India vs Australia: ಆತ ಏಕದಿನ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಬಹುದು: ಹರ್ಭಜನ್ ಭವಿಷ್ಯ!

ಶ್ರೀಲಂಕಾ ವಿರುದ್ಧದ ಏಷ್ಯಾಕಪ್ ಫೈನಲ್‌ಗೆ ಮುನ್ನ ಭಾರತೀಯ ಆಲ್‌ರೌಂಡರ್ ಅಕ್ಷರ್ ಪಟೇಲ್ ಗಾಯಗೊಂಡ ನಂತರ, ರವಿಚಂದ್ರನ್ ಅಶ್ವಿನ್‌ ಭಾರತ ತಂಡಕ್ಕೆ ವಾಪಸಾಗಬಹುದು ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಸುಳಿವು ನೀಡಿದ್ದರು. ಕೊಲಂಬೊದಲ್ಲಿ ಭಾರತ ತಂಡ ಏಷ್ಯಾಕಪ್ ಗೆದ್ದ ನಂತರ, ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗಾಗಿ ಭಾರತ ತಂಡವನ್ನು ಆಯ್ಕೆ ಮಾಡಿದ್ದು, ರವಿಚಂದ್ರನ್ ಅಶ್ವಿನ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ.

ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಸರಣಿಗೆ ಭಾರತ ಎರಡು ತಂಡಗಳನ್ನು ಪ್ರಕಟಿಸಿದೆ. ಐಸಿಸಿ ವಿಶ್ವಕಪ್‌ಗೆ ಮೊದಲು ಈ ಸರಣಿ ಭಾರತಕ್ಕೆ ಮುಖ್ಯವಾಗಿದೆ. ವಿಶ್ವಕಪ್‌ ಆರಂಭಕ್ಕೆ ಮುನ್ನ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದ್ದು, ಏಕದಿನ ವಿಶ್ವಕಪ್ ಮುಗಿದ ಬಳಿಕ ಐದು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ.

India vs Australia: Harbhajan Baffled by Ashwins Australia Series Selection, Questions Selectors

ಏಕದಿನ ಸರಣಿಗೆ ಭಾರತ ತಂಡವನ್ನು ಪ್ರಕಟಿಸಿದ ಬಗ್ಗೆ ಪ್ರತಿಕ್ರಿಯಿಸಿದ ಸ್ಪಿನ್ನರ್ ಹರ್ಭಜನ್ ಸಿಂಗ್ ಸ್ಪಿನ್ನರ್‌ಗಳಾದ ಅಶ್ವಿನ್ ಮತ್ತು ವಾಷಿಂಗ್ಟನ್ ಸುಂದರ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿದ ಬಗ್ಗೆ ಮಾತನಾಡಿದ್ದಾರೆ.

ಆಯ್ಕೆದಾರರಿಗೆ ತಪ್ಪಿನ ಅರಿವಾಗಿದೆ

"ಮೂಲ ಏಷ್ಯಾಕಪ್ ತಂಡದಲ್ಲಿಲ್ಲದ ಮೊದಲ ವಾಷಿಂಗ್ಟನ್ ಸುಂದರ್ ಅವರನ್ನು ನಂತರ ತಂಡಕ್ಕೆ ಸೇರಿಸಿಕೊಳ್ಳಲಾಯಿತು. ಈ ಸರಣಿಗೆ ಮತ್ತೊಬ್ಬ ಆಟಗಾರ ರವಿಚಂದ್ರನ್ ಅಶ್ವಿನ್ ಅವರಿಗೆ ಅವಕಾಶ ನೀಡಲಾಗಿದೆ. ಭಾರತ ತಂಡ ಬಹುಶಃ ಆಫ್ ಸ್ಪಿನ್ನರ್ ಗಳ ಅಗತ್ಯವಿದೆ. ಈ ಮೊದಲಿನ ತಂಡದಲ್ಲಿ ಆಫ್ ಸ್ಪಿನ್ನರ್ ಇರಲಿಲ್ಲ, ಎದುರಾಳಿ ತಂಡದಲ್ಲಿ ಎಡಗೈ ಬ್ಯಾಟರ್ ಗಳು ಇದ್ದರೆ ನಮ್ಮ ಬೌಲರ್‌ಗಳು ತೊಂದರೆಗೆ ಸಿಲುಕಬಹುದು ಎಂದು ಅವರು ತಮ್ಮ ತಪ್ಪನ್ನು ಅರಿತುಕೊಂಡಿದ್ದಾರೆ. ಅಥವಾ ಇದೆಲ್ಲ ನನ್ನ ತಿಳುವಳಿಕೆಯನ್ನು ಮೀರಿದೆ ಅಥವಾ ಅವರು ತಮ್ಮ ಹಿಂದಿನ ತಪ್ಪನ್ನು ಸರಿಪಡಿಸಲು ಮತ್ತೊಂದು ತಪ್ಪನ್ನು ಮಾಡುತ್ತಾರೆ" ಎಂದು ಹರ್ಭಜನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.

