Get Updates
Get notified of breaking news, exclusive insights, and must-see stories!

Cricket World Cup: ಶ್ರೀಲಂಕಾ ಕ್ರಿಕೆಟ್‌ ಅನ್ನು ಹಾಳು ಮಾಡುತ್ತಿರುವ ಅಮಿತ್‌ ಶಾ ಮಗ- ಜಯ್‌ ಶಾ ಮೇಲೆ ಗೂಬೆ

ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಶ್ರೀಲಂಕಾದ ಹೀನಾಯ ಸೋಲಿಗೆ ಕೇಂದ್ರ ಗೃಹ ಮಂತ್ರಿ ಅಮಿತ್‌ ಶಾ ಮಗ ಜಯ್‌ ಶಾ ಅವರು ಕಾರಣವೆಂದು ಮಾಜಿ ಕ್ರಿಕೆಟಿಗ ಅರ್ಜುನ ರಣತುಂಗ ಗಂಭೀರ ಆರೋಪ ಮಾಡಿದ್ದಾರೆ. ಶ್ರೀಲಂಕಾ ಕ್ರಿಕೆಟ್‌ ತಂಡದ ಮಾಜಿ ನಾಯಕರೂ ಆಗಿರುವ ಅರ್ಜುನ ರಣತುಂಗ ಬಿಸಿಸಿಐ ಕಾರ್ಯದರ್ಶಿ ಜಯ್‌ ವಿರುದ್ಧ ಗೂಬೆ ಕೂರಿಸುವ ಕೆಲಸ ಮಾಡಿದ್ದಾರೆ.

2023 ರ ಏಕದಿನ ವಿಶ್ವಕಪ್‌ನಲ್ಲಿ ಸೋತ ನಂತರ ಅರ್ಜುನ ರಣತುಂಗ ಅವರು ಈ ಆರೋಪಗಳನ್ನು ಮಾಡಿದ್ದಾರೆ. ಶ್ರೀಲಂಕಾ ಕ್ರಿಕೆಟ್ ಅನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಹಾಳುಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

Cricket World cup: Arjuna Ranatunga ACCUSSES Jay Shah Is Running Sri Lankan Cricket

ಈ ವಿಚಾರವಾಗಿ ಶ್ರೀಲಂಕಾದ ದಿನಪತ್ರಿಕೆ ಡೈಲಿ ಮಿರರ್‌ನಲ್ಲಿ ಮಾತನಾಡಿರುವ ಅವರು, 'ಎಸ್‌ಎಲ್‌ಸಿ ( ಶ್ರೀಲಂಕಾ ಕ್ರಿಕೆಟ್‌ ಕಮಿಟಿ) ಅಧಿಕಾರಿಗಳು ಮತ್ತು ಜಯ್ ಶಾ ನಡುವೆ ಉತ್ತಮ ಸಂಬಂಧವಿದೆ. ಇವರ ನಡುವಿನ ಒಡಂಬಡಿಕೆಯಿಂದ ಸೋಲಾಗಿದೆ. ಎಸ್‌ಎಲ್‌ಸಿಯನ್ನು ಬಿಸಿಸಿಐ ತುಳಿಯಬಹುದು ಮತ್ತು ನಿಯಂತ್ರಿಸಬಹುದು ಎಂಬ ಅಭಿಪ್ರಾಯಗಳನ್ನು ಈ ಅಧಿಕಾರಿಗಳು ಹೊಂದಿದ್ದಾರೆ' ಎಂದು ಅರ್ಜುನ ರಣತುಂಗ ಆರೋಪಿಸಿದ್ದಾರೆ.

'ಜಯ್ ಶಾ ಶ್ರೀಲಂಕಾ ಕ್ರಿಕೆಟ್ ಅನ್ನು ನಡೆಸುತ್ತಿದ್ದಾರೆ. ಜಯ್ ಶಾ ಅವರ ಒತ್ತಡದಿಂದಾಗಿ ಎಸ್‌ಎಲ್‌ಸಿ ಹಾಳಾಗುತ್ತಿದೆ. ಭಾರತದಲ್ಲಿರುವ ಒಬ್ಬ ವ್ಯಕ್ತಿ ಶ್ರೀಲಂಕಾ ಕ್ರಿಕೆಟ್ ಅನ್ನು ಹಾಳುಮಾಡುತ್ತಿದ್ದಾನೆ' ಎಂದು ರಣತುಂಗ ಹೇಳಿದ್ದಾರೆ. ಅರ್ಜುನ ರಣತುಂಗ ಅವರು ಶ್ರೀಲಂಕಾದ 1996 ರ ವಿಶ್ವಕಪ್ ವಿಜೇತ ನಾಯಕರಾಗಿದ್ದಾರೆ.

