RCB: "ಆರ್‌ಸಿಬಿ ಫ್ಯಾನ್ಸ್‌ಗೆ ಇರುವ ನಿಯತ್ತು ಸಿಎಸ್‌ಕೆ ಫ್ಯಾನ್ಸ್‌ಗೆ ಇಲ್ಲ"!
RCB vs Csk: ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ತಮಿಳುನಾಡಿನ ಚೆಪಾಕ್‌ನಲ್ಲಿ ನಡೆದ ಪಂದ್ಯವು ಹೊಸ ದಾಖಲೆಯನ್ನು ಸೃಷ್ಟಿ ಮಾಡಿದೆ. ಈ ಸಂದರ್ಭದಲ್ಲಿಯೇ ಆರ್‌ಸಿಬಿ ಹಾಗೂ ಸಿಎಸ್‌ಕೆಯ ನಿಯತ್ತಿನ (Loyality) ಬಗ್ಗೆ ಜೋರು ಚರ್ಚೆ ನಡೆದಿದೆ. ಸಿಎಸ್‌ಕೆ ಎರಡು ಮ್ಯಾಚ್‌ಗಳನ್ನು ಸೋಲುತ್ತಿದ್ದಂತೆ ಸಿಎಸ್‌ಕೆಯ ಕೆಲವು ಫ್ಯಾನ್ಸ್‌ಗಳ Loyality ಬಗ್ಗೆ ಚರ್ಚೆ ನಡೆದಿದೆ. ಸಿಎಸ್‌ಕೆ ಫ್ಯಾನ್ಸ್‌ಗಳೇ ಹೌದು ಆರ್‌ಸಿಬಿ ಫ್ಯಾನ್ಸ್‌ಗಳಿಗೆ ಇರುವಷ್ಟು ತಾಳ್ಮೆ ನಮಗೆ ಇಲ್ಲ, ಬೆಂಬಲವೂ ಇಲ್ಲ ಅಂತ ಹೇಳುತ್ತಿದ್ದಾರೆ. ಸಿಎಸ್‌ಕೆ ಈ ಸೀಸನ್‌ನಲ್ಲಿ ಸರಣಿ ಸೋಲು ಅನುಭವಿಸಿದೆ. ಇನ್ನೊಂದು ಕಡೆ ಆರ್‌ಸಿಬಿ ಎರಡು ಮ್ಯಾಚ್‌ಗಳನ್ನು ಸಹ ಗೆದ್ದಿದೆ.
ಆರ್‌ಸಿಬಿ ಪುರುಷರ ತಂಡವು ಐಪಿಎಲ್‌ನಲ್ಲಿ ಬರೋಬ್ಬರಿ 18 ವರ್ಷಗಳಿಂದ ಕಪ್ ಗೆದ್ದಿಲ್ಲ. ಆದರೂ ಆರ್‌ಸಿಬಿಯ ಮೇಲೆ ಅಭಿಮಾನಿಗಳಿಗೆ ಇರುವ ಅಭಿಮಾನವು ಎಳ್ಳಷ್ಟು ಕಡಿಮೆ ಆಗಿಲ್ಲ. ನಾವು ರಾಯಲ್ & ಲಾಯಲ್ ಅಂತ ಆರ್‌ಸಿಬಿ ಅಭಿಮಾನಿಗಳು ಹೇಳುತ್ತಿದ್ದಾರೆ. ಚೆಪಾಕ್‌ನಲ್ಲಿ ಬರೋಬ್ಬರಿ 17 ವರ್ಷಗಳ ನಂತರ ಆರ್‌ಸಿಬಿ - ಸಿಎಸ್‌ಕೆಯ ಮೇಲೆ ಗೆದ್ದಿದೆ. ಹೊಸ ದಾಖಲೆಯನ್ನು ಸಿಎಸ್‌ಕೆ ಫ್ಯಾನ್ಸ್‌ನಿಂದ ತಡೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಹಲವು ಅಭಿಮಾನಿಗಳು ಸಿಎಸ್‌ಕೆಯ ಮ್ಯಾನೇಜ್ಮೆಂಟ್ ಹಾಗೂ ಸಿಎಸ್‌ಕೆ ಆಟಗಾರ (ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ) ಮಹೇಂದ್ರ ಸಿಂಗ್ ಧೋನಿ ಅವರ ಬಗ್ಗೆಯೂ ಅಸಮಾಧಾನ ಹೊರ ಹಾಕಿದ್ದಾರೆ.

