IPL 2023: ಮುಂದಿನ ಆವೃತ್ತಿ ವೇಳೆಗೆ ಲಕ್ನೋ ಸೂಪರ್‌ಜೈಂಟ್ಸ್ ತಂಡದಿಂದ ಬಿಡುಗಡೆಯಾಗುವ 3 ಆಟಗಾರರು
2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 16ನೇ ಆವೃತ್ತಿಯಲ್ಲಿಯೂ ಲಕ್ನೋ ಸೂಪರ್‌ಜೈಂಟ್ಸ್ (ಎಲ್‌ಎಸ್‌ಜಿ) ತಂಡ ಪ್ಲೇಆಫ್‌ಗೆ ಅರ್ಹತೆ ಪಡೆದಿದ್ದರಿಂದ ಉತ್ತಮ ಪ್ರದರ್ಶನ ನೀಡಿದೆ. ಕಳೆದ ವರ್ಷ ಗುಜರಾತ್ ಟೈಟನ್ಸ್ (ಜಿಟಿ) ಜೊತೆಗೆ ಪಾದಾರ್ಪಣೆ ಮಾಡಿದ್ದ ಎಲ್‌ಎಸ್‌ಜಿ ತಂಡ ಸತತ ಎರಡು ಬಾರಿ ಪ್ಲೇಆಫ್ ಪ್ರವೇಶಿಸಿರುವುದು ವಿಶೇಷ.
ಕಳೆದ ವರ್ಷದಂತೆ ಈ ವರ್ಷವೂ ಪಂದ್ಯಾವಳಿಯಿಂದ ಹೊರಬೀಳಲು ಲಕ್ನೋ ಸೂಪರ್‌ಜೈಂಟ್ಸ್ ಎಲಿಮಿನೇಟರ್‌ನಲ್ಲಿ ಸೋತಿತು. ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೋಲುಂಡರು. ಲಕ್ನೋ ಸೂಪರ್‌ಜೈಂಟ್ಸ್ ತಂಡಕ್ಕೆ ಇದು ಉತ್ತಮ ಋತುವಾಗಿದ್ದರೂ, ಮುಂದಿನ ಋತುವಿಗಾಗಿ ತಂಡವನ್ನು ಕಟ್ಟಲು ಎದುರು ನೋಡುತ್ತಿರುವಾಗ ಕೆಲವು ಆಟಗಾರರನ್ನು ಕೈಬಿಡಲು ನಿರ್ಧರಿಸಬೇಕಿದೆ.

2024ರಲ್ಲಿ ಹೆಚ್ಚುವರಿ ಮೈಲಿಯನ್ನು ಪಡೆಯಲು ಕೆಲವು ಸಮಸ್ಯೆಗಳನ್ನು ಪರಿಹರಿಸಲು ಎದುರು ನೋಡುತ್ತಾರೆ. ಈ ವೇಳೆ ತಂಡದಲ್ಲಿ ಹೆಚ್ಚುವರಿಯಾಗಿರುವ ಮತ್ತು ಅನಗತ್ಯ ಆಟಗಾರರ ಪಯಣವನ್ನು ನಿರ್ಧರಿಸುವ ಅಗತ್ಯವಿದೆ. ತಂಡಕ್ಕೆ ಯಶಸ್ಸು ದೊರಕಿಸಿಕೊಡಬಲ್ಲ ಆಟಗಾರರನ್ನು ಸೇರಿಸಿಕೊಳ್ಳುವ ಇರಾದೆಯಲ್ಲಿದೆ.
ಐಪಿಎಲ್ 2023ರ ನಂತರ ಲಕ್ನೋ ಸೂಪರ್‌ಜೈಂಟ್ಸ್ ತಂಡ ಬಿಡುಗಡೆ ಮಾಡಬಹುದಾದ ಮೂರು ಆಟಗಾರರ ಪಟ್ಟಿ ಇಲ್ಲಿದೆ.
* ಜಯದೇವ್ ಉನಾದ್ಕಟ್ (ಬೌಲರ್)
ಕಳೆದ ಕೆಲವು ವರ್ಷಗಳಿಂದ ಐಪಿಎಲ್‌ನಲ್ಲಿ ಜಯದೇವ್ ಉನಾದ್ಕಟ್ ಅವರ ದಾಖಲೆ ಉತ್ತಮವಾಗಿಲ್ಲ. ಕಳೆದ ಆರು ಋತುಗಳಲ್ಲಿ 46 ಪಂದ್ಯಗಳನ್ನು ಆಡಿದ್ದು, ಕೇವಲ 35 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಆ ಐದು ಋತುಗಳಲ್ಲಿ ಅವರ ಎಕಾನಮಿ ದರವು 9.5ಕ್ಕಿಂತ ಹೆಚ್ಚಿದೆ.
ಈ ವರ್ಷ ಜಯದೇವ್ ಉನಾದ್ಕಟ್ ಗಾಯದ ಕಾರಣದಿಂದಾಗಿ ಋತುವಿನಿಂದ ಹೊರಗುಳಿಯುವ ಮೊದಲು ಅವರು ಪಡೆದ ಮೂರು ಅವಕಾಶಗಳಲ್ಲಿ ವಿಕೆಟ್ ಪಡೆಯಲು ವಿಫಲರಾದರು. ಜಯದೇವ್ ಉನಾದ್ಕಟ್ ಎಕಾನಮಿ ದರವೂ ಹೆಚ್ಚಿನದಾಗಿತ್ತು. ಇತ್ತೀಚಿನ ದಿನಗಳಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡ ಮಾಡಿದಂತೆ, ಲಕ್ನೋ ಸೂಪರ್‌ಜೈಂಟ್ಸ್ ಕೂಡ ಬಹುಶಃ ಕಳಪೆ ಪ್ರದರ್ಶನಗಳನ್ನು ಪರಿಗಣಿಸಿ ಜಯದೇವ್ ಉನಾದ್ಕಟ್‌ರನ್ನು ಬಿಡುಗಡೆ ಮಾಡಬಹುದು.

