India vs Bangladesh: ಭಾರತ vs ಬಾಂಗ್ಲಾದೇಶ ಟಿ20, ಏಕದಿನ ಸರಣಿ ವೇಳಾಪಟ್ಟಿ ಪ್ರಕಟ

ಕ್ರಿಕೆಟ್‌ ಪ್ರೇಮಿಗಳಿಗೆ ಐಪಿಎಲ್‌ ಪಂದ್ಯಗಳು ಭರ್ಜರಿ ಮನರಂಜನೆ ಒದಗಿಸುತ್ತಿವೆ. ಐಪಿಎಲ್ ಮುಗಿದ ಬಳಿಕ ಕೂಡ ಅಭಿಮಾನಿಗಳಿಗೆ ಟೀಂ ಇಂಡಿಯಾ ಸತತವಾಗಿ ಕ್ರಿಕೆಟ್ ರಸದೌತಣ ಉಣಬಡಿಸಲು ಸಜ್ಜಾಗಿದೆ. ಇಂಗ್ಲೆಂಡ್‌ ವಿರುದ್ಧ ಟೆಸ್ಟ್ ಸರಣಿ ಆಡಲಿದೆ. ಇದೀಗ ಭಾರತ ಬಾಂಗ್ಲಾದೇಶ ಏಕದಿನ ಮತ್ತು ಟಿ20 ಸರಣಿ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ.

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮತ್ತು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) 2025 ರಲ್ಲಿ ಭಾರತದ ಹಿರಿಯ ಪುರುಷರ ಕ್ರಿಕೆಟ್ ತಂಡದ ಬಾಂಗ್ಲಾದೇಶ ಪ್ರವಾಸದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಭಾರತ ಬಾಂಗ್ಲಾದೇಶಕ್ಕೆ ಪ್ರಯಾಣ ಮಾಡಲಿದ್ದು ಮೂರು ಏಕದಿನ ಅಂತರರಾಷ್ಟ್ರೀಯ ಪಂದ್ಯಗಳು (ODI) ನಂತರ ಮೂರು ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ. ಪಂದ್ಯಗಳು ಮಿರ್ಪುರ್ ಮತ್ತು ಚಟ್ಟೋಗ್ರಾಮ್‌ನಲ್ಲಿ ಈ ಪಂದ್ಯಗಳು ನಡೆಯಲಿವೆ. ಬಾಂಗ್ಲಾದೇಶವು ಮೊದಲ ಬಾರಿಗೆ ತವರಿನಲ್ಲಿ ಭಾರತದ ವಿರುದ್ಧ ಟಿ20 ಸರಣಿ ಆಡುತ್ತಿದೆ.

india vs bangladesh tour schedule 2025 t20 and odis

ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಸಂತಸ

ಈ ಪಂದ್ಯಗಳು ಬಾಂಗ್ಲಾದೇಶ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಸಿಇಒ ಉದ್ದೀನ್ ಚೌಧರಿ ಈ ಬಗ್ಗೆ ಮಾತನಾಡಿ "ಈ ಸರಣಿಯು ನಮ್ಮ ತವರಿನಲ್ಲಿ ನಡೆಯುವ ಅತ್ಯಂತ ರೋಮಾಂಚಕಾರಿ ಸರಣಿಯಾಗುವ ಭರವಸೆ ನೀಡುತ್ತದೆ. ಭಾರತವು ಎಲ್ಲಾ ಸ್ವರೂಪಗಳಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಗ್ರಸ್ಥಾನದಲ್ಲಿದೆ. ಎರಡೂ ದೇಶಗಳ ಕ್ರಿಕೆಟ್ ಅಭಿಮಾನಿಗಳು ಈ ಸರಣಿಯನ್ನು ಆನಂದಿಸುತ್ತಾರೆ" ಎಂದು ಹೇಳಿದ್ದಾರೆ.