ಈ ರೀತಿ ಇರುವಾಗಲೇ ಸಿಎಸ್‌ಕೆ ಅಭಿಮಾನಿಗಳೇ ಹತಾಶೆಯಿಂದ ರೀಲ್ಸ್ ವಿಡಿಯೋ ಮಾಡಿ ಹಂಚಿಕೊಳ್ಳುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕಳೆದ ಒಂದು ವಾರದಿಂದಲೂ ಇದೇ ಚರ್ಚೆ ಜೋರಾಗಿದೆ. ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವೆ ಮ್ಯಾಚ್ ಪ್ರಾರಂಭವಾಗುವುದಕ್ಕಿಂತ ಮುಂಚೆಯಿಂದಲೇ ಜೋರು ಚರ್ಚೆ ನಡೆದಿತ್ತು. ಇದೀಗ ಮ್ಯಾಚ್ ಮುಗಿದ ಮೇಲೂ ಸೋಷಿಯಲ್ ಮೀಡಿಯಾದಲ್ಲಿ ಆರ್‌ಸಿಬಿ ಹವಾ ಮುಂದುವರಿದಿದೆ.
ಮಾನ - ಮಾರ್ಯಾದೆ ಇಲ್ವಾ ಎಂದ ಫ್ಯಾನ್ಸ್
ಸಿಎಸ್‌ಕೆ ಫ್ಯಾನ್ಸ್‌ಗಳೇ ಸಿಎಸ್‌ಕೆ ಫ್ಯಾನ್ಸ್ ಹಾಗೂ ಧೋನಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ಧೋನಿ.. ಧೋನಿ ಅಂತ ಇಷ್ಟೊಂದು ಕಿರುಚುತ್ತಿದ್ದಾರೆ (ಆರ್‌ಸಿಬಿ - ಸಿಎಸ್‌ಕೆ ಮ್ಯಾಚ್ ಸಂದರ್ಭದಲ್ಲಿ) ಇವರಿಗೆ ಮಾನ - ಮರ್ಯಾದೆ ಇಲ್ವಾ ಅಂತ ಸಿಎಸ್‌ಕೆ ಫ್ಯಾನ್ಸ್ ಪ್ರಶ್ನೆ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮ್ಯಾಚ್‌ನಲ್ಲಿ ಇಷ್ಟೊಂದು ಸೋಲುವ ಹಂತದಲ್ಲಿ ಇದ್ದರೂ ಧೋನಿ ಯಾಕೆ ಬರಲಿಲ್ಲ. 10ನೇ ಓವರ್‌ನಲ್ಲಿ ಧೋನಿ ಅವರು ಯಾಕೆ ಬರಲಿಲ್ಲ. ಯಾಕೆ ಬೇಗ ಬಂದು ಮ್ಯಾಚ್ ಗೆಲ್ಲಿಸಿಕೊಡಲಿಲ್ಲ ಅಂತ ಸಿಎಸ್‌ಕೆ ಫ್ಯಾನ್ಸ್‌ಗಳೇ ಪ್ರಶ್ನೆ ಮಾಡುತ್ತಿದ್ದಾರೆ.
ಆರ್‌ಸಿಬಿ ಫ್ಯಾನ್ಸ್ ಬಿಟ್ಟು ಕೊಟ್ಟಿದ್ದೇ ಇಲ್ಲ!
ಆರ್‌ಸಿಬಿ ಎಷ್ಟೊಂದು ಮ್ಯಾಚ್‌ಗಳನ್ನು ಸೋತಿದೆ. ಕೆಲವೊಂದು ಮ್ಯಾಚ್‌ಗಳಲ್ಲಿ ಆರ್‌ಸಿಬಿ ಹೀನಾಯವಾಗಿ ಸೋತಿದೆ. ಆದರೆ, ಇಷ್ಟೆಲ್ಲಾ ಮ್ಯಾಚ್‌ಗಳನ್ನು ಸೋತಿರುವ ಹೊರತಾಗಿಯೂ ಆರ್‌ಸಿಬಿ ಫ್ಯಾನ್ಸ್‌ಗಳು ಒಮ್ಮೆಯೂ ಆರ್‌ಸಿಬಿಯನ್ನು ಬಿಟ್ಟು ಕೊಟ್ಟು ಮಾತನಾಡಿದ್ದೇ ಇಲ್ಲ ಎಂದು ಧೋನಿ ಅಭಿಮಾನಿ ಹೇಳಿದ್ದಾರೆ. Chennai Time ಮೀಡಿಯಾದ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಎರಡು ಮ್ಯಾಚ್‌ಗಳು ಸೋಲುತ್ತಿದ್ದಂತೆಯೇ ಸಿಎಸ್‌ಕೆ ಅಭಿಮಾನಿಗಳನ್ನು ಧೋನಿ - ಮ್ಯಾನೇಜ್ಮೆಂಟ್‌ನ ಬಗ್ಗೆ ಬೈಯುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ತುಂಬಾ ವರ್ಸ್ಟ್ ಆಗಿದೆ. ನಾವೇ ನಮ್ಮ ತಂಡದ ಬಗ್ಗೆ ಮಾತನಾಡಬಾರದು. ಸೋತರೂ ಗೆದ್ದರೂ ಸಿಎಸ್‌ಕೆಗೆ ಬೆಂಬಲ ಕೊಡೋಣ ಅಂತ ಹೇಳಿದ್ದಾರೆ.












Click it and Unblock the Notifications