* ದೀಪಕ್ ಹೂಡಾ (ಬ್ಯಾಟ್ಸ್‌ಮನ್)
ಸ್ಫೋಟಕ ಆಡಕ್ಕೆ ಹೆಸರುವಾಸಿಯಾಗಿರುವ ದೀಪಕ್ ಹೂಡಾ 12 ಪಂದ್ಯಗಳಲ್ಲಿ ಕೇವಲ 84 ರನ್ ಗಳಿಸಿದ ಕಾರಣ, 2023ರ ಐಪಿಎಲ್ ದುರಂತವನ್ನು ಅನುಭವಿಸಿದರು. ದೀಪಕ್ ಹೂಡಾ ಸ್ಟ್ರೈಕ್ ರೇಟ್ 93.33 ಕೂಡ ಅತ್ಯಂತ ಕಳಪೆಯಾಗಿತ್ತು. ಬಳಿಕ ಹಲವು ಪಂದ್ಯಗಳಿಗೆ ಲಕ್ನೋ ಸೂಪರ್‌ಜೈಂಟ್ಸ್ ಮ್ಯಾನೇಜ್‌ಮೆಂಟ್ ಅವನನ್ನು ಕೈಬಿಟ್ಟಿತು. ಒಂದೆರಡು ಸಂದರ್ಭಗಳಲ್ಲಿ ಅವನನ್ನು ಮತ್ತೆ ಆಯ್ಕೆ ಮಾಡಿತು, ಆದರೂ ತಂಡಕ್ಕೆ ಸಹಾಯವಾಗಲಿಲ್ಲ.
ದೀಪಕ್ ಹೂಡಾ ಬ್ಯಾಟಿಂಗ್ ಸ್ಥಾನವೂ ಅನೇಕ ಬಾರಿ ಏರಿಳಿತ ಕಂಡಿತ್ತು. ಪ್ರೇರಕ್ ಮಂಕಡ್ ಮತ್ತು ಆಯುಷ್ ಬದೊನಿ ಇರುವುದರಿಂದ ಲಕ್ನೋ 5.75 ಕೋಟಿ ರೂ. ಮೊತ್ತದ ಆಟಗಾರ ದೀಪಕ್ ಹೂಡಾನನ್ನು ಬಿಡುಗಡೆ ಮಾಡಲು ಯೋಚಿಸಬಹುದು. ಆ ಬೃಹತ್ ಮೊತ್ತವನ್ನು ಇತರೆ ಆಟಗಾರರನ್ನು ಖರೀದಿಸಲು ಬಳಸಬಹುದು.
* ಮನನ್ ವೋಹ್ರಾ (ಬ್ಯಾಟ್ಸ್‌ಮನ್)
ಕಳೆದ ಕೆಲವು ವರ್ಷಗಳಿಂದ ಮನನ್ ವೋಹ್ರಾ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಹೆಚ್ಚು ಪಂದ್ಯಗಳನ್ನು ಆಡಿಲ್ಲ. 2018ರಿಂದ ಮನನ್ ವೋಹ್ರಾ ಕೇವಲ 18 ಅವಕಾಶಗಳನ್ನು ಪಡೆದಿದ್ದಾರೆ ಮತ್ತು 126 ರನ್ ಗಳಿಸಿದ್ದಾರೆ.
ಈ ವರ್ಷ ಕೆಎಲ್ ರಾಹುಲ್ ಗಾಯಗೊಂಡ ಕಾರಣ ಮನನ್ ವೋಹ್ರಾ ಆಡುವ 11ರ ಬಳಗಕ್ಕೆ ಬಂದರು. ಲಕ್ನೋ ಸೂಪರ್‌ಜೈಂಟ್ಸ್ ಕೇವಲ ಒಂದು ಪಂದ್ಯದಲ್ಲಿ ಅವಕಾಶ ನೀಡಿತು. ಅದರಲ್ಲಿ ಅವರು ಕೇವಲ 10 ರನ್ ಗಳಿಸಲು ಸಾಧ್ಯವಾಯಿತು. ಮುಂದಿನ ಆವೃತ್ತಿ ವೇಲೆಗೆ ಲಕ್ನೋ ಸೂಪರ್‌ಜೈಂಟ್ಸ್ ತಂಡ ಮನನ್ ವೋಹ್ರಾ ಅವರನ್ನು ಬಿಡುಗಡೆ ಮಾಡಲು ಮತ್ತು ಬೇರೆಯವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳುವುದನ್ನು ನೋಡಬಹುದು.












Click it and Unblock the Notifications