2024ರಲ್ಲಿ ಭಾರತಕ್ಕೆ ಬಂದಿದ್ದ ಬಾಂಗ್ಲಾದೇಶ

ಭಾರತ ಮತ್ತು ಬಾಂಗ್ಲಾದೇಶ ನಡುವಿನ ಕೊನೆಯ ದ್ವಿಪಕ್ಷೀಯ ಸರಣಿಯು ಸೆಪ್ಟೆಂಬರ್ ಮತ್ತು ಅಕ್ಟೋಬರ್ 2024 ರಲ್ಲಿ ಭಾರತದಲ್ಲಿ ನಡೆದಿತ್ತು. ಭಾರತ ಟೆಸ್ಟ್ ಸರಣಿಯನ್ನು 2-0 ಮತ್ತು ಟಿ20 ಸರಣಿಯನ್ನು 3-0 ಅಂತರದಲ್ಲಿ ಗೆದ್ದು ಕ್ಲೀನ್ ಸ್ವೀಪ್ ಮಾಡಿತ್ತು. ಚಾಂಪಿಯನ್ಸ್ ಟ್ರೋಫಿ ಗೆದ್ದಿರುವ ಭಾರತ ಮುಂಬರುವ ಸರಣಿಯನ್ನು ಗೆಲ್ಲುವ ವಿಶ್ವಾಸದಲ್ಲಿದೆ.

ಯುವ ಆಟಗಾರರಿಗೆ ಅವಕಾಶ

2025 ರ ಬಾಂಗ್ಲಾದೇಶ ವಿರುದ್ಧದ ಸರಣಿಯು ಭಾರತದ ಯುವ ಪ್ರತಿಭೆಗಳಿಗೆ ಉತ್ತಮ ವೇದಿಕೆಯನ್ನು ಒದಗಿಸುತ್ತದೆ. ಜೂನ್‌ನಲ್ಲಿ ಪ್ರಾರಂಭವಾಗುವ ಇಂಗ್ಲೆಂಡ್ ಪ್ರವಾಸದ ನಂತರ ಹಿರಿಯ ಆಟಗಾರರು ವಿಶ್ರಾಂತಿ ಪಡೆಯುವ ಸಾಧ್ಯತೆ ಇದ್ದು, ಏಕದಿನ ಸರಣಿಗೆ ಯುವ ಆಟಗಾರರಿಗೆ ವೇದಿಕೆ ಸಿಗಲಿದೆ. ಐಪಿಎಲ್‌ನಲ್ಲಿ ಮಿಂಚುತ್ತಿರುವ ಆಟಗಾರರಿಗೆ ಟೀಂ ಇಂಡಿಯಾ ಬಾಗಿಲು ತೆರೆಯುವ ಸಾಧ್ಯತೆ ಇದೆ.

ಭಾರತ vs ಬಾಂಗ್ಲಾದೇಶ ವೇಳಾಪಟ್ಟಿ

  1. ಮೊದಲ ಏಕದಿನ ಪಂದ್ಯ; ಆಗಸ್ಟ್ 17, 2025; ಎಸ್‌ಬಿಎಸ್‌ಸಿಎಸ್ ಮಿರ್ಪುರ್
  2. ಎರಡನೇ ಏಕದಿನ ಪಂದ್ಯ; ಆಗಸ್ಟ್ 20, 2025; ಎಸ್‌ಬಿಎಸ್‌ಸಿಎಸ್ ಮಿರ್ಪುರ್
  3. ಮೂರನೇ ಏಕದಿನ ಪಂದ್ಯ; ಆಗಸ್ಟ್ 23, 2025; ಎಸ್‌ಬಿಎಸ್‌ಸಿಎಸ್ ಚತ್ತೋಗ್ರಾಂ
  4. ಮೊದಲ ಟಿ20 ಪಂದ್ಯ; ಆಗಸ್ಟ್ 26, 2025; ಎಸ್‌ಬಿಎಸ್‌ಸಿಎಸ್ ಚತ್ತೋಗ್ರಾಂ
  5. ಎರಡನೇ ಟಿ20 ಪಂದ್ಯ; ಆಗಸ್ಟ್ 29, 2025; ಎಸ್‌ಬಿಎಸ್‌ಸಿಎಸ್ ಮಿರ್ಪುರ್
  6. ಮೂರನೇ ಟಿ20 ಪಂದ್ಯ; ಆಗಸ್ಟ್ 31, 2025; ಎಸ್‌ಬಿಎಸ್‌ಸಿಎಸ್ ಮಿರ್ಪುರ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+