ಹಿರಿಯ ಆಲ್‌ರೌಂಡರ್ ಅಶ್ವಿನ್ ಕೊನೆಯ ಬಾರಿಗೆ ಜನವರಿ 2022 ರಲ್ಲಿ ಭಾರತಕ್ಕಾಗಿ ಏಕದಿನ ಪಂದ್ಯವನ್ನು ಆಡಿದ್ದರು. ವಿಶ್ವಕಪ್‌ಗಾಗಿ ಭಾರತದ 15 ಸದಸ್ಯರ ತಂಡದಲ್ಲಿ ಯಾವುದೇ ಆಫ್-ಸ್ಪಿನ್ನರ್ ಅನ್ನು ಆಯ್ಕೆ ಮಾಡಿಲ್ಲ ಎನ್ನುವುದು ಗಮನಾರ್ಹ ಅಂಶ.

ಪ್ರಮುಖ ಆಟಗಾರರಿಗೆ ವಿಶ್ರಾಂತಿ

ಏಷ್ಯಾಕಪ್‌ನಲ್ಲಿ ಭಾರತ ತಂಡದಲ್ಲಿ ಆಫ್‌ ಸ್ಪಿನ್ನರ್‌ ಇಲ್ಲದೆ ಆಡಿತು. ಆಸ್ಟ್ರೇಲಿಯಾ ಸರಣಿಯ ಮೊದಲ ಎರಡು ಪಂದ್ಯಗಳಿಗೆ ನಾಯಕ ರೋಹಿತ್, ಮಾಜಿ ನಾಯಕ ವಿರಾಟ್ ಕೊಹ್ಲಿ, ಉಪನಾಯಕ ಹಾರ್ದಿಕ್ ಪಾಂಡ್ಯ ಮತ್ತು ಸ್ಪಿನ್ನರ್ ಕುಲದೀಪ್ ಅವರಿಗೆ ವಿಶ್ರಾಂತಿ ನೀಡಲಾಗಿದೆ.

"ನೀವು ತಂಡದಲ್ಲಿ ಎಂದಿಗೂ ಮೂವರು ಸ್ಪಿನ್ನರ್‌ಗಳನ್ನು ಆಯ್ಕೆ ಮಾಡುವುದಿಲ್ಲ. ನೀವು ಹೆಚ್ಚೆಂದರೆ ಇಬ್ಬರನ್ನು ಆಯ್ಕೆ ಮಾಡುತ್ತೀರಿ. ನಿಮ್ಮ ಮುಂದೆ ಎಷ್ಟೇ ಎಡಗೈ ಆಟಗಾರರಿದ್ದರೂ ರವೀಂದ್ರ ಜಡೇಜಾ ಖಂಡಿತವಾಗಿಯೂ ಆಡಲಿದ್ದಾರೆ ಮತ್ತು ಇತರ ಸ್ಪಿನ್ನರ್ ಕುಲ್ದೀಪ್ ಯಾದವ್ ಆಗಿರುತ್ತಾರೆ. ಸದ್ಯಕ್ಕೆ ಅವರ ಸ್ಥಾನವನ್ನು ಯಾರೂ ತೆಗೆದುಕೊಳ್ಳಲು ಸಾಧ್ಯವಿಲ್ಲ,'' ಎಂದು ಹರ್ಭಜನ್ ಅಭಿಪ್ರಾಯಪಟ್ಟಿದ್ದಾರೆ.

