India vs Zimbabwe T20: ಜಿಂಬಾಬ್ವೆ ಕೈಯಿಂದ ಸರಣಿ ಕಸಿದುಕೊಂಡ ಟೀಮ್ ಇಂಡಿಯಾ.. ಕಾರಣ ಯಾರು?

India vs Zimbabwe 2nd T20: ಹರಾರೆಯಲ್ಲಿ ಶನಿವಾರ (ಜುಲೈ 26) ನಡೆದ ಎರಡನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಜಿಂಬಾಬ್ವೆ ವಿರುದ್ಧ 90 ರನ್‌ಗಳಿಂದ ಭರ್ಜರಿ ಗೆಲುವು ಸಾಧಿಸಿ ಸರಣಿ ತನ್ನದಾಗಿಸಿಕೊಂಡಿತು. ಹಾಗಾದ್ರೆ ಈ ಜಯಕ್ಕೆ ಕಾರಣ ಯಾರು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಟಾಸ್‌ ಗೆದ್ದ ಜಿಂಬಾಬ್ವೆ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆಯೇ ಮೊದಲು ಬ್ಯಾಟ್ ಬೀಸಿದ ಭಾರತದ ತಂಡವು ಇಶಾನ್ ಕಿಶಾನ್ ಹಾಗೂ ತಿಲಕ್ ವರ್ಮಾ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 219 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಆದರೆ ಎದುರಾಳಿ ಜಿಂಬಾಬ್ವೆ 17.5 ಓವರ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನ ಕಳೆದುಕೊಂಡು ಕೇವಲ 129 ರನ್‌ ಗಳಿಸಿ ಸೋಲನುಭವಿಸುವ ಮೂಲಕ ಸರಣಿ ಕೈಚೆಲ್ಲಿತು.

India vs Zimbabwe 2nd T20 India Clinch Series 2-0 After 90-Run Win Ishan Kishan Tilak Varma Shine

ಅದ್ಭುತ ಆಲ್‌ರೌಂಡ್‌ ಪ್ರದರ್ಶನ ನೀಡಿದ ಭಾರತ

ಅದ್ಭುತ ಆಲ್‌ರೌಂಡ್‌ ಪ್ರದರ್ಶನ ನೀಡಿದ ಭಾರತ ತಂಡ ಜಿಂಬಾಬ್ವೆ ವಿರುದ್ಧ 90 ರನ್‌ಗಳ ಬೃಹತ್ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ 2-0 ಅಂತರದ ಮುನ್ನಡೆ ಸಾಧಿಸುವ ಮೂಲಕ ಸರಣಿಯನ್ನು ವಶಪಡಿಸಿಕೊಂಡಿದೆ. ನಾಯಕ ಶ್ರೇಯಸ್ ಅಯ್ಯರ್ ಅವರ ನೇತೃತ್ವದಲ್ಲಿ ಭಾರತಕ್ಕೆ ಸಿಕ್ಕ ಮೊದಲ ಸರಣಿ ಗೆಲುವು ಇದಾಗಿದೆ.

ಮಿಂಚಿದ ಇಶಾನ್ ಕಿಶನ್, ತಿಲಕ್ ವರ್ಮಾ

ಟೀಮ್ ಇಂಡಿಯಾ ಪರ ಮೊದಲು ಬ್ಯಾಟ್‌ ಬೀಸಿದ ಇಶಾನ್ ಕಿಶನ್ ಕೇವಲ 44 ಎಸೆತಗಳಲ್ಲಿ 9 ಬೌಂಡರಿ ಹಾಗೂ 2 ಸಿಕ್ಸರ್‌ಗಳ ಸಹಿತ 81 ರನ್‌ ಕಲೆಹಾಕಿದರೆ, ತಿಲಕ್ ವರ್ಮಾ ಅವರು ಜವಾಬ್ದಾರಿಯುತ ಆಟ ಆಡಿ 29 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್‌ಗಳ ಸಹಿತ ಅಜೇಯ 60 ರನ್‌ ಸಿಡಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು. ನಾಯಕ ಶ್ರೇಯಸ್‌ ಅಯ್ಯರ್ 25(20), ಬಾಲಕ ವೈಭವ್ ಸೂರ್ಯವಂಶಿ 20(9) ರನ್‌ಗಳ ಕೊಡುಗೆ ನೀಡಿದರು.

ಜಿಂಬಾಬ್ವೆ ಪರ ಯಾರು ಎಷ್ಟು ರನ್‌ ಸಿಡಿಸಿದರು?

