Glenn Maxwell: ಐಸಿಸಿ ವಿಶ್ವಕಪ್: ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಭಾರತೀಯರ ಡಬಲ್ ಸೆಂಚ್ಯುರಿ ಸಾಧನೆ!
ಸಚಿನ್ ತೆಂಡೂಲ್ಕರ್ ಸಹಿತ ಭಾರತದ ಹಲವರು ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಡಬಲ್ ಸೆಂಚ್ಯುರಿ ಸಾಧನೆ ಮಾಡಿದ್ದಾರೆ. ಅದ್ರಲ್ಲೂ ಏಕದಿನ ಕ್ರಿಕೆಟ್‌ನಲ್ಲಿ ಮೊಟ್ಟ ಮೊದಲ ಬಾರಿ ಡಬಲ್ ಸೆಂಚ್ಯುರಿ ಗಳಿಸಿದ್ದು ಸಚಿನ್ ತೆಂಡೂಲ್ಕರ್. ಹೀಗೆ ಸಚಿನ್ ಈ ಸಾಧನೆಯ ಮಾಡಿ ವಿಶ್ವದಾಖಲೆ ಬರೆದ ನಂತರ ಭಾರತದ ವಿರೇಂದ್ರ ಸೆಹ್ವಾಗ್ ಕೂಡ ಡಬಲ್ ಸೆಂಚ್ಯುರಿ ಕದ ತಟ್ಟಿದ್ದರು. ಹಾಗಾದರೆ ಈವರೆಗೂ ಜಗತ್ತಿನಲ್ಲಿ ದ್ವಿಶತಕ ಗಳಿಸಿದ ಆಟಗಾರರು ಯಾರು?
'ಡಬಲ್ ಸೆಂಚ್ಯುರಿ' ಬಾರಿಸಿದ್ದ ಸಚಿನ್, 200 ರನ್ ಗಳಿಸಿ ಔಟಾಗದೆ ಉಳಿದಿದ್ದರು. 2010ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸಚಿನ್ ಈ ಸಾಧನೆ ಮಾಡಿದ್ದರು. ಈಗ ಗ್ಲೆನ್ ಮ್ಯಾಕ್ಸ್‌ವೆಲ್, ಸಚಿನ್ ದಾಖಲೆ ಸರಿಗಟ್ಟಿ 201 ರನ್ ಗಳಿಸಿದ್ದು ಔಟಾಗದೆ ಉಳಿದಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ದ್ವಿಶತಕ ಗಳಿಸಿರುವ 11ನೇ ಆಟಗಾರನಾಗಿ ಮ್ಯಾಕ್ಸ್‌ವೆಲ್ ಹೊರಹೊಮ್ಮಿದ್ದಾರೆ. 264 ರನ್ ಗಳಿಸಿದ್ದ ರೋಹಿತ್ ಶರ್ಮಾ ಮೊದಲ ಸ್ಥಾನದಲ್ಲಿ ಇದ್ದಾರೆ. ಹಾಗಾದರೆ, ಒನ್ ಡೇ ಮ್ಯಾಚ್‌ನಲ್ಲಿ ಯಾರೆಲ್ಲಾ ಡಬಲ್ ಸೆಂಚ್ಯುರಿ ಬಾರಿಸಿದ್ದಾರೆ?

