Ind vs Aus: ಒಲಿಂಪಿಕ್ಸ್‌ನಲ್ಲಿ ಇತಿಹಾಸ ಬರೆದ ಭಾರತ; 52 ವರ್ಷಗಳ ಬಳಿಕ ಆಸ್ಟ್ರೇಲಿಯಾ ವಿರುದ್ಧ ಹಾಕಿಯಲ್ಲಿ ಗೆಲುವು
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ ಹೊಸ ಇತಿಹಾಸ ಬರೆದಿದೆ. ಹಾಕಿಯಲ್ಲಿ ಭಾರತ 50 ವರ್ಷಗಳ ಬಳಿಕ ಭಾರತ ಆಸ್ಟ್ರೇಲಿಯಾವನ್ನು ಮಣಿಸಿದ್ದು, ಇತಿಹಾಸ ಸೃಷ್ಟಿಸಿದೆ. 1972ರಲ್ಲಿ ಭಾರತ ಆಸ್ಟ್ರೇಲಿಯಾವನ್ನು ಮಣಿಸಿದ ಬಳಿಕ, ಒಲಿಂಪಿಕ್ಸ್‌ನಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ ಗೆದ್ದಿರಲಿಲ್ಲ.
ರೋಚಕವಾಗಿ ನಡೆದ ಪಂದ್ಯದಲ್ಲಿ ಭಾರತ 3-2 ಅಂತರದಲ್ಲಿ ಗೆಲುವು ಸಾಧಿಸಿದೆ. ನಾಯಕ ಹರ್ಮನ್‌ಪ್ರೀತ್ ಸಿಂಗ್ 2 ಗೋಲು ಬಾರಿಸಿದರೆ, ಅಭಿಷೇಕ್ 1 ಗೋಲು ಗಳಿಸುವ ಮೂಲಕ ಭಾರತವನ್ನು ಗೆಲ್ಲಿಸಿದರು.

12ನೇ ನಿಮಿಷಲ್ಲಿ ಅಭಿಷೇಕ್ ಭಾರತಕ್ಕೆ ಮೊದಲ ಸ್ಕೋರ್ ಗಳಿಸಿದರು. ಲಲಿತ್ ಆಸ್ಟ್ರೇಲಿಯಾದ ರಕ್ಷಣೆಯನ್ನು ಮೀರಿ ಮುನ್ನಡೆದ ನಂತರ, ಅಭಿಷೇಕ್ ಆಸ್ಟ್ರೇಲಿಯಾ ಗೋಲ್‌ಕೀಪರ್‌ನ ಹಿಂದೆ ತಿರುಗಿಸಿ ಫ್ಲಿಕ್ ಮಾಡುವ ಮೊದಲ ಗೋಲು ಗಳಿಸಿದರು.
ಮತ್ತೆ ಪಂದ್ಯದ 14 ನಿಮಿಷದಲ್ಲೇ ಭಾರತ ಎರಡನೇ ಗೋಲು ಗಳಿಸಿತು. ನಾಯಕ ಹರ್ಮನ್‌ಪ್ರೀತ್ ಸಿಂಗ್ ಡ್ರಾಗ್ ಫ್ಲಿಕ್ ಮಾಡುವ ಮೂಲಕ ಗೋಲು ಗಳಿಸಿದರು. ಈ ಮೂಲಕ 2-0 ಅಂತರದಲ್ಲಿ ಭಾರತ ಮುನ್ನಡೆ ಪಡೆದುಕೊಂಡಿತು.
25ನೇ ನಿಮಿಷದಲ್ಲಿ ಆಸ್ಟ್ರೇಲಿಯಾ ಗೋಲು ಗಳಿಸುವ ಮೂಲಕ ಗೋಲು ಅಂತರವನ್ನು 2-1 ಕ್ಕೆ ಕಡಿಮೆ ಮಾಡಿಕೊಂಡಿತು. 32ನೇ ನಿಮಿಷದಲ್ಲಿ ಭಾರತದ ನಾಯಕ ಹರ್ಮನ್‌ಪ್ರೀತ್ ಸಿಂಗ್ 2ನೇ ಗೋಲು ಗಳಿಸಿದರು, ಈ ಮೂಲಕ ಭಾರತ 3-1 ರಲ್ಲಿ ಮುನ್ನಡೆ ಸಾಧಿಸಿತು. 54ನೇ ನಿಮಿಷದಲ್ಲಿ ಆಸ್ಟ್ರೇಲಿಯಾ 2ನೇ ಗೋಲು ಗಳಿಸುವ ಮೂಲಕ ಗೋಲಿನ ಅಂತರವನ್ನು 3-2ಕ್ಕೆ ಕಡಿಮೆ ಮಾಡಿತು.
ಆದರೆ ಸ್ಕೋರ್ ಸಮಬಲಗೊಳಿಸುವ ಆಸ್ಟ್ರೇಲಿಯಾದ ಕನಸು ನನಸಾಗಲು ಭಾರತ ಅವಕಾಶ ಕೊಡಲಿಲ್ಲ. ಕೊನೆಯ ಮೂರು ನಿಮಿಷ ಆಸ್ಟ್ರೇಲಿಯಾ ಆಕ್ರಮಣಕಾರಿಯಾಗಿ ಆಟವಾಡಿದರು. ಭಾರತದ ಆಟಗಾರರು ಭದ್ರಕೋಟೆ ಕಟ್ಟುವ ಮೂಲಕ ಆಸ್ಟ್ರೇಲಿಯಾ ಕನಸನ್ನು ಭಗ್ನಗೊಳಿಸಿದರು. ಈ ಗೆಲುವಿನ ಮೂಲಕ ಭಾರತ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದು, ನಾಳೆ ಕ್ವಾರ್ಟರ್ ಫೈನಲ್ ಪಂದ್ಯ ನಡೆಯಲಿದೆ.












Click it and Unblock the Notifications