'ಜಯ್‌ ಶಾ ಕ್ರಿಕೆಟಿಗರಲ್ಲ. ಅವರ ತಂದೆ ಭಾರತದ ಗೃಹ ಸಚಿವರಾಗಿದ್ದಾರೆ. ಅವರ ತಂದೆಯಿಂದಾಗಿ ಜಯ್‌ ಶಾ ಪ್ರಭಾವಶಾಲಿಯಾಗಿದ್ದಾರೆ' ಎಂದು ಹೇಳಿದ್ದಾರೆ.

Cricket World cup: Arjuna Ranatunga ACCUSSES Jay Shah Is Running Sri Lankan Cricket

ಶ್ರೀಲಂಕಾ ವಿಶ್ವಕಪ್‌ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನ ಗಳಿಸಿದೆ. ಅಂದರೆ ಅವರು 2025 ರ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯುವುದಿಲ್ಲ. ಇದು ಶ್ರೀಲಂಕಾದ ಮಾಜಿ ಕ್ರಿಕೆಟಿಗರನ್ನು ಕೆರಳಿಸಿದೆ.

ಶ್ರೀಲಂಕಾದ ಕ್ರೀಡಾ ಸಚಿವ ರೋಶನ್ ರಣಸಿಂಘೆ ಅವರು ಎಸ್‌ಎಲ್‌ಸಿ ಮಂಡಳಿಯನ್ನು ವಜಾಗೊಳಿಸಿದ್ದಾರೆ. ಅರ್ಜುನ ರಣತುಂಗ ನೇತೃತ್ವದ ಮಧ್ಯಂತರ ಸಮಿತಿಯನ್ನು ಸ್ಥಾಪಿಸಿದ್ದಾರೆ. ಆದರೆ ಶ್ರೀಲಂಕಾದ ನ್ಯಾಯಾಲಯ ಮಂಡಳಿಯನ್ನು ವಿಸರ್ಜಿಸಿದ ಗೆಜೆಟ್‌ಗೆ 14 ದಿನಗಳ ತಡೆಯಾಜ್ಞೆ ನೀಡುದೆ. ಈ ಮೂಲಕ ಒಂದು ದಿನದ ನಂತರ ಮಂಡಳಿಯನ್ನು ಮರುಸ್ಥಾಪಿಸಿವೆ.

ಮಂಡಳಿಯ ಆಡಳಿತದಲ್ಲಿ ಸರ್ಕಾರದ ಹಸ್ತಕ್ಷೇಪ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ಜಾರಿಗೆ ಬರುವಂತೆ ಕ್ರಿಕೆಟ್ ಮಂಡಳಿಯನ್ನು ಐಸಿಸಿ ಅಮಾನತುಗೊಳಿಸಿದೆ.

ಶುಕ್ರವಾರ ರಾತ್ರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಎಸ್‌ಎಲ್ಸಿ ಮಂಡಳಿಯು ತನ್ನ ಜವಾಬ್ದಾರಿಗಳನ್ನು ಉಲ್ಲಂಘಿಸಿದೆ ಎಂದು ಐಸಿಸಿ ಹೇಳಿದೆ. ನಿರ್ದಿಷ್ಟವಾಗಿ ಅದರ ವ್ಯವಹಾರಗಳನ್ನು ಸ್ವಾಯತ್ತವಾಗಿ ಮತ್ತು ಸರ್ಕಾರದ ಹಸ್ತಕ್ಷೇಪವಿಲ್ಲದೆ ನಿರ್ವಹಿಸುವ ಅವಶ್ಯಕತೆಯಿದೆ ಎಂದು ಅದು ಪ್ರತಿಪಾದಿಸಿದೆ.

'ಅಮಾನತುಗೊಳಿಸುವಿಕೆಯ ಷರತ್ತುಗಳನ್ನು ಐಸಿಸಿ ಮಂಡಳಿಯು ಸರಿಯಾದ ಸಮಯದಲ್ಲಿ ನಿರ್ಧರಿಸುತ್ತದೆ' ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಐಸಿಸಿ ಮಂಡಳಿಯು ನವೆಂಬರ್ 21 ರಂದು ಸಭೆ ಸೇರಲಿದ್ದು, ನಂತರ ಮುಂದಿನ ಕ್ರಮವು ಸ್ಪಷ್ಟವಾಗುವ ನಿರೀಕ್ಷೆಯಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+