IPL Trophy: ತಿರುಪತಿ ತಿರುಮಲ ದೇವಸ್ಥಾನಕ್ಕೆ ಐಪಿಎಲ್ ಟ್ರೋಫಿಯನ್ನು ಕೊಂಡೊಯ್ದ ಸಿಎಸ್‌ಕೆ
ಚೆನ್ನೈ, ಮೇ 31: ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಪೈನಲ್ ಪಂದ್ಯದಲ್ಲಿ ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಜಯಗಳಿಸಿತು. ಐಪಿಎಲ್ ಟ್ರೋಪಿಯನ್ನು ಎತ್ತಿ ಹಿಡಿದ ಕೆಲವೇ ಗಂಟೆಗಳಲ್ಲಿ ಚೆನ್ನೈನ ತಿರುಮಲ ತಿರುಪತಿ ದೇವಸ್ಥಾನಕ್ಕೆ ( ಟ್ರೋಪಿಯನ್ನು ) ಕೊಂಡೊಯ್ಯಲಾಯಿತು.
ಮಳೆ ಅಡ್ಡಿಪಡಿಸಿದರೂ ಆಟದ ಕೊನೆಯ ಎಸೆತಗಳಲ್ಲಿ ಸಿಎಸ್‌ಕೆ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಅನ್ನು ಸೋಲಿಸಿತು. ಮೇ 28 ರಂದು ಭಾನುವಾರ ನಡೆಯಬೇಕಿದ್ದ ಫೈನಲ್ ಪಂದ್ಯವನ್ನು ಮಳೆಯು ಅಡ್ಡಿಪಡಿಸಿತು. ಈ ಪಂದ್ಯವನ್ನು ಸೋಮವಾರ ಮುಂದೂಡಲಾಯಿತು.

ಸೋಮವಾರ ಚೆನ್ನೈ ಸೂಪರ್ ಕಿಂಗ್ಸ್ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಸಾಯಿ ಸುದರ್ಶನ್ ಅವರ 96 ರನ್‌ಗಳಿಂದ ಗುಜರಾತ್ ಟೈಟಾನ್ಸ್ ತನ್ನ 20 ಓವರ್‌ಗಳಲ್ಲಿ 214/4 ಗಳಿಸಿತು. ಇದಾದ ಬಲಿಕ ಪಂದ್ಯವನ್ನು ಮತ್ತೆ ಮಳೆ ಅಡ್ಡಿಪಡಿಸಿತು.
ಪಂದ್ಯವನ್ನು 15 ಓವರ್‌ಗಳಿಗೆ ಕಡಿತಗೊಳಿಸಲಾಯಿತು. ಆಗ ಪರಿಷ್ಕೃತ ಮೊತ್ತವನ್ನು 171ಕ್ಕೆ ಇಳಿಸಲಾಯಿತು. ಡೆವೊನ್ ಕಾನ್ವೇ ಮತ್ತು ರುತುರಾಜ್ ಗಾಯಕ್‌ವಾಡ್ ನಡುವಿನ ಪ್ರಬಲ ಆರಂಭಿಕ ಆಟವು ಸಿಎಸ್‌ಕೆಗೆ ಬಲವನ್ನು ನೀಡಿತು. ಅಜಿಂಕ್ಯ ರಹಾನೆ, ಅಂಬಟಿ ರಾಯುಡು ಮತ್ತು ಶಿವಂ ದುಬೆ ಮಧ್ಯದಲ್ಲಿ ಉತ್ತಮವಾಗಿ ಆಟವಾಡಿದರು. ಕೊನೆಯ ಓವರ್‌ನಲ್ಲಿನ ಎರಡು ಬಾಲ್‌ಗಳಿಗೆ 10 ರನ್ ಬೇಕಾಗಿತ್ತು. ಅಲ್‌ರೌಂಡರ್ ರವೀಂದ್ರ ಜಡೇಜಾ ಅವರು ಒಂದು ಸಿಕ್ಸರ್ ಹಾಗೂ ಒಂದು ಬೌಂಡರ್ ಗಳಿಸುವ ಮೂಲಕ ಸಿಎಸ್‌ಕೆ ಗೆಲುವಿಗೆ ಕಾರಣರಾದರು.

