MS Dhoni: 2011ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಶತಕ ತಪ್ಪಿಸಿದ್ದು ಧೋನಿ ಎಂದ ಗಂಭೀರ್
ಸದಾ ಒಂದಿಲ್ಲೊಂದು ಕಾರಣದಿಂದ ಸುದ್ದಿಯಲ್ಲಿರುವ ಭಾರತ ತಂಡದ ಮಾಜಿ ಆಟಗಾರ ಗೌತಮ್ ಗಂಭೀರ್ ಈಗ 2011ರ ಏಕದಿನ ವಿಶ್ವಕಪ್ ತಂಡದ ನಾಯಕರಾಗಿದ್ದ ಎಂಎಸ್ ಧೋನಿ ವಿರುದ್ಧ ಕೂಡ ಗಂಭೀರ ಆರೋಪ ಮಾಡಿದ್ದಾರೆ.
2011ರಲ್ಲಿ ಏಕದಿನ ವಿಶ್ವಕಪ್‌ನ ಶ್ರೀಲಂಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಗೌತಮ್ ಗಂಭೀರ್ 97 ರನ್ ಗಳಿಸುವ ಮೂಲಕ ಭಾರತದ ಗೆಲುವಿಗೆ ಮಹತ್ವದ ಕೊಡುಗೆ ನೀಡಿದ್ದರು. ಅಂದು 3 ರನ್‌ಗಳಿಂದ ಶತಕ ಗಳಿಸುವುದನ್ನು ತಪ್ಪಿಸಿಕೊಂಡಿದ್ದರು, ಅದನ್ನು ಶ್ರೇಷ್ಠ ಇನ್ನಿಂಗ್ಸ್ ಎಂದು ಪರಿಗಣಿಸಲಾಗಿದೆ.

ಈಗ ತಾವು ಶತಕ ಗಳಿಸುವುದನ್ನು ತಪ್ಪಿಸಿಕೊಂಡ ಬಗ್ಗೆ ಮಾತನಾಡಿರುವ ಗಂಭೀರ್, ಇದಕ್ಕೆ ಧೋನಿ ಕಾರಣ ಎಂದಿದ್ದಾರೆ. ಸದ್ಯ ಅವರ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಮಾತನಾಡಿರುವ ಗಂಭೀರ್, ನಾನು ಶ್ರೀಲಂಕಾ ನೀಡಿದ್ದ ಗುರಿಯನ್ನು ಚೇಸ್ ಮಾಡುವತ್ತ ಮಾತ್ರ ಗಮನ ಹರಿಸಿದ್ದೆ, 97 ರನ್ ಗಳಿಸಿದ್ದಾಗ ನನ್ನ ಹತ್ತಿರ ಬಂದ ಧೋನಿ ಇನ್ನು ಮೂರು ರನ್ ಗಳಿಸಿದರೆ ಶತಕ ಪೂರೈಸುತ್ತೀರಾ ಎಂದು ಹೇಳಿದರು. ಅದರಿಂದ ನನ್ನ ಗಮನ ವೈಯಕ್ತಿಕ ಸಾಧನೆ ಕಡೆ ಹೊರಳಿತು, ಶತಕ ಗಳಿಸುವ ಒತ್ತಡಕ್ಕೆ ಒಳಗಾದೆ ಅದರಿಂದ ಮುಂದಿನ ಎಸೆತದಲ್ಲಿ ಔಟಾದೆ ಎಂದು ಹೇಳಿದ್ದಾರೆ.
ಇದ್ಯಾವ ರೀತಿಯ ಲಾಜಿಕ್!
ಗಂಭೀರ್ ಮಾತುಗಳನ್ನು ಕೇಳಿದ ಕ್ರಿಕೆಟ್ ಅಭಿಮಾನಿಗಳು ತಲೆ ಚಚ್ಚಿಕೊಂಡಿದ್ದಾರೆ. ಇದರಲ್ಲಿ ಧೋನಿ ತಪ್ಪೇನಿದೆ, ಅಷ್ಟು ಅನುಭವಿ ಆಟಗಾರ 97 ರನ್ ಗಳಿಸಿದ್ದಾಗ ಒತ್ತಡಕ್ಕೆ ಒಳಗಾಗಿ ಔಟಾಗಿದ್ದೇಕೆ, ಇದೆಲ್ಲಾ ನಂಬುವಂತಹ ಮಾತುಗಳ ಎಂದು ಗಂಭೀರ್ ಹೇಳಿಕೆಯನ್ನು ಟೀಕಿಸಿದ್ದಾರೆ.
