ಕ್ರಿಕೆಟ್ ದೀಪಾವಳಿ, 339 ರನ್ ಚೇಸ್ ಮಾಡಿ ಇತಿಹಾಸ ನಿರ್ಮಿಸಿದ ಭಾರತದ ಮಹಿಳಾ ಕ್ರಿಕೆಟ್ ತಂಡ... World Cup
ಕ್ರಿಕೆಟ್ ಆಟವನ್ನು ಪೂಜಿಸುವ, ಕ್ರಿಕೆಟ್ ಆಟಗಾರರಿಗೆ ದೇವರ ಸ್ಥಾನ ನೀಡಿರುವ ಏಕೈಕ ದೇಶ ಅಂದ್ರೆ ಅದು ನಮ್ಮ ಭಾರತ. ಹೀಗಾಗಿಯೇ ಭಾರತದಲ್ಲಿ ಕ್ರಿಕೆಟ್ ಆಟವನ್ನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ ಪೂಜಿಸುವವರು ಇದ್ದಾರೆ. ಸಚಿನ್ ತೆಂಡೂಲ್ಕರ್ ಕ್ರಿಕೆಟ್ ದೇವರಾಗಿದ್ದರೆ, ವಿರಾಟ್ ಕೊಹ್ಲಿ ಕ್ರಿಕೆಟ್ ಕಿಂಗ್ ಅಂದ್ರೆ ರಾಜನಾಗಿ ಮೆರೆಯುತ್ತಿದ್ದಾರೆ. ಇಷ್ಟೆಲ್ಲದರ ನಡುವೆ ಭಾರತದ ಮಹಿಳಾ ಕ್ರಿಕೆಟ್ ತಂಡ ಕೂಡ ಇಡೀ ಪ್ರಪಂಚದ ಮೂಲೆ ಮೂಲೆಯಲ್ಲೂ ದೊಡ್ಡ ಹವಾ ಎಬ್ಬಿಸಿದೆ. ಹೀಗಿದ್ದಾಗಲೇ, ಕ್ರಿಕೆಟ್ ದೀಪಾವಳಿ, 339 ರನ್ ಚೇಸ್ ಮಾಡಿ ಇತಿಹಾಸ ನಿರ್ಮಿಸಿದ ಭಾರತದ ಮಹಿಳಾ ಕ್ರಿಕೆಟ್ ತಂಡ...
100 ಕೋಟಿ ರೂಪಾಯಿ, 1000 ಕೋಟಿ ರೂಪಾಯಿ ಹೀಗೆ ಭಾರಿ ದೊಡ್ಡ ಆಸ್ತಿ ಮಾಡುತ್ತಾರೆ ನಮ್ಮ ದೇಶದ ಕ್ರಿಕೆಟ್ ಆಟಗಾರರು. ಹೌದು, ಭಾರತೀಯ ಕ್ರಿಕೆಟ್ ತಂಡ ಏಕದಿನ ವಿಶ್ವಕಪ್ ಅಂದ್ರೆ ವರ್ಲ್ಡ್ ಕಪ್ ಗೆಲ್ಲಲು ಸಿದ್ಧವಾಗಿ ನಿಂತಿದೆ. ಭಾರತದ ಮಹಿಳಾ ಕ್ರಿಕೆಟ್ ತಂಡ ಈ ಬಾರಿಯ ಏಕದಿನ ವಿಶ್ವಕಪ್ ಗೆಲ್ಲವುದು ಗ್ಯಾರಂಟಿ ಆಗಿದೆ. ಆದರೆ ಅದಕ್ಕೂ ಮೊದಲು ನಡೆದ ಕ್ರಿಕೆಟ್ ರಣಕಾಳಗದಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡ ಹೊಸ ಇತಿಹಾಸವನ್ನೇ ನಿರ್ಮಾಣ ಮಾಡಿದೆ...

339 ರನ್ ಚೇಸ್ ಮಾಡಿ ಇತಿಹಾಸ...
