ಇಂಗ್ಲೆಂಡ್ ವಿರುದ್ಧ ಭಾರತ ಏಕದಿನ ಸರಣಿ, ಪಂದ್ಯ ಪ್ರಸಾರ ವಿವರ
ಲಂಡನ್, ಜುಲೈ 11: ಇಂಗ್ಲೆಂಡ್ ವಿರುದ್ಧ ಟೆಸ್ಟ್, ಟಿ20ಐ ಸರಣಿ ಮುಗಿಸಿರುವ ಭಾರತ ಈಗ ಏಕದಿನ ಸರಣಿಗೆ ಸಜ್ಜಾಗುತ್ತಿದೆ. ಜುಲೈ 12ರಿಂದ ಏಕದಿನ ಸರಣಿ ಆರಂಭವಾಗಲಿದೆ. ಏಕದಿನ ಸರಣಿಯ ವಿವರ ಇಲ್ಲಿದೆ. ಟೆಸ್ಟ್ ಸರಣಿ 2-2 ಸಮನಾಗಿದ್ದು, ಟಿ20ಐ ಸರಣಿಯನ್ನು ಭಾರತ 2-1ರಲ್ಲಿ ಗೆದ್ದುಕೊಂಡಿದೆ.
ಜುಲೈ 12ರಂದು ಕೆನಿಂಗ್ಟನ್ ಒವಲ್ ಮೈದಾನದಲ್ಲಿ ಪಂದ್ಯ ಆರಂಭವಾಗಲಿದ್ದು, ಇಂಗ್ಲೆಂಡ್ ತಂಡದ ಪ್ರಮುಖ ಆಟಗಾರರಾದ ಜೋ ರೂಟ್, ಜಾನಿ ಬೈರ್ಸ್ಟೋ ಹಾಗೂ ಬೆನ್ ಸ್ಟೋಕ್ಸ್ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯಕ್ಕೆ ಲಭ್ಯರಾಗಲಿದ್ದು, ಭಾರತ ತಂಡಕ್ಕೆ ಶಿಖರ್ ಧವನ್ ಸೇರ್ಪಡೆಯಾಗಿದ್ದಾರೆ. ಜೊತೆಗೆ ಟಿ20 ಸರಣಿಯಲ್ಲಿ ಅವಕಾಶ ಸಿಗದ ಆಟಗಾರರಾದ ಶಾರ್ದೂಲ್ ಠಾಕೂರ್, ಪ್ರಸಿಧ್ ಕೃಷ್ಣ, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ ಹಾಗೂ ಅರ್ಷ್ ದೀಪ್ ಸಿಂಗ್ ತಂಡ ಸೇರಿದ್ದಾರೆ.
ಇಂಗ್ಲೆಂಡ್ ತಂಡಕ್ಕೆ ಹೊಸ ನಾಯಕತ್ವ
ಇಯಾನ್ ಮಾರ್ಗನ್ ದಿಢೀರ್ ನಿವೃತ್ತಿ ಹೊಂದಿದ ಹಿನ್ನೆಲೆ, ಇಂಗ್ಲೆಂಡ್ ಸೀಮಿತ ಓವರ್‌ಗಳ ನಾಯಕತ್ವಕ್ಕೆ ಸ್ಫೋಟಕ ವಿಕೆಟ್ ಕೀಪರ್ ಬ್ಯಾಟರ್ ಜಾಸ್ ಬಟ್ಲರ್ ನೇಮಕವಾಗಿದ್ದಾರೆ. ಅದ್ಭುತ ಫಾರ್ಮ್‌ನಲ್ಲಿರುವ ಅವರಿಗೆ ಬ್ಯಾಟಿಂಗ್, ವಿಕೆಟ್ ಕೀಪಿಂಗ್ ಜವಾಬ್ದಾರಿಯಗಳ ಜೊತೆಗೆ ಇದೀಗ ನಾಯಕತ್ವದ ಹೊರೆಯನ್ನು ಹೊರಿಸಲಾಗಿದೆ.

ಜಾಸ್ ಬಟ್ಲರ್ ಈಗಾಗಲೇ ಇಂಗ್ಲೆಂಡ್ ಪರ 14 ಪಂದ್ಯಗಳಲ್ಲಿ ನಾಯಕನಾಗಿ ಮುನ್ನಡೆಸಿದ ಅನುಭವ ಹೊಂದಿದ್ದಾರೆ.
ಪಂದ್ಯ ಆರಂಭ ದಿನಾಂಕ: ಜುಲೈ 12, ಕೆನಿಂಗ್ಟನ್ ಒವಲ್
ಪಂದ್ಯ ಆರಂಭ ಸಮಯ: 5.30 PM
ಸರಣಿ ವೇಳಾಪಟ್ಟಿ
ಏಕದಿನ ಪಂದ್ಯ: ಮಂಗಳವಾರ, ಜುಲೈ 12, ಕಿಯಾ ಓವಲ್
ಎರಡನೇ ಪಂದ್ಯ: ಗುರುವಾರ, ಜುಲೈ 14, ಲಾರ್ಡ್ಸ್
ಮೂರನೇ ಪಂದ್ಯ: ಭಾನುವಾರ, ಜುಲೈ 17, ಎಮಿರೇಟ್ಸ್ ಓಲ್ಡ್ ಟಾಫಾಡ್
ಟಿವಿ:
ಸೋನಿ ಸಿಕ್ಸ್, ಸೋನಿ ಸಿಕ್ಸ್ ಎಚ್ ಡಿ ಟಿವಿ ವಾಹಿನಿ
ಆನ್ ಲೈನ್
ಸೋನಿLIV App
ಇಂಗ್ಲೆಂಡ್ ಏಕದಿನ ತಂಡ: ಜೋಸ್ ಬಟ್ಲರ್ (ನಾಯಕ), ಮೋಯಿನ್ ಅಲಿ, ಜೋನಾಥನ್ ಬೈರ್ಸ್ಟೋ, ಹ್ಯಾರಿ ಬ್ರೂಕ್, ಬ್ರೈಡನ್ ಕಾರ್ಸೆ, ಸ್ಯಾಮ್ ಕರನ್, ಲಿಯಾಮ್ ಲಿವಿಂಗ್ ಸ್ಟೋನ್, ಕ್ರೇಗ್ ಓವರ್ಟನ್, ಮ್ಯಾಥ್ಯೂ ಪಾರ್ಕಿಸನ್, ಜೋ ರೂಟ್, ಜಾಸನ್ ರಾಯ್, ಫಿಲ್ ಸಾಲ್ಟ್, ಬೆನ್ ಸ್ಟೋಕ್ಸ್, ರೀಚ್ ಟಾಪ್ಲೆ, ಡೇವಿಡ್ ವೀಲೆ.
ಭಾರತ ತಂಡ: ರೋಹಿತ್ ಶರ್ಮ(ನಾಯಕ), ಶಿಖರ್ ಧವನ್, ಇಶಾನ್ ಕಿಶಾನ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಬ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಶಾರ್ದೂಲ್ ಠಾಕೂರ್, ಯುಜುವೇಂದ್ರ ಚಾಹಲ್, ಅಕ್ಷರ್ ಪಟೇಲ್, ಜಸ್ ಪ್ರೀತ್ ಬೂಮ್ರಾ, ಪ್ರಸಿಧ್ ಕೃಷ್ಣ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಅರ್ಷ್ ದೀಪ್ ಸಿಂಗ್.












Click it and Unblock the Notifications