ಈ ಜಯವು ಚೆನ್ನೈಗೆ ಐದನೇ ಐಪಿಎಲ್ ಪ್ರಶಸ್ತಿಯನ್ನು ಗಳಿಸಿಕೊಟ್ಟಿತು. ಇದು ಮುಂಬೈ ಇಂಡಿಯನ್ಸ್ ಜೊತೆಗೆ ಜಂಟಿಯಾಗಿ ಅಗ್ರಸ್ಥಾನದಲ್ಲಿದೆ. ಎಂಎಸ್ ಧೋನಿ ಅವರಿಗೆ ಇದು ಅಂತಿಮ ಐಪಿಎಲ್ ಪಂದ್ಯವೆಂದು ಹೇಳಲಾಗುತ್ತಿದೆ.
ದೋನಿ ಕುರಿತು ಮೆಚ್ಚುಗೆ ಮಾತಗಳನ್ನು ಹೇಳಿರುವ ಇಂಡಿಯಾ ಸಿಮೆಂಟ್ಸ್ ಉಪಾಧ್ಯಕ್ಷ ಹಾಗೂ ಮಾಜಿ ಬಿಸಿಸಿಐ ಅಧ್ಯಕ್ಷ ಎನ್ ಶ್ರೀನಿವಾಸನ್, 'ಅದ್ಭುತ ನಾಯಕ. ನೀವು ಪವಾಡ ಮಾಡಿದ್ದೀರಿ. ನೀವು ಮಾತ್ರ ಅದನ್ನು ಮಾಡಬಹುದು. ನಾವು ಹುಡುಗರು ಮತ್ತು ತಂಡದ ಬಗ್ಗೆ ಹೆಮ್ಮೆಪಡುತ್ತೇವೆ' ಎಂದು ಹೇಳಿದ್ದಾರೆ.
'ಈ ಸಿಜನ್‌ನಲ್ಲಿ ಅಭಿಮಾನಿಗಳು ಎಂಎಸ್ ಧೋನಿಯನ್ನು ಎಷ್ಟು ಪ್ರೀತಿಸುತ್ತಾರೆ ಎಂಬುದನ್ನು ಪ್ರದರ್ಶಿಸಿದ್ದಾರೆ' ಎಂದೂ ಅವರು ಹೇಳಿದರು.

ಜೂನ್‌ನಲ್ಲಿ ತಿರುಮಲ ಉತ್ಸವ
ಹೈದರಾಬಾದ್, ಮೇ 31: ಬೇಸಿಗೆ ರಜೆ ಹಿನ್ನೆಲೆಯಲ್ಲಿ ತಿರುಮಲಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಇತ್ತೀಚಿನ ವರದಿಗಳ ಪ್ರಕಾರ, ಕಂಪಾರ್ಟ್‌ಮೆಂಟ್‌ಗಳು ಭರ್ತಿಯಾಗಿದ್ದು, ಸರ್ವ ದರ್ಶನಕ್ಕೆ ಟೋಕನ್ ಇಲ್ಲದ ಭಕ್ತರು ಶ್ರೀವಾರಿ ದರ್ಶನಕ್ಕೆ 24 ಗಂಟೆಗಳ ಕಾಲಾವಕಾಶ ತೆಗೆದುಕೊಳ್ಳುತ್ತಿದ್ದಾರೆ.
ತಿರುಮಲ ತಿರುಪತಿ ದೇವಸ್ಥಾನಗಳು (ಟಿಟಿಡಿ) ಜೂನ್‌ನಲ್ಲಿ ವಿಶೇಷ ಉತ್ಸವವನ್ನು ಯೋಜಿಸುತ್ತಿರುವುದರಿಂದ ಜೂನ್‌ನಲ್ಲಿ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಲು ಯೋಜಿಸುತ್ತಿರುವ ಭಕ್ತರು ತಮ್ಮ ಟಿಕೆಟ್‌ಗಳನ್ನು ಮುಂಚಿತವಾಗಿ ಕಾಯ್ದಿರಿಸಬೇಕು.
ಜೂನ್ 2 ರಂದು ನಮ್ಮಾಳ್ವಾರ್ ಸಾತ್ತುಮೋರ ಉತ್ಸವ ಮತ್ತು ಜೂನ್ 2 ರಿಂದ 4 ರಂದು ಜ್ವೇಷ್ಟಾಭಿಷೇಕ ನಡೆಯಲಿದೆ.
ಜೂನ್ 4: ಎರುವಕ ಪೂರ್ಣಿಮಾ ಉತ್ಸವ
ಜೂನ್ 14: ಮಾತ್ರಾಯ ಏಕಾದಶಿ
ಜೂನ್ 28: ಪೆರಿಯಾಳ್ವಾರ್ ಉತ್ಸವಂ
ಜೂನ್ 29: ಚಾತುರ್ಮಾಸ್ಯ ವ್ರತ ಆರಂಭ ಉತ್ಸವಂ
ಭಕ್ತರು ತಮ್ಮ ಟಿಕೆಟ್‌ಗಳನ್ನು ಮುಂಗಡವಾಗಿ ಕಾಯ್ದಿರಿಸಲು ಮತ್ತು ಅದರ ಪ್ರಕಾರ ತಮ್ಮ ಭೇಟಿಯನ್ನು ಯೋಜಿಸಲು ಸಲಹೆ ನೀಡಲಾಗುತ್ತದೆ.












Click it and Unblock the Notifications