ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶತಮಾನದ ಅತ್ಯಧಿಕ ವೈಯಕ್ತಿಕ ರನ್ ಗಳಿಸಿ ದಾಖಲೆ ಬರೆದ ಇಂಗ್ಲೆಂಡ್ ಬ್ಯಾಟರ್

|
Google Oneindia Kannada News

ಇಂಗ್ಲಿಷ್ ಕೌಂಟಿ ಟೆಸ್ಟ್ ಕ್ರಿಕೆಟ್‌ನಲ್ಲಿ ಗ್ಲಾಮರ್ಗನ್ ತಂಡದ ಸ್ಯಾಮ್ ನಾರ್ತ್‌ಈಸ್ಟ್ ಅಜೇಯ 410 ರನ್ ಗಳಿಸುವ ಮೂಲಕ ದಾಖಲೆ ಬರೆದಿದ್ದಾರೆ. 2004ರಲ್ಲಿ ಇಂಗ್ಲೆಂಡ್ ವಿರುದ್ಧ ಬ್ರಿಯಾನ್ ಲಾರಾ ಅಜೇಯ 400 ರನ್ ಗಳಿಸಿದ ನಂತರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಯಾವುದೇ ಆಟಗಾರ 400 ರನ್‌ಗಳ ಗಡಿ ದಾಟಿದ್ದು ಇದೇ ಮೊದಲು.

ಇಂಗ್ಲಿಷ್ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಲೀಸೆಸ್ಟರ್‌ಶೈರ್ ವಿರುದ್ಧ ಔಟಾಗದೆ 410 ರನ್ ಗಳಿಸಿದರು. ಇದು ಸಾರ್ವಕಾಲಿಕ ಒಂಬತ್ತನೇ ಅತ್ಯಧಿಕ ಪ್ರಥಮ ದರ್ಜೆ ಸ್ಕೋರ್. 2004ರಲ್ಲಿ ವೆಸ್ಟ್ ಇಂಡೀಸ್ ಆಟಗಾರ ಬ್ರಿಯಾನ್ ಲಾರಾ ಇಂಗ್ಲೆಂಡ್ ವಿರುದ್ಧ ಔಟಾಗದೆ 400 ರನ್ ಗಳಿಸಿದ್ದರು, ಸ್ಯಾಮ್‌ ನಾರ್ತ್‌ಈಸ್ಟ್ 410 ರನ್ ಗಳಿಸುವ ಮೂಲಕ ಶತಮಾನದ ಅಧಿಕ ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನ ಇತಿಹಾಸದಲ್ಲಿ ಇದು 11 ನೇ ವೈಯಕ್ತಿಕ ಸ್ಕೋರ್ ಆಗಿದೆ.

ವೆಸ್ಟ್ ಇಂಡೀಸ್ ಅಂತಿಮ ಓವರ್ ನಲ್ಲಿ ರೋಚಕ ಜಯ ಸಾಧಿಸಿದ ಟೀಂ ಇಂಡಿಯಾವೆಸ್ಟ್ ಇಂಡೀಸ್ ಅಂತಿಮ ಓವರ್ ನಲ್ಲಿ ರೋಚಕ ಜಯ ಸಾಧಿಸಿದ ಟೀಂ ಇಂಡಿಯಾ

ಒಟ್ಟಾರೆಯಾಗಿ ಅವರು 450 ಎಸೆತಗಳನ್ನು ಎದುರಿಸಿದರು, 45 ಬೌಂಡರಿಗಳು ಮತ್ತು ಮೂರು ಸಿಕ್ಸರ್‌ಗಳನ್ನು ಹೊಡೆದರು, ಅವರ ತಂಡವು ಲೀಸೆಸ್ಟರ್‌ನಲ್ಲಿ ಊಟದ ಮಧ್ಯಂತರದಲ್ಲಿ ಡಿಕ್ಲೇರ್ ಮಾಡಿತು.

 ಕ್ರಿಕೆಟ್ ನಮ್ಮ ದೇಶದ ಆಟವಲ್ಲ: ಬಾಂಬೆ ಹೈ ಕೋರ್ಟ್ ಹೀಗಂದಿದ್ಯಾಕೆ ಗೊತ್ತಾ? ಕ್ರಿಕೆಟ್ ನಮ್ಮ ದೇಶದ ಆಟವಲ್ಲ: ಬಾಂಬೆ ಹೈ ಕೋರ್ಟ್ ಹೀಗಂದಿದ್ಯಾಕೆ ಗೊತ್ತಾ?

