IPL 2024: ಮೊದಲ ಮ್ಯಾಚ್‌ ದೇವ್ರಿಗೆ; ಇದು ಆರ್‌ಸಿಬಿ ಹಳೇ ಅಧ್ಯಾಯವೆಂದು ಟ್ರೋಲ್‌ ಮಾಡಿದ ಫ್ಯಾನ್ಸ್‌

ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಅಭಿಯಾನವನ್ನು ಆರ್‌ಸಿಬಿ ಸೋಲಿನೊಂದಿಗೆ ಶುರು ಮಾಡಿದೆ. ಶುಕ್ರವಾರ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಸಿಎಸ್‌ಕೆ ತಂಡ ಆರ್‌ಸಿಬಿ ವಿರುದ್ಧ 6 ವಿಕೆಟ್‌ಗಳ ಸುಲಭ ಗೆಲುವು ಸಾಧಿಸಿತು.

ಸಾಮಾನ್ಯವಾಗಿ ಆರ್‌ಸಿಬಿ ಮೊದಲ ಮ್ಯಾಚ್ ಸೋತಾಗ ಅಭಿಮಾನಿಗಳು "ಮೊದಲ ಮ್ಯಾಚ್ ದೇವ್ರಿಗೆ" ಎಂದು ಸಮಾಧಾನ ಮಾಡಿಕೊಳ್ಳುತ್ತಾರೆ. ಆದರೆ ಈ ಬಾರಿ ತಂಡದ ಮೇಲೆ ಅಪಾರ ನಿರೀಕ್ಷೆ ಇದ್ದ ಕಾರಣ ಮೊದಲ ಪಂದ್ಯದಲ್ಲಿ ಸೋತಿದ್ದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

Fans Troll RCB After Loss to CSK in IPL 2024 Opening Match

ಪಂದ್ಯಾವಳಿಗೆ ಮುನ್ನ ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಕೊಹ್ಲಿ ಇದು ಆರ್‌ಸಿಬಿ ಹೊಸ ಅಧ್ಯಾಯ ಎಂದು ಹೇಳಿದ್ದರು. ಆದರೆ, ಮೊದಲ ಪಂದ್ಯ ಸೋತ ಬಳಿಕ ಇದು ಹೊಸ ಅಧ್ಯಾಯವಲ್ಲ ಹಳೇ ಅಧ್ಯಾಯ ಎಂದು ಟ್ರೋಲ್ ಮಾಡುತ್ತಿದ್ದಾರೆ.

ಅಭಿಮಾನಿಗಳ ಬೇಸರಕ್ಕೆ ಕಾರಣವೇನು?

ತಂಡದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದೇ ಈ ಬಾರಿ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಕ್ಯಾಮೆರಾನ್ ಗ್ರೀನ್, ಮ್ಯಾಕ್ಸ್‌ವೆಲ್ ಅವರಂತಹ ಬಲಿಷ್ಠ ಆಲ್‌ರೌಂಡರ್ ಗಳು, ಕೊಹ್ಲಿ, ಡುಪ್ಲೆಸಿಸ್, ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್ ರಂತಹ ಅನುಭವಿ ಬ್ಯಾಟಿಂಗ್ ಪಡೆ ಇದ್ದ ಕಾರಣ ಉತ್ತಮ ಪ್ರದರ್ಶನ ನೀಡುತ್ತಾರೆ ಎನ್ನುವ ವಿಶ್ವಾಸ ಇತ್ತು.

2008ರ ಬಳಿಕ ಆರ್‌ಸಿಬಿ ಚೆನ್ನೈನಲ್ಲಿ ಸಿಎಸ್‌ಕೆ ವಿರುದ್ಧ ಗೆದ್ದೇ ಇರಲಿಲ್ಲ, ಈ ಬಾರಿ ಗೆಲುವಿನ ಮೂಲಕ ಸಿಎಸ್‌ಕೆ ತಂಡದ ಗೆಲುವಿನ ಓಟಕ್ಕೆ ಬ್ರೇಕ್ ಹಾಕುತ್ತಾರೆ ಎಂದೇ ನಿರೀಕ್ಷೆ ಮಾಡಲಾಗಿತ್ತು. ಆದರೆ ಎಲ್ಲಾ ನಿರೀಕ್ಷೆಗಳನ್ನು ತಲೆಕೆಳಗು ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಿಎಸ್‌ಕೆ ವಿರುದ್ಧ ಶರಣಾಯಿತು.

ಇದು ಹೊಸ ಅಧ್ಯಾಯವಾದರೂ ತಂಡದ ಹಳೆ ಸಂಪ್ರದಾಯ ಮುಂದುವರೆದಿದೆ ಎಂದು ಅಭಿಮಾನಿಗಳು ಹೇಳಿದ್ದಾರೆ. ಮೊದಲಿನಿಂದಲೂ ಆರ್‌ಸಿಬಿ ತಂಡದಲ್ಲಿ ಬೌಲಿಂಗ್ ಪಡೆಯದ್ದೇ ಸಮಸ್ಯೆ ಈ ಬಾರಿ ಕೂಡ ಅದೇ ಮುಂದುವರೆದಿದೆ ಎಂದು ಅಭಿಮಾನಿಗಳು ಹೇಳಿದ್ದಾರೆ.

ಟಾಸ್ ಗೆದ್ದ ಬಳಿಕ ಆರ್‌ಸಿಬಿ ಚೇಸಿಂಗ್ ಮಾಡಬೇಕಿತ್ತು ಎಂದು ಕೆಲವು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಏನೇ ಆದರೂ ಮೊದಲ ಪಂದ್ಯವನ್ನಂತೂ ದೇವರಿಗೆ ಅರ್ಪಿಸಿದ್ದಾಗಿಗಿದೆ. ಆರ್‌ಸಿಬಿ ತಂಡದ ಮುಂದಿನ ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದ್ದು ಅಭಿಮಾನಿಗ ದೇವರುಗಳ ಮುಂದೆ ಪಂದ್ಯ ಗೆಲ್ಲಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+