T20 World Cup: ಟಿ20 ವಿಶ್ವಕಪ್‌ಗೆ ಭಾರತ ತಂಡ ಪ್ರಕಟ; ಕನ್ನಡತಿ ಶ್ರೇಯಾಂಕಾ ಪಾಟೀಲ್‌ಗೆ ಸ್ಥಾನ
ಅಕ್ಟೋಬರ್ 3ರಿಂದ ಆರಂಭವಾಗಲಿರುವ ಮಹಿಳಾ ಟಿ20 ವಿಶ್ವಕಪ್‌ಗೆ ಬಿಸಿಸಿಐ ಭಾರತ ತಂಡವನ್ನು ಆಯ್ಕೆ ಮಾಡಿದೆ. ಬಾಂಗ್ಲಾದೇಶದಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್ ಪಂದ್ಯಾವಳಿ ಅಲ್ಲಿ ದಂಗೆ ಶುರುವಾದ ಬಳಿಕ, ಯುಎಇಗೆ ಸ್ಥಳಾಂತರ ಮಾಡಿದೆ. ಭಾರತ ಬಲಿಷ್ಠ ತಂಡವನ್ನು ಆಯ್ಕೆ ಮಾಡಿದ್ದು, ಈ ಬಾರಿ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದೆ. ಕನ್ನಡತಿ ಶ್ರೇಯಾಂಕಾ ಪಾಟೀಲ್ ಕೂಡ ಟಿ20 ವಿಶ್ವಕಪ್‌ನಲ್ಲಿ ಮಿಂಚಲು ಸಜ್ಜಾಗಿದ್ದಾರೆ.
ಹರ್ಮನ್‌ಪ್ರೀತ್ ಕೌರ್ ತಂಡವನ್ನು ಮುನ್ನಡೆಸಲಿದ್ದಾರೆ. ಸ್ಮೃತಿ ಮಂದಾನಗೆ ತಂಡದ ಉಪನಾಯಕಿ ಪಟ್ಟ ನೀಡಲಾಗಿದೆ. ಆರ್ ಸಿಬಿ ಸ್ಟಾರ್ ಆಟಗಾರ್ತಿ, ಕರ್ನಾಟಕದ ಶ್ರೇಯಾಂಕಾ ಪಾಟೀಲ್ ತಂಡದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ, ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಅವರು ತಂಡದಲ್ಲಿ ಅವಕಾಶ ಪಡೆಯಲು ಪಂದ್ಯಾವಳಿಗೆ ಮುನ್ನ ಸಂಪೂರ್ಣವಾಗಿ ಫಿಟ್ ಆಗಬೇಕಿದೆ.

ಟಿ20 ವಿಶ್ವಕಪ್‌ಗೆ ಭಾರತ ತಂಡ
ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಜೆಮಿಮಾ ರಾಡ್ರಿಗಸ್, ರಿಚಾ ಘೋಷ್ (ವಿಕೆಟ್ ಕೀಪರ್), ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್ ಠಾಕೂರ್, ದಯಾಲನ್ ಹೇಮಲತಾ, ಆಶಾ ಶೋಭಾನಾ, ರಾಧಾ ಯಾದವ್, ಶ್ರೇಯಾಂಕಾ ಪಾಟೀಲ್, ಸಜನಾ ಸಜೀವನ್.
ತಂಡದ ಜೊತೆ ಪ್ರಯಾಣ ಮಾಡಲಿರುವ ಮೀಸಲು ಆಟಗಾರರು: ಉಮಾ ಚೆಟ್ರಿ, ತನನುಜಾ ತನುಜಾ ಕನ್ವರ್, ಸೈಮಾ ಠಾಕೋರ್.
ಪ್ರಯಾಣಿಸದ ಮೀಸಲು ಆಟಗಾರರು: ರಾಘವಿ ಬಿಸ್ಟ್, ಪ್ರಿಯಾ ಮಿಶ್ರಾ.
ಭಾರತ-ಪಾಕಿಸ್ತಾನ ಪಂದ್ಯ ಯಾವಾಗ?
ಐಸಿಸಿ ಪಂದ್ಯಾವಳಿಗಳು ಎಂದ ಮೇಲೆ ಅಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಮುಖಾಮುಖಿ ಭಾರಿ ಕುತೂಹಲ ಕೆರಳಿಸುತ್ತದೆ. ಟಿ20 ವಿಶ್ವಕಪ್‌ನಲ್ಲಿ ಕೂಡ ಭಾರತ-ಪಾಕಿಸ್ತಾನ ಎ ಗುಂಪಿನಲ್ಲಿ ಆಡುತ್ತಿದ್ದು, ಅಕ್ಟೋಬರ್ 6ರಂದು ಮುಖಾಮುಖಿಯಾಗಲಿವೆ. ದುಬೈನ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದ್ದು, ಸ್ಥಳೀಯ ಕಾಲಮಾನ 3.30ಕ್ಕೆ ಆರಂಭವಾಗಲಿದೆ.
ಭಾರತದ ಪಂದ್ಯಗಳ ವಿವರ
ಅಕ್ಟೋಬರ್ 3ರಿಂದ ಟಿ20 ವಿಶ್ವಕಪ್ ಪಂದ್ಯಾವಳಿ ಆರಂಭವಾಗಲಿದ್ದು, ಅಕ್ಟೋಬರ್ 4ರಂದು ಭಾರತ ತನ್ನ ಮೊದಲ ಪಂದ್ಯ ಆಡಲಿದೆ. ಭಾರತ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಅಕ್ಟೋಬರ್ 6ರಂದು ಭಾರತ ಪಾಕಿಸ್ತಾನ ಮುಖಾಮುಖಿಯಾಗಲಿವೆ. ಅಕ್ಟೋಬರ್ 9ರಂದು ಭಾರತ ಮತ್ತು ಶ್ರೀಲಂಕಾ ಸೆಣೆಸಲಿವೆ. ಅಕ್ಟೋಬರ್ 13ರಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಪಂದ್ಯ ನಡೆಯಲಿದೆ.












Click it and Unblock the Notifications