Gautam Gambhir: ಸಂಜೆ ಸಿಗು ಹೊಡಿತಿನಿ ಎಂದಿದ್ದ ಗೌತಮ್ ಗಂಭೀರ್; ಸಹ ಆಟಗಾರನಿಂದ ಆರೋಪ
ಭಾರತ ತಂಡದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಸದ್ಯ ಭಾರತ ತಂಡದ ಹೆಡ್ ಕೋಚ್ ಆಗಿದ್ದಾರೆ. ಅವರ ಕೋಚಿಂಗ್‌ನಲ್ಲಿ ಭಾರತ ಈಗಾಗಲೇ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ ಹಲವು ಅವಾಮಾನಕರ ಸೋಲು ಕಂಡಿದ್ದು, ಚಾಂಪಿಯನ್ಸ್ ಟ್ರೋಫಿ ಗೌತಮ್ ಗಂಭೀರ್ ಗೆ ಅಗ್ನಿ ಪರೀಕ್ಷೆಯಾಗಿದ್ದು ಅಲ್ಲಿ ಭಾರತ ಉತ್ತಮ ಪ್ರದರ್ಶನ ನೀಡದೇ ಇದ್ದರೆ ಅವರ ಕೋಚ್ ಹುದ್ದೆಗೆ ಕುತ್ತು ಬರಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.
ಈ ಬೆನ್ನಲ್ಲೇ ಗೌತಮ್ ಗಂಭೀರ್ ವಿರುದ್ಧ ಅವರ ಸಹ ಆಟಗಾರನಾಗಿದ್ದ ಮನೋಜ್ ತಿವಾರಿ ಗಂಭೀರ ಆರೋಪ ಮಾಡಿದ್ದಾರೆ. ದೆಹಲಿ ರಣಜಿ ತಂಡಕ್ಕಾಗಿ ಗೌತಮ್ ಗಂಭೀರ್ ಮತ್ತು ಮನೋಜ್ ತಿವಾರಿ ಒಟ್ಟಿಗೆ ಆಡಿದ್ದರು. ಐಪಿಎಲ್‌ನಲ್ಲಿ ಕೂಡ ಕೆಕೆಆರ್ ತಂಡಕ್ಕಾಗಿ ಒಟ್ಟಿಗೆ ಆಡಿದ್ದರು.

ಮನೋಜ್ ತಿವಾರಿ ಬಳಿಕ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಗೌತಮ್ ಗಂಭಿರ್ ಭಾರತದ ಮುಖ್ಯ ಕೋಚ್ ಆದ ಬಳಿಕ ಕಳೆದ ಕೆಲವು ದಿನಗಳ ಹಿಂದೆ ಗಂಭೀರ್ ವರ್ತನೆ ಬಗ್ಗೆ ಮಾತನಾಡಿದ್ದರು. ಗೌತಮ್ ಗಂಭೀರ್ ಒಬ್ಬ ಕಪಟಿ, ಆತ ಮಾತನಾಡುತ್ತಾನೆ ಆದರೆ ಹೇಳಿದ ಕೆಲಸ ಮಾಡುವುದಿಲ್ಲ ಎಂದಿದ್ದರು.
ಈಗ ಮತ್ತೊಮ್ಮೆ ಗಂಭೀರ್ ವಿರುದ್ಧ ಆರೋಪ ಮಾಡಿದ್ದು, ತನಗೆ ಬೆದರಿಕೆ ಹಾಕಿದ್ದರು ಎಂದು ಮನೋಜ್ ತಿವಾರಿ ಹೇಳಿದ್ದಾರೆ. ಲಲ್ಲಂಟಾಪ್ ಜೊತೆ ಮಾತನಾಡಿರುವ ಮನೋಜ್ ತಿವಾರ, ಸ್ಲಿಪ್‌ನಲ್ಲಿ ಫೀಲ್ಡಿಂಗ್ ಮಾಡುವಾಗ ಗಂಭೀರ್ ನನ್ನನ್ನು ಕೂಗಿದರು, ಆಗ ಬಿಸಿಸಿಐ ಅಧ್ಯಕ್ಷರಾಗಿದ್ದ ಸೌರವ್ ಗಂಗೂಲಿ ಅವರ ಬಗ್ಗೆಯೂ ಕೆಟ್ಟದಾಗಿ ಮಾತನಾಡಿದ್ದರು ಎಂದಿದ್ದಾರೆ.
2015ರ ದೆಹಲಿ vs ಬಂಗಾಳ ನಡುವಿನ ರಣಜಿ ಪಂದ್ಯದ ವೇಳೆ ಘಟನೆ ನಡೆದಿತ್ತು ಎಂದಿದ್ದಾರೆ. ಗಂಭಈರ್ ನನ್ನ ಮೇಲೆ ಕೋಪಗೊಂಡಿದ್ದರು. ಅವರು ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಸಂಜೆ ಸಿಗು ನಿನಗೆ ಹೊಡೆಯುತ್ತೇನೆ ಎಂದಿದ್ದರು. ಆದರೆ ನಾನು ಸಂಜೆ ಯಾಕೆ ಈಗಲೇ ಬನ್ನಿ ಹೊಡೆಯಿರಿ ಎಂದಿದ್ದೆ. ಆಗ ಅವರು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಯನ್ನು ಪ್ರಭಾವದಿಂದ ಇಲ್ಲಿಗೆ ಬಂದಿದ್ದಿಯಾ ಎಂದು ಹೀಯಾಳಿಸಿದ್ದರು ಎಂದು ಆರೋಪಿಸಿದ್ದಾರೆ.
ಕೆಕೆಆರ್ ತಂಡದಲ್ಲಿ ಆಡುವಾಗ ನನ್ನನ್ನು ಬ್ಯಾಟಿಂಗ್ ಕ್ರಮಾಂಕದಲ್ಲಿ ಕೆಳಗಡೆ ಕಳಿಸಲಾಗುತ್ತಿತ್ತು. ಅಲ್ಲದೆ ಕೆಕೆಆರ್ ತಂಡದಿಂದ ಕೈ ಬಿಡುವುದಾಗಿ ಕೂಡ ಬೆದರಿಕೆ ಹಾಕಿದ್ದರು ಎನ್ನುವ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಆಗ ಬೌಲಿಂಗ್ ಕೋಚ್ ಆಗಿದ್ದ ವಾಸಿಂ ಅಕ್ರಂ ಕೂಡ ಈ ಘಟನೆಯನ್ನು ನೋಡಿದ್ದಾರೆ ಎಂದರು.
ಕಾರಣವೇ ಇಲ್ಲದೆ ನನ್ನನ್ನು ಹೀಯಾಳಿಸಲಾಗುತ್ತಿತ್ತು, ನನ್ನನ್ನು ಏಕೆ ಟಾರ್ಗೆಟ್ ಮಾಡುತ್ತಿದ್ದರು ಎಂದು ನನಗೆ ಅಥವಾಗಲಿಲ್ಲ. ಮೊದಲು ಅವರು ನನ್ನ ಜೊತೆ ಚನ್ನಾಗಿದ್ದರು ಬಳಿಕ ನನ್ನನ್ನು ಗುರಿಯಾಗಿಸಿ ಟೀಕೆ ಮಾಡುವುದು, ನಿಂದಿಸುವುದಕ್ಕೆ ಆರಂಭಿಸಿದರು ಎಂದರು.












Click it and Unblock the Notifications