IPL 2023: ಬೌಲರ್‌ಗಳಿಗೆ ಈತ ದೊಡ್ಡ ಸವಾಲು: ಸಿಎಸ್‌ಕೆ ಯುವ ಆಟಗಾರನ ಬಗ್ಗೆ ಮೈಕಲ್ ಹಸ್ಸಿ ಮೆಚ್ಚುಗೆ
ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟಿಂಗ್ ಕೋಚ್ ಮೈಕಲ್ ಹಸ್ಸಿ ಸಿಎಸ್‌ಕೆ ತಂಡದ ಯುವ ಆಟಗಾರ ಋತುರಾಜ್ ಗಾಯಕ್ವಾಡ್ ಬಗ್ಗೆ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ. ಸಿಎಸ್‌ಕೆ ತಂಡದ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುತ್ತಿರುವ ಋತುರಾಜ್ ಗಾಯಕ್ವಾಡ್ ಬೌಲರ್‌ಗಳ ಕಾರ್ಯವನ್ನು ಮತ್ತಷ್ಟು ಕಠಿಣಗೊಳಿಸುತ್ತಿದ್ದಾರೆ ಎಂದಿದ್ದಾರೆ.
ಋತುರಾಜ್ ಗಾಯಕ್ವಾಡ್ ಈ ಬಾರಿಯ ಐಪಿಎಲ್ ಆವೃತ್ತಿಯ ಆರಂಭಿಕ ಎರಡು ಪಂದ್ಯದಲ್ಲಿಯೂ ಅದ್ಭುತ ಪ್ರದರ್ಶನ ನೀಡಿದ್ದು ಅಬ್ಬರಿಸಿದ್ದಾರೆ. ಎರಡು ಪಂದ್ಯದಲ್ಲಿಯೂ ಅರ್ಧ ಶತಕ ಸಿಡಿಸಿರುವ ಋತುರಾಜ್ ಗಾಯಕ್ವಾಡ್ ಸಿಎಸ್‌ಕೆ ಪರವಾಗಿ ಭರ್ಜರಿ ಪ್ರದರ್ಶನ ನಿಡುವ ವಿಶ್ವಾಸ ಮೂಡಿಸಿದ್ದಾರೆ. ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ 92 ರನ್‌ಗಳಿಸಿದ್ದ ಋತು ಲಕ್ನೋ ಸೂಪರ್ ಜೈಂಟ್ಸ್ ತಂಡದ ವಿರುದ್ಧ 57 ರನ್‌ಗಳಿಸಿದ್ದಾರೆ.

ಕಳೆದ ಕೆಲ ವರ್ಷಗಳಿಂದ ಋತುರಾಜ್ ಗಾಯಕ್ವಾಡ್ ಸಿಎಸ್‌ಕೆ ತಂಡದಲ್ಲಿದ್ದು ಬ್ಯಾಟಿಂಗ್ ಕೋಚ್ ಆಗಿರುವ ಮೈಕಲ್ ಹಸ್ಸಿ ಅವರನ್ನು ಹತ್ತಿರದಿಂದ ಬಲ್ಲವರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮಾತನಾಡಿರುವ ಮೈಕಲ್ ಹಸ್ಸಿ ಋತುರಾಜ್ ಗಾಯಕ್ವಾಡ್ ಅವರ ಬ್ಯಾಟಿಂಗ್ ಕೌಶಲ್ಯದ ಬಗ್ಗೆ ಮಾತನಾಡಿದ್ದಾರೆ. ತಮ್ಮ ಕೌಶಲ್ಯದ ಕಾರಣದಿಂದಾಗಿ ಉತ್ತಮ ಎಸೆತಗಳನ್ನು ಕೂಡ ಬೌಂಡರಿ ಹಾಗೂ ಸಿಕ್ಸರ್‌ಗೆ ಸುಲಭವಾಗಿ ಬಾರಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದಿದ್ದಾರೆ.
"ಸಿಎಸ್‌ಕೆಗೆ ಅವರು ಸೇರ್ಪಡೆಯಾದ ನಂತರ ಗಾಯಕ್ವಾಡ್ ಸಾಧಿಸಿದ ಪ್ರಗತಿ ಅಚ್ಚರಿ ಮೂಡಿಸುವಂತಿದೆ. ಆತನ ಆಟವನ್ನು ನೋಡುವುದು ನನಗೆ ಬಹಳ ಇಷ್ಟ. ಆತ ದೊಡ್ಡ ಹೊಡೆತಗಳಿಗೆ ಪ್ರಯತ್ನಿಸುವುದಿಲ್ಲ. ಆತ ಸುಂದರ ಹೊಡೆಗಳನ್ನು ಬಾರಿತ್ತಾನೆ. ಆತ ಉತ್ತಮವಾದ ಎಸೆತಗಳಿಗೂ ಕೂಡ ಬೌಂಡರಿ ಹಾಗೂ ಸಿಕ್ಸರ್‌ಗಳನ್ನು ಬಾರಿಸುವ ಸಾಮರ್ಥ್ಯ ಹೊಂದಿದ್ದು ಬೌಲರ್‌ಗಳಿಗೆ ಆತನನ್ನು ಎದುರಿಸುವುದು ಬಹಳ ಕಠಿಣವಾಗುತ್ತದೆ" ಎಂದಿದ್ದಾರೆ ಮೈಕಲ್ ಹಸ್ಸಿ.