ವಿಶ್ವಕಪ್ ತಂಡಕ್ಕೆ ಅಶ್ವಿನ್ ಆಯ್ಕೆ?

ವಾಷಿಂಗ್ಟನ್ ಮತ್ತು ಅಶ್ವಿನ್ ಜೊತೆಗೆ, ತಿಲಕ್ ವರ್ಮಾ ಮತ್ತು ಪ್ರಸಿದ್ಧ್ ಕೃಷ್ಣ ಕೂಡ ಭಾರತ ತಂಡಕ್ಕೆ ಏಕದಿನ ಸರಣಿಗೆ ಸೇರ್ಪಡೆಗೊಂಡಿದ್ದಾರೆ. ಗಾಯದ ಕಾರಣದಿಂದ ಏಷ್ಯಾಕಪ್ ಫೈನಲ್‌ನಿಂದ ಹೊರಗುಳಿದಿರುವ ಆಲ್‌ರೌಂಡರ್ ಅಕ್ಷರ್, ಆಸ್ಟ್ರೇಲಿಯಾ ವಿರುದ್ಧದ 3ನೇ ಏಕದಿನ ಪಂದ್ಯಕ್ಕೆ ಆಯ್ಕೆಯಾಗಿದ್ದಾರೆ. ಆದರೂ, ಅಕ್ಷರ್ ಮತ್ತೆ ಆಡುವುದು ಫಿಟ್‌ನೆಸ್‌ ಪರೀಕ್ಷೆಗೆ ಒಳಪಟ್ಟಿರುತ್ತದೆ.

ಅಶ್ವಿನ್ ಮತ್ತೆ ತಂಡಕ್ಕೆ ಬಂದಿರುವ ಬಗ್ಗೆ ಮಾತನಾಡುತ್ತಾ, ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಅವರು ಅನುಭವಿ ಆಲ್ ರೌಂಡರ್ ಮೆನ್ ಇನ್ ಬ್ಲೂ ವಿಶ್ವಕಪ್ ತಂಡದಲ್ಲಿ ಹೇಗೆ ಕಾಣಿಸಿಕೊಳ್ಳಬಹುದು ಎಂಬುದನ್ನು ವಿವರಿಸಿದರು.

"ಇಬ್ಬರು ಆಫ್-ಸ್ಪಿನ್ನರ್‌ಗಳನ್ನು ಆಯ್ಕೆ ಮಾಡಲಾಗಿದೆ, ಏಕೆಂದರೆ ನಿಮಗೆ ಸೆಪ್ಟೆಂಬರ್ 28 ರವರೆಗೆ ಸಮಯವಿದೆ. ಆರ್ ಅಶ್ವಿನ್ ಮತ್ತು ವಾಷಿಂಗ್ಟನ್ ಸುಂದರ್ ಅವರು ಹೇಗೆ ಪ್ರದರ್ಶನ ನೀಡುತ್ತಾರೆ ಎನ್ನುವುದನ್ನು ಆಯ್ಕೆದಾರರು ನೋಡಲಿದ್ದಾರೆ. ಇಬ್ಬರೂ ಅತ್ಯುತ್ತಮ ಪ್ರದರ್ಶನ ನೀಡಿದರೆ ವಿಶ್ವಕಪ್ ತಂಡಕ್ಕೆ ಸೇರ್ಪಡೆಯಾಗುವ ಸಾಧ್ಯತೆ ಇದೆ. ಅಶ್ವಿನ್ ಮತ್ತೆ ತಂಡಕ್ಕೆ ಬಂದರೆ ಅಚ್ಚರಿ ಪಡಬೇಕಿಲ್ಲ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+