ಏಕದಿನ ಕ್ರಿಕೆಟ್ ಅಖಾಡದಲ್ಲಿ ಡಬಲ್ ಸೆಂಚ್ಯುರಿ
| ಆಟಗಾರನ ಹೆಸರು | ರನ್ | ಎದುರಾಳಿ ತಂಡ | ವರ್ಷ |
| ರೋಹಿತ್ ಶರ್ಮಾ | 264 | ಶ್ರೀಲಂಕಾ | 2014 |
| ಮಾರ್ಟಿನ್ ಗಪ್ಟಿಲ್ | 237* | ವೆಸ್ಟ್ ಇಂಡೀಸ್ | 2015 |
| ವೀರೇಂದ್ರ ಸೆಹ್ವಾಗ್ | 219 | ವೆಸ್ಟ್ ಇಂಡೀಸ್ | 2011 |
| ಕ್ರಿಸ್ ಗೇಲ್ | 215 | ಜಿಂಬಾಬ್ವೆ | 2015 |
| ಫಖರ್ ಝಮನ್ | 210* | ಜಿಂಬಾಬ್ವೆ | 2018 |
| ಇಶಾನ್ ಕಿಶನ್ | 210 | ಬಾಂಗ್ಲಾದೇಶ | 2022 |
| ರೋಹಿತ್ ಶರ್ಮಾ | 209 | ಆಸ್ಟ್ರೇಲಿಯಾ | 2013 |
| ರೋಹಿತ್ ಶರ್ಮಾ | 208* | ಶ್ರೀಲಂಕಾ | 2017 |
| ಶುಭಮನ್ ಗಿಲ್ | 208 | ನ್ಯೂಜಿಲೆಂಡ್ | 2023 |
| ಗ್ಲೆನ್ ಮ್ಯಾಕ್ಸ್‌ವೆಲ್ | 201* | ಅಫ್ಘಾನಿಸ್ತಾನ | 2023 |
| ಸಚಿನ್ ತೆಂಡೂಲ್ಕರ್ | 200* | ದಕ್ಷಿಣ ಆಫ್ರಿಕಾ | 2010 |
ಗ್ಲೆನ್ ಮ್ಯಾಕ್ಸ್‌ವೆಲ್ ಡಬಲ್ ಸೆಂಚ್ಯುರಿ!
ನಿನ್ನೆ ಪಂದ್ಯದಲ್ಲಿ ನೋಡ ನೋಡಲುತ್ತಲೆ ಆಸ್ಟ್ರೇಲಿಯಾ ತಂಡ ಕುಸಿದು ಇನ್ನೇನು 100 ರನ್ ಒಳಗೆ ಆಲೌಟ್ ಆಗುತ್ತೆ ಅನ್ನೋ ಮುನ್ಸೂಚನೆ ಇಂದು ಸಂಜೆ ಸಿಕ್ಕಿತ್ತು. ಆದರೆ ಹೀಗಿದ್ದಾಗ 6ನೇ ಕ್ರಮಾಂಕದಲ್ಲಿ ಎಂಟ್ರಿ ಕೊಟ್ಟಿದ್ದ ಗ್ಲೆನ್ ಮ್ಯಾಕ್ಸ್‌ವೆಲ್ 9ನೇ ಕ್ರಮಾಂಕದ ಆಟಗಾರನಾದ ಪ್ಯಾಟ್ ಕಮ್ಮಿನ್ಸ್ ಜೊತೆ ಕೈಜೊಡಿಸಿದರು. ಅಲ್ಲಿಯ ತನಕ ಒಂದೊಂದು ರನ್ ಗಳಿಸುವುದಕ್ಕೂ ಆಸಿಸ್ ಆಟಗಾರರು ನರಳಾಡುತ್ತಿದ್ರು. ಆದ್ರೆ ನೋಡ ನೋಡುತ್ತಿದ್ದಂತೆ ಗ್ಲೆನ್ ಮ್ಯಾಕ್ಸ್‌ವೆಲ್ ಬೌಂಡರಿ, ಸಿಕ್ಸರ್ ಮಳೆ ಸುರಿಸಿದರು.
ಗಾಯದ ಸಮಸ್ಯೆಯಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್
ಪ್ಲ್ಯಾನ್ ಮಾಡಿ ಅಫ್ಘಾನಿಸ್ತಾನ ಬೌಲಿಂಗ್ ಪಡೆಯ ಖೆಡ್ಡಾಗೆ ಕೆಡವಿದ, ಆಸಿಸ್ ಸ್ಟಾರ್ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಚೆಂಡು ಅಫ್ಘಾನ್ ಆಟಗಾರ ಕೈಗೆ ಸಿಗದ ರೀತಿ ಬೌಂಡರಿ ಲೈನ್‌ಗೆ ತಳ್ಳಿದರು. ಹೀಗೆ ಮಾಡಿ ನೋಡ ನೋಡುತ್ತಲೇ ಅದ್ಭುತ ಶತಕ ಗಳಿಸಿದರು ಮ್ಯಾಕ್ಸ್‌ವೆಲ್. ಅಷ್ಟೊತ್ತಿಗೆಲ್ಲ ಆಸಿಸ್ ಸೋಲಿನ ದವಡೆಯಿಂದ ಗ್ರೇಟ್ ಎಸ್ಕೇಪ್ ಎನ್ನುವಷ್ಟರಲ್ಲಿ, ಗಾಯದ ಸಮಸ್ಯೆಯಿಂದ ಮ್ಯಾಕ್ಸ್‌ವೆಲ್ ಒದ್ದಾಡಿಬಿಟ್ಟರು. ಈ ಸಮಯದಲ್ಲಿ ಮತ್ತೆ ಭಯ ಶುರುವಾಗಿತ್ತು.

ಹೇಗಿತ್ತು ಮ್ಯಾಕ್ಸ್‌ವೆಲ್ ಡಬಲ್ ಸೆಂಚ್ಯುರಿ?
ಎಷ್ಟೇ ಕಷ್ಟವಾದ್ರೂ ಫೀಲ್ಡ್ ಬಿಟ್ಟು ಹೋಗದ ಮ್ಯಾಕ್ಸ್‌ವೆಲ್ ಗಟ್ಟಿಯಾಗಿ ನಿಂತು, ಜೊತೆಯಲ್ಲೇ ಅಫ್ಘಾನಿಸ್ತಾನ ಬೌಲಿಂಗ್ ಪಡೆಗೆ ಬುದ್ಧಿ ಕಲಿಸಿ ಆಸ್ಟ್ರೇಲಿಯಾ ಗೆಲುವಿಗೆ ಕಾರಣರಾದರು. ಹೀಗೆ ಅಫ್ಘಾನಿಸ್ತಾನ ನೀಡಿದ್ದ 292 ರನ್ ಗುರಿ ಬೆನ್ನುಹತ್ತಿದ್ದ ಆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್ ಅವರ 201 ರನ್ ಕೊಡುಗೆಯಿಂದ 293 ರನ್‌ಗಳನ್ನ ಗಳಿಸಿತು. ಕೇವಲ 46.5 ಓವರ್‌ಗೆ ಮ್ಯಾಚ್ ಮಗಿಸಿತು ಆಸಿಸ್ ತಂಡ. ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ 128 ಬೌಲ್‌ನಲ್ಲಿ 21 ಬೌಂಡರಿ ಮತ್ತು 10 ಸಿಕ್ಸರ್ ಸಿಡಿಸಿದರು. 181 ನಿಮಿಷಗಳ ಕಾಲ ಸ್ಕ್ರೀಸ್ ಒಳಗೆ ನಿಂತು ಆಸ್ಟ್ರೇಲಿಯಾ ತಂಡವನ್ನು ಕಾಪಾಡಿ ಬಿಟ್ಟರು. ಸಚಿನ್ ಅವರು ನಿರ್ಮಿಸಿದ್ದ ದಾಖಲೆ ಕೂಡ ಮುರಿದರು ಗ್ಲೆನ್ ಮ್ಯಾಕ್ಸ್‌ವೆಲ್.












Click it and Unblock the Notifications