ಬಳಿಕ 220 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ ಜಿಂಬಾಬ್ವೆಗೆ ಬ್ರಿಯಾನ್ ಬೆನ್ನೆಟ್ 32(19) ರನ್ ಸಿಡಿಸುವ ಮೂಲಕ ಉತ್ತಮ ಆರಂಭ ನೀಡಿದರು. ರಯಾನ್ ಬರ್ಲ್ 20(18), ತಡಿವಾನಶೆ ಮರುಮಾನಿ 24(19), ಬ್ರಾಡ್ ಇವಾನ್ಸ್ 19(11), ಡಿಯೋನ್ ಮೈಯರ್ಸ್ 12(9) ರನ್‌ ಸಿಡಿಸಿದ್ದು ಬಿಟ್ಟರೆ, ಉಳಿದವರು ಒಂದಂಕಿ ದಾಟದೇ ವಿಕೆಟ್‌ ಒಪ್ಪಿಸಿದರು. ಟೀಮ್ ಇಂಡಿಯಾ ಬೌಲರ್‌ಗಳ ಮಾರಕ ಬೌಲಿಂಗ್ ದಾಳಿಯಿಂದ ಜಿಂಬಾಬ್ವೆ 17.5 ಓವರ್‌ಗಳಿಗೆ ಕೇವಲ 129 ರನ್‌ ಗಳಿಸಿ ಆಲೌಟ್ ಆಯಿತು. ಈ ಮೂಲಕ ಭಾರತ ತಂಡವು ಸರಣಿ ವಶಪಡಿಸಿಕೊಂಡಿತು.

ಮೂರು ವಿಕೆಟ್ ಕಿತ್ತು ಮಿಂಚಿದ ಅಭಿಷೇಕ್

ಟೀಮ್ ಇಂಡಿಯಾ ಪರ ಬೌಲಿಂಗ್ ಮಾಡಿದ ಅಭಿಷೇಕ್ ಶರ್ಮಾ ಕೇವಲ 17 ರನ್‌ ನೀಡಿ 3 ವಿಕೆಟ್‌ ಕಿತ್ತು ಮಿಂಚಿದರು. ಮಯಾಂಕ್ ಯಾದವ್ ಹಾಗೂ ಪ್ರಿನ್ಸ್‌ ಯಾದವ್ ತಲಾ 2 ವಿಕೆಟ್‌ ಕಬಳಿಸಿದರು. ಉಳಿದಂತೆ ರವಿ ಬಿಷ್ಣೋಯಿ, ಶಿವಂ ದುಬೆ, ತಿಲಕ್ ವರ್ಮಾ ತಲಾ ಒಂದು ವಿಕೆಟ್‌ ಪಡೆದರು. ಈ ಮೂಲಕ ಭಾರತ ಆಲ್‌ರೌಡರ್ ಪ್ರದರ್ಶನ ತೋರಿ ಸರಣಿಯನ್ನು ತನ್ನದಾಗಿಸಿಕೊಂಡಿತು.

ಭಾರತ ಮತ್ತು ಜಿಂಬಾಬ್ವೆ ಪ್ಲೇಯಿಂಗ್ 11

ಭಾರತ ಪ್ಲೇಯಿಂಗ್ 11: ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಇಶಾನ್ ಕಿಶನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ರಿಂಕು ಸಿಂಗ್, ಶಿವಂ ದುಬೆ, ರವಿ ಬಿಷ್ಣೋಯಿ, ಪ್ರಿನ್ಸ್ ಯಾದವ್, ಯಶ್ ಠಾಕೂರ್, ಮಯಾಂಕ್ ಯಾದವ್.

ಜಿಂಬಾಬ್ವೆ ಪ್ಲೇಯಿಂಗ್ 11: ಬ್ರಿಯಾನ್ ಬೆನ್ನೆಟ್, ಬೆನ್ ಕರನ್, ಡಿಯೋನ್ ಮೈಯರ್ಸ್, ಸಿಕಂದರ್ ರಾಜಾ (ನಾಯಕ), ರಯಾನ್ ಬರ್ಲ್, ವೆಸ್ಲಿ ಮಾಧೆವೆರೆ, ತಡಿವಾನಶೆ ಮರುಮನಿ (ವಿಕೆಟ್ ಕೀಪರ್), ಬ್ರಾಡ್ ಇವಾನ್ಸ್, ನ್ಯೂಮನ್ ನ್ಯಾಮ್ಹುರಿ, ರಿಚರ್ಡ್ ನ್ಗಾರವ, ಬ್ಲೆಸ್ಸಿಂಗ್ ಮುಜರಬಾನಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+