಯುವ ಹಂತವನ್ನು ತಲುಪಿದೆ. ಮೇ 25ಕ್ಕೆ ಫೈನಲ್ ಇದ್ದು, ಅಂದು ಎಲ್ಲಾ ಪಂದ್ಯಗಳು ಮುಕ್ತಾಯವಾಗಲಿದ್ದವು. ಆದರೆ, ಇದೀಗ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆ ಎಲ್ಲಾರ ಸುರಕ್ಷತೆ ದೃಷ್ಟಿಯಿಂದ ಐಪಿಎಲ್ ಮುಂದೂಡಿಕೆ ಬಗ್ಗೆ ಬಿಸಿಸಿಐ ಇಂದು ಮಹತ್ವದ ಸಭೆ ನಡೆಸಲಿದೆ. ಏನು ನಿರ್ಧಾರ ಹೊರಹಾಕುತ್ತದೆಯೋ ಎಂದು ಕಾದುನೋಡಬೇಕಿದೆ.
ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ದಾಳಿ ನಡೆಸಿ 26 ಮಂದಿ ಅಮಾಯಕರ ಬಲಿ ಪಡೆದಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಭಾರತ ಪಾಕ್ ಉಗ್ರರ 9 ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿ ಧ್ವಂಸ ಮಾಡಿತ್ತು. ಇದೀಗ ಸದ್ಯ ಎರಡೂ ರಾಷ್ಟ್ರಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಐಪಿಎಲ್ ಪಂದ್ಯಗಳ ಮೇಲೆ ಇದಯ ಪರಿಣಾಮ ಬೀರಿದೆ. ಆಟಗಾರರ ಸುಕ್ಷತೆ ದೃಷ್ಟಿಯಿಂದ ಈಗಾಗಲೇ ನಿನ್ನೆಯ ಪಂದ್ಯವನ್ನು ರದ್ದು ಮಾಡಲಾಗಿದೆ. ಇಂದು ಟೂರ್ನಿ ಬಗ್ಗೆ ಬಿಸಿಸಿಐ ತೆಗೆದುಕೊಳ್ಳುವ ನಿರ್ಧಾರದತ್ತ ಎಲ್ಲರ ಚಿತ್ತ ನೆಟ್ಟಿದೆ.












Click it and Unblock the Notifications