IPL 2024 Time Table: ಐಪಿಎಲ್ ವೇಳಾಪಟ್ಟಿ ಪ್ರಕಟ- ಪಂದ್ಯ, ದಿನಾಂಕ, ಸ್ಥಳ, ವೇಳೆ ಕುರಿತ ಪೂರ್ಣ ಮಾಹಿತಿ
ಐಪಿಎಲ್ 2024 ವೇಳಾಪಟ್ಟಿ ಪ್ರಕಟವಾಗಿದ್ದು, ಬದ್ಧ ವೈರಿಗಳಾದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಂ ನಡುವೆ ಮೊದಲ ಪಂದ್ಯ ನಡೆಯಲಿದೆ. ಕ್ರಿಕೆಟ್ ಪ್ರೇಮಿಗಳ ಪಾಲಿನ ರಿಯಲ್ ಫೆಸ್ಟಿವಲ್ ಅಂತಾನೆ, ಐಪಿಎಲ್ ಟೂರ್ನಿಗೆ ಬಿರುದು ನೀಡಲಾಗಿದೆ. ಹೀಗೆ ಐಪಿಎಲ್ 2024 ಸಿಕ್ಕಾಪಟ್ಟೆ ಕುತೂಹಲವನ್ನೂ ಕೆರಳಿಸಿತ್ತು. ಇದೀಗ ಐಪಿಎಲ್ 2024ರ ಸಂಪೂರ್ಣ ವೇಳಾಪಟ್ಟಿ ರಿಲೀಸ್ ಆಗಿದೆ.
2008ರಲ್ಲಿ ಶುರುವಾದ ಐಪಿಎಲ್ ಹವಾ ಇದೀಗ 17ನೇ ಆವೃತ್ತಿಗೆ ಬಂದು ತಲುಪಿದೆ. ಹೀಗೆ ಕಳೆದ ಸುಮಾರು 16 ವರ್ಷಗಳಿಂದ ದೊಡ್ಡ ಮನರಂಜನೆ ನೀಡಿದ್ದ ಐಪಿಎಲ್ ಟೂರ್ನಿಗೆ, ಇದೀಗ 17ನೇ ವರ್ಷ ತುಂಬುತ್ತಿದೆ. ಹೀಗಾಗಿ ಐಪಿಎಲ್ 2024 ಅದ್ಧೂರಿಯಾಗಿ ಸೆಲೆಬ್ರೇಟ್ ಮಾಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಇದೀಗ ವೇಳಾಪಟ್ಟಿ, ಅಂದರೆ ಟೈಂ ಟೇಬಲ್ ಪ್ರಕಟ ಆಗಿದೆ. ಹಾಗಾದರೆ ಆರ್‌ಸಿಬಿ ಬೆಂಗಳೂರು ಸೇರಿ ಐಪಿಎಲ್ ಟೂರ್ನಿಯಲ್ಲಿ ಯಾವ, ಯಾವ ತಂಡದ ಮ್ಯಾಚ್ ಯಾವಾಗ ಇದೆ? ಬನ್ನಿ ಸಂಪೂರ್ಣ ಮಾಹಿತಿ ತಿಳಿಯೋಣ.

