IPL 2024: 15 ದಿನದಲ್ಲಿ ಪ್ಲೇ ಆಫ್ ಚಿತ್ರಣವನ್ನೇ ಬದಲು ಮಾಡಿದ ಆರ್‌ಸಿಬಿ: 10 ರಿಂದ 4ನೇ ಸ್ಥಾನದ ಕಥೆ
ಮೇ 3 ರಂದು ಆರ್‌ಸಿಬಿ ಪ್ಲೇ ಆಫ್‌ಗೆ ಪ್ರವೇಶ ಮಾಡುತ್ತಾ ಅಂತಾ ಕೇಳಿದ್ರೆ, ತುಂಬ ಕಷ್ಟ ಇದೆ ಎಂಬ ಉತ್ತರ ಬರುತ್ತಿತ್ತು. ಅಲ್ಲದೆ ಆಗ ನಡೆದ ಪೋಲ್‌ಗಳಲ್ಲೂ ಆರ್‌ಸಿಬಿ ಪ್ಲೇ ಆಫ್‌ಗೆ ಪ್ರವೇಶಿಸುವ ಚಾನ್ಸ್ ಜಸ್ಟ್ 1 ಪರ್ಸೆಂಟ್ ಅಂತಾ ಹೇಳಲಾಗುತ್ತಿತ್ತು. ಆದರೆ ಜಸ್ಟ್ 15 ದಿನಗಳ ಒಳಗೆ ಪ್ಲೇ ಆಫ್ ಸಮೀಕರಣವನ್ನೇ ಆರ್‌ಸಿಬಿ ಚೇಂಜ್ ಮಾಡಿದೆ.
ಮೇ 3 ರಂದು ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದ ತಂಡ ಮೇ 18 ರಂದು ನಾಲ್ಕನೇ ಸ್ಥಾನಕ್ಕೆ ಬರುತ್ತದೆ ಎಂದು ಯಾರೂ ಊಹಿಸಿರಲು ಸಾಧ್ಯವಿಲ್ಲ. ತಮ್ಮ ಮೇಲೆ ಇಟ್ಟ ನಂಬಿಕೆಯನ್ನು ಉಳಿಸಿಕೊಂಡ ಆರ್‌ಸಿಬಿ, ಸೆಕೆಂಡ್ ಆಫ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದೆ. ಸೊಗಸಾದ ಸಂಘಟಿತ ಆಟದ ಪ್ರದರ್ಶನ ನೀಡಿದ ಆರ್‌ಸಿಬಿ ಪ್ಲೇ ಆಫ್‌ಗೆ ಪ್ರವೇಶ ಪಡೆದಿದೆ.

