52ನೇ ಶತಕ ಬಾರಿಸಿದ ಕ್ರಿಕೆಟ್ ಕಿಂಗ್ ವಿರಾಟ್ ಕೊಹ್ಲಿ, ಹರಿಣಗಳಿಗೆ ದಿಢೀರ್ ಆಘಾತ... Virat Kohli
ಕನ್ನಡಿಗರ ಬೆಂಗಳೂರು ತಂಡದ ಮಾಜಿ ನಾಯಕ & ಭಾರತ ಕ್ರಿಕೆಟ್ ತಂಡದ ಅನಭಿಷಿಕ್ತ ದೊರೆ & ಕ್ರಿಕೆಟ್ ಲೋಕದ ಅಸಲಿ ಕಿಂಗ್ ವಿರಾಟ್ ಕೊಹ್ಲಿ ಇಂದು ನೂರಾರು ದಾಖಲೆಗಳನ್ನು ಪುಡಿ, ಪುಡಿ ಮಾಡಿ ಹಾಕಿದ್ದಾರೆ. ಅದರಲ್ಲೂ ವಿರಾಟ್ ಕೊಹ್ಲಿ ಆಟ ನೋಡಿ, ಎದುರಾಳಿ ಬೌಲರ್‌ಗಳು ತಲೆ ಮೇಲೆ ಕೈಹೊತ್ತು ಕುಳಿತುಬಿಟ್ಟರು. 7 ಭರ್ಜರಿ ಸಿಕ್ಸರ್ ಬಾರಿಸುವ ಮೂಲಕ ಎದುರಾಳಿ ತಂಡದ ಚಳಿ ಬಿಡಿಸಿದ ವಿರಾಟ್ ಕೊಹ್ಲಿ ಇಂದು ಅಕ್ಷರಶಃ ರಣವಿಕ್ರಮನ ರೀತಿ ಆರ್ಭಟಿಸಿದರು. ಇಂತಹ ಸಂದರ್ಭದಲ್ಲೇ 52ನೇ ಶತಕ ಬಾರಿಸಿದ ಕ್ರಿಕೆಟ್ ಕಿಂಗ್ ವಿರಾಟ್ ಕೊಹ್ಲಿ, ಹರಿಣಗಳಿಗೆ ದಿಢೀರ್ ಆಘಾತ...
ಭಾರತ ಕ್ರಿಕೆಟ್ ತಂಡ ಟೆಸ್ಟ್ ಸರಣಿ ಸೋತ ನಂತರ ಭಾರಿ ಕೋಪದಲ್ಲಿ ಇತ್ತು, ಅದರಲ್ಲೂ ಈ ಸೇಡನ್ನು ಏಕದಿನ ಸರಣಿಯಲ್ಲಿ ತೀರಿಸಿಕೊಳ್ಳಬೇಕು ಎಂಬ ನಿರ್ಧಾರವನ್ನ ಕೂಡ ಮಾಡಿ ಆಗಿತ್ತು. ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ದಕ್ಷಿಣ ಆಫ್ರಿಕಾ ತಂಡಕ್ಕೆ 4ನೇ ಓವರ್ ಸಮಯದಲ್ಲೇ ಮೊದಲ ವಿಕೆಟ್ ಕೈಗೆ ಸಿಕ್ಕಿತ್ತು. ಆದರೆ ಯಶಸ್ವಿ ಜೈಸ್ವಾಲ್ ಔಟ್ ಆದ ನಂತರ ನಿಜವಾದ ಆಟ ಶುರುವಾಗಿತ್ತು. ದಶಕಗಳ ಕಾಲ ಒಟ್ಟಿಗೆ ಆಟ ಆಡಿದ್ದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮತ್ತೊಮ್ಮೆ ಇಡೀ ಪ್ರಪಂಚಕ್ಕೆ ತಮ್ಮ ಕೆಪಾಸಿಟಿ ತೋರಿಸಿದರು. ಇಬ್ಬರೂ ಸೇರಿ, ಬರೋಬ್ಬರಿ ಶತದಕ ಜೊತೆಯಾಟ ನೀಡಿ ಸೌತ್ ಆಫ್ರಿಕಾ ತಂಡವನ್ನು ಕಾಡಿದರು.

ಕೊಹ್ಲಿ ಅಬ್ಬರಕ್ಕೆ ದಕ್ಷಿಣ ಆಫ್ರಿಕಾ ಉಡೀಸ್!
ಅರ್ಧಶತಕ ಬಾರಿಸಿದ ವಿರಾಟ್ ಕೊಹ್ಲಿ ಸೆಂಚ್ಯುರಿ ಬಾರಿಸೋದು ಕೂಡ ಗ್ಯಾರಂಟಿ ಅನ್ನೋ ಹಿಂಟ್ ಕೊಟ್ಟು ಮುಂದೆ ನುಗ್ಗಿದ್ದರು. ಅಂತಿಮವಾಗಿ, ಶತಕೋಟಿ ಭಾರತೀಯರ ಕನಸು ಇಂದು ನನಸಾಗಿ ಹೋಗಿತ್ತು. ವಿರಾಟ್ ಕೊಹ್ಲಿ 120 ಬಾಲ್ ಆಡಿ ಭರ್ಜರಿ 135 ರನ್ ಬಾರಿಸಿ, 7 ಸಿಕ್ಸರ್ & 11 ಬೌಂಡರಿ ಚಚ್ಚಿ ಬಿಸಾಡುವ ಮೂಲಕ ಏಕದಿನ ಪಂದ್ಯಗಳಲ್ಲಿ ತಮ್ಮ 52ನೇ ಶತಕ ಸಂಪಾದಿಸಿದರು. ಹೀಗೆ ಹರಿಣಗಳಿಗೆ ಬೌಲಿಂಗ್ ಪಾಠ ಮಾಡಿದ ವಿರಾಟ್ ಕೊಹ್ಲಿ ಭಾರತ ತಂಡ 349 ರನ್ ಗಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಹೀಗಿದ್ದಾಗ ವಿರಾಟ್ ಕೊಹ್ಲಿ ಅವರ ಅಬ್ಬರ ಕಂಡು ದಕ್ಷಿಣ ಆಫ್ರಿಕಾ ತಂಡ ಬೆಚ್ಚಿ ಬಿದ್ದಿತ್ತು.












Click it and Unblock the Notifications