‘ಕುಡುಕ ಮ್ಯಾಕ್ಸ್‌ವೆಲ್ ಮನೆಗೆ ಹೋಗಪ್ಪಾ ಸಾಕು.. ಸಾಕು..’ Glenn Maxwell
ಗ್ಲೆನ್ ಮ್ಯಾಕ್ಸ್‌ವೆಲ್ ಹಂಗೆ ಹೊಡಿತಾನೆ.. ಗ್ಲೆನ್ ಮ್ಯಾಕ್ಸ್‌ವೆಲ್ ಹಿಂಗೆ ಹೊಡಿತಾನೆ.. ಗ್ಲೆನ್ ಮ್ಯಾಕ್ಸ್‌ವೆಲ್ ತಲೆ ಕೆಟ್ಟರೆ ಇತಿಹಾಸ ಸೃಷ್ಟಿ ಮಾಡುತ್ತಾನೆ.. ಹಿಂಗೆಲ್ಲಾ ಗ್ಲೆನ್ ಮ್ಯಾಕ್ಸ್‌ವೆಲ್ ಬಗ್ಗೆ ಬಿಲ್ಡಪ್ ಕೊಟ್ಟಿದ್ದೇ ಕೊಟ್ಟಿದ್ದು, ಆದರೆ ಬಿಲ್ಡಪ್‌ಗೆ ತಕ್ಕನಂತೆ ಆಟ ಆಡುತ್ತಲೇ ಇಲ್ಲ ಮ್ಯಾಕ್ಸ್‌ವೆಲ್. ಅದರಲ್ಲೂ ಮ್ಯಾಕ್ಸ್‌ವೆಲ್ ವಿರುದ್ಧ ಅಭಿಮಾನಿಗಳು ರೊಚ್ಚಿಗೆದ್ದಿರುವ ಇದೇ ಸಮಯದಲ್ಲೇ, 'ಕುಡುಕ ಮ್ಯಾಕ್ಸ್‌ವೆಲ್ ಮನೆಗೆ ಹೋಗಪ್ಪಾ ಸಾಕು.. ಸಾಕು..' ಅಂತಿದ್ದಾರೆ ಫ್ಯಾನ್ಸ್, ಯಾಕೆ ಗೊತ್ತಾ? ಸ್ಟೋರಿ ಸಖತ್ ಆಗಿದೆ ಮುಂದೆ ಓದಿ.
ಗ್ಲೆನ್ ಮ್ಯಾಕ್ಸ್‌ವೆಲ್ ಸರಿಯಾಗಿ ಆಡುತ್ತಿಲ್ಲ ಅನ್ನೋ ಕಾರಣಕ್ಕೆ ನಮ್ಮ ಬೆಂಗಳೂರು ತಂಡವಾದ ಆರ್‌ಸಿಬಿ ಆಡಳಿತ, ಗ್ಲೆನ್ ಮ್ಯಾಕ್ಸ್‌ವೆಲ್‌ನ ಹೊರಗೆ ಹಾಕಿತ್ತು. ಹೀಗಿದ್ದಾಗ ಪಂಜಾಬ್ ಪರವಾಗಿ ಐಪಿಎಲ್-2025ರ ಸೀಸನ್ ಆಡುತ್ತಿರುವ ಗ್ಲೆನ್ ಮ್ಯಾಕ್ಸ್‌ವೆಲ್ ತನ್ನ ಹೀನಾಯ ಪ್ರದರ್ಶನವನ್ನ ಮುಂದುವರಿಸಿದ್ದಾರೆ. ಇಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಪಂದ್ಯವು ನಡೆಯುವ ಸಮಯದಲ್ಲೇ ಮತ್ತೊಂದು ಮಹಾನ್ ಎಡವಟ್ಟು ಮಾಡಿಕೊಂಡಿದ್ದಾನೆ, ಇದೇ ಮಹಾಶಯ ಮ್ಯಾಕ್ಸ್‌ವೆಲ್! ಹಾಗಾದ್ರೆ ಕುಡಿತದ ಚಟವೇ ಗ್ಲೆನ್ ಮ್ಯಾಕ್ಸ್‌ವೆಲ್ ಬಾಳು ಹಾಳು ಮಾಡುತ್ತಾ ಇದೆಯಾ? ಮುಂದೆ ಓದಿ.

