Get Updates
Get notified of breaking news, exclusive insights, and must-see stories!

IPL 2023 Final CSK vs GT: ರಾತ್ರಿಯಿಡೀ ರೈಲ್ವೇ ಸ್ಟೇಷನ್‌ನಲ್ಲಿ ಮಲಗಿದ್ದ ಧೋನಿ ಅಭಿಮಾನಿಗಳು

ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ಮಧ್ಯೆ ನಡೆಯಬೇಕಿದ್ದ ಐಪಿಎಲ್ 2023ರ ಫೈನಲ್ ಪಂದ್ಯ ಭಾನುವಾರ ಮಳೆಯ ಕಾರಣದಿಂದ ರದ್ದಾಗಿತ್ತು. ಸೋಮವಾರ ಮೀಸಲು ದಿನದಂದು ಪಂದ್ಯ ನಡೆಯಲಿದೆ. 1 ಲಕ್ಷಕ್ಕೂ ಹೆಚ್ಚಿನ ಆಸನ ಸಾಮರ್ಥ್ಯ ಹೊಂದಿರುವ ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ಸಾಗರದಂತೆ ಅಭಿಮಾನಿಗಳು ಹರಿದು ಬಂದಿದ್ದರು, ಲಕ್ಷಾಂತರ ಅಭಿಮಾನಿಗಳು ಮಧ್ಯರಾತ್ರಿವರೆಗೂ ಮಳೆಯಲ್ಲೇ ಪಂದ್ಯ ಆರಂಭವಾಗುತ್ತದೆ ಎಂದು ಕಾದರೂ ಆಗಲಿಲ್ಲ.

ಬೇರೆ ಬೇರೆ ಊರುಗಳಿಂದ ಬಂದಿದ್ದ ಎಂಎಸ್‌ ಧೋನಿ ಮತ್ತು ಸಿಎಸ್‌ಕೆ ಅಭಿಮಾನಿಗಳಿಗೆ ಪಂದ್ಯ ನಡೆಯದೇ ಇರುವುದು ಒಂದು ಕಡೆಯಾದರೆ ಮಧ್ಯರಾತ್ರಿಯಲ್ಲಿ ಎಲ್ಲಿ ಉಳಿದುಕೊಳ್ಳುವುದು ಎನ್ನುವ ಯೋಚನೆ ಒಂದು ಕಡೆಯಾಗಿತ್ತು. ನೂರಾರು ಸಿಎಸ್‌ಕೆ ಅಭಿಮಾನಿಗಳು ಭಾನುವಾರ ರಾತ್ರಿ ರೈಲ್ವೆ ನಿಲ್ದಾಣದಲ್ಲಿ ತಂಗಿದ್ದು, ನೆಲದಲ್ಲೇ ಮಲಗಿಕೊಂಡಿದ್ದರು.

IPL 2023 CSK vs GT: CSK Fans Spotted Sleeping at Railway Station

ಕೆಲವರಿಗೆ ವಾಪಸ್ ಹೋಗಲು ರೈಲು, ಬಸ್ಸು ಲಭ್ಯವಿಲ್ಲದ ಕಾರಣ ರಾತ್ರಿ ಅಲ್ಲಿಯೇ ಮಲಗಿದ್ದರು, ಇನ್ನೂ ದೂರದೂರಿನಿಂದ ಬಂದಿದ್ದ ಅಭಿಮಾನಿಗಳು ಸೋಮವಾರ ಪಂದ್ಯ ನೋಡಿಕೊಂಡು ವಾಪಸ್ ಹೋಗುವ ಉದ್ದೇಶದಿಂದ ಅಲ್ಲಿಯೇ ಉಳಿಯಲು ನಿರ್ಧರಿಸಿದ್ದರು.

ಭಾನುವಾರ ಪಂದ್ಯವನ್ನು ನೋಡಲು ಟಿಕೆಟ್ ಖರೀದಿಸಿದವರಿಗೆ ಸೋಮವಾರ ಕ್ರೀಡಾಂಗಣಕ್ಕೆ ಪ್ರವೇಶ ಸಿಗಲಿದೆ. ಸಿಎಸ್‌ಕೆ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ಇದು ಕೊನೆಯ ಐಪಿಎಲ್ ಪಂದ್ಯ ಎನ್ನಲಾಗಿದ್ದು ಲಕ್ಷಾಂತರ ಅಭಿಮಾನಿಗಳು ಅವರ ಕೊನೆಯ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ.

