• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Ind vs Pak: ಇದು ಕೊಹ್ಲಿ ವೃತ್ತಿ ಜೀವನದ ಶ್ರೇಷ್ಠ ಇನ್ನಿಂಗ್ಸ್; ಸಚಿನ್ ಸೇರಿ ದಿಗ್ಗಜರಿಂದ ಗುಣಗಾನ

|
Google Oneindia Kannada News

ಮೆಲ್ಬೋರ್ನ್‌, ಅಕ್ಟೋಬರ್ 23: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ ತಂಡ 4 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಅಜೇಯ 82 ರನ್‌ಗಳಿಸುವ ಮೂಲಕ ಭಾರತ ತಂಡಕ್ಕೆ ಗೆಲುವು ತಂದುಕೊಟ್ಟ ವಿರಾಟ್‌ ಕೊಹ್ಲಿ ಆಟಕ್ಕೆ ಕ್ರಿಕೆಟ್‌ ದಿಗ್ಗಜರು ಶಹಾಬ್ಬಾಶ್ ಗಿರಿ ನೀಡಿದ್ದಾರೆ.

ಭಾನುವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ರೋಹಿತ್ ಪಾಕಿಸ್ತಾನಕ್ಕೆ ಬ್ಯಾಟಿಂಗ್ ಅಹ್ವಾನಿಸಿತ್ತು. ನಾಯಕನ ನಿರ್ಣಯಕ್ಕೆ ತಕ್ಕಂತೆ ಬೌಲಿಂಗ್ ಮಾಡಿ ಭಾರತೀಯ ಬೌಲರ್‌ಗಳು ಪಾಕಿಸ್ತಾನ ತಂಡವನ್ನು 159/8ಕ್ಕೆ ನಿಯಂತ್ರಿಸಿದ್ದರು.

T20 World Cup 2022: ಸೂಪರ್ 12 ಪ್ರವೇಶಿಸಿದ ತಂಡಗಳು, ಟೂರ್ನಿ ವೇಳಾಪಟ್ಟಿಯ ಮಾಹಿತಿT20 World Cup 2022: ಸೂಪರ್ 12 ಪ್ರವೇಶಿಸಿದ ತಂಡಗಳು, ಟೂರ್ನಿ ವೇಳಾಪಟ್ಟಿಯ ಮಾಹಿತಿ

ಶಾನ್ ಮಸೂದ್‌ 52 ಹಾಗೂ ಇಫ್ತಿಖರ್ ಅಹ್ಮದ್‌ 51 ರನ್‌ಗಳಿಸಿದ್ದು ಬಿಟ್ಟರೆ ಉಳಿದ ಯಾವ ಬ್ಯಾಟರ್‌ಗಳು 20ರ ಗಡಿ ದಾಟಲಿಲ್ಲ. ಕೊನೆಯದಾಗಿ ಶಹೀನ್ ಅಫ್ರಿದಿ 16 ರನ್‌ಗಳಿಸಿ 3ನೇ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು. ಭಾರತದ ಪರ ಅರ್ಶ್‌ದೀಪ್ ಸಿಂಗ್ 32ಕ್ಕೆ 3, ಹಾರ್ದಿಕ್ ಪಾಂಡ್ಯ 30ಕ್ಕೆ 3, ಭುವನೇಶ್ವರ್ ಕುಮಾರ್, ಶಮಿ ತಲಾ ಒಂದು ವಿಕೆಟ್ ಪಡೆದರು.

160 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ಭಾರತ ತಂಡ 6 ವಿಕೆಟ್‌ ಕಳೆದುಕೊಂಡು ಕೊನೆ ಎಸೆತದಲ್ಲಿ ರೋಚಕ ಜಯ ಸಾಧಿಸಿ ಶುಭಾರಂಭ ಮಾಡಿತು. ವಿರಾಟ್ ಕೊಹ್ಲಿ 53 ಎಸೆತಗಳಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್, ಹಾರ್ದಿಕ್ ಪಾಂಡ್ಯ 37 ಎಸೆತಗಳಲ್ಲಿ 1 ಬೌಂಡರಿ, 2 ಸಿಕ್ಸರ್ ಸಹಿತ 40 ರನ್‌ಗಳಿಸಿ ಭಾರತಕ್ಕೆ ರೋಚಕ ಗೆಲುವು ತಂದುಕೊಟ್ಟರು.

ಟಿ-20 ವಿಶ್ವಕಪ್‌: ಭಾರತೀಯ ಆಟಗಾರರ ಈ 5 ದಾಖಲೆ ಮುರಿಯಲು ಯಾರಿಂದಲೂ ಸಾಧ್ಯವಾಗಿಲ್ಲ!ಟಿ-20 ವಿಶ್ವಕಪ್‌: ಭಾರತೀಯ ಆಟಗಾರರ ಈ 5 ದಾಖಲೆ ಮುರಿಯಲು ಯಾರಿಂದಲೂ ಸಾಧ್ಯವಾಗಿಲ್ಲ!

