MS Dhoni: ಎಂಎಸ್‌ ಧೋನಿ ಅನ್‌ಕ್ಯಾಪ್ಡ್ ಆಟಗಾರ! 4 ಕೋಟಿಗೆ ಉಳಿಸಿಕೊಳ್ಳಲು ಸಿಎಸ್‌ಕೆ ತಂಡಕ್ಕೆ ಅವಕಾಶ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಮೆಗಾ ಹರಾಜಿಗೆ ಸಂಬಂಧಪಟ್ಟಂತೆ ಹೊಸ ನಿಯಮಗಳನ್ನು ಘೋಷಿಸಲಾಗಿದೆ. ಆರು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಆರ್ ಟಿಎಂ ಆಯ್ಕೆಯನ್ನು ಮರುಪರಿಚಯಿಸಲಾಗದ್ದು, ತಂಡಗಳು ಅನಿವಾರ್ಯವಾಗಿ ಕೈಬಿಡುವ ಆಟಗಾರರನ್ನು ಹರಾಜಿನಲ್ಲಿ ಉಳಿಸಿಕೊಳ್ಳಲು ಅವಕಾಶ ನೀಡಲಾಗಿದೆ. ರಿಟೈನ್ ಮಾಡಿಕೊಳ್ಳಯವ ಆಟಗಾರರಲ್ಲಿ ಒಬ್ಬ ಭಾರತೀಯ ಅನ್‌ಕ್ಯಾಪ್ಡ್ ಆಟಗಾರ ಇರಬೇಕೆಂದು ನಿಯಮ ರೂಪಿಸಿದ್ದು, ಸಿಎಸ್‌ಕೆ ತಂಡ ಧೋನಿಯನ್ನು ಅನ್‌ಕ್ಯಾಪ್ಡ್ ಆಟಗಾರರ ನಿಯಮದಡಿ ಉಳಿಸಿಕೊಳ್ಳುವ ಸಾಧ್ಯತೆ ಇದೆ.

ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಮಾಧ್ಯಮ ಪ್ರಕಟಣೆ ನೀಡಿದ್ದು, ಐಪಿಎಲ್‌ ಮೆಗಾ ಹರಾಜಿನ ನಿಯಮಗಳ ಬಗ್ಗೆ ಮಾಹಿತಿ ನಿಡಲಾಗಿದೆ. ಅನ್‌ಕ್ಯಾಪ್ಡ್‌ ಆಟಗಾರರನ್ನು ಉಳಿಸಿಕೊಳ್ಳಲು ರೈಟ್ ಟು ಮ್ಯಾಚ್ ನಿಯಮವನ್ನು ಪರಿಚಯಿಸಲಾಗಿದೆ. ಐಪಿಎಲ್ ಆರಂಭದಲ್ಲಿ ಆರ್ ಟಿಎಂ ನಿಯಮ ಇತ್ತಾದರೂ ಬಳಿಕ ಅದನ್ನು ತೆಗೆದುಹಾಕಲಾಗಿತ್ತು. ಇದೀಗ ನಿಯಮವನ್ನು ಮತ್ತೆ ಜಾರಿ ಮಾಡಲಾಗಿದೆ.

CSK Can Retain MS Dhoni as Uncapped Player for IPL 2025

ಈ ನಿಯಮದ ಪ್ರಕಾರ ಕನಿಷ್ಠ ಐದು ವರ್ಷಗಳ ಮೊದಲು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಆಟಗಾರರನ್ನು ಅನ್‌ಕ್ಯಾಪ್ಡ್ ಆಟಗಾರ ಎಂದು ಪರಿಗಣಿಸಲು ಅವಕಾಶ ಇರುತ್ತದೆ. ಎಂಎಸ್ ಧೋನಿ ಆಗಸ್ಟ್ 15, 2020ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದರು.

