Ind vs Aus: ಮೂರನೇ ಟೆಸ್ಟ್ ಮೊದಲ ದಿನವೇ ಮಳೆ ಕಾಟ

ಬ್ರೀಸ್ಬೇನ್‌ನ ಗಬ್ಬಾದಲ್ಲಿ ನಡೆಯುತ್ತಿರುವ ಭಾರತ ಆಸ್ಟ್ರೇಲಿಯಾ ಟೆಸ್ಟ್ ಸರಣಿಯ ಮೂರನೇ ಪಂದ್ಯಕ್ಕೆ ಮೊದಲ ದಿನವೇ ಮಳೆ ಅಡ್ಡಿಯಾಗಿದೆ. ಟಾಸ್ ಗೆದ್ದ ಭಾರತ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆಸ್ಟ್ರೇಲಿಯಾ ಎಚ್ಚರಿಕೆಯಿಂದಲೇ ಬ್ಯಾಟಿಂಗ್ ಆರಂಭಿಸಿತು. 13.2 ಓವರ್ ಗಳಲ್ಲಿ 28 ರನ್ ಗಳಿಸಿದ್ದ ಆಸ್ಟ್ರೇಲಿಯಾ ಆರಂಭಿಕ ಜೋಡಿ ವಿಶ್ವಾಸದಿಂದಲೇ ಬ್ಯಾಟಿಂಗ್ ಮಾಡುತ್ತಿದ್ದಾಗ ಮಳೆ ಆರಂಭವಾಯಿತು.

ಮಳೆ ನಿಲ್ಲಬಹುದು ಮತ್ತೆ ಪಂದ್ಯ ಆರಂಭವಾಗಬಹುದು ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ನಿರಾಸೆಯಾಯಿತು. ಎಷ್ಟು ಸಮಯ ಕಾದರೂ ಮಳೆ ನಿಲ್ಲದ ಕಾರಣ ಮೊದಲ ದಿನದಾಟ ಮುಗಿದಿದೆ ಎಂದು ಘೋಷಿಸಲಾಯಿತು.

ind vs aus 3rd test first day off

ಉಸ್ಮಾನ್ ಖವಾಜ ಅಜೇಯ 19 ರನ್ ಗಳಿಸಿದ್ದು, ನಾಥನ್ ಮೆಕ್‌ಸ್ವೀನಿ ಅಜೇಯ 4 ರನ್ ಗಳಿಸಿದ್ದು ಎರಡನೇ ದಿನ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಆದರೆ ಎರಡನೇ ದಿನ ಕೂಡ ಮಳೆ ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆ ಉಂಟಾಗಿದೆ.

ಇನ್ನೂ ಎರಡು ದಿನ ಮಳೆ

ಬ್ರಿಸ್ಬೇನ್‌ನಲ್ಲಿ ಇನ್ನೂ ಎರಡು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಆದರೂ ಎರಡನೇ ದಿನ ಪಂದ್ಯ ನಡೆಯಲು ಮಳೆ ಬಿಡುವು ಕೊಡಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಕೊನೆಯ ಎರಡು ದಿನದ ಪಂದ್ಯಕ್ಕೆ ಮಳೆ ಆತಂಕ ಇರದ ಕಾರಣ, ಕೊನೆಯ ಎರಡು ದಿನ ಪೂರ್ತಿ ನಡೆಯುವ ಸಾಧ್ಯತೆ ಇದೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ ತಲುಪಲು ಎರಡೂ ತಂಡಗಳಿಗೂ ಈ ಟೆಸ್ಟ್ ಗೆಲುವು ಅನಿವಾರ್ಯವಾಗಿದೆ. ಐದು ಪಂದ್ಯಗಳ ಟೆಸ್ಟ್ ಸರಣಿ ಸದ್ಯ 1-1 ರಲ್ಲಿ ಸಮಬಲಗೊಂಡಿದ್ದು ಗಬ್ಬಾದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯ ಗೆದ್ದು ಸರಣಿ ಮುನ್ನಡೆ ಪಡೆಯುವ ಯೋಜನೆ ಎರಡೂ ತಂಡಗಳದ್ದಾಗಿದೆ.

ಭಾರತ ತಂಡದಲ್ಲಿ ಎರಡು ಬದಲಾವಣೆ

ಮೂರನೇ ಟೆಸ್ಟ್ ಪಂದ್ಯಕ್ಕಾಗಿ ಭಾರತ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದೆ. ಹರ್ಷಿತ್ ರಾಣಾ ಬದಲಾಗಿ ಆಕಾಶ್ ದೀಪ್ ಅವಕಾಶ ಪಡೆದಿದ್ದು, ರವಿಚಂದ್ರನ್ ಅಶ್ವಿನ್ ಬದಲಾಗಿ ರವೀಂದ್ರ ಜಡೇಜಾ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆದಿದ್ದಾರೆ.

ಆಸ್ಟ್ರೇಲಿಯಾ ತಮಡದಲ್ಲಿ ಕೂಡ ಒಂದು ಬದಲಾವಣೆ ಮಾಡಲಾಗಿದೆ. ಸ್ಕಾಟ್ ಬೊಲ್ಯಾಂಡ್ ಬದಲಾಗಿ ಜೋಶ್ ಹೇಜಲ್‌ವುಡ್ ಸ್ಥಾನ ಪಡೆದುಕೊಂಡಿದ್ದು ಉಳಿದಂತೆ ಅಡಿಲೇಡ್‌ನಲ್ಲಿ ಆಡಿದ ತಂಡವೇ ಕಣಕ್ಕಿಳಿದಿದೆ.

ಉಭಯ ತಂಡಗಳ ಆಡುವ ಬಳಗ

ಭಾರತ: ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ರಿಷಬ್ ಪಂತ್ (ವಿಕೆಟ್ ಕೀಪರ್), ರೋಹಿತ್ ಶರ್ಮಾ (ನಾಯಕ), ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್.

ಆಸ್ಟ್ರೇಲಿಯಾ: ಉಸ್ಮಾನ್ ಖವಾಜಾ, ನಾಥನ್ ಮೆಕ್‌ಸ್ವೀನಿ, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಜೋಶ್ ಹ್ಯಾಜಲ್‌ವುಡ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+