ವೆಸ್ಟ್ ಇಂಡೀಸ್ ವಿರುದ್ಧ ಗೆದ್ದು ಮತ್ತೊಂದು ದಾಖಲೆ ಬರೆಯಲು ಸಿದ್ಧವಾದ ಟೀಂ ಇಂಡಿಯಾ

ನೂತನ ನಾಯಕ ಶಿಖರ್ ಧವನ್ ನಾಯಕತ್ವದಲ್ಲಿ ಟೀಂ ಇಂಡಿಯಾ ಏಕದಿನ ಸರಣಿಯಲ್ಲಿ ಕಳೆದ 39 ವರ್ಷಗಳಲ್ಲಿ ಮಾಡಲಾಗದ ಸಾಧನೆಯೊಂದನ್ನು ಮಾಡಿದ್ದರು. ಇದೇ ಮೊದಲ ಬಾರಿಗೆ ಕೆರಿಬಿಯನ್ ನೆಲದಲ್ಲಿ ಸರಣಿಯನ್ನು ಕ್ಲೀನ್‌ ಸ್ವೀಪ್ ಮಾಡುವ ಮೂಲಕ ದಾಖಲೆ ಬರೆದಿದ್ದರು. ಮಾತ್ರವಲ್ಲದೆ ತಂಡವೊಂದರ ಮೇಲೆ ಅತಿ ಹೆಚ್ಚು ಏಕದಿನ ಸರಣಿಯನ್ನು ಗೆದ್ದ ದಾಖಲೆ ಟೀಂ ಇಂಡಿಯಾ ಪಾಲಾಗಿದೆ.

ಈ ಟಿ20 ಸರಣಿಯಲ್ಲಿ ಮೊದಲ ಪಂದ್ಯವನ್ನು ಗೆದ್ದಿರುವ ರೋಹಿತ್ ನಾಯಕತ್ವದ ಟೀಂ ಇಂಡಿಯಾ ಎರಡನೇ ಪಂದ್ಯದಲ್ಲೂ ಗೆಲುವು ಸಾಧಿಸುವ ವಿಶ್ವಾಸವಿದೆ ಒಂದು ವೇಳೆ ಟೀಂ ಇಂಡಿಯಾ ಎರಡನೇ ಟಿ20 ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಮತ್ತೊಂದು ವಿಶ್ವದಾಖಲೆಯನ್ನು ತನ್ನದಾಗಿಸಿದಕೊಳ್ಳಲಿದೆ.

ಸೋಮವಾರ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಭಾರತ ತಂಡವೇನಾದರೂ ಗೆಲುವು ಸಾಧಿಸಿದರೆ ಪಾಕಿಸ್ತಾನದ ದಾಖಲೆಯನ್ನು ಸರಿಗಟ್ಟಲಿದೆ. ವೆಸ್ಟ್ ಇಂಡೀಸ್‌ ವಿರುದ್ಧ ಪಾಕಿಸ್ತಾನ ಟಿ20 ಪಂದ್ಯದಲ್ಲಿ 15 ಬಾರಿ ಗೆಲುವು ದಾಖಲಿಸಿದೆ, ಟೀಂ ಇಂಡಿಯಾ 14 ಪಂದ್ಯಗಳಲ್ಲಿ ಜಯ ಸಾಧಿಸಿದ್ದು, ಸೋಮವಾರದ ಪಂದ್ಯದಲ್ಲಿ ಜಯ ದಾಖಲಿಸಿದರೆ ಪಾಕಿಸ್ತಾನದ ಸಾಧನೆಯನ್ನು ಸರಿಗಟ್ಟಲಿದೆ.

 ವೆಸ್ಟ್ ಇಂಡೀಸ್‌ ಮೇಲೆ ಪಾಕಿಸ್ತಾನ ಪರಾಕ್ರಮ!

ವೆಸ್ಟ್ ಇಂಡೀಸ್‌ ಮೇಲೆ ಪಾಕಿಸ್ತಾನ ಪರಾಕ್ರಮ!

