RCB vs GT: ಗೆಲುವಿನ ಬಳಿಕ ಆರ್‌ಸಿಬಿ ಮತ್ತು ಕೊಹ್ಲಿಯನ್ನು ಕೆಣಕಿದ ಶುಭಮನ್ ಗಿಲ್!
ಬುಧವಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025ರ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗುಜರಾತ್ ಟೈಟಾನ್ಸ್ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಮೈದಾನದಲ್ಲಿ ಆಟಗಾರರ ನಡುವೆ ರೇಗಿಸುವುದು, ಜಿದ್ದಿಗೆ ಬಿದ್ದಂತೆ ಸಂಭ್ರಮಿಸುವುದು ಸಹಜ, ಆದರೆ ಅದನ್ನು ಮೈದಾನದ ಹೊರಗಡೆಗೂ ಕೆಲವೊಮ್ಮೆ ಆಟಗಾರರ ಮುಂದುವರೆಸುತ್ತಾರೆ.
ಬುಧವಾರ ಆರ್ ಸಿಬಿ ವಿರುದ್ಧ ಗೆಲುವು ಸಾಧಿಸಿದ ಬಳಿಕ ಗುಜರಾತ್ ಟೈಟಾನ್ಸ್ ನಾಯಕ ಶುಭಮನ್ ಗಿಲ್ ಹಂಚಿಕೊಂಡಿರುವ ಸೋಷಿಯಲ್ ಮೀಡಿಯಾ ಪೋಸ್ಟ್ ಇದೀಗ, ಆರ್ ಸಿಬಿ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ರಜತ್ ಪಟಿದಾರ್ ನಾಯಕತ್ವದ ಆರ್ ಸಿಬಿ ತಂಡಕ್ಕೆ ತವರು ಮೈದಾನವಾದ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭಿಮಾನಿಗಳು ಸಂಭ್ರಮನದ ಸ್ವಾಗತ ನೀಡಿದರು. ಐಪಿಎಲ್ 2025 ರಲ್ಲಿ ಅವರ ಮೊದಲ ಸೋಲು ಕಂಡರು, ಬೆಂಗಳೂರಿನಲ್ಲಿ ಆರ್‌ಸಿಬಿ ಮತ್ತು ಕೊಹ್ಲಿಯತ್ತ ಅಭಿಮಾನಿಗಳು ಗಮನ ಹರಿಸಿದ್ದರೂ, ಗುಜರಾತ್ ಟೈಟಾನ್ಸ್ ತಮ್ಮ ಪ್ರದರ್ಶನದಿಂದ ಪ್ರೇಕ್ಷಕರನ್ನು ಸುಮ್ಮನಿರುವಂತೆ ಮಾಡಿದರು.
ಶುಭಮನ್ ಗಿಲ್ ಹೇಳಿದ್ದೇನು?
ಗುಜರಾತ್ ಟೈಟಾನ್ಸ್ ಗೆಲುವಿನ ನಂತರ ಶುಭಮನ್ ಗಿಲ್ ಆರ್‌ಸಿಬಿ ಮತ್ತು ಕೊಹ್ಲಿಯನ್ನು ಟೀಕಿಸಿದರು. ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಶುಭಮನ್ ಗಿಲ್ ತಂಡದ ಗೆಲುವಿನ ಚಿತ್ರವನ್ನು ಹಂಚಿಕೊಂಡಿದ್ದು, "ಗದ್ದಲದ ಮೇಲೆ ಅಲ್ಲ, ಆಟದ ಮೇಲೆ ಗಮನ" ಇದು ಆರ್ ಸಿಬಿ ಅಭಿಮಾನಿಗಳು ಮತ್ತು ವಿರಾಟ್ ಕೊಹ್ಲಿಯನ್ನು ಛೇಡಿಸುವಂತ ಪೋಸ್ಟ್ ಎಂದು ಹೇಳಲಾಗಿದ್ದು, ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಸಿಎಸ್‌ಕೆ ಅಭಿಮಾನಿಗಳಿಗೆ ಎಂಎಸ್ ಧೋನಿ ಬಗ್ಗೆ ಹುಚ್ಚು ಇದ್ದರೆ, ಆರ್‌ಸಿಬಿ ಅಭಿಮಾನಿಗಳಿಗೆ ವಿರಾಟ್ ಕೊಹ್ಲಿ ಮೇಲೆ ಹೆಚ್ಚಿನ ಅಭಿಮಾನವಿದೆ. ಶುಭಮನ್ ಗಿಲ್ ಔಟಾದ ಬಳಿಕ ವಿರಾಟ್ ಕೊಹ್ಲಿ ಸಂಭ್ರಮಿಸಿದರು, ಇದನ್ನು ಆಡಿಕೊಳ್ಳಲು ಗಿಲ್ ಪೋಸ್ಟ್ ಹಾಕಿರಬಹುದು ಎಂದು ಕೆಲವು ಅಭಿಮಾನಿಗಳು ಹೇಳಿದ್ದಾರೆ.
ಇದು ನಿಜಕ್ಕೂ ಶುಭಮನ್ ಗಿಲ್ ಅವರಂತಹ ಆಟಗಾರರಿಗೆ ಶೋಭೆ ತರುವುದಿಲ್ಲ ಎಂದು ಕೆಲವು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಮೈದಾನದಲ್ಲಿ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು, ಸಂಭ್ರಮಿಸಲು ಎಲ್ಲಾ ಅವಕಾಶ ಇದೆ. ಆದರೆ ಮೈದಾನದ ಹೊರಗೆ ಅದನ್ನು ಮುಂದುವರೆಸಬಾರದು. ವಿರಾಟ್ ಕೊಹ್ಲಿ ಮೈದಾನದಲ್ಲಿ ಏನೇ ಸಂಭ್ರಮಾಚರಣೆ ಮಾಡಿದರೂ, ಯಾರೊಂದಿಗಾದರೂ ಮಾತಿನ ಚಕಮಕಿ ನಡೆಸಿದರೂ ಅದನ್ನು ಮೈದಾನದಲ್ಲೇ ಮುಗಿಸುತ್ತಾರೆ. ಆದರೆ ಗಿಲ್ ಅದನ್ನು ಸೋಷಿಯಲ್ ಮೀಡಿಯಾವರೆಗೂ ತಂದಿದ್ದಾರೆ.












Click it and Unblock the Notifications