ICC ODI Ranking: ಏಕದಿನ ರ್‍ಯಾಂಕಿಂಗ್‌ನಲ್ಲಿ ಏರಿಕೆ ಕಂಡ ವಿರಾಟ್ ಕೊಹ್ಲಿ, ಶುಭ್ಮನ್ ಗಿಲ್
ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವುದರಲ್ಲಿ ಅನುಮಾನವಿಲ್ಲ: ಇನ್ನು ಈ ಸಂದರ್ಭದಲ್ಲಿ ಮೈಕಲ್ ಋತುರಾಜ್ ಗಾಯಕ್ವಾಡ್ ಭಾರತ ತಂಡವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖಂಡಿತವಾಗಿಯೂ ಪ್ರತಿನಿಧಿಸುತ್ತಾರೆ ಎಂದಿದ್ದಾರೆ. "ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಋತುರಾಜ್ ಗಾಯಕ್ವಾಡ್ ಪ್ರತಿನಿಧಿಸುವುದರಲ್ಲಿ ಅನುಮಾನವಿಲ್ಲ. ಆತನ ಆಟದ ಬಗ್ಗೆ ಆತನಿಗೆ ಬಹಳ ಸ್ಪಷ್ಟಯಿದ್ದು ತೀಕ್ಷ್ಣವಾಗಿ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ. ಮುಂದಿನ ಬಾರಿ ಅವರು ಆಡುವ ಅವಕಾಶ ಪಡೆದುಕೊಂಡಾಗ ಈಹಿಂದ ಬಾರಿ ಕಲಿತ ಪಾಠಗಳನ್ನು ಬಳಸಿಕೊಂಡು ಯಶಸ್ಸು ಸಾಧಿಸಲಿದ್ದಾರೆ" ಎಂದಿದ್ದಾರೆ
2021ರ ಐಪಿಎಲ್ ಆವೃತ್ತಿಯಲ್ಲಿ ಋತುರಾಜ್ ಗಾಯಕ್ವಾಡ್ ಅದ್ಭುತವಾದ ಬ್ಯಾಟಿಂಗ್ ಪ್ರದರ್ಶಿಸಿದ್ದು ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರ ಎನಿಸಿಕೊಂಡಿದ್ದರು. ಅಲ್ಲದೆ ಆ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಪಟ್ಟಕ್ಕೇರುದ್ದು ನಾಲ್ಕನೇ ಬಾರಿಗೆ ಐಪಿಎಲ್ ಟ್ರೋಫಿಯನ್ನು ಗೆದ್ದು ಸಾಧನೆ ಮಾಡಿತ್ತು.
IPL 2023: ಆತ ಅದ್ಭುತ ಕ್ಯಾಪ್ಟನ್ ಆದರೆ... ಕೊಹ್ಲಿ ಬಗ್ಗೆ ಎಬಿಡಿ ಹೇಳಿದ್ದೇನು
ಆದರೆ ಕಳೆದ ಐಪಿಎಲ್ ಆವೃತ್ತಿಯಲ್ಲಿ ಋತುರಾಜ್ ಬ್ಯಾಟ್‌ನಿಂದ ನಿರೀಕ್ಷಿತ ಪ್ರದರ್ಶನ ಬಂದಿರಲಿಲ್ಲ. ಆಡಿದ 14 ಪಂದ್ಯಗಳಲ್ಲಿ ಅವರು 368 ರನ್‌ಗಳನ್ನಷ್ಟೇ ಗಳಿಸಲು ಶಕ್ತವಾಗಿದ್ದರು. ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೂಡ ಕಳೆದ ಐಪಿಎಲ್ ಆವೃತ್ತಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದು ಟೂರ್ನಿಯಲ್ಲಿ 9ನೇ ಸ್ಥಾನವನ್ನು ಪಡೆದುಕೊಂಡಿತ್ತು. ಹೀಗಾಗಿ ಈ ಬಾರಿಯ ಐಪಿಎಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಗುರಿಯಿಟ್ಟುಕೊಂಡು ಸಿಎಸ್‌ಕೆ ತಂಡ ಕಣಕ್ಕಿಳಿದಿದ್ದು ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದೆ.












Click it and Unblock the Notifications