ಐಪಿಎಲ್ 17ನೇ ಆವೃತ್ತಿಗೆ ಕೌಂಟ್‌ಡೌನ್
ಅಷ್ಟಕ್ಕೂ ಇದೀಗ ಸಿಕ್ಕಿರುವ ಮಾಹಿತಿ ಪ್ರಕಾರ, ಬಹು ನಿರೀಕ್ಷಿತ 17ನೇ ಆವೃತ್ತಿ ಐಪಿಎಲ್‌ಗೆ ಅಧಿಕೃತ ಕೌಂಟ್‌ಡೌನ್ ಶುರುವಾಗಿದೆ. ಹೀಗಾಗಿ ಇಂಡಿಯನ್ ಪ್ರೀಮಿಯರ್ ಲೀಗ್ ವೇಳಾಪಟ್ಟಿ ಭಾರತೀಯ ಕ್ರಿಕೆಟ್ ನಿಯಂತ್ರಂಣ ಮಂಡಳಿ ಪ್ರಕಟಿಸಿದೆ. 2024ರ ಐಪಿಎಲ್ ಟೂರ್ನಿ ಮಾರ್ಚ್ 22 ರಿಂದ ಆರಂಭವಾಗಲಿದೆ, ಉದ್ಘಾಟನೆ ಪಂದ್ಯದಲ್ಲೇ ಹಾಲಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ರಿಕೆಟ್ ತಂಡಗಳ ನಡುವೆ ಫೈಟ್ ಮಾಡಿ ರಂಜಿಸಲಿವೆ. ಚೆನ್ನೈನ ಚಿದಂಬರಂ ಕ್ರಿಕೆಟ್ ಮೈದಾನದಲ್ಲಿ ಕಾದಾಟ ನಡೆಯಲಿದೆ.
🚨 𝗦𝗧𝗢𝗣 𝗧𝗛𝗘 𝗣𝗥𝗘𝗦𝗦 - TATA #IPL2024 Schedule is HERE! 🤩
— Star Sports (@StarSportsIndia) February 22, 2024
Get ready for the thrill, excitement and fun to begin! Save this post so you don't have to search for it again 🔍
It's #CSKvRCB, @msdhoni 🆚 @imVkohli in the opener! Who's your pick ? 👀#IPLSchedule #IPLonStar pic.twitter.com/oNLx116Uzi
'ಈ ಸಲ ಕಪ್ ನಮ್ದೆ'
ಬೆಂಗಳೂರು ತಂಡ ಐಪಿಎಲ್ ಟೂರ್ನಿ ಗೆದ್ದೇ ಗೆಲ್ಲುತ್ತೆ ಅಂತಾ ಅಭಿಮಾನಿಗಳು ಕಾಯುತ್ತಾ ಕೂತಿದ್ದಾರೆ. ಹೀಗಾಗಿಯೇ 'ಈ ಸಲ ಕಪ್ ನಮ್ದೆ' ಘೋಷ ವಾಖ್ಯ ಕೂಡ ವೈರಲ್ ಆಗಿದೆ ಹಾಗೂ ಆರ್‌ಸಿಬಿ ಬೆಂಗಳೂರು ತಂಡದ ಅಭಿಮಾನಿಗಳು ತಮ್ಮ ತಂಡದ ಗೆಲುವಿಗೆ ಕಾಯ್ತಾ ಕೂತಿದ್ದಾರೆ. ಅವರ ಆಸೆ ಈ ವರ್ಷ ನೆರವೇರುತ್ತಾ? ಅನ್ನೋ ಕುತೂಹಲ ಕೂಡ ಡಬಲ್, ಆಗುತ್ತಿದೆ. ಅಲ್ಲದೆ ಈ ಬಾರಿ ಕಪ್ ಗೆಲ್ಲಲು ಆರ್‌ಸಿಬಿ ತಂಡ ಕೂಡ ಎಲ್ಲಾ ರೀತಿ ಎಫರ್ಟ್ಸ್ ಹಾಕುತ್ತಿದೆ. ಹೀಗಾಗಿ ಭಾರಿ ಕುತೂಹಲ ಕೆರಳಿಸಿದೆ ಐಪಿಎಲ್ 2024.

ಚಾಂಪಿಯನ್ ಆಗಿತ್ತು ಚೆನ್ನೈ ತಂಡ!
ಇನ್ನ ಮತ್ತೊಂದ್ಕಡೆ ಲೋಕಸಭೆ ಚುನಾವಣೆ ಹಿನ್ನೆಲೆ ಮೊದಲ 15 ದಿನ ನಡೆಯುವ 21 ಮ್ಯಾಚ್ ವೇಳಾಪಟ್ಟಿ ಪ್ರಕಟಿಸಲಾಗಿದೆ. ಸಾರ್ವತ್ರಿಕ ಚುನಾವಣೆ ದಿನಾಂಕ ಪ್ರಕಟವಾದ ಬಳಿಕ ಮುಂದಿನ ವೇಳಾಪಟ್ಟಿ ಪ್ರಕಟಿಸುವುದಾಗಿ ಬಿಸಿಸಿಐ ಈಗ ಸ್ಪಷ್ಟಪಡಿಸಿದೆ. 2019ರ ಲೋಕಸಭಾ ಚುನಾವಣೆ ಅವಧಿಯಲ್ಲೂ ಇದೇ ರೀತಿ ವೇಳಾಪಟ್ಟಿ ರಿಲೀಸ್ ಮಾಡಲಾಗಿತ್ತು. ಇನ್ನು ಕಳೆದ ಅವಧಿಗೆ, ಅಂದ್ರೆ 2023ರ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.
ಒಟ್ನಲ್ಲಿ ಬಹು ನಿರೀಕ್ಷಿತ ಐಪಿಎಲ್ 2024 ಗೆ ಇದೀಗ ರಣಕಹಳೆ ಮೊಳಗಿದ್ದು, ಅಭಿಮಾನಿ ಬಳಗ ಕೂಡ ಕಾಯುತ್ತಿದೆ. ಇನ್ನೇನು ಕೆಲವೇ ದಿನದಲ್ಲಿ ಐಪಿಎಲ್ ಹಂಗಾಮ ಮೊಳಗಲಿದೆ. ಹೀಗಾಗಿ ಇದಕ್ಕೆ ಬೇಕಾದ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ ಬಿಸಿಸಿಐ. ಕ್ರೀಡಾಂಗಣ ಸೇರಿದಂತೆ ಭದ್ರತೆಗೆ ಅಗತ್ಯ ಇರುವ ಎಲ್ಲಾ ರೀತಿ ಕ್ರಮ ಕೈಗೊಳ್ಳಲಾಗಿದೆ.












Click it and Unblock the Notifications