ಈ 'ಅನ್‌ಕ್ಯಾಪ್ಡ್' ನಿಯಮವನ್ನು ಎಂದಿಗೂ ಬಳಕೆ ಮಾಡದ ಕಾರಣ 2021 ರಲ್ಲಿ ರದ್ದುಗೊಳಿಸಲಾಗಿತ್ತು. ಫ್ರಾಂಚೈಸಿಗಳು ಮತ್ತು ಐಪಿಎಲ್ ಕಮಿಟಿ ಸದಸ್ಯರು ಈ ನಿಯಮ ಮತ್ತೆ ಜಾರಿ ಮಾಡಲು ನಿರ್ಧರಿಸಿದ್ದಾರೆ. 2022ರ ಐಪಿಎಲ್ ಮೆಗಹರಾಜಿಗೆ ಮೊದಲು ರವೀಂದ್ರ ಜಡೇಜಾರನ್ನು ಮೊದಲ ಆಯ್ಕೆಯಾಗಿ ಉಳಿಸಿಕೊಂಡ ಕಾರಣ ಪ್ರತಿ ವರ್ಷ 16 ಕೋಟಿ ರೂಪಾಯಿ ಪಡೆಯುತ್ತಿದ್ದು, ಎಂಎಸ್ ಧೋನಿಯನ್ನು ಎರಡನೇ ಆಟಗಾರನಾಗಿ ಉಳಿಸಿಕೊಂಡಿದ್ದರಿಂದ 12 ಕೋಟಿ ರೂಪಾಯಿ ಪಡೆಯುತ್ತಿದ್ದಾರೆ.

ಆರು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ

ಮೆಗಾ ಹರಾಜಿಗೆ ಮುನ್ನ ಪ್ರತಿ ತಂಡಕ್ಕೆ ಆರು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಆರು ಆಟಗಾರರಲ್ಲಿ ಒಬ್ಬ ಭಾರತೀಯ ಅನ್‌ಕ್ಯಾಪ್ಡ್ ಆಟಗಾರನಾಗಿರಬೇಕು ಎನ್ನುವ ಷರತ್ತು ವಿಧಿಸಲಾಗಿದೆ. ಉಳಿದ ಐವರು ಆಟಗಾರರಲ್ಲಿ ವಿದೇಶಿ ಮತ್ತು ಭಾರತೀಯ ಆಟಗಾರರು ಇರಲಿದ್ದಾರೆ. ಐಪಿಎಲ್ ಹರಾಜು ಪರ್ಸ್ ಅನ್ನು 120 ಕೋಟಿ ರೂಪಾಯಿಗೆ ಏರಿಕೆ ಮಾಡಲಾಗಿದೆ.

ಐಪಿಎಲ್‌ನಲ್ಲಿ ಆಡಲು ಬಯಸುವ ವಿದೇಶಿ ಆಟಗಾರರು ಐಪಿಎಲ್ ಮೆಗಾಹರಾಜಿನಲ್ಲಿ ಹೆಸರು ನೋಂದಾಯಿಸಬೇಕಾಗುತ್ತದೆ. ಮೆಗ ಹರಾಜಿನಲ್ಲಿ ನೋಂದಾಯಿಸದ ವಿದೇಶಿ ಆಟಗಾರರಿಗೆ ಮುಂದಿನ ಹರಾಜಿನಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ ಎಂದು ಹೇಳಿದೆ. ಹರಾಜಿನಲ್ಲಿ ತಂಡಕ್ಕೆ ಆಯ್ಕೆಯಾದ ಬಳಿಕ ಕಾರಣಗಳನ್ನು ನೀಡಿ ಪಂದ್ಯಾವಳಿಯಲ್ಲಿ ಆಡದೇ ಇದ್ದರೆ, ಅಂತಹ ವಿದೇಶಿ ಆಟಗಾರರಿಗೆ ಎರಡು ವರ್ಷ ಐಪಿಎಲ್ ಹರಾಜಿನಲ್ಲಿ ಭಾಗವಹಿಸಲು ಅವಕಾಶವನ್ನು ನೀಡುವುದಿಲ್ಲ ಎಂದು ನಿಯಮಗಳಲ್ಲಿ ತಿಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+