ಟಿ20 ಮಾಜಿ ವಿಶ್ವಚಾಂಪಿಯನ್ ಪಾಕಿಸ್ತಾನ ತಂಡ ಕೆರಿಬಿಯನ್ನರ ವಿರುದ್ಧ ಮೇಲುಗೈ ಸಾಧಿಸಿದೆ. 15 ಟಿ20 ಪಂದ್ಯಗಳಲ್ಲಿ ಪಾಕಿಸ್ತಾನ ವೆಸ್ಟ್ ಇಂಡೀಸ್‌ ವಿರುದ್ಧ ಗೆಲುವು ಸಾಧಿಸುವ ಮೂಲಕ ವೆಸ್ಟ್ ವಿಂಡೀಸ್‌ ವಿರುದ್ಧ ಟಿ20 ಮಾದರಿ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಜಯ ದಾಖಲಸಿರುವ ತಂಡ ಎನ್ನುವ ದಾಖಲೆ ಮಾಡಿದೆ.

ಭಾರತ ತಂಡ ಇದುವರೆಗೂ ವೆಸ್ಟ್‌ ಇಂಡಿಸ್‌ ವಿರುದ್ಧ 14 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. 2017ರಿಂದ ಇಲ್ಲಿಯವರೆಗೆ ವೆಸ್ಟ್ ಇಂಡೀಸ್ ವಿರುದ್ಧ ಆಡಿರುವ 13 ಪಂದ್ಯಗಳಲ್ಲಿ ಭಾರತ ಸೋತಿರುವುದು ಕೇವಲ ಒಂದು ಪಂದ್ಯವನ್ನು ಮಾತ್ರ.

 ಸರಣಿ ಗೆಲ್ಲುವ ತವಕದಲ್ಲಿದೆ ರೋಹಿತ್ ಪಡೆ

ಸರಣಿ ಗೆಲ್ಲುವ ತವಕದಲ್ಲಿದೆ ರೋಹಿತ್ ಪಡೆ

ಇಂಗ್ಲೆಂಡ್‌ ವಿರುದ್ಧ ಟಿ20 ಸರಣಿಯನ್ನು ಗೆದ್ದಿರುವ ಭಾರತ, ನಂತರ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿ ದಾಖಲೆ ನಿರ್ಮಿಸಿತು. ಈಗ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಮೊದಲನೇ ಪಂದ್ಯವನ್ನು ಗೆದ್ದಿರುವ ರೋಹಿತ್ ನಾಯಕತ್ವದ ಟೀಂ ಇಂಡಿಯಾ ಎರಡನೇ ಪಂದ್ಯದಲ್ಲೂ ಭರ್ಜರಿ ಪ್ರದರ್ಶನ ಮುಂದುವರೆಸುವ ವಿಶ್ವಾಸದಲ್ಲಿದೆ.


ಬ್ಯಾಟಿಂಗ್‌, ಬೌಲಿಂಗ್‌ ವಿಭಾಗದಲ್ಲಿ ಎಲ್ಲಾ ಆಟಗಾರರು ಉತ್ತಮ ಪ್ರದರ್ಶನ ತೋರುತ್ತಿರುವುದು ನಾಯಕ ರೋಹಿತ್ ಚಿಂತೆಯನ್ನು ಕಡಿಮೆ ಮಾಡಿದೆ. ಕೆಲವು ಆಟಗಾರರ ಮೇಲೆ ಅವಲಂಬಿತವಾಗದೆ ತಂಡವಾಗಿ ಉತ್ತಮ ಪ್ರದರ್ಶನ ನೀಡುತ್ತಿರುವುದು ತಂಡದ ಉತ್ಸಾಹ ಹೆಚ್ಚಿಸಿದೆ.