Gautam Gambhir is S!ck . He is blaming Dhoni for getting out on 97 🤦 pic.twitter.com/HkIZ2QMFIz
— MAHIYANK™ (@Mahiyank_78) December 12, 2023
ಉಪನಾಯಕ ಸ್ಥಾನದಿಂದ ತೆಗೆದರು
ಒಂದೆರಡು ವರ್ಷಗಳ ಹಿಂದೆ ಲಾಲನ್‌ಟಾಪ್ ಯೂಟ್ಯೂಬ್ ಚಾನೆಲ್‌ನಿಂದ ಸಂದರ್ಶನವನ್ನು ಮಾಡಲಾಗಿತ್ತು ಮತ್ತು ಸೋಮವಾರ ಅದನ್ನು ಮರು-ಹಂಚಿಕೊಂಡಿದ್ದು, ವೈರಲ್ ಆಗುತ್ತಿದೆ.
"ಸಿಬಿ ಸಿರೀಸ್ ಬಗ್ಗೆ ಮಾತನಾಡುತ್ತಿದ್ದ ಗಂಭೀರ್, ಭಾರತ ಫೈನಲ್‌ಗೆ ಅರ್ಹತೆ ಪಡೆಯಲಿಲ್ಲ, ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ತಂಡಗಳು ಅರ್ಹತೆ ಪಡೆದವು. ನಾನು ಉಪನಾಯಕನಾಗಿದ್ದೆ, ಎಂಎಸ್ ಧೋನಿ ನಾಯಕನಾಗಿದ್ದರು. ಆ ಸರಣಿಯ ನಂತರ ಭಾರತವನ್ನು ಒಳಗೊಂಡ ಶ್ರೀಲಂಕಾ ಮತ್ತು ಬಾಂಗ್ಲಾದೇಶ ತ್ರಿಕೋನ ಸರಣಿಗೆ ಪ್ರಯಾಣಿಸಬೇಕಿತ್ತು. ಅದಕ್ಕೂ ಮೊದಲು ನಾವು ಟೆಸ್ಟ್ ಸರಣಿಯನ್ನು 4-0 ಅಂತರದಲ್ಲಿ ಕಳೆದುಕೊಂಡಿದ್ದೆವು. ಧೋನಿ ಕೂಡ ಒತ್ತಡದಲ್ಲಿದ್ದರು, ಅವರು ನಾಯಕರಾಗಿದ್ದರು," ಎಂದು ಗೌತಮ್ ಗಂಭೀರ್ ವೀಡಿಯೊದಲ್ಲಿ ಹೇಳಿದ್ದಾರೆ.
"ಸಿಬಿ ಸರಣಿಯ ನಂತರ ನನ್ನನ್ನು ಉಪನಾಯಕನ ಸ್ಥಾನದಿಂದ ಕೆಳಗಿಳಿಸಲಾಯಿತು. ವಿರಾಟ್ ಕೊಹ್ಲಿಯನ್ನು ಉಪನಾಯಕನನ್ನಾಗಿ ಮಾಡಲಾಯಿತು. ಭಾರತ ಅಥವಾ ಯಾವುದೇ ಕ್ರೀಡೆಯ ಇತಿಹಾಸದಲ್ಲಿ ಒಮ್ಮೆಯಾದರೂ ಉಪನಾಯಕನನ್ನು ಹೀಗೆ ತೆಗೆಯುತ್ತಾರ? ಕ್ಯಾಪ್ಟನ್ ತಾನೆ ಅದಕ್ಕೆ ಹೊಣೆ, ಆಗ ಡಂಕನ್ ಫ್ಲೆಚರ್ ಕೋಚ್ ಆಗಿದ್ದರು ಯಾಕೆ ಹೀಗೆ ಮಾಡಿದಿರಿ ಎಂದು ಅವರನ್ನು ಕೇಳಿದ್ದಕ್ಕೆ ಆಯ್ಕೆಗಾರರ ನಿರ್ಧಾರ ಎಂದು ಹೇಳಿದ್ದಾಗಿ ತಿಳಿಸಿದರು.
ಆಟಗಾರನನ್ನು ತಂಡದಿಂದ ಕೈಬಿಡುವಾಗ ವಯಸ್ಸು ಮಾನದಂಡವಾಗಬಾರದು ಮತ್ತು ಫಾರ್ಮ್ ಮಾತ್ರ ಮಾನದಂಡವಾಗಿರಬೇಕು ಎಂದು ಹೇಳಿದರು.ರೋಹಿತ್ ಶರ್ಮಾ 2024ರ ಟಿ20 ವಿಶ್ವಕಪ್‌ನಲ್ಲಿ ಆಡಬೇಕು ಎಂದು ಹೇಳಿದ್ದಾರೆ.












Click it and Unblock the Notifications