ಅಂದಹಾಗೆ ಭಾರತದಲ್ಲಿ ಕ್ರಿಕೆಟ್ ಆಟಕ್ಕೆ ಸಿಗುವಷ್ಟು ಬೆಂಬಲ ಬೇರೆ ಯಾವುದೇ ಆಟಕ್ಕೆ ಸಿಗಲ್ಲ, ಆ ಮೂಲಕ ಕ್ರಿಕೆಟ್ ಮತ್ತಷ್ಟು ದೈತ್ಯವಾಗಿ ಬೆಳೆಯುತ್ತಿದೆ ಎಂಬ ಮಾತು ಇದೆ. ಇಷ್ಟೆಲ್ಲಾ ಚರ್ಚೆಗಳ ನಡುವೆ ಭಾರತದ ಕ್ರಿಕೆಟ್ ಆಟಗಾರರು 100 ಕೋಟಿ ರೂಪಾಯಿ, 1000 ಕೋಟಿ ರೂಪಾಯಿ ಹೀಗೆ ಭಾರಿ ದೊಡ್ಡ ಆಸ್ತಿ ಮಾಡಿ ಮಿಂಚುತ್ತಿದ್ದಾರೆ. ಇಂತಹ ಸಮಯದಲ್ಲೇ, 339 ರನ್ ಚೇಸ್ ಮಾಡಿ ಇತಿಹಾಸ ನಿರ್ಮಿಸಿದ ಭಾರತದ ಮಹಿಳಾ ಕ್ರಿಕೆಟ್ ತಂಡ...
127 ರನ್ ಚಚ್ಚಿ ಇತಿಹಾಸ ನಿರ್ಮಾಣ!
ಹೌದು, ಮಹಿಳಾ ಕ್ರಿಕೆಟ್ ವಿಶ್ವಕಪ್ ಇತಿಹಾಸದಲ್ಲೇ ಹೊಸ ಸಾಧನೆ ಮಾಡಿದ್ದಾರೆ ಭಾರತೀಯರು. ನಮ್ಮ ಮಹಿಳಾ ಕ್ರಿಕೆಟ್ ತಂಡ ಸೆಮಿಫೈನಲ್ ಅಖಾಡದಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡ ನೀಡಿದ್ದ ಬರೋಬ್ಬರಿ 339 ರನ್‌ಗಳ ಗುರಿಯನ್ನ ಸುಲಭವಾಗಿ ಬೆನ್ನುಹತ್ತಿ ಗೆದ್ದು ಬೀಗಿದೆ. ಈ ಮೂಲಕವೇ ಹೊಸ ಇತಿಹಾಸ ಕೂಡ ನಿರ್ಮಾಣ ಮಾಡಿದೆ. ಭಾರತದ ಪರವಾಗಿ ಜೆಮಿಮಾ ರೋಡ್ರಿಗಸ್ ಅವರು ಬರೋಬ್ಬರಿ 127 ರನ್ ಚಚ್ಚಿ ಇತಿಹಾಸ ನಿರ್ಮಾಣ ಮಾಡಿದ್ದಾರೆ. 134 ಬಾಲ್ ಆಡಿದ್ದ ಜೆಮಿಮಾ ರೋಡ್ರಿಗಸ್ ಅವರು, 14 ಬೌಂಡರಿ ಬಾರಿಸಿ ಈ ಸಾಧನೆ ಮಾಡಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾ ತಂಡ 2025 ಮಹಿಳಾ ವಿಶ್ವಕಪ್ ಅಖಾಡದಿಂದ ಹೊರಗೆ ಬಿದ್ದಿದ್ದರೆ, ಭಾರತದ ಮಹಿಳಾ ತಂಡ ಫೈನಲ್ ಪ್ರವೇಶ ಮಾಡಿದೆ. ಅಲ್ಲದೆ ನಮ್ಮ ದೇಶಕ್ಕಾಗಿ ಈಗ ಮತ್ತೊಂದು ವಿಶ್ವಕಪ್ ಗೆದ್ದು ತರಲು ಸಜ್ಜಾಗಿದ್ದಾರೆ ನಮ್ಮ ದೇಶದ ಹೆಮ್ಮೆಯ ಕ್ರೀಡಾಪಟುಗಳು.












Click it and Unblock the Notifications