Hardik Pandya: ಮಾಜಿ ಪತ್ನಿಗೆ 4,00,00,000 ರೂಪಾಯಿ ಕಾರು ಗಿಫ್ಟ್ ನೀಡಿದ ಹಾರ್ದಿಕ್ ಪಾಂಡ್ಯ: ವಿಡಿಯೋ ವೈರಲ್
Hardik Pandya: ಸಾಮಾನ್ಯವಾಗಿ ಬಹುತೇಕ ಸೆಲೆಬ್ರೆಟಿಗಳು ದಾಂಪತ್ಯ ಜೀವನವನ್ನು ಒಮ್ಮೆ ಮುರಿದುಕೊಂಡರೆ ಅವರು ಮತ್ತೆ ತಮ್ಮ ಮಕ್ಕಳ ಭವಿಷ್ಯವನ್ನು ಲೆಕ್ಕಿಸದೇ ದೂರ ದೂರವಾಗಿಬಿಡುತ್ತಾರೆ. ಆದರೆ, ಇದೀಗ ಭಾರತ ಕ್ರಿಕೆಟ್ ತಂಡದ ಆಲ್‌ರೌಂಡರ್ ಹಾರ್ದಿಪ್ ಪಾಂಡ್ಯ ಮತ್ತು ನಟಿ ನತಾಶಾ ಸ್ಟಾಂಕೋವಿಕ್ ದಾಂಪತ್ಯ ಜೀವನದಲ್ಲಿ ದೂರವಾಗಿದ್ದರೂ, ತಮ್ಮ ಪುತ್ರ ಅಗಸ್ತ್ಯನ ಪೋಷಣೆಯಲ್ಲಿ ಮಾದರಿಯಾಗಿದ್ದಾರೆ. ಇಬ್ಬರೂ ಬೇರ್ಪಟ್ಟ ಬಳಿಕವೂ ಮಗನ ಬೆಳವಣಿಗೆ ಹಾಗೂ ಭವಿಷ್ಯಕ್ಕಾಗಿ ಒಟ್ಟಾಗಿ ಜವಾಬ್ದಾರಿಯನ್ನು ನಿಭಾಯಿಸುತ್ತಿರುವುದು ಗಮನ ಸೆಳೆಯುತ್ತಿದೆ.
ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ಇವರ ಕುಟುಂಬಕ್ಕೆ ಹೊಸದಾಗಿ ಸೇರ್ಪಡೆಯಾದ ಐಷಾರಾಮಿ ಎಸ್‌ಯುವಿ ಎಲ್ಲರ ಗಮನ ಸೆಳೆದಿದೆ. ನತಾಶಾ ತಮ್ಮ ಮಗ ಅಗಸ್ತ್ಯ ಜೊತೆಗೆ ಕಪ್ಪು ಬಣ್ಣದ ಲಕ್ಸುರಿ ಕಾರಿನೊಂದಿಗೆ ಪೋಸ್ ನೀಡಿದ ಫೋಟೋ ವೈರಲ್ ಆಗಿದೆ. ಈ ಕಾರು ಪ್ರಸಿದ್ಧ ಬ್ರ್ಯಾಂಡ್ ಲ್ಯಾಂಡ್ ರೋವರ್ ಕಂಪನಿಯ ಲ್ಯಾಂಡ್ ರೋವರ್ ಡಿಫೆಂಡರ್ ಆಗಿದೆ.

ಪಾಂಡ್ಯ ಮಾಜಿ ಪತ್ನಿಗೆ ಗಿಫ್ಟ್ ಕೊಟ್ಟ ಕಾರಿನ ಬೆಲೆ ಎಷ್ಟು?
ರಗಡ್ ಲುಕ್‌ಗಾಗಿ ಪ್ರಸಿದ್ಧವಾದ ಡಿಫೆಂಡರ್ ಮಾದರಿಯ ಕಾರಿನ ಬೆಲೆ ಭಾರತದಲ್ಲಿ ಕಸ್ಟಮೈಸೇಶನ್ ಆಧರಿಸಿ ಸುಮಾರು ₹4 ಕೋಟಿ ಮೌಲ್ಯವಾಗಿದೆ ಎಂದು ಅಂದಾಜಿಸಲಾಗಿದೆ. ಹಾರ್ದಿಕ್ ಮತ್ತು ನತಾಶಾ ವೈಯಕ್ತಿಕವಾಗಿ ದೂರವಾದರೂ, ಮಗನಿಗಾಗಿ ಒಟ್ಟಿಗೆ ನಡೆದುಕೊಳ್ಳುತ್ತಿರುವುದು ಹಲವರಿಗೆ ಪ್ರೇರಣೆಯಾಗಿದೆ. ಅವರ ಈ ಪೋಷಣೆಯು ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
ಕಾರು ಕಂಪನಿ ಹೇಳಿರುವುದೇನು?
