MS Dhoni: ಮುಂಬೈ ಇಂಡಿಯನ್ಸ್‌ ವಿರುದ್ಧ ಪಂದ್ಯಕ್ಕೂ ಮುನ್ನ ವಿದಾಯದ ಬಗ್ಗೆ ಎಂಎಸ್ ಧೋನಿ ಹೇಳಿದ್ದೇನು ಗೊತ್ತಾ?

MS Dhoni: ಇದೀಗ ಐಪಿಎಲ್‌ 18ನೇ ಆವೃತ್ತಿ ಆರಂವಾಗಿದೆ. ಕೆಲ ಆಟಗಾರರಿಗೆ ಇದೇ ಕೊನೇ ಆವೃತ್ತಿ ಆಗಿರಲಿದೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಈ ಸಾಲಿನಲ್ಲಿ ಸಿಎಸ್‌ಕೆ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಸಹ ಇದ್ದರು. ಆದರೆ ವಿದಾಯದ ಬಗ್ಗೆ ಮಾತನಾಡಿರುವ ಎಂ.ಎಸ್‌.ಧೋನಿ ಏನು ಹೇಳಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಈಗಾಗಲೇ ನಿನ್ನೆಯಿಂದ ಐಪಿಎಲ್‌ 2025ನೇ ಆವೃತ್ತಿಯ ಐಪಿಎಲ್‌ ಆರಂಭವಾಗಿದೆ. ಇಂದು (ಮಾರ್ಚ್ 23) ಚೆನ್ನೈನಲ್ಲಿ ಸಿಎಸ್‌ಕೆ ಮತ್ತು ಮುಂಬೈ ಇಂಡಿಯನ್ಸ್‌ ತಂಡಗಳು ಸೆಣಸಲಿವೆ. ಇದಕ್ಕೂ ಮುನ್ನವೇ ಎಂಎಸ್‌ ಧೋನಿ ಅವರು ವಿದಾಯದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

Do you know What Did MS Dhoni say about retirement before match against Mumbai Indians

ಈಗಾಗಲೇ ಹಲವು ಬಾರಿ ಇದೇ ಎಂಎಸ್‌ ಧೋನಿ ಅವರ ಐಪಿಎಲ್‌ ಎಂದು ಎನ್ನುವ ಮಾತುಗಳು ಕೇಳಿಬಂದಿದ್ದವು. ಇದರಿಂದ ಅಭಿಮಾನಿಗಳು ಕೂಡ ಧೋನಿ ಅವರು ಈ ಆವೃತ್ತಿ ಬಳಿಕ ವಿದಾಯ ಹೇಳುತ್ತಾರೇನೋ ಎನ್ನುವ ಗೊಂದಲದಲ್ಲಿದ್ದರು. ಆದ್ದರಿಂದ ಪ್ರತಿ ಆವೃತ್ತಿಯಲ್ಲೂ ಸಿಎಸ್‌ಕೆ ತಂಡದ ಕೊನೆಯ ಪಂದ್ಯದ ಸಮಯದಲ್ಲಿ ಮಹೇಂದ್ರ ಸಿಂಗ್‌ ಧೋನಿ ಅವರ ಬ್ಯಾಟಿಂಗ್‌ ನೀಡಲು ಅಭಿಮಾನಿಗಳ ದಂಡೇ ಕ್ರೀಡಾಂಗಣದಲ್ಲಿ ನೆರೆಯುತ್ತದೆ.

ಇನ್ನು ಈ ಬಾರಿ ಚೆನ್ನೈ ಕ್ಯಾಂಪ್‌ ಸೇರುವ ವೇಳೆ ಎಂಎಸ್‌ ಧೋನಿ ಅವರು ಒನ್ ಲಾಸ್ಟ್ ಟೈಮ್ ಎಂದು ಬರೆದಿರುವ ಟಿ-ಶರ್ಟ್ ಧರಿಸುವ ಮೂಲಕ ನಿವೃತ್ತಿಯ ಸುಳಿವನ್ನು ಬಿಟ್ಟುಕೊಟ್ಟಿದ್ದರು. ಇದರಿಂದ ಅಭಿಮಾನಿಗಳು ಗೊಂದಲಕ್ಕೆ ಒಳಗಾಗಿದ್ದರು. ಆದರೆ, ಇಂದು (ಮಾರ್ಚ್‌ 23) ಚೆನ್ನೈನಲ್ಲಿ ನಡೆಯಲಿರುವ ಮುಂಬೈ ಇಂಡಿಯನ್ಸ್ ಹಾಗೂ ಸಿಎಸ್‌ ತಂಡಗಳ ನಡುವಿನ ಪಂದ್ಯ ಆರಂಭಕ್ಕೂ ಮುನ್ನ ನಿವೃತ್ತಿ ಕುರಿತ ಊಹಾಪೋಹಗಳಿಗೆ ಧೋನಿ ಸ್ಪಷ್ಟನೆ ನೀಡಿದ್ದಾರೆ.

ಜಿಯೋ ಹಾಟ್‌ಸ್ಟಾರ್‌ ಜೊತೆ ಮಾತನಾಡಿದ ಎಂಎಸ್‌ ಧೋನಿ ಅವರು, ತಾನು ಬಯಸಿದ ದಿನಳಷ್ಟು ಸಿಎಸ್‌ಕೆ ಪರ ಆಡಬಹುದು. ಅಲ್ಲದೆ, ಗಾಯಗೊಂಡು ಗಾಲಿ ಕುರ್ಚಿಯಲ್ಲಿ ಹೋಗುವಂತಿದ್ದರೂ ಸಹ ಮತ್ತೊಂದು ಆವೃತ್ತಿಯಲ್ಲಿ ಆಡುವಂತೆ ಫ್ರಾಂಚೈಸಿ ತನ್ನ ಮನವೊಲಿಸುತ್ತದೆ ಎಂದು ಹೇಳಿ ವಿದಾಯದ ಊಹಾಪೋಹಗಳಿಗೆ ತೆರೆ ಎಳೆಯುವ ಕೆಲಸವನ್ನು ಮಾಡಿದ್ದಾರೆ.

