Ind vs Eng: ಚಾಂಪಿಯನ್ಸ್ ಟ್ರೋಫಿ ಸವಾಲಿಗೆ ರೆಡಿ ಎಂದ ಭಾರತ!

ನಾಗ್ಪುರದ ವಿಧರ್ಭ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ 4 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಚಾಂಪಿಯನ್ಸ್ ಟ್ರೋಫಿಗೆ ಮುನ್ನ ಭರ್ಜರಿ ಗೆಲುವು ಸಾಧಿಸುವ ಮೂಲಕ ಭಾರತ ದೊಡ್ಡ ಸವಾಲಿಗೆ ಸಿದ್ಧ ಎನ್ನುವ ಸಂದೇಶ ರವಾನಿಸಿದೆ.

ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಫಿಲ್ ಸಾಲ್ಟ್ ಮತ್ತು ಬೆನ್ ಡಕೆಟ್ ಇಂಗ್ಲೆಂಡ್‌ಗೆ ಸ್ಫೋಟಕ ಆರಂಭ ನೀಡಿದರು. 8.5 ಓವರ್ ಗಳಲ್ಲೇ ಈ ಜೋಡಿ ಮೊದಲ ವಿಕೆಟ್‌ಗೆ 77 ರನ್ ಕಲೆ ಹಾಕಿತು. 26 ಎಸೆತಗಳಲ್ಲಿ 5 ಬೌಂಡರಿ 3 ಸಿಕ್ಸರ್ ಸಹಿತ 43 ರನ್ ಗಳಿಸಿದ್ದ ಫಿಲ್ ಸಾಲ್ಟ್ ರನೌಟ್ ಆಗಿದ್ದು ಇಂಗ್ಲೆಂಡ್‌ಗೆ ಭಾರಿ ಆಘಾತ ಕೊಟ್ಟಿತು.

india defeated england by 4 wicktes in 1st odi of the series

ಫಿಲ್ ಸಾಲ್ಟ್ ಔಟಾಗುತ್ತಿದ್ದಂತೆ ಇಂಗ್ಲೆಂಡ್‌ ಹಿನ್ನಡೆ ಅನುಭವಿಸಿತು. ಬೆನ್ ಡಕೆಟ್ 32 ರನ್‌ ಗಳಿಸಿ ಔಟಾದರೆ, ಜೋ ರೂಟ್ 19 ರನ್ ಗಳಿಸಿ ಔಟಾದರು. ಹ್ಯಾರಿ ಬ್ರೂಕ್ ರನ್ ಗಳಿಸುವ ಮುನ್ನವೇ ವಿಕೆಟ್ ಒಪ್ಪಿಸಿದರು. ನಾಯಕ ಜೋಸ್ ಬಟ್ಲರ್ 52 ರನ್ ಗಳಿಸಿದರೆ, ಜೇಕಬ್ ಬೆಥೆಲ್ 51 ರನ್ ಗಳಿಸಿ ಇಂಗ್ಲೆಂಡ್‌ಗೆ ನೆರವಾದರು. ಅಂತಿಮವಾಗಿ ಇಂಗ್ಲೆಂಡ್ 47.4 ಓವರ್ ಗಳಲ್ಲಿ 248 ರನ್ ಗಳಿಸಿ ಔಟಾದರು.

ಮೊದಲ ಪಂದ್ಯವನ್ನಾಡಿದ ಹರ್ಷಿತ್ ರಾಣಾ ಆರಂಭದಲ್ಲಿ ದುಬಾರಿಯಾದರು ಬಳಿಕ 3 ವಿಕೆಟ್ ಪಡೆಯುವ ಮೂಲಕ ಇಂಗ್ಲೆಂಡ್‌ಗೆ ಆಘಾತ ನೀಡಿದರು. ರವೀಂದ್ರ ಜಡೇಜಾ ಕೂಡ 3 ವಿಕೆಟ್ ಪಡೆದರೆ, ಕುಲದೀಪ್ ಯಾದವ್, ಅಕ್ಷರ್ ಪಟೇಲ್ ಮತ್ತು ಮೊಹಮ್ಮದ್ ಶಮಿ ತಲಾ ಒಂದು ವಿಕೆಟ್ ಪಡೆದರು.

ಅಯ್ಯರ್, ಅಕ್ಷರ್, ಗಿಲ್ ಅಬ್ಬರ

249 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಭಾರತ ಆರಂಭದಲ್ಲಿ ವಿಕೆಟ್ ಕಳೆದುಕೊಮಡು ಆಘಾತ ಅನುಭವಿಸಿತು. ಯಶಸ್ವಿ ಜೈಸ್ವಾಲ್ 22 ಎಸೆತಗಳಲ್ಲಿ 15 ರನ್ ಗಳಿಸಿ ಔಟಾದರೆ ರೋಹಿತ್ ಶರ್ಮಾ 2 ರನ್ ಗಳಿಸಿ ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. ಕೆಎಲ್ ರಾಹುಲ್ 2 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು.

ಶ್ರೇಯಸ್ ಅಯ್ಯರ್ ಭರ್ಜರಿ ವಾಪಸಾತಿ ಮಾಡಿದ್ದು 36 ಎಸೆತಗಳಲ್ಲಿ 9 ಬೌಂಡರಿ 2 ಸಿಕ್ಸರ್ ಸಹಿತ 59 ರನ್ ಗಳಿಸಿದರು. ಅಕ್ಷರ್ ಪಟೇಲ್ 47 ಎಸೆತಗಳಲ್ಲಿ 52 ರನ್ ಗಳಿಸಿದರು. ಶುಭಮನ್ ಗಿಲ್ 96 ಎಸೆತಗಳಲ್ಲಿ 87 ರನ್ ಗಳಿಸಿದರು. ಈ ಮೂವರ ಭರ್ಜರಿ ಬ್ಯಾಟಿಂಗ್ ನರವಿನಿಂದ ಭಾರತದ ಗೆಲುವು ಸುಲಭವಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+