 ದಾಖಲೆಯ ಜೊತೆಯಾಟವಾಡಿದ ನಾರ್ತ್ಈಸ್ಟ್-ಕುಕ್

ದಾಖಲೆಯ ಜೊತೆಯಾಟವಾಡಿದ ನಾರ್ತ್ಈಸ್ಟ್-ಕುಕ್

32 ವರ್ಷ ವಯಸ್ಸಿನ ನಾರ್ತ್ಈಸ್ಟ್ 90 ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದರು. ಗ್ಲಾಮರ್ಗನ್ ಇನ್ನಿಂಗ್ಸ್ ಅನ್ನು ಡಿಕ್ಲೇರ್ ಮಾಡಿದಾಗ 450 ಎಸೆತಗಳಲ್ಲಿ 410 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರು. ಡಿಕ್ಲೇರ್ ಘೋಷಣೆ ಸಮಯದಲ್ಲಿ, ನಾರ್ತ್‌ಈಸ್ಟ್ ಮತ್ತೊಬ್ಬ ಬ್ಯಾಟರ್ ಕ್ರಿಸ್ ಕುಕ್ ಜೊತೆಗೆ ಆರನೇ ವಿಕೆಟ್‌ಗೆ 461 ರನ್ ಜೊತೆಯಾಟವಾಡಿದರು.

ಡಿಕ್ಲೇರ್ ಮಾಡುವ ಸಂದರ್ಭದಲ್ಲಿ ಕ್ರಿಸ್‌ ಕುಕ್ 191 ರನ್ ಗಳಿಸಿದ್ದರು. 9 ರನ್‌ಗಳಿಂದ ದ್ವಿಶತಕ ವಂಚಿತರಾದರು. ಇದು ಇಂಗ್ಲೆಂಡ್‌ನಲ್ಲಿ ದಾಖಲಾದ ಅತ್ಯಧಿಕ ಜೊತೆಯಾಟವಾಗಿದೆ ಮತ್ತು ವಿಶ್ವದ ಎರಡನೇ ಅತ್ಯಧಿಕ ಜೊತೆಯಾಟ ಎನಿಸಿಕೊಂಡಿದೆ.

 ವೆಲ್ಶ್ ಕೌಂಟಿ ಕ್ರಿಕೆಟ್‌ನಲ್ಲಿ ಅಧಿಕ ಸ್ಕೋರ್ ದಾಖಲು

ವೆಲ್ಶ್ ಕೌಂಟಿ ಕ್ರಿಕೆಟ್‌ನಲ್ಲಿ ಅಧಿಕ ಸ್ಕೋರ್ ದಾಖಲು

ಗ್ಲಾಮರ್ಗನ್ ತಂಡ 795-5 ರನ್ ಗಳಿಸಿ ಡಿಕ್ಲೇರ್ ಮಾಡಿಕೊಳ್ಳುವ ಮೂಲಕ ವೆಲ್ಶ್ ಕೌಂಟಿ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ರನ್ ಗಳಿಸಿದ ತಂಡ ಎಂದು ಇತಿಹಾಸ ನಿರ್ಮಿಸಿದೆ. 2000 ರಲ್ಲಿ 718-3 ರನ್ ಕಲೆಹಾಕಿರುವುದು ಈವರೆಗಿನ ದಾಖಲೆಯಾಗಿತ್ತು.

ಸ್ಟೀವ್ ಜೇಮ್ಸ್ ಅವರ 22 ವರ್ಷಗಳ ಹಿಂದೆ ಅದೇ ಪಂದ್ಯದಲ್ಲಿ ಔಟಾಗದೆ 309 ರನ್ ಗಳಿಸಿದ್ದರು.