15 ದಿನದಲ್ಲಿ ಆಗಿದ್ದು ಏನು?
ಆರ್‌ಸಿಬಿ 15 ದಿನದಲ್ಲಿ ಅಂತಹದ್ದೇನು ಚೇಂಜ್ ಮಾಡಿತು ಎಲ್ಲರೂ ಲೆಕ್ಕಾಚಾರ ಹಾಕುತ್ತಿದ್ದಾರೆ. ಆಗಿದ್ದು ಬೇರೆ ಏನು ಇಲ್ಲ. ಎಲ್ಲ ಆಟಗಾರರು ತಮ್ಮ ಜವಾಬ್ದಾರಿಯನ್ನು ಅರಿತು ಆಡಿದ್ದಾರೆ. ಪರಿಸ್ಥಿತಿಗೆ ತಕ್ಕಂತೆ ಆಟವನ್ನು ಬದಲಿಸಿದ್ದಾರೆ. ರನ್ ವೇಗಕ್ಕೆ ಚುರುಕು ಮುಟ್ಟಿಸುವುದರಿಂದ ಹಿಡಿದು, ರನ್ ಗಳಿಗೆ ಕಡಿವಾಣ ಹಾಕುವುದರಲ್ಲಿ ಫಾಫ್ ಪಡೆ ಮಿಂಚಿದೆ. ಸಖತ್ ಸಂಘಿತ ಆಟವೇ ತಂಡದ ಪ್ಲಸ್ ಪಾಯಿಂಟ್.
ಮೇ 4ರಂದು ಗುಜರಾತ್ ಟೈಟನ್ಸ್ ನೀಡಿದ್ದ 148 ರನ್ ಗುರಿಯನ್ನು 13.4 ಓವರ್‌ಗಳಲ್ಲಿ ಚೇಸ್ ಮಾಡಿ ರನ್ ರೇಟ್ ಸುಧಾರಿಸಿಕೊಂಡಿತು. ಮೇ 9 ರಂದು ಪಂಜಾಬ್ ವಿರುದ್ಧ ಸವಾಲಿನ ಮೊತ್ತ ನೀಡಿ 60 ರನ್‌ಗಳಿಂದ ಪಂದ್ಯವನ್ನು ಗೆದ್ದಿತು. ಮೇ 12 ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 47 ರನ್ ಗೆಲುವು ಸಾಧಿಸಿ ರನ್ ರೇಟ್ ಇನ್ನಷ್ಟು ಇಂಪ್ರೂ ಮಾಡಿಕೊಂಡಿತು. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮಹತ್ವದ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿ ಪ್ಲೇ ಆಫ್‌ಗೆ ಪ್ರವೇಶ ಪಡೆದಿದೆ.
ಮೇ 4ರಿಂದ ಸೂಪರ್ ಆಗಿ ಆರ್‌ಸಿಬಿ ಬೌಲರ್‌ಗಳ ಬೌಲಿಂಗ್ ಪ್ರದರ್ಶನ ನೀಡಿದರು. ಈ ವೇಳೆ ಬೌಲರ್‌ಗಳು ತಮ್ಮ ಏಕನಾಮಿ ಬಗ್ಗೆಯೂ ಹೆಚ್ಚಿನ ಒತ್ತು ನೀಡಿದರು. ವೇಗದ ಬೌಲರ್‌ಗಳು ಸಹ ಬಿಗುವಿನ ದಾಳಿ ನಡೆಸಿ ತಂಡಕ್ಕೆ ನೆರವಾದರು. ಅಲ್ಲದೆ ಈ ಸಮಯದಲ್ಲಿ ಸ್ವಪ್ನಿಲ್ ಸಿಂಗ್ ಹಾಗೂ ಕರಣ್ ಶರ್ಮಾ ತಮ್ಮ ಸ್ಪಿನ್ ಮೋಡಿಯ ಮೂಲಕ ಎದುರಾಳಿಗಳನ್ನು ಕಾಡಿದರು.

ಪಾರ್ಟಿಗೆ ಬಂದ ಮಿಡ್ಲ್ ಆರ್ಡರ್
ಟೂರ್ನಿಯ ಆರಂಭಕ್ಕು ಮುನ್ನ ಕೈ ಕೊಟ್ಟಿದ್ದ ಮಿಡ್ಲ್ ಆರ್ಡರ್ ಎರಡೇ ಲೀಗ್ ಐಪಿಎಲ್ ಆರಂಭವಾದಾಗ ಆರ್‌ಸಿಬಿ ಮಿಡ್ಲ್ ಆರ್ಡರ್ ಲಯ ಕಂಡುಕೊಂಡಿತು. ರಜತ್ ಪಟಿದಾರ್, ವಿಲ್ ಜಾಕ್ಸ್, ಕ್ಯಾಮರೂನ್ ಗ್ರೀನ್ ಸಮಯೋಚಿತ ಆಟದ ಪ್ರದರ್ಶನ ನೀಡಿ ತಂಡಕ್ಕೆ ಆಧಾರವಾದರು. ರಜತ್ ಪಟಿದಾರ್ ಸತತ ಭರ್ಜರಿ ಬ್ಯಾಟಿಂಗ್ ಶೋ ಮುಂದುವರಿಸಿದ ಪರಿಣಾಮ ಆರ್‌ಸಿಬಿ ಇಂದು ಈ ಹಂತಕ್ಕೆ ಬಂದು ನಿಂತಿದೆ.












Click it and Unblock the Notifications