Virat Kohli: ನ್ಯೂಜಿಲೆಂಡ್ ವಿರುದ್ಧ ಕೂಡ ಬೌಲಿಂಗ್ ಮಾಡ್ತಾರ ವಿರಾಟ್ ಕೊಹ್ಲಿ?
ವಿರಾಟ್ ಕೊಹ್ಲಿ ಸದ್ಯ ಏಕದಿನ ವಿಶ್ವಕಪ್‌ನಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ, ಲೀಗ್ ಹಂತದ ಪಂದ್ಯಗಳು ಮುಕ್ತಾಯದ ಬಳಿಕ ಕೊಹ್ಲಿ ಈ ಬಾರಿ ವಿಶ್ವಕಪ್‌ನಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ವಿರಾಟ್ ಕೊಹ್ಲಿ ಅರ್ಧಶತಕ ಗಳಿಸಿದರು. ಆದರೆ 7 ವರ್ಷಗಳ ಬಳಿಕ ವಿಕೆಟ್ ಪಡೆಯುವ ಮೂಲಕ ಮೈದಾನದಲ್ಲಿ ಮಿಂಚು ಹರಿಸಿದರು.
ನೆದರ್ಲೆಂಡ್ಸ್ ನಾಯಕ ಸ್ಕಾಟ್ ಎಡ್ವರ್ಡ್ಸ್ ಅವರನ್ನು ಔಟ್ ಮಾಡಿದ ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳಿಗೆ ಇದು ಅಚ್ಚರಿ ಎನಿಸಿತ್ತು. ಮಾತ್ರವಲ್ಲದೆ ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್, ರೋಹಿತ್ ಶರ್ಮಾ ಕೂಡ ಬೌಲಿಂಗ್ ಮಾಡುವ ಮೂಲಕ ಕ್ರೀಡಾಭಿಮಾನಿಗಳನ್ನು ರಂಜಿಸಿದರು.

ಬೌಲಿಂಗ್ ಕೋಚ್ ಹೇಳಿದ್ದೇನು?
ಭಾರತದ ಬೌಲಿಂಗ್ ಕೋಚ್ ಪರಾಸ್ ಮಾಂಬ್ರೆ ಅವರು ವಿರಾಟ್ ಕೊಹ್ಲಿಯನ್ನು ಬೌಲರ್ ಆಗಿ ಬಳಸಲು ತಾನು ಮತ್ತು ರೋಹಿತ್ ಶರ್ಮಾ ಯೋಜಿಸಿದ್ದೆವು ಎಂದು ಬಹಿರಂಗಪಡಿಸಿದ್ದಾರೆ. ರೋಹಿತ್ ಶರ್ಮಾ ಕೂಡ ಬೌಲಿಂಗ್ ಮಾಡಿ ವಿಕೆಟ್ ಕಬಳಿಸಿದರು.
"ಇದು ಉತ್ತಮವಾದ ಸೆಟ್ ಅಪ್ ಆಗಿತ್ತು. ವಿರಾಟ್ ವಿಕೆಟ್ ಪಡೆಯುವುದನ್ನು ನೋಡುವುದೇ ಸೊಗಸಾಗಿತ್ತು. ಅವರು ಫೈನ್ ಲೆಗ್ ಅನ್ನು ಸ್ವಲ್ಪ ಸರಿಹೊಂದಿಸುವುದನ್ನು ನಾನು ನೋಡಿದೆ, ಅವರು ಎಲ್ಲಿ ಬೌಲ್ ಮಾಡಲಿದ್ದಾರೆ ಎಂದು ಕೆಎಲ್ (ರಾಹುಲ್) ಕಡೆಗೆ ನೋಡಿದರು. ಇದು ಒಂದು ಸುಂದರವಾದ ಸೆಟ್ ಆಗಿತ್ತು," ಎಂದು ಮಾಂಬ್ರೆ ಬಿಸಿಸಿಐ ಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.
ಸೆಮಿಫೈನಲ್‌ನಲ್ಲಿ ಬೌಲಿಂಗ್ ಮಾಡ್ತಾರ?
ನಾವು ವಿರಾಟ್ ಅನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದರ ಕುರಿತು ನಾನು ರೋಹಿತ್ ಅವರೊಂದಿಗೆ ಚಾಟ್ ಮಾಡಿದ್ದೇನೆ. ಹೊಸ ಚೆಂಡಿನೊಂದಿಗೆ, ಅವರು ಚೆಂಡನ್ನು ಸ್ವಿಂಗ್ ಮಾಡುತ್ತಾರೆ ಮತ್ತು ಪವರ್‌ಪ್ಲೇನಲ್ಲಿ ಸ್ವಲ್ಪಮಟ್ಟಿಗೆಸಹಾಯ ಮಾಡುತ್ತಾರೆ. ಮಧ್ಯಮ ಓವರ್ ನಲ್ಲಿ ಕೂಡ ಅವರು ಉತ್ತಮವಾಗಿ ಬೌಲಿಂಗ್ ಮಾಡಿದ್ದಾರೆ ಎಂದರು.
ನ್ಯೂಜಿಲೆಂಡ್ ವಿರುದ್ಧ ವಿರಾಟ್ ಕೊಹ್ಲಿಗೆ ಬೌಲಿಂಗ್ ಮಾಡಲು ಅವಕಾಶ ನೀಡುವ ಅಪಾಯವನ್ನು ರೋಹಿತ್ ಶರ್ಮಾ ತೆಗೆದುಕೊಳ್ಳುತ್ತಾರೆಯೇ? ಎಂಬುದು ಮುಖ್ಯ ಪ್ರಶ್ನೆಯಾಗಿದೆ. ತಂಡದಲ್ಲಿ 6ನೇ ಬೌಲರ್ ಹಾರ್ದಿಕ್ ಪಾಂಡ್ಯ ಅವರು ಗಾಯದಿಂದ ಹೊರಬಿದ್ದಿದ್ದಾರೆ, ಈಗ ಐವರು ಬೌಲರ್ ಜೊತೆ ಮಾತ್ರ ಭಾರತ ಕಣಕ್ಕಿಳಿಯುತ್ತಿದೆ.
ಮುಂಬೈನಲ್ಲಿ ವಿರಾಟ್ ಕೊಹ್ಲಿ ಬೌಲಿಂಗ್ ಮಾಡುವ ಅವಕಾಶ ಕಮ್ಮಿ ಇದೆಯಾದರೂ, ಒಂದು ವೇಳೆ ಭಾರತ ಮೊದಲು ಬ್ಯಾಟಿಂಗ್ ಮಾಡಿ ಬೃಹತ್ ಮೊತ್ತ ಕಲೆಹಾಕಿದರೆ, ಮಧ್ಯಮ ಓವರ್ ಗಳಲ್ಲಿ ಕೊಹ್ಲಿ ಒಂದೆರಡು ಓವರ್ ಬೌಲಿಂಗ್ ಮಾಡುವ ಅವಕಾಶ ಕೂಡ ಇದೆ.












Click it and Unblock the Notifications