 ಗ್ಲಾಮರ್ಗನ್‌ಗೆ ಇನ್ನಿಂಗ್ಸ್ ಜಯ

ಗ್ಲಾಮರ್ಗನ್‌ಗೆ ಇನ್ನಿಂಗ್ಸ್ ಜಯ

ಲೀಸೆಸ್ಟರ್‌ಶೈರ್ ಮೊದಲ ಇನ್ನಿಂಗ್ಸ್‌ನಲ್ಲಿ 584 ರನ್ ಗಳಿಸಿ ಆಲೌಟ್ ಆಗಿತ್ತು. ನಂತರ ಇನ್ನಿಂಗ್ಸ್ ಆರಂಭಿಸಿದ ಗ್ಲಾಮರ್ಗನ್ ನಾರ್ತ್‌ಈಸ್ಟ್, ಕ್ರಿಸ್ ಕುಕ್, ಇನ್‌ಗ್ರಾಂ ಭರ್ಜರಿ ಬ್ಯಾಟಿಂಗ್ ನೆರವಿನಿಂದ ದಾಖಲೆಯ 5 ವಿಕೆಟ್‌ ನಷ್ಟಕ್ಕೆ 795 ರನ್ ಗಳಿಸಿ 211 ರನ್‌ಗಳ ಮುನ್ನಡೆ ಸಾಧಿಸಿ ಡಿಕ್ಲೇರ್ ಮಾಡಿಕೊಂಡಿತು.

ನಂತರ ಎರಡನೇ ಇನ್ನಿಂಗ್ಸ್‌ ಆರಂಭಿಸಿದ ಲೀಸೆಸ್ಟರ್‌ಶೈರ್ ಗ್ಲಾಮರ್ಗನ್ ಸಂಘಟಿತ ಬೌಲಿಂಗ್ ದಾಳಿಗೆ ತತ್ತರಿಸಿತು. 183 ರನ್‌ಗಳಿಗೆ ಲೀಸೆಸ್ಟರ್ ತಂಡವನ್ನು ಆಲೌಟ್‌ ಮಾಡುವ ಮೂಲಕ ಗ್ಲಾಮರ್ಗನ್ ತಂಡ ಇನ್ನಿಂಗ್ಸ್ ಮತ್ತು 28 ರನ್‌ಗಳ ಭರ್ಜರಿ ಜಯ ಸಾಧಿಸಿತು.

 ಬ್ರಿಯಾನ್ ಲಾರಾ ಸಾರ್ವಕಾಲಿಕ ದಾಖಲೆ

ಬ್ರಿಯಾನ್ ಲಾರಾ ಸಾರ್ವಕಾಲಿಕ ದಾಖಲೆ

ಸ್ಯಾಮ್‌ ನಾರ್ತ್‌ಈಸ್ಟ್ ಈ ಶತಮಾನದ ಅತ್ಯಧಿಕ ರನ್ ಗಳಿಸಿದ ದಾಖಲೆ ಮಾಡಿದರು. ಆದರೆ 1994 ರಲ್ಲಿ ಡರ್ಹಾಮ್ ವಿರುದ್ಧ ವಾರ್ವಿಕ್‌ಷೈರ್ ಪರ ಆಡಿದ್ದ ಬ್ರಿಯಾನ್ ಲಾರಾ ಔಟಾಗದೇ 501 ರನ್ ಗಳಿಸಿದ್ದರು. ಪ್ರಥಮ ದರ್ಜೆ ಪಂದ್ಯದಲ್ಲಿ ಇದು ಸಾರ್ವಕಾಲಿಕ ದಾಖಲೆಯಾಗಿ ಉಳಿದುಕೊಂಡಿದೆ.

10 ವರ್ಷಗಳ ಬಳಿಕ 2004ರಲ್ಲಿ ಬ್ರಿಯಾನ್ ಲಾರಾ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್‌ನ ವಿರುದ್ಧ ಅಜೇಯ 400 ರನ್ ಗಳಿಸಿದ್ದರು. ಅಂತಾರಾಷ್ಟ್ರೀಯ ಟೆಸ್ಟ್‌ನಲ್ಲಿ ಈ ಶತಮಾನದಲ್ಲಿ ದಾಖಲಾಗಿರುವ ಏಕೈಕ 400 ರನ್‌ ಇನ್ನೂ ಲಾರಾ ಹೆಸರಿನಲ್ಲೇ ಇದೆ.

(ಚಿತ್ರಕೃಪೆ: ಗ್ಲಾಮರ್ಗನ್ ಟ್ವಿಟರ್ ಖಾತೆ)

English summary
Glamorgan's Sam Northeast scored 410 Not out in English county Test cricket. This is the first time any player has scored 400 plus run mark in first-class cricket since Brian Lara's unbeaten 400 against England in 2004.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X