ಈ ವಿಶೇಷ ಸಂದರ್ಭದ ಚಿತ್ರಗಳನ್ನು ವಾಹನ ತಯಾರಕ ಸಂಸ್ಥೆಯೇ ಸಾಮಾಜಿಕ ಜಾಲತಾಣಗದಲ್ಲಿ ಹಂಚಿಕೊಂಡಿದೆ. ಪೋಸ್ಟ್‌ಗೆ ನೀಡಿದ್ದ ಕ್ಯಾಪ್ಷನ್‌ನಲ್ಲಿ 'ಶ್ರೀ ಹಾರ್ದಿಕ್ ಪಾಂಡ್ಯ ಅವರು ಮತ್ತೊಮ್ಮೆ ತಮ್ಮ ಡಿಫೆಂಡರ್ ಖರೀದಿಗಾಗಿನವನೀತ್ ಮೋಟಾರ್ಸ್ ಅನ್ನು ಆಯ್ಕೆ ಮಾಡಿದ್ದಾರೆ. ಇದು ಅವರು ನಮ್ಮ ಮೇಲೆ ಇಟ್ಟ ನಂಬಿಕೆಯಾಗಿದೆ. ಅಗಸ್ತ್ಯ ಪಾಂಡ್ಯ ಹಾಗೂ ಶ್ರೀಮತಿ ನತಾಶಾ ಸ್ಟಾಂಕೋವಿಕ್ ಅವರಿಗೆ ಮುಂಬೈನ ಶೋರೂಂನಲ್ಲಿ ಈ ಕಾರನ್ನು ವಿತರಿಸಲಾಗಿದೆ," ಎಂದು ಬರೆಯಲಾಗಿದೆ.
ಹಾರ್ದಿಕ್ ಮತ್ತು ನತಾಶಾ ಜುಲೈ 2024ರಲ್ಲಿ ಅಧಿಕೃತವಾಗಿ ವಿಚ್ಛೇದನ ಪಡೆದು ಬೇರ್ಪಟ್ಟರು. ಆದರೂ, ಬಳಿಕ ತಮ್ಮ ಮಗನ ಸಹಪೋಷಣೆಯಲ್ಲಿ ತಾಳ್ಮೆ ಮತ್ತು ಪರಿಪಕ್ವತೆಯಿಂದ ನಡೆದುಕೊಂಡಿರುವುದಕ್ಕೆ ಈ ಜೋಡಿಗೆ ಮೆಚ್ಚುಗೆಗಳ ಸುರಿಮಳೆಯೇ ಹರಿದುಬರುತ್ತಿದೆ. ಹೀಗೆ ಇವರು ತಮ್ಮ ಪುತ್ರ ಅಗಸ್ತ್ಯನ ಜವಾಬ್ದಾರಿಯಲ್ಲಿ ಯಾವುದೇ ತಾರತಮ್ಯ ಮಾಡದೆ, ಅವನ ಭವಿಷ್ಯದ ಕಡೆಗೆ ಸಂಪೂರ್ಣ ಗಮನ ಹರಿಸುತ್ತಿದ್ದಾರೆ ಎನ್ನುವ ವಿಚಾರವೇ ಇದೀಗ ಮೆಚ್ಚುಗೆಗೆ ಪಾತ್ರವಾಗಿದೆ.
ಮಗನಿಗೆ ಆದ್ಯತೆ ನೀಡಿದ ಪಾಂಡ್ಯ ಹಾಗೂ ಮಾಜಿ ಪತ್ನಿ
ಹಾರ್ದಿಕ್ ಹಾಗೂ ನತಾಶಾ 2024ರಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ತಮ್ಮ ವಿಚ್ಛೇದನವನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದರು. ಆದರೂ, ತಮ್ಮ ಮಗನೇ ಮೊದಲ ಆದ್ಯತೆ ಎಂಬುದನ್ನು ಪಾಂಡ್ಯ ಹಾಗೂ ನತಾಶ ನಿರಂತರವಾಗಿ ಸಾಭೀತು ಮಾಡುತ್ತಿರುವುದು ಕಂಡುಬರುತ್ತಿದೆ. ಆದರೆ, ಕಾರು ಖರೀದಿ ಮಾಡಿರುವ ಬಗ್ಗೆ ಈ ದಂಪತಿ ಮಾತ್ರ ಎಲ್ಲಿಯೂ ಹೇಳಿಕೊಂಡಿಲ್ಲ. ಬದಲಾಗಿ ಕಾರು ಕಂಪನಿಯವರು ಇಬ್ಬರ ಹೆಸರನ್ನು ಉಲ್ಲೇಖಿಸಿದ್ದಾರೆ.