ಅಯ್ಯೋ ಅಯ್ಯೋ ಯಾಕಪ್ಪಾ ಮ್ಯಾಕ್ಸ್‌ವೆಲ್?
ಗ್ಲೆನ್ ಮ್ಯಾಕ್ಸ್‌ವೆಲ್ 2023 ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಕೇವಲ 128 ಬಾಲ್ ಆಡಿ ಅಫ್ಘಾನ್ ತಂಡದ ವಿರುದ್ಧ ಭರ್ಜರಿ 201 ರನ್ ಗಳಿಸಿ ಮಿಂಚಿದ್ದರು. ಹೀಗೆ 2023ರ ಏಕದಿನ ವಿಶ್ವಕಪ್‌ನಲ್ಲಿ ಆಡಿದ್ದು ಬಿಟ್ಟರೆ ಗ್ಲೆನ್ ಮ್ಯಾಕ್ಸ್‌ವೆಲ್ ಸಾಲು ಸಾಲು ಹೀನಾಯ ಪ್ರದರ್ಶನ ನೀಡುತ್ತಿದ್ದಾರೆ. ಈ ಪೈಕಿ ಐಪಿಎಲ್ ಅಖಾಡದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಆಡುತ್ತಿರುವ ರೀತಿ ನೋಡಿದರೆ, ಇಡೀ ಇಂಡಿಯನ್ ಕ್ರಿಕೆಟ್ ಅಭಿಮಾನಿಗಳು ಗ್ಲೆನ್ ಮ್ಯಾಕ್ಸ್‌ವೆಲ್ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಅಲ್ಲದೆ, 'ಕುಡುಕ ಮ್ಯಾಕ್ಸ್‌ವೆಲ್ ಮನೆಗೆ ಹೋಗಪ್ಪಾ ಸಾಕು.. ಸಾಕು..' ಅಂತಿದ್ದಾರೆ.
ಮನೆಹಾಳು ಮಾಡಿದ ಮ್ಯಾಕ್ಸ್?
ಕ್ರಿಕೆಟ್ ಲೋಕದಲ್ಲಿ ಐಪಿಎಲ್ ಅನ್ನೋದೆ ಒಂದು ಹಬ್ಬವಾಗಿದ್ದು, ಪ್ರತಿವರ್ಷ ಐಪಿಎಲ್ ಹಬ್ಬ ಸಂಭ್ರಮದಿಂದ ನಡೆದುಕೊಂಡು ಹೋಗುತ್ತಿದೆ. ಆದ್ರೆ ಐಪಿಎಲ್ ಅಖಾಡದಲ್ಲಿ ಕೆಲ ಆಟಗಾರರು ತುಂಬಾ ಕೆಟ್ಟ ಹೆಸರು ಪಡೆದು ಟ್ರೋಲ್ ಆಗುತ್ತಿದ್ದು, ಐಪಿಎಲ್-2025 ಆಡಲು ಬಂದಿರುವ ಗ್ಲೆನ್ ಮ್ಯಾಕ್ಸ್‌ವೆಲ್ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ಜೊತೆಗೇ, 'ಕುಡುಕ ಮ್ಯಾಕ್ಸ್‌ವೆಲ್ ಮನೆಗೆ ಹೋಗಪ್ಪಾ ಸಾಕು.. ಸಾಕು..' ಅಂತಿದ್ದಾರೆ ಕ್ರಿಕೆಟ್ ಫ್ಯಾನ್ಸ್. ಯಾಕೆ ಅಂದ್ರೆ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಕೇವಲ 1 ರನ್‌ಗೆ ಔಟ್ ಆಗಿರುವ ಮ್ಯಾಕ್ಸ್ ಮತ್ತೊಮ್ಮೆ ಮನೆಹಾಳು ಕೆಲಸ ಮಾಡಿದ್ದಾರೆ ಅನ್ನೋದು ಅಭಿಮಾನಿಗಳ ಆಕ್ರೋಶ. ಹಾಗೇ ಇನ್ನೊಂದು ಕಡೆ ಸಿಕ್ಕಾಪಟ್ಟೆ ಕುಡಿಯುತ್ತಿರುವ ಮ್ಯಾಕ್ಸ್‌ವೆಲ್ ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾ ಇದ್ದಾರೆ ಎಂಬ ಆರೋಪ ಕೂಡ ಇದೆ.












Click it and Unblock the Notifications