ಬಲಿಷ್ಠ ತಂಡಗಳ ನಡುವಿನ ಹೋರಾಟ

ಐಪಿಎಲ್ 2023ರ ಅಂಕಪಟ್ಟಿಯಲ್ಲಿ ಅಗ್ರ ಎರಡು ಸ್ಥಾನಗಳಲ್ಲಿರುವ ತಂಡಗಳೇ ಫೈನಲ್‌ಗೆ ಪ್ರವೇಶ ಪಡೆದುಕೊಂಡಿವೆ. ಎರಡೂ ತಂಡಗಳು ಲೀಗ್ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದು, ಅರ್ಹವಾಗಿವೇ ಫೈನಲ್‌ಗೆ ಅವಕಾಶ ಗಿಟ್ಟಿಸಿಕೊಂಡಿವೆ. ಒಂದು ಕಡೆ ನಾಲ್ಕು ಬಾರಿ ಕಪ್ ಗೆದ್ದಿರುವ ಸಿಎಸ್‌ಕೆ 5ನೇ ಬಾರಿ ಚಾಂಪಿಯನ್ ಆಗುವ ವಿಶ್ವಾಸದಲ್ಲಿದ್ದರೇ, ಆಡಿದ ಚೊಚ್ಚಲ ಆವೃತ್ತಿಯಲ್ಲೇ ಚಾಂಪಿಯನ್ ಎನಿಸಿಕೊಂಡಿರುವ ಗುಜರಾತ್ ಟೈಟಾನ್ಸ್ ಅದನ್ನು ಎರಡನೇ ಅವಧಿಗೂ ಉಳಿಸಿಕೊಳ್ಳಲು ರಣತಂತ್ರ ರೂಪಿಸಿದೆ.

ಎರಡೂ ತಂಡಗಳಲ್ಲಿ ಅದ್ಭುತ ಆಟಗಾರರೇ ತುಂಬಿದ್ದು ಸಮಬಲದ ಹೋರಾಟ ನಡೆಯುವ ನಿರೀಕ್ಷೆ ಇದೆ. ಈ ಬಾರಿ ಐಪಿಎಲ್‌ನಲ್ಲಿ ಇದುವರೆಗೂ ಒಂದೂ ಸೂಪರ್ ಓವರ್ ಕಂಡಿಲ್ಲ, ಫೈನಲ್ ಪಂದ್ಯ ಸೂಪರ್ ಓವರ್ ವರೆಗೆ ಹೋಗುವಂತೆ ರೋಚಕತೆಯಿಂದ ಕೂಡಿರಲಿ ಎಂದೂ ಅಭಿಮಾನಿಗಳು ಬಯಸುತ್ತಿದ್ದಾರೆ.

ಅಹಮದಾಬಾದ್‌ನಲ್ಲಿ ಪಂದ್ಯ ನಡೆಯುತ್ತಿದ್ದರೂ ಎಂಎಸ್‌ ಧೋನಿಗೆ ಅಭಿಮಾನಿಗಳ ಬೆಂಬಲ ಹೆಚ್ಚಾಗಿದೆ. ಇಡೀ ಕ್ರೀಡಾಂಗಣದಲ್ಲಿ ಹಳದಿ ಬಣ್ಣವೇ ಹೆಚ್ಚಾಗಿರುವುದು ಧೋನಿ ಕ್ರೇಜ್‌ಗೆ ಇರುವ ಉದಾಹರಣೆಯಾಗಿದೆ. ಧೋನಿ ಮತ್ತೊಂದು ಟ್ರೋಫಿ ಗೆದ್ದು ಕ್ರಿಕೆಟ್‌ ಬದುಕಿಗೆ ವಿದಾಯ ಹೇಳ್ತಾರ ಎಂದು ಕಾದು ನೋಡಬೇಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+