ಕಾಮನ್‌ವೆಲ್ತ್ ಗೇಮ್ಸ್ 2026: ಜೂಡೋದಲ್ಲಿ ಭಾರತಕ್ಕೆ 'ಡಬಲ್ ಗೋಲ್ಡ್', ಈವರೆಗೂ ಬಂದ ಚಿನ್ನದ ಪದಕಗಳ ಸಂಖ್ಯೆ ಎಷ್ಟು?
Commonwealth Games: ಸ್ಕಾಟ್‌ಲ್ಯಾಂಡ್‌ನ ಗ್ಲ್ಯಾಸ್ಗೋದಲ್ಲಿ ನಡೆಯುತ್ತಿರುವ 2026ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪದಕದ ಬೇಟೆಯನ್ನು ಮುಂದುವರೆಸಿದೆ. ಇದೀಗ ದೇಶದ ಇಬ್ಬರು ಚಿನ್ನದ ಪದಕ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಹಾಗಾದ್ರೆ ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಗ್ಲ್ಯಾಸ್ಗೋದಲ್ಲಿ ನಡೆಯುತ್ತಿರುವ 2026ರ ಕಾಮನ್‌ವೆಲ್ತ್ ಕ್ರೀಡಾಕೂಟದ 9ನೇ ದಿನದಂದು ಭಾರತೀಯ ಕ್ರೀಡಾಪಟುಗಳು ಅತ್ಯಾದ್ಭುತ ಸಾಧನೆ ಮಾಡಿದ್ದಾರೆ. ಜೂಡೋದಲ್ಲಿ ಕೆಲವೇ ನಿಮಿಷಗಳ ಅಂತರದಲ್ಲಿ ಎರಡೆರಡು ಸ್ವರ್ಣ ಪದಕಗಳನ್ನು ದೇಶಕ್ಕೆ ತಂದುಕೊಡುವ ಮೂಲಕ ಹೊಸ ಇತಿಹಾಸ ನಿರ್ಮಾಣ ಮಾಡಿದ್ದಾರೆ.

ಭಾರತಕ್ಕೆ ಎರಡು ಚಿನ್ನದ ಪದಕ
ಮೊದಲಿಗೆ ಮಹಿಳೆಯರ 48 ಕೆ.ಜಿ.ವಿಭಾಗದ ಫೈನಲ್‌ನಲ್ಲಿ ಭಾರತದ ಭರವಸೆಯ ಜೂಡೋ ಪಟು ಅಸ್ಮಿತಾ ಡೇ, ಕೆನಡಾದ ಬಲಿಷ್ಠ ಆಟಗಾರ್ತಿ ಹೈಡಿ ಕ್ವಾಚ್ ಅವರನ್ನು ರೋಚಕ ಪಂದ್ಯದಲ್ಲಿ ಮಣಿಸಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು. ಈ ಪಂದ್ಯ ಮುಗಿದ ಬೆನ್ನಲ್ಲೇ ನಡೆದ ಪುರುಷರ 60 ಕೆ.ಜಿ.ವಿಭಾಗದ ಹೈ-ವೋಲ್ಟೇಜ್ ಫೈನಲ್‌ನಲ್ಲಿ ಭಾರತದ ಹರ್ಷ್ ಸಿಂಗ್ ಆಸ್ಟ್ರೇಲಿಯಾದ ಬಲಶಾಲಿ ಸ್ಪರ್ಧಿ ಜೋಶುವಾ ಕಾಟ್ಜ್ ಅವರನ್ನು 10-0 ಅಂತರದಿಂದ ಸೋಲಿಸುವ ಮೂಲಕ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡರು.
Commonwealth Games
ಕಾಮನ್‌ವೆಲ್ತ್ ಕ್ರೀಡಾಕೂಟದ ಇತಿಹಾಸದಲ್ಲೇ ಜೂಡೋ ವಿಭಾಗದಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಟ್ಟ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಅಸ್ಮಿತಾ ಡೇ ಪಾತ್ರರಾದರೆ, ಪ್ರಥಮ ಪುರುಷ ಜೂಡೋ ಪಟು ಎಂಬ ಸುವರ್ಣ ದಾಖಲೆಯನ್ನು ಹರ್ಷ್ ಸಿಂಗ್ ತಮ್ಮ ಹೆಸರಿಗೆ ಬರೆದುಕೊಂಡರು. ಈ ಜೋಡಿ ಪದಕಗಳ ಜಯದೊಂದಿಗೆ 2026ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಚಿನ್ನದ ಪದಕಗಳ ಸಂಖ್ಯೆ 5ಕ್ಕೆ ಏರಿಕೆ ಆಗಿದ್ದು, ಒಟ್ಟು ಪದಕಗಳ ಗಳಿಕೆ 19ಕ್ಕೆ ಏರಿಕೆಯಾಗಿದೆ.


Click it and Unblock the Notifications
