CSK vs RR: ವಿಚಿತ್ರ ಕಾರಣಕ್ಕೆ ಔಟಾದ ರವೀಂದ್ರ ಜಡೇಜಾ; ವಿಡಿಯೋ ನೋಡಿ
ಐಪಿಎಲ್ 2024ರ ಆವೃತ್ತಿಯಲ್ಲಿ ಮತ್ತೊಂದು ವಿವಾದಾತ್ಮಕ ಔಟ್ ನಿರ್ಣಯ ನೀಡಲಾಗಿದೆ. ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಸಿಎಸ್‌ಕೆ ತಂಡದ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರನ್ನು ಕ್ಷೇತ್ರ ರಕ್ಷಣೆಗೆ ಅಡ್ಡಿಪಡಿಸಿದ ಕಾರಣಕ್ಕೆ ಔಟ್ ಕೊಡಲಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ಜಡೇಜಾ ಔಟಾದ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು, ವ್ಯಾಪಕ ಚರ್ಚೆ ಹುಟ್ಟುಹಾಕಿದೆ. ಸಿಎಸ್‌ಕೆ ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿ 6 ನೇ ಓವರ್‌ನಲ್ಲಿ, ಜಡೇಜಾ ಅವರು ಅವೇಶ್ ಖಾನ್ ಬೌಲಿಂಗ್‌ನಲ್ಲಿ ಥರ್ಡ್ ಮ್ಯಾನ್ ಕಡೆಗೆ ಚೆಂಡನ್ನು ಹೊಡೆದು ಒಂದು ರನ್ ಗಳಿಸಿದರು, ಆದರೆ ಮತ್ತೊಂದು ರನ್‌ಗಾಗಿ ಓಡುವಾಗ ರುತುರಾಜ್ ಗಾಯಕ್ವಾಡ್ ರನ್ ಓಡಲು ನಿರಾಕರಿಸಿದರು, ಅಷ್ಟರಲ್ಲಾಗಲೇ ಜಡೇಜಾ ಅರ್ಧ ಪಿಚ್‌ಗೆ ಓಡಿದ್ದರು.

ಸಂಜು ಸ್ಯಾಮ್ಸನ್ ಫೀಲ್ಡರ್‌ನಿಂದ ಚೆಂಡು ಸ್ವೀಕರಿಸಿದರು ಮತ್ತು ಅವರು ಚೆಂಡನ್ನು ನಾನ್‌ಸ್ಟ್ರೈಕರ್‌ನ ತುದಿಯಲ್ಲಿ ಸ್ಟಂಪ್‌ನ ಕಡೆಗೆ ಎಸೆದಾಗ, ಅದು ಜಡೇಜಾಗೆ ತಾಗಿತು, ಅವರು ಕ್ರೀಸ್‌ಗೆ ಮರಳಲು ಪ್ರಯತ್ನಿಸುತ್ತಿದ್ದರು.
ಮೈದಾನದಲ್ಲಿದ್ದ ಅಂಪೈರ್‌ಗಳು ಮೂರನೇ ಅಂಪೈರ್ ಗೆ ಮೇಲ್ಮನವಿ ಸಲ್ಲಿಸಿದರ, ಮೂರನೇ ಅಂಪೈರ್ ಜಡೇಜಾ ಅವರು ಓಡುತ್ತಿರುವಾಗ ಉದ್ದೇಶಪೂರ್ವಕವಾಗಿ ತಮ್ಮ ದಿಕ್ಕನ್ನು ಬದಲಾಯಿಸಿದರು ಎಂದು ನಿರ್ಣಯಿಸಿ, ರಾಜಸ್ಥಾನ ರಾಯಲ್ಸ್ ಪರವಾಗಿ ತೀರ್ಪು ನೀಡಿದರು. 7 ಎಸೆತಗಳಲ್ಲಿ 5 ರನ್ ಗಳಿಸಿದ ಅವರು ಔಟಾದರು.
Ravindra Jadeja given out obstructing the field.
— Mufaddal Vohra (@mufaddal_vohra) May 12, 2024
- 3rd time happened in IPL history. pic.twitter.com/lJNolzBc1L
ಜಡೇಜಾ ಅವರನ್ನು ಔಟ್ ಕೊಟ್ಟ ಬಳಿಕ ಪರ ವಿರೋಧ ಚರ್ಚೆ ಶುರುವಾಗಿದೆ. ಆದರೆ ನಿಯಮದ ಪ್ರಕಾರ ಅವರು ಉದ್ದೇಶಪೂರ್ವಕವಾಗಿ ಕ್ಷೇತ್ರ ರಕ್ಷಣೆಗೆ ಅಡ್ಡಿ ಪಡಿಸಿದ್ದು ವಿಡಿಯೋದಲ್ಲಿ ಸ್ಪಷ್ಟವಾಗಿದ್ದು, ಅದಕ್ಕೆ ಔಟ್ ಕೊಡಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಗೆದ್ದ ಸಿಎಸ್‌ಕೆ ಪ್ಲೇ ಆಫ್ ಕನಸು ಜೀವಂತ
ನಾಯಕ ರುತುರಾಜ್ ಗಾಯಕ್ವಾಡ್ ಅವರ ಜವಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಸಿಎಸ್‌ಕೆ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ ಐದು ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ. ಸಿಎಸ್‌ಕೆ ಗೆಲುವಿನ ಬಳಿಕ ಆರ್ ಸಿಬಿ ತಂಡದ ಪ್ಲೇ ಆಫ್ ಕಠಿಣವಾಗಿದ್ದು, ದೊಡ್ಡ ಅಂತರದಲ್ಲಿ ಉಳಿದ ಎರಡು ಪಂದ್ಯಗಳನ್ನು ಗೆಲ್ಲಬೇಕಿದೆ.












Click it and Unblock the Notifications