31ಕ್ಕೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ತಂಡವನ್ನು ಗೆಲುವಿನ ಗಡಿ ದಾಟಿಸಿದ ವಿರಾಟ್ ಆಟಕ್ಕೆ ಇಡೀ ಕ್ರಿಕೆಟ್‌ ಜಗತ್ತು ಸಲಾಮ್ ಹೊಡೆದಿದೆ. ವಿಶ್ವ ಕಂಡಂತಹ ಶ್ರೇಷ್ಠ ಕ್ರಿಕೆಟಿಗ, ಗಾಡ್‌ ಆಫ್‌ ಕ್ರಿಕೆಟ್ ಖ್ಯಾತಿಯ ಸಚಿನ್‌ ತೆಂಡೂಲ್ಕರ್‌ ಇಂದಿನ ಕೊಹ್ಲಿ ಇನ್ನಿಂಗ್ಸ್ ಅವರ ವೃತ್ತಿ ಜೀವನದ ಅತ್ಯಂತ ಶ್ರೇಷ್ಠವಾದದ್ದು ಎಂದು ಟ್ವೀಟ್ ಮೂಲಕ ಗುಣಗಾನ ಮಾಡಿದ್ದಾರೆ.

" ವಿರಾಟ್‌ ಕೊಹ್ಲಿ, ನಿಸ್ಸಂದೇಹವಿಲ್ಲದೆ, ಇದು ನಿಮ್ಮ ವೃತ್ತಿ ಜೀವನದ ಅತ್ಯುತ್ತಮ ಇನ್ನಿಂಗ್ಸ್, ನಿಮ್ಮ ಆಟವನ್ನು ನೋಡುವುದೆ ಚೆಂದ, 19 ನೇ ಓವರ್‌ನಲ್ಲಿ ರೌಫ್‌ ವಿರುದ್ಧ ಲಾಂಗ್‌ ಆನ್‌ಗೆ ಬಾರಿಸಿದ ಸಿಕ್ಸರ್‌ ಅದ್ಭುತವಾಗಿತ್ತು. ನಿಮ್ಮ ಆಟವನ್ನು ಮುಂದುವರಿಸಿ" ಎಂದು ಸಚಿನ್‌ ತೆಂಡೂಲ್ಕರ್‌ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಇದು ನಾನು ಕಂಡಂತಹ ಅತ್ಯಂತ ಅದ್ಭುತವಾದ ಟಿ20 ಇನ್ನಿಂಗ್ಸ್‌, ನಿಮ್ಮ ಆಟ ಪ್ರಶಂಸೆಗೆ ಅರ್ಹವಾಗಿದೆ ವಿರಾಟ್‌, ಇದೊಂದು ಅದ್ಭುತವಾದ ಪಂದ್ಯ, ದೀಪಾವಳಿ ಹಬ್ಬದ ಶುಭಾಶಯಗಳ ಎಂದು ಭಾರತದ ಮಾಜಿ ಸ್ಫೋಟಕ ಆರಂಭಿಕ ಬ್ಯಾಟರ್‌ ವೀರೇಂದ್ರ ಸೆಹ್ವಾಗ್ ತಿಳಿಸಿದ್ದಾರೆ.

ಇದೊಂದು ಕೊನೆಯವರೆಗೆ ಉಸಿರು ಬಿಗಿ ಹಿಡಿದು ನೋಡುವ ಪಂದ್ಯವಾಗಿತ್ತು. ಭಾರತಕ್ಕೆ ಗೆಲುವು ತಂದುಕೊಡಲು ನಮ್ಮ ಆಟಗಾರರು ಪ್ರದರ್ಶಿಸಿದ ಹೋರಾಟದ ಮನೋಭಾವ ಅದ್ಭುತವಾಗಿತ್ತು. ಅಭಿನಂದನೆಗಳು ಬಾಯ್ಸ್, ಇದೊಂದು ಅತ್ಯುತ್ತಮ ಗೆಲುವು, ಜೈ ಹಿಂದ್‌ ಎಂದು ಸುರೇಶ್ ರೈನಾ ಭಾರತ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ವಿರಾಟ್‌ ಕೊಹ್ಲಿ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊಹಾಲಿಯಲ್ಲಿಆಡಿದ್ದ ಇನ್ನಿಂಗ್ಸ್‌ ನಾನು ಕಂಡಂತಹ ಅತ್ಯುತ್ತಮ ಟಿ20 ಇನ್ನಿಂಗ್ಸ್, ಆದರೆ ಇದು ಅದಕ್ಕಿಂತ ಉತ್ತಮವಾಗಿದೆ, ಏಕೆಂದರೆ ಇದು ದೊಡ್ಡ ಮೈದಾನ ಹಾಗೂ ಭಾರತ 31ಕ್ಕೆ 4 ವಿಕೆಟ್‌ ಕಳೆದುಕೊಂಡಿದ್ದ ಸಂದರ್ಭದಲ್ಲಿ ಬಂದಿದೆ. ವಿರಾಟ್‌ ಕ್ಲಾಸ್‌ ಇಸ್‌ ಪರ್ಮನೆಂಟ್‌ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಇದು ಭಾರತ ತಂಡಕ್ಕೆ ಅತ್ಯುತ್ತಮ ಗೆಲುವಾಗಿದೆ ಎಂದು ಎನ್‌ಸಿಎ ಅಧ್ಯಕ್ಷ ವಿವಿಎಸ್ ಲಕ್ಷ್ಮಣ್ ಎಂದು ಪ್ರಶಂಸೆ ಮಾಡಿದ್ದಾರೆ.

English summary
cricket world including legend Sachin Tendulkar hails Virat Kohli's match winning innings against Pakistan in T20I world cup
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X