India vs New Zealanad: ಭಾರತಕ್ಕೆ ಅನ್ಯಾಯ ಮಾಡಿದ ಅಂಪೈರ್; ವ್ಯಾಪಕ ಆಕ್ರೋಶ
ದುಬೈನಲ್ಲಿ ನಡೆಯುತ್ತಿರುವ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾರತ ತನ್ನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸುತ್ತಿದೆ. ಮೊದಲ ಪಂದ್ಯದಲ್ಲಿ ಕೆಟ್ಟ ಅಂಪೈರಿಂಗ್ ಕಾರಣದಿಂದ ಭಾರಿ ಅನ್ಯಾಯವಾಗಿದ್ದು ಮೈದಾನದಲ್ಲೇ ಭಾರತ ತಂಡದ ಆಟಗಾರರು ಅಂಪೈರ್ ಜೊತೆ ವಾಗ್ವಾದ ನಡೆಸಿದರು. ಭಾರತ ತಂಡದ ಅಭಿಮಾನಿಗಳು ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ಕೆಟ್ಟ ಅಂಪೈರಿಂಗ್ ಅನ್ನು ಕಟುವಾಗಿ ಟೀಕಿಸಿದ್ದಾರೆ.
ನ್ಯೂಜಿಲೆಂಡ್ ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿ 14ನೇ ಓವರ್‌ನಲ್ಲಿ ಈ ಘಟನೆ ನಡೆದಿದೆ. ನ್ಯೂಜಿಲೆಂಡ್ ಬ್ಯಾಟರ್ ಅಮೆಲಿಯಾ ಕೆರ್ ರನ್ ಔಟ್ ಆದರೆ, ಅವರಿಗೆ ಸ್ವತಃ ತಾವು ಔಟ್ ಎಂದು ಮನವರಿಕೆಯಾಗಿದ್ದರಿಂದ ಮೈದಾನ ತೊರೆಯುತ್ತಿದ್ದರು, ಆದರೆ ಅಂಪೈರ್ ಯಾವುದೇ ಕಾರಣ ಕೊಡದೆ ಅಮೆಲಿಯಾ ಕೆರ್ ಅವರನ್ನು ವಾಪಸ್ ಕರೆದರು. ಅದು ಡೆಡ್ ಬಾಲ್ ಆಗಿತ್ತು ಎಂದು ಅಂಪೈರ್ ಹೇಳಿದ್ದು ಭಾರತದ ಆಟಗಾರರನ್ನು ಕೆರಳಿಸಿತು.

ಅದು ಡೆಡ್ ಬಾಲ್ ಆಗಿರಲಿಲ್ಲ
ದೀಪ್ತಿ ಶರ್ಮಾ ತಮ್ಮ ಓವರ್ ಅನ್ನು ಪೂರ್ಣಗೊಳಿಸಿದ ಬಳಿಕ ಅಂಪೈರ್ ಕೈಯಿಂದ ಕ್ಯಾಪ್ ಪಡೆದುಕೊಂಡರು. ನಂತರ ಬ್ಯಾಟರ್ ಗಳು ರನ್ ಗಳಿಸಲು ಓಡಿದ್ದರಿಂದ, ಹರ್ಮನ್‌ಪ್ರೀತ್ ಕೌರ್ ಕೀಪರ್ ಕೈಗೆ ಚೆಂಡು ಎಸೆದರು, ಬ್ಯಾಟರ್ ಕ್ರೀಸ್ ತಲುಪುವ ಮೊದಲೇ ವಿಕೆಟ್ ಉರುಳಿಸುವಲ್ಲಿ ಕೀಪರ್ ಯಶಸ್ವಿಯಾದರು. ಆದರೆ ದೀಪ್ತಿ ಶರ್ಮಾ ಕ್ಯಾಪ್ ಪಡೆದುಕೊಂಡ ಬಳಿಕ ರನೌಟ್ ಆಗಿದ್ದರಿಂದ ಇದು ಡೆಡ್ ಬಾಲ್ ಎಂದು ಅಂಪೈರ್ ಹೇಳಿದ್ದಾರೆ.
Controversial Call! Kerr Survives Run-Out. #INDvsNZ pic.twitter.com/HkrAG2qwhq
— ANMOL PATEL (@anmolpatel2373) October 4, 2024
ಆದರೆ ಡೆಡ್ ಬಾಲ್‌ಗೆ ಸಂಬಂಧಿಸಿದಂತೆ ನಿರ್ದಿಷ್ಟವಾದ ನಿಯಮಗಳಿವೆ. ಐಸಿಸಿ ನಿಯಮ 20.1.1.1 ರ ಪ್ರಕಾರ, ಚೆಂಡು ವಿಕೆಟ್ ಕೀಪರ್ ಅಥವಾ ಬೌಲರ್ ಕೈಯಲ್ಲಿದೆಯಾ ಎನ್ನುವದನ್ನು ಪರಿಗಣಿಸಬೇಕಾಗುತ್ತದೆ. ಫೀಲ್ಡಿಂಗ್ ಸೈಡ್ ಮತ್ತು ವಿಕೆಟ್‌ನಲ್ಲಿರುವ ಇಬ್ಬರೂ ಬ್ಯಾಟರ್‌ಗಳು ಆಟವನ್ನು ನಿಲ್ಲಿಸಿದ್ದಾರೆ ಎಂದು ಅಂಪೈರ್ ಗೆ ಸ್ಪಷ್ಟವಾದಾಗ ಚೆಂಡನ್ನು ಡೆಡ್ ಎಂದು ಪರಿಗಣಿಸಲಾಗುತ್ತದೆ ಎಂದು 20.1.2 ನಿಯಮ ಹೇಳುತ್ತದೆ.
ಈ ಘಟನೆಯಲ್ಲಿ ಚೆಂಡು ಫೀಲ್ಡರ್ ಹರ್ಮನ್‌ಪ್ರೀತ್ ಕೌರ್ ಬಳಿ ಇದ್ದಾಗಲೇ ಬ್ಯಾಟರ್ ಗಳು ರನ್ ಗಳಿಸಲು ಓಡಿದರು. ಆದರೂ ಅಂಪೈರ್ ಅದನ್ನು ಡೆಡ್ ಬಾಲ್ ಎಂದು ಘೋಷಣೆ ಮಾಡಿದ್ದು, ಭಾರತದ ಆಟಗಾರರ ಕೋಪಕ್ಕೆ ಕಾರಣವಾಯಿತು.
ನ್ಯೂಜಿಲೆಂಡ್ ಮೇಲುಗೈ
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡ 160 ರನ್ ಕಲೆಹಾಕಿತು. ನಾಯಕಿ ಸೋಫಿ ಡಿವೈನ್ 36 ಎಸೆತಗಳಲ್ಲಿ 57 ರನ್ ಗಳಿಸುವ ಮೂಲಕ ತಂಡಕ್ಕೆ ನೆರವಾದರು. ಈ ಸವಾಲಿನ ಮೊತ್ತ ಬೆನ್ನತ್ತಿದ ಭಾರತ 10 ಓವರ್ ಗಳಲ್ಲಿ 66 ರನ್ ಗಳಿಸುವಷ್ಟರಲ್ಲಿ ಆರಂಭಿಕ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.












Click it and Unblock the Notifications