 ಶ್ರೀಲಂಕಾ ವಿರುದ್ಧ ಭಾರತ ಅತಿ ಹೆಚ್ಚು ಗೆಲುವು

ಶ್ರೀಲಂಕಾ ವಿರುದ್ಧ ಭಾರತ ಅತಿ ಹೆಚ್ಚು ಗೆಲುವು

17 ಟಿ20 ಪಂದ್ಯಗಳಲ್ಲಿ ಶ್ರೀಲಂಕಾ ತಂಡವನ್ನು ಸೋಲಿಸಿರುವ ಭಾರತ ವಿಶ್ವದಾಖಲೆಯನ್ನು ತನ್ನ ಹೆಸರಿನಲ್ಲಿ ಉಳಿಸಿಕೊಂಡಿದೆ. ಇನ್ನು ಪಾಕಿಸ್ತಾನ ಜಿಂಬಾಬ್ವೆ ತಂಡವನ್ನು 16 ಟಿ20 ಪಂದ್ಯಗಳಲ್ಲಿ ಸೋಲಿಸಿದೆ. ನ್ಯೂಜಿಲೆಂಡ್‌ ವಿರುದ್ದವೂ ಪಾಕಿಸ್ತಾನ ತಂಡ 15 ಪಂದ್ಯಗಳಲ್ಲಿ ಜಯ ಸಾಧಿಸಿದೆ.

ವಿಶ್ವಕಪ್‌ ಹತ್ತಿರವಾಗುತ್ತಿರುವ ವೇಳೆ ಭಾರತ ತಂಡ ಟಿ20 ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಅದರಲ್ಲೂ ಪ್ರಮುಖ ಆಟಗಾರರ ಅಲಭ್ಯತೆ ನಡುವೆಯೂ ಭಾರತ ಗೆಲುವಿನ ನಾಗಾಲೋಟ ಮುಂದುವರೆಸಿದೆ.

 ಭರ್ಜರಿ ಫಾರ್ಮ್‌ನಲ್ಲಿರುವ ದಿನೇಶ್‌ ಕಾರ್ತಿಕ್

ಭರ್ಜರಿ ಫಾರ್ಮ್‌ನಲ್ಲಿರುವ ದಿನೇಶ್‌ ಕಾರ್ತಿಕ್

ಸರಣಿಯ ಮೊದಲನೇ ಟಿ20 ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ 44 ಎಸೆತಗಳಲ್ಲಿ 64 ರನ್‌ ಗಳಿಸಿ ಮಿಂಚಿದ್ದರು. ಅಂತಿಮ ಓವರ್ ಗಳಲ್ಲಿ ಕ್ರೀಸಿಗೆ ಬಂದ ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ಸ್ಫೋಟಕ ಆಟವಾಡಿದ್ದರು. ಕೇವಲ 19 ಎಸೆತಗಳಲ್ಲಿ 4 ಬೌಂಡರಿ 2 ಭರ್ಜರಿ ಸಿಕ್ಸರ್ ಸಿಡಿಸಿ 41 ರನ್‌ ಗಳಿಸಿದ್ದರು. ಭಾರತದ ಬೌಲರ್ ಗಳು ಸಂಘಟಿತವಾಗಿ ಉತ್ತಮ ಪ್ರದರ್ಶನ ನೀಡುವ ಮೂಲಕ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಸೇಂಟ್‌ ಕಿಟ್ಸ್‌ನ ವಾರ್ನರ್ ಪಾರ್ಕ್‌ ಕ್ರೀಡಾಂಗಣದಲ್ಲಿ ಎರಡನೇ ಟಿ20 ಪಂದ್ಯ ನಡೆಯಲಿದ್ದು, ಮೊದಲನೇ ಪಂದ್ಯದಲ್ಲಿ ಆಡಿದವರೇ 11ರ ಬಳಗದಲ್ಲಿ ಉಳಿಯುವ ಸಾಧ್ಯತೆ ಇದೆ. ಮೊದಲನೇ ಪಂದ್ಯದಲ್ಲಿ ಸೋತಿರುವ ವೆಸ್ಟ್ ಇಂಡೀಸ್‌ನಲ್ಲಿ ಬದಲಾವಣೆ ಆಗುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+