ಸಂಭಾವ್ಯ ತಂಡದ ವಿವರ

ಸಿಎಸ್‌ಕೆ ಸಂಭಾವ್ಯ ತಂಡ: ರುತುರಾಜ್ ಗಾಯಕ್ವಾಡ್ (ನಾಯಕ), ಡೆವೊನ್ ಕಾನ್ವೇ, ರಚಿನ್ ರವೀಂದ್ರ, ರಾಹುಲ್ ತ್ರಿಪಾಠಿ, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ (ವಿಕೆಟ್‌ ಕೀಪರ್), ರವಿಚಂದ್ರನ್ ಅಶ್ವಿನ್, ನೂರ್ ಅಹ್ಮದ್, ಮತೀಶ ಪತಿರಾನ, ಖಲೀಲ್ ಅಹ್ಮದ್

ಮುಂಬೈ ಇಂಡಿಯನ್ಸ್‌ ಸಂಭಾವ್ಯ ತಂಡ: ರಿಯಾನ್ ರಿಕಲ್ಟನ್ (ವಿಕೆಟ್‌ ಕೀಪರ್), ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ನಮನ್ ಧೀರ್, ರಾಬಿನ್ ಮಿಂಜ್, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಹಾರ್, ಟ್ರೆಂಟ್ ಬೌಲ್ಟ್, ರೀಸ್ ಟೋಪ್ಲಿ, ಕರ್ಣ್ ಶರ್ಮಾ

ಎರಡು ತಂಡಗಳ ಆಟಗಾರರ ಪಟ್ಟಿ

ಮುಂಬೈ ಇಂಡಿಯನ್ಸ್: ಹಾರ್ದಿಕ್ ಪಾಂಡ್ಯ (ನಾಯಕ), ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ರಾಬಿನ್ ಮಿಂಜ್, ರಯಾನ್ ರಿಕಲ್ಟನ್ (ವಿಕೆಟ್ ಕೀಪರ್), ಶ್ರೀಜಿತ್ ಕೃಷ್ಣನ್ (ವಿಕೆಟ್ ಕೀಪರ್), ಬೆವೊನ್ ಜಾಕೋಬ್ಸ್, ತಿಲಕ್ ವರ್ಮಾ, ನಮನ್ ಧೀರ್, ವಿಲ್ ಜಾಕ್ಸ್, ಮಿಚೆಲ್ ಸ್ಯಾಂಟ್ನರ್, ರಾಜ್ ಅಂಗದ್ ಬಾವಾ, ವಿಘ್ನೇಶ್ ಪುತೂರ್, ಕಾರ್ಬಿನ್ ಬಾಷ್, ಟ್ರೆಂಟ್ ಬೌಲ್ಟ್, ಕರ್ಣ್ ಶರ್ಮಾ, ದೀಪಕ್ ಚಾಹರ್, ಅಶ್ವನಿ ಕುಮಾರ್, ರೀಸ್ ಟೋಪ್ಲಿ, ವಿಎಸ್ ಪೆನ್ಮೆಟ್ಸಾ, ಅರ್ಜುನ್ ತೆಂಡೂಲ್ಕರ್, ಮುಜೀಬ್ ಉರ್ ರೆಹಮಾನ್, ಜಸ್ಪ್ರೀತ್ ಬುಮ್ರಾ.

ಸಿಎಸ್‌ಕೆ: ಋತುರಾಜ್ ಗಾಯಕ್ವಾಡ್ (ನಾಯಕ), ಎಂಎಸ್ ಧೋನಿ (ವಿಕೆಟ್ ಕೀಪರ್), ಡೆವೊನ್ ಕಾನ್ವೇ, ರಾಹುಲ್ ತ್ರಿಪಾಠಿ, ಶೇಕ್ ರಶೀದ್, ವಂಶ್ ಬೇಡಿ (ವಿಕೆಟ್ ಕೀಪರ್), ಸಿ ಆಂಡ್ರೆ ಸಿದ್ಧಾರ್ಥ್, ರಾಚಿನ್ ರವೀಂದ್ರ, ರವಿಚಂದ್ರನ್ ಅಶ್ವಿನ್, ವಿಜಯ್ ಶಂಕರ್, ಸ್ಯಾಮ್ ಕರನ್, ಅಂಶುಲ್ ಕಾಂಬೋಜ್, ದೀಪಕ್ ಹೂಡಾ, ಜೇಮೀ ಓವರ್ಟನ್, ಕಮಲೇಶ್ ನಾಗರ್ಕೋಟಿ, ರಾಮಕೃಷ್ಣ ಘೋಷ್, ರವೀಂದ್ರ ಜಡೇಜಾ, ಶಿವಂ ದುಬೆ, ಖಲೀಲ್ ಅಹ್ಮದ್, ನೂರ್ ಅಹ್ಮದ್, ಮುಖೇಶ್ ಚೌಧರಿ, ಗುರ್ಜಪ್ನೀತ್ ಸಿಂಗ್, ನಾಥನ್ ಎಲ್ಲಿಸ್, ಶ್ರೇಯಸ್ ಗೋಪಾಲ್, ಮಥೀಷ ಪತಿರಾನ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+