ಮಹಿಕಾ ಶರ್ಮಾ ಜೊತೆ ಡೇಟಿಂಗ್
ಐಷಾರಾಮಿ ಕಾರು ಖರೀದಿ ಸುದ್ದಿ ಹರಿದಾಡುತ್ತಿರುವ ಈ ಸಮಯದಲ್ಲಿ ಹಾರ್ದಿಕ್ ಪಾಂಡ್ಯ ಅವರ ವೈಯಕ್ತಿಕ ಜೀವನಕ್ಕೂ ಸಂಬಂಧಿಸಿದ ಹಲವು ವಿಷಯಗಳು ಗಮನ ಸೆಳೆಯುತ್ತಿವೆ. ಸದ್ಯ ಹಾರ್ದಿಕ್ ಮಹಿಕಾ ಶರ್ಮಾ ಜೊತೆ ಡೇಟಿಂಗ್ ಮಾಡುತ್ತಿದ್ದು, ಇತ್ತೀಚೆಗಷ್ಟೇ ಮಹಿಕಾ ಅವರ 25ನೇ ಜನ್ಮದಿನದ ಅಂಗವಾಗಿ ರೊಮ್ಯಾಂಟಿಕ್ ವಿಡಿಯೋ ಹಂಚಿಕೊಂಡಿದ್ದರು. ಈ ಮೂಲಕ ಇಬ್ಬರ ನಡುವಿನ ಸಂಬಂಧವನ್ನು ಅಧಿಕೃತವಾಗಿ ದೃಢಪಡಿಸಿದಂತಾಗಿದೆ.
ಇತ್ತ ಮೊದಲನೇ ಪತ್ನಿ ನತಾಶ ಅವರು ತಮ್ಮ ಫಿಟ್ನೆಸ್ ಕಡೆಗೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಈ ನಡುವೆಯೇ ಅವರು ಇತ್ತೀಚಿನ ಸಂದರ್ಶನಗಳಲ್ಲಿ ಅವರು "ಮತ್ತೊಮ್ಮೆ ಪ್ರೀತಿ ಮಾಡಲು ಮುಂದಾಗಿದ್ದೇನೆ," ಎಂದು ಹೇಳಿಕೊಂಡಿದ್ದರು. ಅಲ್ಲದೆ, ಇದೇ ವೇಳೆ ಜೀವನದಲ್ಲಿ ಎದುರಿಸಿದ ಸವಾಲುಗಳು ತಮಗೆ ಇನ್ನಷ್ಟು ಶಕ್ತಿ ನೀಡಿವೆ. ಅದರಿಂದ ತುಂಬಾ ಕಲಿತಿದ್ದೇನೆ ಅಂತಲೂ ಹೇಳಿದ್ದರು ಅಂತಾ ವರದಿಯಾಗಿದೆ. ಈ ಎಲ್ಲದರ ನಡುವೆಯೂ ಹಾರ್ದಿಕ್ ಪಾಂಡ್ಯ ಹಾಗೂ ನತಾಶ ವಿಚ್ಛೇದನ ಪಡೆದರೂ ತಮ್ಮ ಮಗನ ಭವಿಷ್ಯದ ಕಡೆ ಗಮನಹರಿಸುತ್ತಿರುವ ವಿಚಾರ ಮೆಚ್ಚುಗೆ ಪಡೆದುಕೊಂಡಿದೆ. ಇವರು 2020ರ ಮೇ 31ರಂದು ವಿವಾಹವಾಗಿದ್ದು, ಜುಲೈ 2024ರಲ್ಲಿ ಪರಸ್ಪರ ಒಪ್ಪಿಗೆಯ ಮೇಎರೆ ವಿಚ್ಛೇದನ ಪಡೆದರು.












Click it and Unblock the Notifications